ಚಿಂತಾಮಣಿ ನಗರದಲ್ಲಿ ಧಾರಾಕಾರ ಮಳೆ ವಾಹನ ಸವಾರರು ಜನರ ಪರದಾಟ-ತಗ್ಗುಪ್ರದೇಶಗಳು ಜಲಾವೃತ

Date:

ನಗರದಲ್ಲಿ ರಾತ್ರಿ 8 ಸುಮಾರಿಗೆ ಸುರಿದ ಧಾರಾಕಾರ ಮಳೆಯಿಂದಾಗಿ ರಸ್ತೆಗಳಲ್ಲಿ ನೀರು ಸರಾಗವಾಗಿ ಹರಿಯಲಾರದೆ ಪ್ರವಾಹದಂತ ಪರಿಸ್ಥಿತಿ ನಿರ್ಮಾಣಗೊಂಡಿದ್ದಸುಮಾರು 2 ಗಂಟೆ ಸುರಿದ ಮಳೆಯಿಂದಾಗಿ ರಸ್ತೆ, ಚರಂಡಿಗಳು ತುಂಬಿಹೋಗಿ ನೀರು ತುಂಬಿ ರಸ್ತೆಗಳ ಮೇಲೆಲ್ಲ ಹರಿಯಿತು.ಮಳೆಯಿಂದಾಗಿ ರಸ್ತೆಗಳು ತಗ್ಗು ಪ್ರದೇಶಗಳು ಜಲಾವೃತಗೊಂಡಿವೆ.

ನಗರದ ಶಿಡ್ಲಘಟ್ಟ ರಸ್ತೆ ಬೆಂಗಳೂರು ರಸ್ತೆ,ಕೋಲಾರ ರಸ್ತೆ ಹಾಗೂ ಶ್ರೀನಿವಾಸಪುರ ರಸ್ತೆ,ಪಾಲಿಟೆಕ್ನಿಕ್ ಸೇರಿ ನಗರದ ಹಲವಡೆಗಳಲ್ಲಿ ನೀರು ಪ್ರವಾಹದ ರೀತಿಯಲ್ಲಿ ನಿಂತ ಪರಿಣಾಮ ವಾಹನ ಸವಾರರು ಹಾಗೂ ಜನರ ಸಂಚಾರಕ್ಕೆ ಅಡಚಣೆ ಉಂಟಾಯಿತು.

ಯಾವುದೇ ಮುನ್ಸೂಚನೆ ಇಲ್ಲದೆ ಏಕಾಏಕಿ ಧರಕಾರವಾಗಿ ಮಳೆ ಸುರಿದ ಪರಿಣಾಮ ರಾತ್ರಿ ಕೆಲಸ ಮುಗಿಸಿ ಮನೆಗೆ ಹೊರಡಬೇಕಾಗಿದ್ದ ಸಾರ್ವಜನಿಕರು ವ್ಯಾಪಾರಸ್ಥರು ರಸ್ತೆ ಬದಿಯ ಕಟ್ಟಡಗಳಲ್ಲೇ ಆಶ್ರಯ ಪಡೆಯಬೇಕಾಯಿತು.


ಇದನ್ನು ಓದಿದ್ದೀರಾ..?ಬಾಗೇಪಲ್ಲಿ | ಆಗ್ನೇಯ ಪದವೀಧರ ಕ್ಷೇತ್ರದ ಚುನಾವಣೆ ಬಹುತೇಕಶಾಂತಿಯುತ ಹಾಗೂ ಬಿರುಸಿನ ಮತದಾನ

ನಗರ ಹಾಗೂ ತಾಲೂಕಿನಾದ್ಯಂತ ಉತ್ತಮ ಮಳೆಯಾಗಿದ್ದು ಕೃಷಿ ಚಟುವಟಿಕೆಗಳು ಗರಿಗೆದರಿವೆ. ಹವಾಮಾನ ಇಲಾಖೆಯ ಮುನ್ಸೂಚನೆಯಂತೆ ಒಂದೆರಡು ದಿನಗಳ ಕಾಲ ಉತ್ತಮ ಮಳೆಯಾಗುವ ನಿರೀಕ್ಷೆಯಿದ್ದು ಕೆರೆಕುಂಟೆಗಳಿಗೆ ನೀರು ಬರಬಹುದೆಂಬ ನಿರೀಕ್ಷೆ ಸಾರ್ವಜನಿಕರದ್ದಾಗಿದೆ.

eedina
ಈ ದಿನ ಡೆಸ್ಕ್‌
Website | + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ರೈತರ ಸಂಕಷ್ಟ ನಿವಾರಿಸಲಿ, ಕಣ್ಣೀರು ಸುರಿಸುವ ಸಭೆಯಾಗದಿರಲಿ: ಕುರುಬೂರು ಶಾಂತಕುಮಾರ್

ಮೈಸೂರಿನ ಪತ್ರಕರ್ತರ ಭವನದಲ್ಲಿ ಪತ್ರಿಕಾಗೋಷ್ಠಿ ನಡೆಸಿ, ಅಕ್ಟೋಬರ್ 26ರಂದು ಬೆಳಗಾವಿಯಲ್ಲಿ ಮುಖ್ಯಮಂತ್ರಿ...

‘ SIR’ ಫಾರಂ-7 ದುರ್ಬಳಕೆ ವಿರುದ್ಧ ಕ್ರಿಮಿನಲ್ ಕ್ರಮ ಕೈಗೊಳ್ಳಿ: ಜಾಗೃತ ಕರ್ನಾಟಕ ಒತ್ತಾಯ

ಮೈಸೂರಿನ ಪತ್ರಕರ್ತರ ಭವನದಲ್ಲಿ ಪತ್ರಿಕಾಗೋಷ್ಠಿ ನಡೆಸಿ, ಮತದಾರರ ಪಟ್ಟಿಯ ವಿಶೇಷ ಸಮಗ್ರ...

ರಾಯಚೂರು | ಚಾಕಲೇಟ್ ಖರೀದಿ ನೆಪದಲ್ಲಿ ಬಂದು ಮಹಿಳೆಯ ಏಳು ತೊಲೆ ಬಂಗಾರದ ತಾಳಿ ಕಳವು

ತಾಲೂಕಿನ ಯರಗೇರಾ ಗ್ರಾಮದಲ್ಲಿ ಕಿರಾಣಿ ಅಂಗಡಿ ಚಾಕಲೇಟ್ ಖರೀದಿ ನೆಪದಲ್ಲಿ ಬಂದು...