ಚಿಕ್ಕಬಳ್ಳಾಪುರ | ಎರಡೂವರೆ ವರ್ಷ ಅಧಿಕಾರ ವಿಸ್ತರಣೆ ಮಾಡಿಕೊಂಡಾಗ ಕೆ ವಿ ನಾಗರಾಜ್‌ ಬದ್ಧತೆ ಎಲ್ಲಿತ್ತು?: ಕೋಚಿಮುಲ್ ನಿರ್ದೇಶಕ

Date:

ಎರಡೂವರೆ ವರ್ಷ ಅಧಿಕಾರ ವಿಸ್ತರಣೆ ಮಾಡಿಕೊಂಡಾಗ ಇವರ ಬದ್ಧತೆ ಎಲ್ಲಿತ್ತು? ಕೆ ವಿ ನಾಗರಾಜ್‌ ಅವರಿಗೆ ನೈತಿಕತೆ ಇಲ್ಲ. ಚುನಾವಣೆ ಬೇಕಾ? ವಿಭಜನೆ ಬೇಕಾ ಎನ್ನುವುದನ್ನು ನಾಗರಾಜ್ ಸ್ಪಷ್ಟಪಡಿಸಬೇಕು ಎಂದು ಕೋಚಿಮುಲ್ ನಿರ್ದೇಶಕ ಎನ್ ಸಿ ವೆಂಕಟೇಶ್ ವಾಗ್ದಾಳಿ ನಡೆಸಿದರು.

- Advertisement -

ಚಿಕ್ಕಬಳ್ಳಾಪುರ ನಗರದಲ್ಲಿ ಸೋಮವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿ, “1989ರಿಂದ 1992ರವರೆಗೆ ಶಿವಾರೆಡ್ಡಿ ಕೋಚಿಮುಲ್ ಅಧ್ಯಕ್ಷರಾಗಿದ್ದರು. ಆ ವೇಳೆಯಲ್ಲಿ ಕೆ ವಿ ನಾಗರಾಜ್ ಚಿಕ್ಕಬಳ್ಳಾಪುರದಿಂದ ನಿರ್ದೇಶಕರಾಗಿದ್ದರು. ಆಗ 121ರ ಕಾಯ್ದೆಯ ಪ್ರಕಾರ ಎರಡು ವರ್ಷಗಳ ಕಾಲ ಆಡಳಿತ ಮಂಡಳಿಯ ಅಧಿಕಾರ ಅವಧಿಯನ್ನು ವಿಸ್ತರಿಸಲಾಗಿತ್ತು” ಎಂದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಮೋದಿ ಆಡಳಿತದಲ್ಲಿ ಮಾಹಿತಿ ಹಕ್ಕು ಕಾಯ್ದೆಯ ‘ಸ್ಥಿತಿ’ ಹೇಗಿದೆ?...

ಯಾವುದೇ ಸರ್ಕಾರ ಆಡಳಿತದಲ್ಲಿರಲಿ ಪ್ರಜಾಸತ್ತಾತ್ಮಕ ವ್ಯವಸ್ಥೆಯನ್ನು ಕಾಪಾಡಬೇಕಾದ ಸಂಸ್ಥೆಗಳ ಸ್ವಾಯತ್ತತೆ ಉಳಿಯಬೇಕು. ಅವು ಪಾರದರ್ಶಕವಾಗಿರಬೇಕು. ಪ್ರಜಾಸತ್ತೆಯ ಕಾರ್ಯವೈಖರಿಯನ್ನು ಕುರಿತಂತೆ ಮುಕ್ತ ಚರ್ಚೆ ನಡೆಯುತ್ತಿರಬೇಕು. ಇದು ಸಕ್ರಿಯ, ಅರ್ಥಪೂರ್ಣ ಪ್ರಜಾಸತ್ತೆಯ ಕನಿಷ್ಠ ಅವಶ್ಯಕತೆ. ಹಾಗಾಗಿ...

ಬಂಗಾಳ ವಿಭಜನೆ | ವಿಭಜನೆಯ ವಿಷಬೀಜದಿಂದ ಒಗ್ಗಟ್ಟಿನ ಜ್ಯೋತಿ...

ಬ್ರಿಟಿಷರ 'ಒಡೆದು ಆಳುವ ನೀತಿ'ಯ ಭಾಗವಾಗಿ 1905ರ ಅಕ್ಟೋಬರ್‌ನಲ್ಲಿ ಜಾರಿಗೆ ಬಂದ ಬಂಗಾಳ ವಿಭಜನೆಯು ಭಾರತೀಯರ ರಾಷ್ಟ್ರೀಯತೆಯನ್ನು ಒಡೆಯುವ ಕುತಂತ್ರವಾಗಿತ್ತು. ಇದಕ್ಕೆ ಪ್ರತಿಯಾಗಿ ಭಾರತೀಯರು 'ರಾಷ್ಟ್ರೀಯ ಶೋಕ ದಿನ' ಆಚರಿಸಿ, ಪರಸ್ಪರ ರಾಖಿ...

ನಟ ಇಮ್ರಾನ್ ಖಾನ್ ಪ್ರತಿಭಟಿಸಿದರೆ ಗಡಿಪಾರು; ಟ್ರಂಪ್ ಪರ...

ಕಾನೂನು ಮತ್ತು ರಾಜತಾಂತ್ರಿಕ ನಿಯಮಗಳು ಎಲ್ಲರಿಗೂ ಒಂದೇ ಆಗಿರಬೇಕು ಹೊರತು ಪ್ರಧಾನಿ ಮೋದಿಯವರ ರಾಜಕೀಯ ಅನುಕೂಲಕ್ಕೆ ತಕ್ಕಂತೆ ಬದಲಾಗಬಾರದು. ವಿದೇಶಿ ಪ್ರಜೆಯೊಬ್ಬ ಭಾರತದ ನೆಲದಲ್ಲಿ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವುದು ತಪ್ಪು ಎನ್ನುವುದಾದರೆ, ಭಾರತದ ಪ್ರಧಾನಿಯೊಬ್ಬರು...

“ಕಾಡೇನಹಳ್ಳಿ ನಾಗರಾಜ್ ಅಧ್ಯಕ್ಷರಾಗಿದ್ದ ವೇಳೆಯೂ ಕೆ ವಿ ನಾಗರಾಜ್ ನಿರ್ದೇಶಕರಾಗಿದ್ದರು. ಆಗಲೂ ಆರು ತಿಂಗಳು ಅಧಿಕಾರದ ಅವಧಿಯನ್ನು ವಿಸ್ತರಿಸಲಾಗಿತ್ತು. ಈಗ ನಮ್ಮ ಅವಧಿಯಲ್ಲಿ ಕೇವಲ ಎರಡೇ ತಿಂಗಳು ಅಧಿಕಾರ ವಿಸ್ತರಿಸಲಾಗಿದೆ. ಈಗ ಅಧಿಕಾರ ವಿಸ್ತರಿಸಬಾರದು ಎನ್ನುತ್ತಾರೆ. ಈ ಹಿಂದೆ ಎರಡು ಬಾರಿ ವಿಸ್ತರಣೆ ಆದಾಗ ಇವರ ನೈತಿಕತೆ ಎಲ್ಲಿ ಹೋಗಿತ್ತು” ಎಂದು ಟೀಕಿಸಿದರು.

“ಐದು ಬಾರಿ ನಿರ್ದೇಶಕರಾಗಿದ್ದಾರೆ, ಅನುಭವಸ್ಥರು. ಆದರೂ ಮೆಗಾ ಡೇರಿಯಲ್ಲಿ ಹಾಲಿನ ಪ್ಯಾಕೆಟ್ ಘಟಕ ನಿರ್ಮಾಣ ಮಾಡಲಿಲ್ಲ. ಚುನಾವಣೆಯಲ್ಲಿ ಸೋತ ಕೂಡಲೇ ವಿಭಜನೆ ಬೇಕು ಎನ್ನುತ್ತಿದ್ದಾರೆ. ಜನರನ್ನು ಮತ್ತು ಡೆಲಿಗೇಷನ್‌ಗಳನ್ನು ದಾರಿತಪ್ಪಿಸುತ್ತಿದ್ದಾರೆ” ಎಂದು ಆರೋಪಿಸಿದರು.

ಚಿಂತಾಮಣಿ ಕೋಚಿಮುಲ್ ನಿರ್ದೇಶಕ ಅಶ್ವತ್ಥನಾರಾಯಣ ಬಾಬು ಮಾತನಾಡಿ, “ಕೋಚಿಮುಲ್ ನಿರ್ದೇಶಕರ ಅಧಿಕಾರಾವಧಿ ವಿಸ್ತರಣೆ ರಾಜ್ಯ ಸರ್ಕಾರಕ್ಕೆ ಬಿಟ್ಟ ವಿಚಾರ. ವಿಸ್ತರಣೆಗೆ ಸಹಕಾರಿ ವಲಯದ ಕಾನೂನಿನಲ್ಲಿ ಅವಕಾಶವಿದೆ” ಎಂದು ಹೇಳಿದರು.

“ಕೋಚಿಮುಲ್‌ಗೆ ಆಡಳಿತಾಧಿಕಾರಿ ನೇಮಕ ಮಾಡುವುದು ಸರ್ಕಾರಕ್ಕೆ ಬಿಟ್ಟಿದ್ದು. ಬಿಜೆಪಿ ಸರ್ಕಾರವು ಕೋಚಿಮಲ್ ವಿಭಜನೆಯಲ್ಲಿ ಅವೈಜ್ಞಾನಿಕವಾಗಿ ಮಾಡಿದ ಕಾರಣ ನಾವು ನ್ಯಾಯಾಲಯದ ಮೆಟ್ಟಿಲೇರಿದೆವು. ನಿರ್ದೇಶಕರ ಅಧಿಕಾರದ ಅವಧಿ ಐದು ವರ್ಷ. ಆದರೆ ಆ ಅವಧಿಯನ್ನೇ ಮೊಟಕುಗೊಳಿಸಲು ಮುಂದಾಗಿದ್ದರು” ಎಂದು ದೂರಿದರು.

“ಬಿಜೆಪಿಗರಿಗೆ ವಿಭಜನೆ ಮಾಡಬೇಕು ಎನ್ನುವ ಸದುದ್ದೇಶ ಇದ್ದಿದ್ದರೆ ಐದು ವರ್ಷದ ಅವಧಿಗೆ ನಿರ್ದೇಶಕರನ್ನಾಗಿ ನಮ್ಮನ್ನು ಮುಂದುವರಿಸಬಹುದಿತ್ತು. ಮಾಜಿ ಸಚಿವ ಡಾ ಕೆ ಸುಧಾಕರ್ ಅವರಿಗೆ ಈ ವಿಚಾರವಾಗಿ ಒಕ್ಕೂಟದ ಮಾಜಿ ಅಧ್ಯಕ್ಷ ಕೆ ವಿ ನಾಗರಾಜ್ ತಿರುಚಿ ಹೇಳಿದ್ದಾರೆ” ಎಂದು ಆರೋಪಿಸಿದರು.

“ಕೆ ವಿ ನಾಗರಾಜ್ ಅವರಿಗೆ ಅಧಿಕಾರದಾಹ. ಒಕ್ಕೂಟ ವಿಭಜನೆ ಆಗಬೇಕು. ತಾನು ಅಧ್ಯಕ್ಷ ಆಗಬೇಕು ಎನ್ನುವುದಷ್ಟೇ ಅವರ ಗುರಿ. ತಾನು ಅಧಿಕಾರಕ್ಕೆ ಬರುವವರೆಗೂ ಮೆಗಾ ಡೇರಿಯಲ್ಲಿ ಹಾಲಿನ ಪ್ಯಾಕೆಟ್ ಘಟಕಕ್ಕೆ ಡಿಪಿಆರ್ ಮಾಡಿರಲಿಲ್ಲ” ಎಂದರು.

“ಪನ್ನೀರ್ ಘಟಕ, ಟೆಟ್ರಾ ಪ್ಯಾಕ್ ಘಟಕ ಬಿಟ್ಟರೆ ಲಾಭದಾಯಕ ಉತ್ಪನ್ನಗಳ ತಯಾರಿಕೆಗೆ ಯಾವುದೇ ಘಟಕವನ್ನೂ ಮಾಡಲಿಲ್ಲ. ಇದರಿಂದ ಮೆಗಾ ಡೇರಿಯಲ್ಲಿ ಒಂದು ಲೀಟರ್ ಹಾಲಿಗೆ ₹5 ನಷ್ಟವಾಗುತ್ತಿದೆ. ಹಾಲಿನ ಪ್ಯಾಕೆಟ್ ಘಟಕ ಮಾಡಿದ್ದರೆ ಅನುಕೂಲವಾಗುತ್ತಿತ್ತು” ಎಂದು ಹೇಳಿದರು.

“ಈಗ ಹಾಲಿನ ಪ್ಯಾಕೆಟ್ ಘಟಕ ನಿರ್ಮಾಣಕ್ಕೆ ₹130 ಕೋಟಿ ವೆಚ್ಚದ ಡಿಪಿಆರ್‌ಗೆ ಅನುಮೋದನೆ ದೊರೆತಿದೆ. ಸರ್ಕಾರ, ಸಹಕಾರ ಇಲಖೆಯಿಂದ ಅನುಮತಿ ಪಡೆದು ಟೆಂಡರ್ ಆರಂಭಿಸಲಾಗುವುದು. ಮುಂದಿನ ಎರಡು ವರ್ಷಗಳಲ್ಲಿ ಘಟಕ ನಿರ್ಮಾಣವಾಗಲಿದೆ. ಇದರಿಂದ ಒಕ್ಕೂಟ ಆರ್ಥಿಕವಾಗಿ ಬಲಿಷ್ಠವಾಗಲಿದೆ” ಎಂದರು.

ಈ ಸುದ್ದಿ ಓದಿದ್ದೀರಾ? ತುಮಕೂರು | ತೆಂಗಿನ ಬೆಳೆಗೂ ಸರಿಯಾದ ಪೋಷಕಾಂಶ ಒದಗಿಸಿ: ಟಿ ಬಿ ಜಯಚಂದ್ರ

“ಸಚಿವ ಡಾ. ಎಂ ಸಿ ಸುಧಾಕರ್ ಅವರು ಕೋಚಿಮುಲ್ ವಿಭಜನೆಯ ಬಗ್ಗೆ ಒಲವು ಮತ್ತು ಬದ್ಧತೆ ಹೊಂದಿದ್ದಾರೆ. ಸರ್ಕಾರ ದಿಟ್ಟ ನಿರ್ಧಾರ ಕೈಗೊಳ್ಳಲಿದೆ. ಕೋಚಿಮುಲ್ ನೇಮಕಾತಿಯಲ್ಲಿ ಅಕ್ರಮ ನಡೆದಿದೆ ಎನ್ನುವ ಬಗ್ಗೆ ತನಿಖೆ ನಡೆಯುತ್ತಿದೆ. ತನಿಖೆಯಾದ ಮೇಲೆ ಅಕ್ರಮ ನಡೆದಿದೆಯೊ ಇಲ್ಲವೋ ಎನ್ನುವುದು ತಿಳಿಯಲಿದೆ” ಎಂದರು.

ಕೋಚಿಮುಲ್ ನಿರ್ದೇಶಕ ಶ್ರೀನಿವಾಸ್ ರಾಮಯ್ಯ, ಮುಖಂಡರಾದ ಸು ಧಾ ವೆಂಕಟೇಶ್, ಕೆ ಎಂ ಮುನೇಗೌಡ, ವೆಂಕಟ್ ಇದ್ದರು.

WhatsApp Image 2025 11 17 at 3.21.17 PM
ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಉಡುಪಿ | ಕಾರ್ಮಿಕರು ಹಕ್ಕು ಮತ್ತು ಸೌಲಭ್ಯಗಳಿಂದ ವಂಚಿತರಾಗದಂತೆ ನೋಡಿಕೊಳ್ಳಿ: ಟಿ.ಎಂ. ಶಾಹಿದ್ ತೆಕ್ಕಿಲ್

ಕಾರ್ಮಿಕರ ಹಿತಾಸಕ್ತಿಯನ್ನು ಕಾಪಾಡುವುದರೊಂದಿಗೆ ಸರ್ಕಾರದ ಕಲ್ಯಾಣ ಕಾರ್ಯಕ್ರಮಗಳು ಅರ್ಹ ಫಲಾನುಭವಿಗಳಿಗೆ ತಲುಪುವಂತೆ...

ಬಾಗೇಪಲ್ಲಿಯಲ್ಲಿ ರಸ್ತೆ ಅಪಘಾತ:ರೈತ ನಂಜಪ್ಪ ಸಾವು

ಕೆಎಸ್‌ಆರ್‌ಟಿಸಿ ಬಸ್ ಡಿಕ್ಕಿ ಹೊಡೆದು ದ್ವಿಚಕ್ರ ವಾಹನದಲ್ಲಿ ಹೊಲಕ್ಕೆ ತೆರಳುತ್ತಿದ್ದ ನಡಂಪಲ್ಲಿ...

ಮಂಗಳೂರು | ಕೊಳ್ತಮಜಲು ರಹ್ಮಾನ್ ಹತ್ಯೆ ಪ್ರಕರಣ: ಆರೋಪಿಗಳ ಜಾಮೀನು ರದ್ದುಪಡಿಸಿದ ಸುಪ್ರೀಂ ಕೋರ್ಟ್

ಕೊಳ್ತಮಜಲು ರಹ್ಮಾನ್ ಹತ್ಯೆ ಪ್ರಕರಣದಲ್ಲಿ ಆರೋಪಿಗಳಿಗೆ ಇತ್ತೀಚೆಗೆ ನ್ಯಾಯಾಲಯ ಜಾಮೀನು ನೀಡಿತ್ತು....

ಕೋಲಾರ | ಚೈನಾ ಶಾಂಘೈನಲ್ಲಿ ಕನ್ನಡದ ಮೊದಲ ಜಾನಪದ ಕಾರ್ಯಕ್ರಮ: ಗೋ.ನಾ. ಸ್ವಾಮಿ ಭಾಗಿ

ಚೈನಾ ದೇಶದ ಶಾಂಘೈನಲ್ಲಿ ಕನ್ನಡಿಗರ ಸಂಘದ ವತಿಯಿಂದ ಆಯೋಜಿಸಿದ್ದ ಕನ್ನಡದ ಮೊದಲ...