ಚಲಿಸುತ್ತಿದ್ದ ಬೈಕ್ ಮೇಲೆ ಕಾಡುಕೋಣ ದಾಳಿ ಮಾಡಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಮತ್ತಿಕಟ್ಟೆ ರಸ್ತೆಯಲ್ಲಿ ನಡೆದಿದೆ.

ಕಾಡು ಕೋಣ ದಾಳಿಗೆ ಗಾಯಗೊಂಡ ವ್ಯಕ್ತಿ ಕುಮಾರ್ ಎಂಬುವವರು ಮತ್ತಿಕಟ್ಟೆ ವಾಸಿ, ಕೆಲಸ ಮುಗಿಸಿ ಮನೆಗೆ ಹಿಂತಿರುಗುವಾಗ ಕಾಡುಕೋಣದ ದಾಳಿ ನಡೆಸಿದೆ ಎನ್ನಲಾಗಿದೆ. ಗಾಯಗೊಂಡ ವ್ಯಕ್ತಿಯನ್ನು ಬಣಕಲ್ ಸರ್ಕಾರಿ ಆಸ್ಪತ್ರೆಗೆ ಸೇರಿಸಲಾಗಿದೆ.
ಇದನ್ನೂ ಓದಿದ್ದೀರಾ?ಚಿಕ್ಕಮಗಳೂರು l ನಿಯಂತ್ರಣ ತಪ್ಪಿ ಕಂದಕಕ್ಕೆ ಉರುಳಿದ ಲಾರಿ
ಕಾಡಾನೆ ದಾಳಿಯಿಂದ ಆತಂಕಗೊಂಡಿದ್ದ ಜನರು ಇದೀಗ ಕಾಡುಕೋಣ ದಾಳಿಯಿಂದ ಭಯದ ವಾತಾವರಣ ಸೃಷ್ಟಿಯಾಗಿದೆ. ಕಾಡಿನಂಚಿನ ಕೃಷಿ ಭೂಮಿಗೆ ಕಾಡುಕೋಣಗಳು ರಾತ್ರಿ ಹಗಲೆನ್ನದೆ ಹಿಂಡು ಹಿಂಡಾಗಿ ನುಗ್ಗುತ್ತಿದ್ದು, ಪ್ರಯಾಣಿಕರು ಹಾಗೂ ಕೃಷಿ ಭೂಮಿಗೆ ತೇರಳಬೇಕಾದ ರೈತರು ಜೀವ ಭಯದಲ್ಲಿ ಓಡಾಡುವಂತಾಗಿದೆ.
