ಯುಪಿಎಸ್ಸಿ ತರಬೇತಿ ಸಂಸ್ಥೆಯಾದ ಇನ್ಸೈಟ್ ಐಎಎಸ್ ಹಾಗೂ ಡಾನ್ ಬಾಸ್ಕೊ ಪ್ರಥಮ ದರ್ಜೆ ಕಾಲೇಜು ಚಿತ್ರದುರ್ಗ ಮತ್ತು ಸ್ವಾಭಿಮಾನಿ ಬಳಗ ಚಿತ್ರದುರ್ಗ ವಿದ್ಯಾರ್ಥಿಗಳಿಗಾಗಿ ಯುಪಿಎಸ್ಸಿ ಮತ್ತು ಕೆಎಎಸ್ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಮಾರ್ಗದರ್ಶನ” ಒಂದು ದಿನದ ಉಚಿತ ಕಾರ್ಯಾಗಾರವನ್ನು ಚಿತ್ರದುರ್ಗದ ಡಾನ್ ಬಾಸ್ಕೋ ಪ್ರಥಮ ದರ್ಜೆ ಕಾಲೇಜಿನಲ್ಲಿ ಆಯೋಜಿಸಲಾಗಿತ್ತು. ಇನ್ಸೈಟ್ ಮುಖ್ಯಸ್ಥ ವಿನಯ್ ಕುಮಾರ್ ಜಿ ಬಿ ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳ ಕುರಿತು ಉಪನ್ಯಾಸ ನೀಡಿದರು.

ಇನ್ಸೈಟ್ ಮುಖ್ಯಸ್ಥ ವಿನಯ್ ಕುಮಾರ್ ಜಿ ಬಿ ಮಾತನಾಡಿ “ನೀವೆಲ್ಲ ವಿದ್ಯಾರ್ಥಿಗಳು ಇಂದು ಪದವಿಗಳನ್ನು ಓದುತ್ತಿದ್ದೀರಿ. ಮುಂದಿನ ಉದ್ಯೋಗ, ವಿದ್ಯಾಭ್ಯಾಸದ ಬಗ್ಗೆ ಈಗಲೇ ಗುರಿ ಇಟ್ಟುಕೊಳ್ಳಿ. ಸರ್ಕಾರಿ ಕೆಲಸ, ಸ್ವಂತ ಉದ್ಯೋಗ, ಮಾರುಕಟ್ಟೆ ಅಧಿಕಾರಿಗಳು ಸೇರಿದಂತೆ ಇತರ ಕನಸುಗಳು ಇರುತ್ತವೆ. ಅದರೊಂದಿಗೆ ಐಎಎಸ್, ಐಎಫ್ಎಸ್, ಐಪಿಎಸ್ ನಂತಹ ಹುದ್ದೆಗಳನ್ನು ಪಡೆಯಲು ಗುರಿ ಇಟ್ಟುಕೊಂಡಿರಬೇಕು. ಇದಕ್ಕಾಗಿ ದೆಹಲಿ, ಬೆಂಗಳೂರು ಮತ್ತು ದಾವಣಗೆರೆಯಲ್ಲಿ ಕೋಚಿಂಗ್ ಸೆಂಟರ್ ಗಳಿವೆ. ಬಡವರು ಅಶಕ್ತರು, ಉತ್ತಮವಾಗಿ ಓದುವ ವಿದ್ಯಾರ್ಥಿಗಳಿದ್ದರೆ ಅವರಿಗೂ ಕೂಡ ಕೋಚಿಂಗ್ ನೀಡಿ ಪ್ರೋತ್ಸಾಹಿಸಲಾಗುವುದು” ಎಂದು ತಿಳಿಸಿದರು.

ವಿದ್ಯಾರ್ಥಿಗಳನ್ನು ಉದ್ದೇಶಿಸಿ ಸ್ಪರ್ಧಾತ್ಮಕ ಐಎಎಸ್ ಐಪಿಎಸ್ ಸೇರಿದಂತೆ ಸ್ಪರ್ಧಾತ್ಮಕ ಪರೀಕ್ಷೆಗಳ ಬಗ್ಗೆ ಮಾಹಿತಿ ನೀಡಿದರು. ಪರೀಕ್ಷೆಗಳ ತಯಾರಿ ಹಾಗೂ ಪ್ರಸ್ತುತ ಶೈಕ್ಷಣಿಕ ವಲಯದಲ್ಲಿರುವ ಅವಕಾಶಗಳ ಬಗ್ಗೆ ವಿಸ್ತ್ರತವಾಗಿ ಮಾತನಾಡಿದರು. ಅನುಸರಿಸಬೇಕಾದ ಪಠ್ಯಕ್ರಮ ಸಾಮಾನ್ಯ ಜ್ಞಾನ, ಗಣಿತ, ಇತಿಹಾಸ ಸೇರಿದಂತೆ ಇತರ ವಿಷಯಗಳ ಬಗ್ಗೆ ಮಾಹಿತಿ ನೀಡಿದರು.

ಈ ಸುದ್ದಿ ಓದಿದ್ದೀರಾ? ಚಿತ್ರದುರ್ಗ | ಶಾಲಾಭಿವೃದ್ಧಿಗೆ ಕಾರ್ಪೊರೇಟ್ ಗಳ ಸಾಮಾಜಿಕ ಹೊಣೆಗಾರಿಕೆ ನಿಧಿ ಬಳಕೆ: ಎಐಡಿಎಸ್ಓ ಆಕ್ಷೇಪ
ಈ ವೇಳೆ ಕಾರ್ಯಕ್ರಮದಲ್ಲಿ ಡಾನ್ ಬೋಸ್ಕೋ ಕಾಲೇಜಿನ ಪ್ರಾಂಶುಪಾಲರಾದ ಫಾದರ್ ಬೆನ್ನಿ ಕ್ರಿಸ್ತುದಾಸ್, ಉಪ ಪ್ರಾಂಶುಪಾಲರಾದ ಫ್ರೆ.ಕ್ರಿಸ್ಟಿ ಹಾಗೂ ಗೌರವ ಅತಿಥಿಗಳಾದ ರೆ.ಫಾ. ಪ್ಲೆಕ್ಸ್ ಸೆರಾವೋ, ಡಾ. ಧನಕೋಟಿ, ಆಕಾಶವಾಣಿಯ ನವೀನ್ ಮಸ್ಕಲ್, ಸ್ವಾಭಿಮಾನಿ ಬಳಗ ಜಿಲ್ಲಾ ಸಂಚಾಲಕರಾದ ಎಸ್. ಪಾಂಡುರಂಗಪ್ಪ ಸೇರಿದಂತೆ ವಿದ್ಯಾರ್ಥಿಗಳು ಸ್ವಾಭಿಮಾನಿ ಬಳಗದ ಸ್ನೇಹಿತರು ಚಿತ್ರದುರ್ಗದ ಹಿತೈಷಿಗಳು ಪಾಲ್ಗೊಂಡಿದ್ದರು.