ಚಾಮರಾಜನಗರ ಜಿಲ್ಲೆ, ಯಳಂದೂರು ತಾಲ್ಲೂಕಿನ ಯರಿಯೂರು ಗ್ರಾಮದಲ್ಲಿ ಮಹಾರಾಷ್ಟ್ರ ಮೂಲದ ಕಾರ್ಮಿಕರ ಮಕ್ಕಳು ವಿಷಕಾರಿ ಮರಳೆಕಾಯಿ ತಿಂದು ಓರ್ವ ಮಹಿಳೆ ಸೇರಿದಂತೆ, ಹನ್ನೆರೆಡು ಮಕ್ಕಳು ಅಸ್ವಸ್ಥಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಕಬ್ಬು ಕಟಾವಿಗೆ ಮಹಾರಾಷ್ಟ್ರ ಮೂಲದಿಂದ ಬಂದಿರುವ ಕೂಲಿ ಕಾರ್ಮಿಕರ ಕುಟುಂಬಗಳು ಯರಿಯೂರು ಗ್ರಾಮದಲ್ಲಿ ನೆಲೆಸಿದ್ದಾರೆ. ಸದರಿ ಗ್ರಾಮದ ರಸ್ತೆ ಬದಿಯಲ್ಲಿ ಬಿಟ್ಟಿದ್ದ ಮರಳೆ ಕಾಯಿಯನ್ನು ಹಣ್ಣೆಂದು ಭಾವಿಸಿ ತಿಂದಿದ್ದಾರೆ. ವಾಂತಿ ಮಾಡಿಕೊಳ್ಳುವುದನ್ನು ಕಂಡ ಪೋಷಕರು ಕೂಡಲೇ ಯಳಂದೂರು ಸಾರ್ವಜನಿಕ ಆಸ್ಪತ್ರೆಯಲ್ಲಿ ದಾಖಲಿಸಿ ಪ್ರಾಥಮಿಕ ಚಿಕಿತ್ಸೆ
ಕೊಡಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ?ಮೈಸೂರು | ಹೊಯ್ಸಳ ಶಿಲ್ಪಗಳ ನೃತ್ಯ – ನಾದದ ಪ್ರತಿಬಿಂಬ; ವಿಶೇಷ ಉಪನ್ಯಾಸ

ಹೆಚ್ಚಿನ ಚಿಕಿತ್ಸೆಗಾಗಿ ಚಾಮರಾಜನಗರ ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದೆ. ಎಲ್ಲಾ ಮಕ್ಕಳು, ಮಹಿಳೆ ಪ್ರಣಾಪಾಯದಿಂದ ಪಾರಾಗಿದ್ದು, ಚಿಕಿತ್ಸೆ ಮುಂದುವರೆದಿದೆ.