ತಮ್ಮ ಸಮಸ್ಯೆಗಳನ್ನು ಪರಿಹರಿಸಿ, ವಿವಿಧ ಬೇಡಿಕೆಗಳನ್ನು ಈಡೇರಿಸಬೇಕೆಂದು ಒತ್ತಾಯಿಸಿ ಸ್ಮಶಾನ ಕಾರ್ಮಿಕರು ಚಿಕ್ಕಬಳ್ಳಾಪುರದಲ್ಲಿ ಅಣುಕು ಶವಯಾತ್ರೆ ನಡೆಸಿದ್ದಾರೆ. ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಚಿಕ್ಕಬಳ್ಳಾಪುರದ ಜಿಲ್ಲಾಡಳಿತ ಭವನದಿಂದ ಪೂಜನಹಳ್ಳಿ ಸ್ಮಶಾನದವರೆಗೆ ಅಣುಕು ಶವಯಾತ್ರೆ ನಡೆಸಿದ ಸ್ಮಶಾನ ಕಾರ್ಮಿಕರು, ಸ್ಮಶಾನದಲ್ಲಿ ಅಣಕು ಶವಸಂಸ್ಕಾರ ಮಾಡಿದ್ದಾರೆ. “ಸ್ಮಶಾನ ಕಾರ್ಮಿಕರಿಗೆ ಮನರೇಗಾ ಯೋಜನೆಯಡಿ ಸಾಮಾಗ್ರಿ ಖರೀದಿ ಮಾಡಬೇಕು. ಪ್ರತಿ ತಿಂಗಳ 5,000 ರೂ. ಮಾಸಾಶಸನ ನೀಡುವುದು. ಸ್ಮಶಾನ ಕಾರ್ಮಿಕರನ್ನು ಸ್ಥಳೀಯ ಪಂಚಾಯತಿಗಳ ನೌಕರರೆಂದು ಪರಿಗಣಿಸಬೇಕು” ಎಂದು ಒತ್ತಾಯಿಸಿದ್ದಾರೆ.