ಮಲೆನಾಡಿನ ಭಾಗದಲ್ಲಿ ದಿನದಿಂದ ದಿನಕ್ಕೆ ಕಾಡಾನೆಗಳ ಹಾವಳಿ ಹೆಚ್ಚಾಗಿದ್ದು, ರೈತರು ಬೆಳೆದಿರುವಂತಹ ಬೆಳೆಗಳನ್ನು ಕಾಡಾನೆ ನಾಶ ಮಾಡಿರುವ ಘಟನೆ ಚಿಕ್ಕಮಗಳೂರು ತಾಲೂಕು ಖಾಂಡ್ಯ ಹೋಬಳಿ ಹುಯಿಗೆರೆ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ನಡೆದಿದೆ.
ತೋಟದ ಮಾಲೀಕರಾದ ಕರಗಣೆ ಗ್ರಾಮದ ನವೀನ್ ಹಾಗೂ ಶಂಕ್ರೆಗೌಡ ಎಂಬುವರ ತೋಟಕ್ಕೆ ಲಗ್ಗೆ ಇಟ್ಟಿರುವ ಕಾಡಾನೆಗಳು ಅಡಕೆ, ಕಾಫಿಗಿಡಗಳನ್ನು ಸಂಪೂರ್ಣ ನಾಶ ಮಾಡಿವೆ. ಅಡಕೆ ಮರಗಳನ್ನು ಬುಡ ಸಮೇತ ಉರುಳಿಸಿ ಸಿಗಿದು ಹಾಕಿವೆ. ಫಸಲಿಗೆ ಬಂದ ಮರಗಳನ್ನು ಈ ರೀತಿ ಮುರಿದು ಹಾಕಿರುವುದರಿಂದ ಬೆಳೆಗಾರಿಗೆ ದಿಕ್ಕೇ ತೋಚದಂತಾಗಿದ್ದು, ಅರಣ್ಯ ಇಲಾಖೆಯೂ ಆನೆಗಳನ್ನು ಓಡಿಸದೆ ಕೈ ಕಟ್ಟಿ ಕುಳಿತಿದೆ ಎಂದು ರೈತರು ಆರೋಪಿಸಿದ್ದಾರೆ.
ಇದನ್ನೂ ಓದಿದ್ದೀರಾ?ಚಿಕ್ಕಮಗಳೂರು l ಸಾವಿರಾರು ಪೋಡಿ ಪ್ರಕರಣವನ್ನು ಕೂಡಲೇ ಇತ್ಯರ್ಥಗೊಳಿಸಬೇಕು; ರೈತ ಸಂಘ ಆಗ್ರಹ
ಈ ಕುರಿತು ಸರ್ಕಾರ ಬೆಳೆ ಹಾನಿಗೆ ನೀಡುವ ಪರಿಹಾರ ಕೇವಲ ಆನೆ ಹೊಟ್ಟೆಯನ್ನು ತುಂಬಿಸಲು ಕೂಡ ಆಗುವುದಿಲ್ಲ, ಎಂದು ಟೀಕಿಸುವ ಮೂಲಕ ಸ್ಥಳೀಯರು ಬೇಸರ ವ್ಯಕ್ತಪಡಿಸಿದ್ದಾರೆ. ಆನೆಗಳನ್ನು ತಕ್ಷಣ ಸೆರೆ ಹಿಡಿದು ಸ್ಥಳಾಂತರ ಮಾಡುವಂತೆ ರೈತರು ಹಾಗೂ ಸ್ಥಳೀಯರು ಒತ್ತಾಯಿಸಿದ್ದಾರೆ.