ಶೋ ರೂಂ ಸಿಬ್ಬಂದಿಯೇ ಹೊಸ ವಾಹನದ ಡೀಸೆಲ್ ಕಳ್ಳತನ ಮಾಡಿದ ಘಟನೆ ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರ-ಬಣಕಲ್ ರಸ್ತೆ ನಡುವೆ ನಡೆದಿದೆ.
ಮಂಗಳೂರಿನಿಂದ ಕಡೂರು ಶೋ ರೂಂಗೆ ಹೊಸ ಟಾಟಾ ಯೋಧ ವಾಹನವನ್ನು ತಲುಪಿಸಲು ಹೊರಟಿದ್ದ ಸಿಬ್ಬಂದಿ, ಮಾರ್ಗ ಮಧ್ಯೆ ವಾಹನದ ಡೀಸೆಲ್ ಪಂಪ್ ಪೈಪ್ ಬಿಚ್ಚಿ, ಸುಮಾರು 10 ಲೀಟರ್ ನಷ್ಟು ಡೀಸೆಲ್ ಹೊರ ತೆಗೆದು ಸ್ಥಳೀಯ ಅಂಗಡಿಯ ವ್ಯಾಪಾರಿಯೊಬ್ಬರಿಗೆ ಮಾರಾಟ ಮಾಡಿದ ಹಣದಿಂದ ಎಣ್ಣೆ ಹೊಡೆದು, ಮಾಂಸದ ಊಟ ಮಾಡಿ ಹೊರಟಿದ್ದಾನೆ. ಶೋ ರೂಮ್ ಸಿಬ್ಬಂದಿ ಕಳ್ಳತನ ಮಾಡುವಾಗ ಸ್ಥಳೀಯರು ಮೊಬೈಲ್ ನಲ್ಲಿ ಸೆರೆ ಹಿಡಿಯಲಾಗಿದೆ.
ಇದನ್ನೂ ಓದಿದ್ದೀರಾ?ಚಿಕ್ಕಮಗಳೂರು l ಅಕ್ರಮ ಪ್ಲಾಸ್ಟಿಕ್ ಮಾರಾಟ: ನಗರಸಭೆ ಅಧಿಕಾರಿಗಳು ದಾಳಿ
ಹೊಸ ವಾಹನಗಳು ಶೋ ರೂಂಗಳಿಗೆ ತಲುಪಿ ಮಾಲೀಕರ ಕೈ ಸೇರುವ ಮುನ್ನವೇ ಸಂಬಂಧಪಟ್ಟ ಸಿಬ್ಬಂದಿಯೇ, ಇಂತಹ ಕೃತ್ಯ ಮಾಡಿದರೆ ಹೊಸ ವಾಹನಗಳನ್ನು ಖರೀದಿಸುವವರು ಹೆಚ್ಚರಿಕೆಯಿಂದ ಕೊಳ್ಳಬೇಕಾಗುತ್ತದೆ. ಈ ಕುರಿತು ಶೋ ರೂಂಗೆ ಸಂಬಂಧಿಸಿದವರು ಸೂಕ್ತ ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.