ಚಿಕ್ಕಮಗಳೂರು ಜಿಲ್ಲೆ ಅಝದ್ ಪಾರ್ಕ್ ಬಳಿ, ಧರ್ಮಸ್ಥಳದಲ್ಲಿ ನಡೆದಿರುವ ಸೌಜನ್ಯ ಹಾಗೂ ಹೆಣ್ಣು ಮಕ್ಕಳ ಮೇಲೆ ಆಗಿರುವ ದೌರ್ಜನ್ಯ, ಅನ್ಯಾಯದ ಕುರಿತು ಎಸ್ ಡಿಪಿಐ ವತಿಯಿಂದ ಶುಕ್ರವಾರ ಪ್ರತಿಭಟನೆ ನಡೆಸಲಾಯಿತು.
ದೇಶದಲ್ಲೇ ಮೊದಲು ಧರ್ಮ ಆಡಳಿತ, ಧಾರ್ಮಿಕ ಗುರುಗಳು ಏನು ಹೇಳುತ್ತಾರೆ ಅದೇ ರೀತಿಯಲ್ಲಿ ಹಿಂದೇ ನಡೆಯುತ್ತಿತ್ತು. ನಂತರ ರಾಜಾಡಳಿತ ಬಂತು ರಾಜರು ಹೇಳಿದ ಹಾಗೆ ಪ್ರಜೆಗಳು ನಡೆದುಕೊಳ್ಳಬೇಕಾಗಿತ್ತು. ಲಾಟಿ ಮತ್ತು ಬೂಟು ಹಾಕಿಕೊಂಡು ಬ್ರಿಟಿಷರು ನಮ್ಮ ದೇಶಕ್ಕೆ ಬಂದರು, ಈಗ ಪ್ರಜಾಪ್ರಭುತ್ವ ಇದೆ. ಆದರೇ, ಧರ್ಮಸ್ಥಳದಲ್ಲಿ ಮಾತ್ರ ಧರ್ಮಧಿಕಾರಿಗಳು ಹೇಳಿದ ಹಾಗೆ ಕೇಳಬೇಕಾಗಿದೆ.

ಸೌಜನ್ಯ ಹತ್ಯೆಯಾಗಿದೆ ಮತ್ತು ಧರ್ಮಸ್ಥಳದಲ್ಲಿ ನೂರಾರು ಹತ್ಯೆಗಳಾಗಿದ್ದು, ದೇಶದಾದ್ಯಂತ ಸೋಶಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ ಪ್ರತಿಭಟನೆಯನ್ನು ಹಮ್ಮಿಕೊಂಡಿತ್ತು. ಆದರೆ, ಕಾರಣಾಂತರಗಳಿಂದ ಪೊಲೀಸ್ ಇಲಾಖೆ ನಿರಾಕರಣೆ ಮಾಡಿದ್ದರಿಂದ ಮುಂದಿನ ದಿನಗಳಲ್ಲಿ ದೊಡ್ಡಮಟ್ಟದಲ್ಲಿ ಎಲ್ಲಾ ಪ್ರಗತಿಪರ ಸಂಘಟನೆಯವರು ರೈತರು, ಕಾರ್ಮಿಕರು, ಮಹಿಳಾ, ದಲಿತ ಸಂಘಟನೆಯವರನ್ನು ಸೇರಿಸಿ ಪ್ರತಿಭಟನೆಯನ್ನು ಮಾಡುತ್ತೇವೆ ಎಂದು ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ ಮುಖಂಡರಾದ ಗೌಸ್ ಮುನೀರ್ ಈದಿನ.ಕಾಮ್ ಗೆ ಜೊತೆ ಮಾತಾಡಿದ್ದಾರೆ.
ಇದನ್ನೂ ಓದಿದ್ದೀರಾ?ಚಿಕ್ಕಮಗಳೂರು l ನೇಣು ಬಿಗಿದುಕೊಂಡು ಹೆಡ್ ಕಾನ್ಸ್‌ಟೇಬಲ್ ಆತ್ಮಹತ್ಯೆ
ಪ್ರತಿಭಟನೆಯಲ್ಲಿ ಎಸ್ ಡಿಪಿಐ ಮುಖಂಡರು, ಕಾರ್ಯಕರ್ತರು, ಹಲವು ಸಂಘಟನೆಯ ಸಂಘಟಕರು ಹಾಗೂ ಇನ್ನಿತರರು ಭಾಗವಹಿಸಿದ್ದರು