ಚನ್ನರಾಯಪಟ್ಟಣ | 15ನೇ ಹಣಕಾಸು ಅನುದಾನ ಬಿಡುಗಡೆ; ಆನೆಕೆರೆ ಗ್ರಾ.ಪಂ. ಪಿಡಿಒ ಶೇ.10ರಷ್ಟು ಲಂಚಕ್ಕೆ ಬೇಡಿಕೆ

Date:

ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನ ಆನೆಕೆರೆ ಗ್ರಾಮ ಪಂಚಾಯಿತಿಗೆ 15ನೇ ಹಣಕಾಸು ಯೋಜನೆಯ ಅನುದಾನ ಬಿಡುಗಡೆಯಾಗಿದ್ದು, ಪಿಡಿಒ ಪ್ರತಿ ಸದಸ್ಯರ ಬಳಿ ಶೇ.10ರಷ್ಟು ಲಂಚ ಕೇಳಿರುವುದಾಗಿ ತಿಳಿದುಬಂದಿದೆ.

- Advertisement -

15ನೇ ಹಣಕಾಸು ಯೋಜನೆಯ ಹಣ ಬಿಡುಗಡೆಯಾಗಿರುವ ಹಿನ್ನೆಲೆಯಲ್ಲಿ ಆನೆಕೆರೆ ಗ್ರಾಮ ಪಂಚಾಯಿತಿ ಪಿಡಿಒ ಸದಸ್ಯರ ಸಭೆ ನಡೆಸಿದ್ದಾರೆ. ಈ ಸಭೆಯಲ್ಲಿ ಬಹಿರಂಗವಾಗಿ ಪಿಡಿಒ ಅನುರಾಧಾ ಅವರು ಸದಸ್ಯರ ಬಳಿ ಕಮೀಷನ್‌ ಕೇಳುತ್ತಿರುವುದು ಕಂಡುಬಂದಿದೆ. ಪ್ರತಿ ಸದಸ್ಯರೂ ಕೂಡ ಶೇ.10ರಷ್ಟು ಲಂಚ ಕೊಡಬೇಕೆಂದು ಕೇಳಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಮೋದಿ ಆಡಳಿತದಲ್ಲಿ ಮಾಹಿತಿ ಹಕ್ಕು ಕಾಯ್ದೆಯ ‘ಸ್ಥಿತಿ’ ಹೇಗಿದೆ?...

ಯಾವುದೇ ಸರ್ಕಾರ ಆಡಳಿತದಲ್ಲಿರಲಿ ಪ್ರಜಾಸತ್ತಾತ್ಮಕ ವ್ಯವಸ್ಥೆಯನ್ನು ಕಾಪಾಡಬೇಕಾದ ಸಂಸ್ಥೆಗಳ ಸ್ವಾಯತ್ತತೆ ಉಳಿಯಬೇಕು. ಅವು ಪಾರದರ್ಶಕವಾಗಿರಬೇಕು. ಪ್ರಜಾಸತ್ತೆಯ ಕಾರ್ಯವೈಖರಿಯನ್ನು ಕುರಿತಂತೆ ಮುಕ್ತ ಚರ್ಚೆ ನಡೆಯುತ್ತಿರಬೇಕು. ಇದು ಸಕ್ರಿಯ, ಅರ್ಥಪೂರ್ಣ ಪ್ರಜಾಸತ್ತೆಯ ಕನಿಷ್ಠ ಅವಶ್ಯಕತೆ. ಹಾಗಾಗಿ...

ಬಂಗಾಳ ವಿಭಜನೆ | ವಿಭಜನೆಯ ವಿಷಬೀಜದಿಂದ ಒಗ್ಗಟ್ಟಿನ ಜ್ಯೋತಿ...

ಬ್ರಿಟಿಷರ 'ಒಡೆದು ಆಳುವ ನೀತಿ'ಯ ಭಾಗವಾಗಿ 1905ರ ಅಕ್ಟೋಬರ್‌ನಲ್ಲಿ ಜಾರಿಗೆ ಬಂದ ಬಂಗಾಳ ವಿಭಜನೆಯು ಭಾರತೀಯರ ರಾಷ್ಟ್ರೀಯತೆಯನ್ನು ಒಡೆಯುವ ಕುತಂತ್ರವಾಗಿತ್ತು. ಇದಕ್ಕೆ ಪ್ರತಿಯಾಗಿ ಭಾರತೀಯರು 'ರಾಷ್ಟ್ರೀಯ ಶೋಕ ದಿನ' ಆಚರಿಸಿ, ಪರಸ್ಪರ ರಾಖಿ...

ನಟ ಇಮ್ರಾನ್ ಖಾನ್ ಪ್ರತಿಭಟಿಸಿದರೆ ಗಡಿಪಾರು; ಟ್ರಂಪ್ ಪರ...

ಕಾನೂನು ಮತ್ತು ರಾಜತಾಂತ್ರಿಕ ನಿಯಮಗಳು ಎಲ್ಲರಿಗೂ ಒಂದೇ ಆಗಿರಬೇಕು ಹೊರತು ಪ್ರಧಾನಿ ಮೋದಿಯವರ ರಾಜಕೀಯ ಅನುಕೂಲಕ್ಕೆ ತಕ್ಕಂತೆ ಬದಲಾಗಬಾರದು. ವಿದೇಶಿ ಪ್ರಜೆಯೊಬ್ಬ ಭಾರತದ ನೆಲದಲ್ಲಿ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವುದು ತಪ್ಪು ಎನ್ನುವುದಾದರೆ, ಭಾರತದ ಪ್ರಧಾನಿಯೊಬ್ಬರು...

ಹೆಸರೇಳಲಿಚ್ಚಿಸದ ಗ್ರಾ.ಪಂ ಸದಸ್ಯರೊಬ್ಬರು ಈ ದಿನ.ಕಾಮ್‌ನೊಂದಿಗೆ ಮಾತನಾಡಿ, “ಆನೆಕೆರೆ ಗ್ರಾಮ ಪಂಚಾಯಿತಿಯ ಪಿಡಿಒ ಅನುರಾಧಾ ಅವರು ತುಂಬಾ ಟಾರ್ಚರ್‌ ನೀಡುತ್ತಿದ್ದಾರೆ. ಸದಸ್ಯರ ಎಲ್ಲ ಅನುದಾನದಲ್ಲಿಯೂ ಕಮೀಷನ್‌ ಕೊಡಬೇಕೆಂದು ಪಟ್ಟು ಹಿಡಿಯುತ್ತಾರೆ. ಇದೀಗ 15ನೇ ಹಣಕಾಸಿನ ಅನುದಾನ ಬಿಡುಗಡೆಯಾಗಿದೆ. ಅದರಲ್ಲಿ ಶೇ.10ರಷ್ಟು ಕಮೀಷನ್‌ ಕೊಡಲೇಬೇಕೆಂದು ಬಹಿರಂಗವಾಗಿ ಸಭೆಯಲ್ಲೇ ಕೇಳುತ್ತಾರೆ” ಎಂದು ಹೇಳಿದರು.

“ಈ ಮೊದಲು ಎಲ್ಲರ ಬಳಿ ಶೇ.4ರಷ್ಟು ಲಂಚ ಪಡೆಯುತ್ತಿದ್ದರು. ಇದೀಗ ಶೇ.10ಕ್ಕೆ ಬೇಡಿಕೆ ಇಡುತ್ತಿದ್ದಾರೆ. ಇ-ಸ್ವತ್ತು ಮಾಡಿಕೊಡಲು ₹10,000 ಲಂಚ ಕೊಡಬೇಕು ಅಂತ ಕೇಳುತ್ತಾರೆ. ಸರ್ಕಾರಿ ಸಂಬಳ ತೆಗೆದುಕೊಳ್ಳುವ ಅವರು ಸದಸ್ಯರ ಬಳಿಯೇ ಲಂಚಬಾಕರಂತೆ ವರ್ತಿಸುತ್ತಿದ್ದರೆ ಜನಸಾಮಾನ್ಯರ ಕೆಲಸಗಳನ್ನು ಹೇಗೆ ಮಾಡಿಕೊಡುತ್ತಾರೆ” ಎಂದು ಪ್ರಶ್ನಿಸಿದ್ದಾರೆ.

ಇನ್ನೋರ್ವ ಸದಸ್ಯರು ಈ ದಿನ.ಕಾಮ್‌ನೊಂದಿಗೆ ಮಾತನಾಡಿ, “15ನೇ ಹಣಕಾಸು ಯೋಜನೆಯ ಹಣ ಮತ್ತು ಮನರೇಗಾ ಹಣ ಸೇರಿದಂತೆ ಗ್ರಾಮ ಪಂಚಾಯಿತಿ ಸದಸ್ಯರಿಗೆ ಬಿಡುಗಡೆಯಾಗುವ ಪ್ರತಿ ಅನುದಾನದಲ್ಲಿ ಶೇ.10ರಷ್ಟು ಲಂಚ ಕೊಡುವಂತೆ ಪಿಡಿಒ ಅನುರಾಧಾ ಮತ್ತು ಅಧ್ಯಕ್ಷೆ ಭವ್ಯಾ ಸೇರಿಕೊಂಡು ಪೀಡಿಸುತ್ತಿದ್ದಾರೆ. ನಾವು ಮುಂದೆ ನಿಂತು ಊರಿನ ಸ್ವಚ್ಛತೆ ಕಾರ್ಯಗಳನ್ನು ಮಾಡಿಸಿದರೂ ಕೂಡ ಬಿಲ್‌ ತೆಗೆದುಕೊಳ್ಳುವಷ್ಟರಲ್ಲಿ ಹೈರಾಣುಗುತ್ತಿದ್ದೇವೆ” ಎಂದು ಬೇಸರ ವ್ಯಕ್ತಪಡಿಸಿದರು.

ಇದನ್ನೂ ಓದಿದ್ದೀರಾ? ಅಂಗನವಾಡಿ ಸಹಾಯಕಿಯಿಂದ ಸಾಮಾಜಿಕ ನಾಯಕಿವರೆಗೆ; ಚಂದಮ್ಮರ ಸ್ಫೂರ್ತಿಯ ಪಯಣ

“ಅನುದಾನದ ಹಣವನ್ನು ಸದಸ್ಯರುಗಳಿಗೆ ನೀಡಬೇಡಿ, ಅವರು ನನಗೇ ಕೊಡಬೇಕು. ಅದನ್ನು ಕಟ್‌ ಮಾಡಿಕೊಂಡು ಕೊಡಿ, ಇಲ್ಲದಿದ್ದರೆ ನನಗೆ ಕೊಡಿ ಎಂದು ಎಂಜಿನಿಯರ್‌ಗೆ ಹೇಳುತ್ತಾರೆ. ಬಿಡುಗಡೆಯಾಗಿರುವ ಅನುದಾನವನ್ನು ಮತ್ತೆ ಪಿಡಿಒ ಅನುರಾಧ ಅವರೇ ವಾಪಸ್‌ ತೆಗೆದುಕೊಂಡಿದ್ದಾರೆ. ನಮ್ಮ ಊರುಗಳಲ್ಲಿ ₹370 ಕೂಲಿಗೆ ಯಾರೂ ಬರುವುದಿಲ್ಲ. ಜನ ಸಿಗುವುದಿಲ್ಲ, ಜಾಬ್‌ ಕಾರ್ಡ್‌ ಇರುವವರನ್ನು ಹುಡುಕಿಕೊಂಡು ಕೆಲಸ ಮಾಡಿಸಿಕೊಳ್ಳುವಷ್ಟರಲ್ಲೇ ಸಾಕಾಗಿರುತ್ತದೆ. ಅಲ್ಲದೇ ಅನುದಾನ ಪಡೆಯುವಾಗ ಇನ್ನೊಂದು ರೀತಿಯ ಸಮಸ್ಯೆ ಎದುರಿಸುವಂತಾಗಿದೆ” ಎಂದು ಆರೋಪಿಸಿದರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಉಡುಪಿ | ಕಾರ್ಮಿಕರು ಹಕ್ಕು ಮತ್ತು ಸೌಲಭ್ಯಗಳಿಂದ ವಂಚಿತರಾಗದಂತೆ ನೋಡಿಕೊಳ್ಳಿ: ಟಿ.ಎಂ. ಶಾಹಿದ್ ತೆಕ್ಕಿಲ್

ಕಾರ್ಮಿಕರ ಹಿತಾಸಕ್ತಿಯನ್ನು ಕಾಪಾಡುವುದರೊಂದಿಗೆ ಸರ್ಕಾರದ ಕಲ್ಯಾಣ ಕಾರ್ಯಕ್ರಮಗಳು ಅರ್ಹ ಫಲಾನುಭವಿಗಳಿಗೆ ತಲುಪುವಂತೆ...

ಬಾಗೇಪಲ್ಲಿಯಲ್ಲಿ ರಸ್ತೆ ಅಪಘಾತ:ರೈತ ನಂಜಪ್ಪ ಸಾವು

ಕೆಎಸ್‌ಆರ್‌ಟಿಸಿ ಬಸ್ ಡಿಕ್ಕಿ ಹೊಡೆದು ದ್ವಿಚಕ್ರ ವಾಹನದಲ್ಲಿ ಹೊಲಕ್ಕೆ ತೆರಳುತ್ತಿದ್ದ ನಡಂಪಲ್ಲಿ...

ಮಂಗಳೂರು | ಕೊಳ್ತಮಜಲು ರಹ್ಮಾನ್ ಹತ್ಯೆ ಪ್ರಕರಣ: ಆರೋಪಿಗಳ ಜಾಮೀನು ರದ್ದುಪಡಿಸಿದ ಸುಪ್ರೀಂ ಕೋರ್ಟ್

ಕೊಳ್ತಮಜಲು ರಹ್ಮಾನ್ ಹತ್ಯೆ ಪ್ರಕರಣದಲ್ಲಿ ಆರೋಪಿಗಳಿಗೆ ಇತ್ತೀಚೆಗೆ ನ್ಯಾಯಾಲಯ ಜಾಮೀನು ನೀಡಿತ್ತು....

ಕೋಲಾರ | ಚೈನಾ ಶಾಂಘೈನಲ್ಲಿ ಕನ್ನಡದ ಮೊದಲ ಜಾನಪದ ಕಾರ್ಯಕ್ರಮ: ಗೋ.ನಾ. ಸ್ವಾಮಿ ಭಾಗಿ

ಚೈನಾ ದೇಶದ ಶಾಂಘೈನಲ್ಲಿ ಕನ್ನಡಿಗರ ಸಂಘದ ವತಿಯಿಂದ ಆಯೋಜಿಸಿದ್ದ ಕನ್ನಡದ ಮೊದಲ...