ಅರಣ್ಯ ಇಲಾಖೆಯ ಅನುಮತಿಯನ್ನೂ ಪಡೆಯದೆ ನೂರಾರು ಮರಗಳನ್ನು ಕಡಿದು ನೆಲಕ್ಕುರುಳಿಸಿರುವ ದೃಶ್ಯ ಚಿಂತಾಮಣಿ ಅಂಬಾಜಿದುರ್ಗ ಹೋಬಳಿಯ ಉಪ್ಪಾರಪೇಟೆ ಹಾಗೂ ರಾಯಪಲ್ಲಿ ಮಧ್ಯದಲ್ಲಿ ಬರುವ ಕೆರೆ ಅಂಗಳದಲ್ಲಿ ಕಂಡುಬಂದಿದೆ.
ಹಲವು ದೊಡ್ಡ ದೊಡ್ಡ ಜಾಲಿ ಮರಗಳನ್ನು ಕಡಿಯಲಾಗಿದೆ. ಆದರೆ ಮರಣಗಳ ಮಾರಣ ಹೋಮ ನಡೆಸಿರುವವರು ಯಾರೆಂದು ಪತ್ತೆಯಾಗಿಲ್ಲ. ಕೂಡಲೇ ಈ ಘಟನೆ ಕುರಿತು ತನಿಖೆ ನಡೆಸಿ ತಪ್ಪಿತಸ್ಥರನ್ನು ಶಿಕ್ಷೆಗೊಳಪಡಿಸಬೇಕು ಎಂದು ಪರಿಸರ ಪ್ರೇಮಿಗಳು ಒತ್ತಾಯಿಸಿದ್ದಾರೆ.

ತಾಲೂಕಿನ ವಿವಿಧೆಡೆಗಳಲ್ಲಿ ಮರ ಕಡಿಯುವ ಪ್ರಕರಣಗಳು ನಡೆಯುತ್ತಲೇ ಇವೆ. ಸಾರ್ವಜನಿಕರು ತಮ್ಮ ಕಣ್ಣೆದುರಿಗೆ ಮರ ಕಡಿಯುತ್ತಿದ್ದರೂ ಯಾರೊಬ್ಬರೂ ಪ್ರಶ್ನಿಸುತ್ತಿಲ್ಲವೆಂಬುದು ದುರಂತ. ಪರಿಸರದ ಬಗ್ಗೆ ಭಾಷಣ ಮಾಡುವವರು ಇಷ್ಟೊಂದು ಮರಗಳನ್ನು ಕಡಿಯುತ್ತಿರುವ ಉದ್ದೇಶದ ಬಗ್ಗೆ ಕೇಳುತ್ತಿಲ್ಲ ಎಂದು ಪರಿಸರವಾದಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಚಿಂತಾಮಣಿ | ಅಂಗನವಾಡಿ, ಬಿಸಿಯೂಟ ಕಾರ್ಯಕರ್ತೆಯರಿಂದ ರಸ್ತೆತಡೆ ಪ್ರತಿಭಟನೆ
