ಹಿಂದೂ ಉಪ ಜಾತಿಗಳಿಗೆ ಕ್ರಿಶ್ಚಿಯನ್ ಪದ ಜೋಡಿಸಿದ ವಿಚಾರಕ್ಕೆ ಸಂಬಂಧಿಸಿದಂತೆ ಕ್ರೈಸ್ತರಿಂದಲೇ ವಿರೋಧ ವ್ಯಕ್ತಪಡಿಸಿರುವ ಘಟನೆ ಚಿಕ್ಕಮಗಳೂರು ನಗರದಲ್ಲಿ ನಡೆದಿದೆ.
ರಾಜ್ಯದಲ್ಲಿ ಸೋಮವಾರದಿಂದ ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆ ಆರಂಭಗೊಳ್ಳಲಿದೆ. ಈ ಸಮೀಕ್ಷೆ ವಿಚಾರದಲ್ಲಿ 47 ಹಿಂದೂ ಉಪ ಜಾತಿಗಳಿಗೆ ಕ್ರಿಶ್ಚಿಯನ್ ಧರ್ಮ ಜೋಡಿಸಿದರಿಂದ ವಿವಾದಕ್ಕೆ ಕಾರಣವಾಗಿತ್ತು. ವ್ಯಾಪಕ ವಿರೋಧದ ಹಿನ್ನೆಲೆಯಲ್ಲಿ, ರಾಜ್ಯ ಸರ್ಕಾರವು ಸಾಮಾಜಿಕ-ಶೈಕ್ಷಣಿಕ ಸಮೀಕ್ಷೆಯಿಂದ ಅವುಗಳನ್ನು ಕೈಬಿಟ್ಟಿದೆ.
ಇದನ್ನೂ ಓದಿದ್ದೀರಾ?ಚಿಕ್ಕಮಗಳೂರು l ಅಕ್ರಮ ಸಂಬಂಧ; ಹಿಂದೂ ಹೆಸರಲ್ಲಿ ನಕಲಿ ಆಧಾರ್ ಕಾರ್ಡ್ ಬಳಕೆ
ಹಾಗೆಯೇ, ಇದಕ್ಕೆ ಸಂಬಂಧಿಸಿದಂತೆ ಪ್ರೊಟೆಸ್ಟೆಂಟ್ ಪಂಗಡದ ಬಿಷಪ್ ಕೆ.ಕೆ ವರ್ಗಿಸ್ “ಹಿಂದೂ ಉಪಜಾತಿಗಳನ್ನು ಕ್ರಿಶ್ಚಿಯನ್ ಎಂದು ನಮೂದಿಸಿರುವುದು ಸರಿಯಲ್ಲ, ಯೇಸುವಿನ ಅನುಯಾಯಿಗಳು ಕ್ರೈಸ್ತರು ಅಷ್ಟೇ ನಾವು ಈ ವಿಷಯವನ್ನು ಒಪ್ಪುವುದಿಲ್ಲ ನಮ್ಮ ಪವಿತ್ರ ಗ್ರಂಥ ಬೈಬಲ್ ನಲ್ಲಿ ಉಲ್ಲೇಖಿಸಿದಂತೆ ಯೇಸುವಿನ ಅನುಯಾಯಿಗಳು ಕ್ರೈಸ್ತರು ಅದರಲ್ಲಿ ಬೇರೆ ಯಾವುದೇ ಜಾತಿಗಳು ಬರುವುದಿಲ್ಲ” ಎಂದು ಹೇಳಿದ್ದಾರೆ.