17 ವರ್ಷದ ಬಾಲಕ ಆಟ ಆಡುತ್ತಿದ್ದಾಗ ಗೊತ್ತಿಲ್ಲದೇ ಹಸುವಿನ ಬಾಲಕ್ಕೆ ಪರಫ್ಯೂಮ್ ಸ್ಪ್ರೇ ಹಾಕಿದ ಕಾರಣಕ್ಕೆ ಹಲ್ಲೆ ನಡೆಸಿರುವ ಘಟನೆ, ಚಿಕ್ಕಮಗಳೂರು ಜಿಲ್ಲೆಯ ವಿಜಯಪುರದಲ್ಲಿ ನಡೆದಿದೆ.
ಹಲ್ಲೇಗೊಳಗಾದ ಬಾಲಕ ಶುಹೇಬ್(17), ಆಟ ಆಡುತ್ತಿದ್ದಾಗ ಗೊತ್ತಿಲ್ಲದೇ ಹಸುವಿನ ಬಾಲದ ಕಡೆ ಬಾಲಕ ಸ್ಪ್ರೇ ಹಾರಿಸಿದ್ದಾನೆ, ಈ ನೆಪ ಮಾಡಿಕೊಂಡು ಬಜರಂಗದಳದ ಶ್ಯಾಮ್ ವಿ.ಗೌಡ, ಸಂತೋಷ ಕೋಟ್ಯನ್ ಹಾಗೂ ಅವರ ತಂಡ ಕ್ರೂರವಾಗಿ ಆ ಬಾಲಕನ ಮೇಲೆ ಹಲ್ಲೆ ನಡೆಸಿ, ಅಬಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಹಾಗೆಯೇ, ಮೊಬೈಲ್ ಅಲ್ಲಿ ಸೆರೆ ಹಿಡಿದು ಸಾಮಾಜಿಕ ಜಾಲತಾಣದಲ್ಲಿ ಹೆಸರುವಾಸಿಯಾಗಿರುವ AI ಬಳಸಿದ್ದಾರೆಂದು ತಿಳಿದು ಬಂದಿದೆ. ಇಂತಹ ಹಿಂಸಾತ್ಮಕ ಮತ್ತು ಅತಿರೇಕಿ ವರ್ತನೆಗಳು ಸಂಸ್ಕೃತ ಸಮಾಜದಲ್ಲಿ ಯಾವುದೇ ರೀತಿಯ ಸ್ವೀಕಾರಾರ್ಹವಾಗುವುದಿಲ್ಲ. ಯಾರಿಗೂ ಕಾನೂನನ್ನು ತಮ್ಮ ಕೈಯಲ್ಲಿ ತೆಗೆದುಕೊಳ್ಳುವ ಹಕ್ಕಿಲ್ಲ ಎಂದು ಎಸ್‌ಡಿಪಿಐ ತೀವ್ರ ಖಂಡಿಸಿದೆ.

ಎಸ್‌ಡಿಪಿಐ ಪಕ್ಷದಿಂದ ಕೆಳಕಂಡ ಬೇಡಿಕೆಗಳು: 1️⃣ ಆರೋಪಿಗಳಾದ ಶ್ಯಾಮ್ ವಿ.ಗೌಡ, ಸಂತೋಷ ಕೋಟ್ಯನ್ ಹಾಗೂ ಇತರರನ್ನು ತಕ್ಷಣ ಬಂಧಿಸಿ, ಕೊಲೆ ಯತ್ನ, ಹಲ್ಲೆ ಮತ್ತು ಬೆದರಿಕೆ ಸೇರಿದಂತೆ ಸಂಬಂಧಿತ ಕಾನೂನು ವಿಧಿಗಳಡಿ ಪ್ರಕರಣ ದಾಖಲಿಸಬೇಕು. 2️⃣ ತನಿಖೆಯನ್ನು ಉನ್ನತ ಅಧಿಕಾರಿಗಳ ಮೇಲ್ವಿಚಾರಣೆಯಲ್ಲಿ ನಿರಪೇಕ್ಷವಾಗಿ ನಡೆಸಬೇಕು. 3️⃣ ಬಾಲಕನ ಹಕ್ಕುಗಳನ್ನು ರಕ್ಷಿಸಲು ಜುವೆನೈಲ್ ಜಸ್ಟಿಸ್ ಕಾಯ್ದೆ (Juvenile Justice Act) ಅನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು. 4️⃣ ಪೀಡಿತ ಕುಟುಂಬಕ್ಕೆ ತಕ್ಷಣ ಪರಿಹಾರ ಹಾಗೂ ವೈದ್ಯಕೀಯ ನೆರವು ನೀಡಬೇಕು. 5️⃣ ಘಟನೆಯ ಕುರಿತು ತಪ್ಪು, ಕೋಮು ಆಧಾರಿತ ಅಥವಾ AI ವಿಡಿಯೋಗಳ ಮೂಲಕ ತಪ್ಪು ಸುದ್ದಿ ಹರಡಿದವರ ಮೇಲೆ IT ಕಾಯ್ದೆ ಹಾಗೂ IPC ಪ್ರಕಾರ ಕ್ರಮ ಕೈಗೊಳ್ಳಬೇಕು.
ಇದನ್ನೂ ಓದಿದ್ದೀರಾ?ಚಿಕ್ಕಮಗಳೂರು l ರೈತರ ಬೆಳೆಯನ್ನು ನಾಶ ಮಾಡಿದ ಕಾಡಾನೆ
ಈ ಘಟನೆ ಧರ್ಮದ ವಿಚಾರವಲ್ಲ, ಮಾನವೀಯತೆ ಮತ್ತು ನ್ಯಾಯದ ಪ್ರಶ್ನೆಯಾಗಿದೆ. ಶಾಂತಿ ಕಾಪಾಡಲು ಮತ್ತು ಪೀಡಿತ ಕುಟುಂಬದವರಿಗೆ ನ್ಯಾಯ ಸಿಗಬೇಕೆಂದು ಎಸ್‌ಡಿಪಿಐ ಅಧ್ಯಕ್ಷರಾದ ಸಯ್ಯದ್ ಅಜ್ಮತ್ ಈದಿನ. ಕಾಮ್ ಗೆ ಮಾಹಿತಿ ತಿಳಿಸಿದ್ದಾರೆ.