ಮಹಿಳೆಯ ಮಾಂಗಲ್ಯ ಸರವನ್ನು ಅಪಹರಿಸಿರುವ ಘಟನೆ ಚಿಕ್ಕಮಗಳೂರು ನಗರ ವ್ಯಾಪ್ತಿಯ ಕೋಟೆ ಬಡಾವಣೆಯಲ್ಲಿ ನಡೆದಿದೆ.
ಸೆಂಟ್ ಮೇರಿಸ್ ಶಾಲೆಯಲ್ಲಿ ಶಿಕ್ಷಕಿ ಪೂರ್ಣಿಮಾ ಎಂಬವರು ಏ.13ರಂದು ಶಾಲೆ ಮುಗಿಸಿಕೊಂಡು ಸಂಜೆ ಸುಮಾರು 4.15 ಗಂಟೆಗೆ ಕೋರ್ಟ್ ಗೆ ಹೋಗುವ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿರುವಾಗ ಬೈಕ್ನಲ್ಲಿ ಬಂದಿದ್ದ ವ್ಯಕ್ತಿಗಳಲ್ಲಿ ಹಿಂಬದಿಯಲ್ಲಿ ಕುಳಿತಿದ್ದವನು ಏಕಾಏಕಿ ತನ್ನ ಕೈನಿಂದ ನನ್ನ ಕುತ್ತಿಗೆಯಲ್ಲಿದ್ದ ಚಿನ್ನದ ಎರಡು ಎಳೆ ಮಾಂಗಲ್ಯ ಸರಕ್ಕೆ ಕೈ ಹಾಕಿ ಕಿತ್ತುಕೊಂಡಿದ್ದು, ಬೈಕ್ ಚಾಲನೆ ಮಾಡುತ್ತಿದ್ದವನು ಜೋರಾಗಿ ಬೈಕ್ ನ್ನು ಓಡಿಸಿಕೊಂಡು ಎಡಕ್ಕೆ ತಿರುಗಿ ಕೋಟೆ ಅಗ್ರಹಾರ ಸರ್ಕಲ್ ಕಡೆಗೆ ಪರಾರಿಯಾಗಿದ್ದಾನೆ.
ಇದನ್ನು ಓದಿದ್ದೀರಾ?ಹಾಸನ | ಕಾಡಾನೆ ಸೆರೆ ಕಾರ್ಯಾಚರಣೆ ತಾತ್ಕಾಲಿಕ ಸ್ಥಗಿತ
ಗಾಬರಿಯಾಗಿ ಜೋರಾಗಿ ಕಿರುಚಿಕೊಂಡು ವಾಪಸ್ಸು ನನ್ನ ಸರ ಕಿತ್ತುಕೊಂಡ ಹೋದ ಸ್ಥಳದಲ್ಲಿ ಕೆಳಗಡೆ ನೋಡಲಾಗಿ ನನ್ನ ಚಿನ್ನದ ಮಾಂಗಲ್ಯ ಸರ ಬಿದ್ದಿದ್ದು ಆ ಸರದಲ್ಲಿ ತಾಳಿ ಗುಂಡು ಇದ್ದು ಅರ್ಧ ಭಾಗ ಎರಡು ಎಳೆ ಚಿನ್ನದ ಸರ ಇದ್ದು ಇನ್ನೊಂದು ಅರ್ಧ ಭಾಗ ಎರಡು ಎಳೆ ಚಿನ್ನದ ಸರವನ್ನು ದೋಚಲಾಗಿದೆ. ಎರಡು ಎಳೆ ಚಿನ್ನದ ಮಾಂಗಲ್ಯ ಸರ ಸುಮಾರು 30 ಗ್ರಾಂ ತೂಕ ಇದ್ದು, ಇಬ್ಬರು ವ್ಯಕ್ತಿಗಳು ಕಿತ್ತುಕೊಂಡು ಹೋದ ಅರ್ಧ ಭಾಗ ಎರಡು ಎಳೆ ಸರ ಸುಮಾರು 15 ಗ್ರಾಂ ತೂಕ ಇದ್ದು ಇದರ ಅಂದಾಜು ಮೌಲ್ಯ 2,10,000 ರೂ ಆಗಿರುತ್ತದೆ. ಎಂದು ನೀಡಿದ ದೂರನ್ನು ಸ್ವೀಕರಿಸಿಕೊಂಡು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.




