ಚಿತ್ರದುರ್ಗ | ಅಂಬೇಡ್ಕರರ ದಲಿತರ ಮಹಾಡ್ ಹೋರಾಟವನ್ನು ಪತ್ರಿಕೆಗಳು ದ್ರೋಹ ಎಂದಿದ್ದವು; ಡಿ ಉಮಾಪತಿ

Date:

Advertisements

“ಗಾಂಧಿಯವರ ದಂಡಿ ಯಾತ್ರೆಯನ್ನು ಸತ್ಯಾಗ್ರಹ ಎಂದು ಕರೆದ ಪತ್ರಿಕೆಗಳು 1927ರ ಅಂಬೇಡ್ಕರ್ ಅವರ ಮಹಾಡ್ ಹೋರಾಟವನ್ನು ದ್ರೋಹ ಎಂದು ಕರೆದಿದ್ದರು. ಇದು ಪತ್ರಿಕೋದ್ಯಮಗಳಲ್ಲಿ ದಲಿತರನ್ನು ಶೋಷಿಸುತ್ತಿರುವ ವಾಸ್ತವ ಸ್ಥಿತಿ” ಎಂದು ಚಿತ್ರದುರ್ಗದಲ್ಲಿ ಪ್ರಜಾವಾಣಿ ದೆಹಲಿಯ ಹಿರಿಯ ವರದಿಗಾರರಾದ ಡಿ. ಉಮಾಪತಿ ವಿಷಾದ ವ್ಯಕ್ತಪಡಿಸಿದರು.

ಕರ್ನಾಟಕ ಮಾಧ್ಯಮ ಅಕಾಡೆಮಿ, ಕರ್ನಾಟಕ ಎಸ್ಸಿ ಎಸ್ಟಿ ಪತ್ರಿಕಾ ಸಂಪಾದಕರ ಸಂಘ, ಚಿತ್ರದುರ್ಗ ಕಾರ್ಯನಿರತ ಪತ್ರಕರ್ತರ ಸಂಘ ಆಯೋಜಿಸಿದ್ದ”ಸುದ್ದಿ ಮಾಧ್ಯಮದಲ್ಲಿ ಅಂಬೇಡ್ಕರ್ ದೃಷ್ಟಿಕೋನ” ವಿಚಾರ ಸಂಕಿರಣದಲ್ಲಿ ದಿಕ್ಸೂಚಿಯಾಗಿ ಮಾತನಾಡಿದ ಅವರು “ಲಿಂಗ ಸಮಾನತೆ ಬಾಯಿ ಮಾತಾಗದೆ, ಮನೆ- ನಡೆನುಡಿಗಳಲ್ಲಿ ಆಚರಣೆಗಳಲ್ಲಿ ಒಂದಾಗಿ ಜಾರಿಗೆ ಬರಬೇಕು. ಅಂಬೇಡ್ಕರ್ ಎಲ್ಲಾ ಮಹಿಳೆಯರ ವಿಮೋಚನೆಗೆ ಕೆಲಸ ಮಾಡಿದರು. ಅದಕ್ಕೆ ಕಾನೂನುಗಳನ್ನು ರೂಪಿಸಿದ್ದಾರೆ. ಅಂಬೇಡ್ಕರ್ ಅವರ ಸ್ವತಂತ್ರ ಹೋರಾಟ ಭಿನ್ನವಾಗಿದ್ದು, ಅವರ ಹೋರಾಟ ದೇಶದ ಶೋಷಿತರ ಸ್ವಾತಂತ್ರ್ಯದ ಹೋರಾಟ. ಅವರ ಕನಸಿನ ಭಾರತದ ಶೋಷಿತರ ವಿಮೋಚನೆ ಇಂದಿಗೂ ಸಾಧ್ಯವಾಗಿಲ್ಲ” ಎಂದು ವಿಶ್ಲೇಷಿಸಿದರು.

1002602446

“ಅಂಬೇಡ್ಕರ್ ಸಾಮಾಜಿಕ ಸಮಾನತೆ ಇಲ್ಲದೇ ಆರ್ಥಿಕ ಮತ್ತು ರಾಜಕೀಯ ಸಮಾನತೆ ವ್ಯರ್ಥ, ಫಲ ನೀಡುವುದಿಲ್ಲ ಎಂದು ಪ್ರತಿಪಾದಿಸಿದರು. ಅವರ ದಲಿತರ ವಿಮೋಚನೆಯ ಹೋರಾಟ ಪೂನಾ ಒಪ್ಪಂದದಿಂದ ಮಣ್ಣು ಪಾಲಾಯಿತು” ಎಂದು ಬೇಸರ ವ್ಯಕ್ತಪಡಿಸಿದರು.

“ದಲಿತ ರಾಜಕಾರಣಿಗಳು ಮೇಲ್ವರ್ಗದವರ ಮತ ಪಡೆದು ಚುನಾವಣೆಯಲ್ಲಿ ಆರಿಸಿ ಬಂದರೆ ದಲಿತರ ಹಿತ ಕಾಯಲು ಹೇಗೆ ಸಾಧ್ಯ ಎಂಬುದು ಅಂಬೇಡ್ಕರ್ ಯೋಚನೆಯಾಗಿದ್ದು, ಆ ಕಾರಣದಿಂದಲೇ ಅಂಬೇಡ್ಕರ್ ಅವರನ್ನು ಎರಡು ಬಾರಿ ಸೋಲಿಸಿದ್ದು ದುರಂತ. ಇದನ್ನು ದಲಿತರು ಅರ್ಥ ಮಾಡಿಕೊಳ್ಳಬೇಕಿದೆ. ಪ್ರತ್ಯೇಕ ಮತಕ್ಷೇತ್ರಗಳ ಅವಶ್ಯಕತೆ ಮತ್ತು ದಲಿತ ರಾಜಕಾರಣಿಗಳನ್ನು ದಲಿತರು ಮಾತ್ರವೇ ಆಯ್ಕೆ ಮಾಡಬೇಕು ಎಂಬುದು ಅಂಬೇಡ್ಕರ್ ಕನಸಾಗಿತ್ತು. ಇದು ಕಾಂಗ್ರೆಸ್, ಗಾಂಧಿಯವರ ಮತ್ತು ಮೇಲ್ವರ್ಗದವರ ವಿರೋಧದಿಂದ ಸಾಧ್ಯವಾಗಲಿಲ್ಲ” ಎಂದು ಅಭಿಪ್ರಾಯಪಟ್ಟರು.

1002602445

“ಹಿಂದೂ ಧರ್ಮ ಛಿದ್ರಗೊಳ್ಳಲಿದೆ, ದಲಿತರ ಮೇಲೆ ದೌರ್ಜನ್ಯಕ್ಕೆ ಕಾರಣವಾಗುತ್ತದೆ ಎನ್ನುವುದು ಗಾಂಧಿಯವರ ವಾದವಾಗಿತ್ತು. ಆದರೆ ಅಂಬೇಡ್ಕರ್ ಅವರು “ಐದು ವರ್ಷಗಳಿಗೆ ಒಮ್ಮೆ ದಲಿತರ ವೋಟು ಪಡೆಯುವುದು ಧರ್ಮವನ್ನು ಹೇಗೆ ಒಡೆಯುತ್ತದೆ. ಇದರಿಂದ ಧರ್ಮ ಹೇಗೆ ಒಡೆಯುತ್ತದೆ? ಎಂದು ಅಂಬೇಡ್ಕರ್ ಪ್ರಶ್ನಿಸಿದರು. ಇದಕ್ಕೆ ಗಾಂಧಿಯವರ ಬಳಿ ಉತ್ತರವಿರಲಿಲ್ಲ. ಪೂನಾ ಒಪ್ಪಂದ ಚುನಾವಣಾ ನೀತಿಯನ್ನೇ ಬದಲಿಸಿದ್ದು, ಇದರ ಪ್ರಕಾರ ಎಲ್ಲರೂ ಸೇರಿ ದಲಿತರ ಪ್ರತಿನಿಧಿಗಳನ್ನು ಆಯ್ಕೆ ಮಾಡುತ್ತಾರೆ. ದಲಿತರ ಶೋಷಿತರ ಹಿತವನ್ನು ಆ ರಾಜಕಾರಣಿ ಕಾಯುವುದಿಲ್ಲ ಮೇಲ್ವರ್ಗದವರ ಮತಕ್ಕಾಗಿ ದಲಿತರನ್ನು ತಾನು ಕೂಡ ನಿರ್ಲಕ್ಷದಿಂದ ಕಾಣುತ್ತಾನೆ’ ಎಂದು ಅಂಬೇಡ್ಕರ್ ತಿಳಿಸಿದ್ದರು. ಪ್ರತ್ಯೇಕ ಮತಕ್ಷೇತ್ರಗಳ ವಿಚಾರವನ್ನು ಪ್ರತಿನಿಧಿಸಿದ್ದರಿಂದ ಆಗ ತಮ್ಮನ್ನು ಕಾಂಗ್ರೆಸ್ ಸೇರಿದಂತೆ ಮೇಲ್ವರ್ಗದ ಬಲಾಢ್ಯರು ದೇಶದ್ರೋಹಿಯಂತೆ ಬಿಂಬಿಸಿದರು” ಎಂದು ಅಂಬೇಡ್ಕರ್ ನೊಂದು ಬರೆದಿದ್ದಾರೆ” ಎಂದು ತಿಳಿಸಿದರು.

“ಅಂದು, ಇಂದು ದಲಿತ ರಾಜಕಾರಣಿಗಳ ಪ್ರತಿನಿಧಿಗಳ ಸ್ಥಿತಿ ಹಳ್ಳಿಯಿಂದ ದಿಲ್ಲಿಯವರೆಗೂ ಒಂದೇ ಸ್ಥಿತಿಯಾಗಿದೆ.
ಈ ಹಿಂದೆ ಬಲಿಷ್ಠ ಜಾತಿಯವರ ಒಂದು ನಿಯೋಗ ಸೋನಿಯಾ ಗಾಂಧಿಯವರನ್ನು ಕಂಡು ಒಂದು ಮನವಿ ನೀಡಲು ಬಂದಿತ್ತು ಅದರ ಮನವಿಯಲ್ಲಿ ‘ಮೇಲ್ಜಾತಿಯ ಜೊತೆಗೆ ಉತ್ತಮವಾಗಿ ಒಡನಾಟ ಹೊಂದಿರುವ, ವರ್ತಿಸುವ ಮತ್ತು ಹೊಂದಿಕೊಂಡು ಹೋಗುವ ದಲಿತರು ಅಥವಾ ಸ್ಪರ್ಶ ಪರಿಶಿಷ್ಟ ಜಾತಿಯ ಅಭ್ಯರ್ಥಿಗಳನ್ನು ಆಯ್ಕೆ ಮಾಡಬೇಕು’ ಎಂದು ಅವರು ಮನವಿ ಮಾಡಿದ್ದರು. ಇದು ಪೂನಾ ಒಪ್ಪಂದದ ಮುಂದುವರಿಕೆಯ ಫಲ” ಎಂದು ಟೀಕಿಸಿದರು.

1002602444

“ಇಂದು ತಾನೇ ದಲಿತರ ಹಿತರಕ್ಷಕರು ಎಂದು ಬಿಜೆಪಿ ಹೇಳುತ್ತಿದೆ. ಅಂದು ಕಾಂಗ್ರೆಸ್ ವಹಿಸಿದ ಪಾತ್ರವನ್ನು ಇಂದು ಬಿಜೆಪಿ ವಹಿಸುತ್ತದೆ ಎಂದು ಟೀಕಿಸಿದರು. ದಲಿತರು ಎಷ್ಟು ಕಾಲವಾದರೂ ಹಾವಿನ ಹೆಡೆಯ ನೆರಳಿನ ಹಿಂದೆ ಕುಪ್ಪಳಿಸುವ ಸ್ಥಿತಿ ಇದೆ” ಎಂದು ಆತಂಕ ವ್ಯಕ್ತಪಡಿಸಿದರು.‌

“ಸಾಮಾಜಿಕ ಸೂಚನೆಗಳಿಂದ ಶೋಷಿತರಾದ ದಲಿತರನ್ನು ಹೊರ ತರುವ ಕೆಲಸವನ್ನು ಮಾಧ್ಯಮಗಳು ಮಾಡಬೇಕಿದೆ ಜನರ ಜೀವನದ ತೊಳಲಾಟಗಳನ್ನು ಮಾಧ್ಯಮಗಳು ಮುಖ್ಯ ವಿಷಯಗಳಾಗಿ ಬಿಂಬಿಸಬೇಕು. ಮಾಧ್ಯಮಗಳಲ್ಲಿ ಅನೀತಿಯ ಜಾಹೀರಾತನ್ನು ಅಂಬೇಡ್ಕರ್ ವಿರೋಧಿಸಿದರು ಅಸಮಾನತೆ, ಸಂಪ್ರದಾಯವಾದ ಬಿಂಬಿಸುವ ಜಾಹೀರಾತುಗಳಿಗೆ ಅವರ ವಿರೋಧವಿತ್ತು” ಎಂದು ಅಭಿಪ್ರಾಯಪಟ್ಟರು.‌

1002602442

ವಿಚಾರ ಸಂಕಿರಣದಲ್ಲಿ ಅಂಬೇಡ್ಕರ್ ದೃಷ್ಟಿಯಲ್ಲಿ ಲಿಂಗ ಸಮಾನತೆ ಬಗ್ಗೆ ವಿಚಾರ ಸಂಕಿರಣ ಮಾತನಾಡಿದ ಡಾ.ಭಾರತೀದೇವಿ “ಅಂದು ಬೇರೆಯವರಿಗಿಂತ ಅಂಬೇಡ್ಕರ್ ಅವರ ವಿಚಾರಧಾರೆ ವಿಭಿನ್ನವಾಗಿತ್ತು ಸಮಾಜದ ತಾರತಮ್ಯಗಳನ್ನು ಸಮರ್ಥವಾಗಿ ಗುರುತಿಸಿದ್ದರು ಅದನ್ನು ಹೆಚ್ಚು ಅರ್ಥ ಮಾಡಿಕೊಂಡಿದ್ದವರು ಅಂಬೇಡ್ಕರ್ ಮತ್ತು ಜ್ಯೋತಿ ಬಾಪುಲೆ” ಎಂದು ತಿಳಿಸಿದರು.

“ಅವರು ತಮ್ಮ ಪ್ರಬಂಧಗಳಲ್ಲಿ ಅಥವಾ ಭಾಷಣಗಳಲ್ಲಿ ಸಮಾಜದ ಪ್ರಗತಿಯನ್ನು ಮಹಿಳೆಯ ಸ್ಥಾನದ ಪ್ರಗತಿಯಿಂದ ಅಳತೆಗೋಲು ಮಾಡಿಕೊಳ್ಳುತ್ತೇನೆ ಎಂದು ಸ್ಪಷ್ಟವಾಗಿ ತಿಳಿಸಿದ ಅಂಬೇಡ್ಕರ್ ಸಮಾಜದಲ್ಲಿ ಮಹಿಳೆಯರ ಸ್ವಾತಂತ್ರ್ಯಕ್ಕೆ ಮತ್ತು ವಿಮೋಚನೆಗೆ ಪತ್ರಿಕೆಗಳಲ್ಲಿ ಬರೆದು ಮಹಿಳೆಯರ ಶೋಷಣೆಯನ್ನು ಆಳವಾಗಿ ಅರ್ಥಮಾಡಿಕೊಂಡಿದ್ದರು.

“ಅವರ ತಮ್ಮ ಕ್ಯಾಸ್ಟ್ ಅಂಡ್ ರಿಲಿಜಿಯಸ್ ಕೃತಿಯಲ್ಲಿ 1916ರಲ್ಲಿಯೇ ಸಮಾಜಶಾಸ್ತ್ರಜ್ಞರ ರೀತಿಯಲ್ಲಿ ಜಾತಿ, ಲಿಂಗ ತಾರತಮ್ಯವನ್ನು ಚೆನ್ನಾಗಿ ವಿಮರ್ಷೆಗೆ ಒಳಪಡಿಸಿದ್ದಾರೆ. ಅವರು ಜಾತಿಯನ್ನು ಮ್ಯಾರೇಜ್ ಸರ್ಕಲ್ ಎಂದು ಕರೆಯುತ್ತಾರೆ. ಅಂತರ್ಜಾತಿ ವಿವಾಹವನ್ನು ನಿಷೇಧಿಸುವ ಮೂಲಕ ಮಹಿಳೆಯನ್ನು ಶೋಷಣೆಗೆ ಒಳಪಡಿಸಲಾಗುತ್ತಿದೆ. ಸ್ತ್ರೀ ಧಮನ ಮತ್ತು ಮಹಿಳೆಯ ಸ್ವಾತಂತ್ರ್ಯದ ನಿಷೇಧಕ್ಕೆ ಕಾರಣವಾಯಿತು ಎಂದು ಅಧ್ಯಯನ ಮಾಡಿದ ಅವರು ಇದೇ ಕಾರಣಕ್ಕಾಗಿ ಮನುಸ್ಮೃತಿ ಸುಡಲ್ಪಟ್ಟಿತು” ಎಂದು ನಿರ್ದೇಶಿಸಿದರು ಐ ವಿಶ್ಲೇಷಿಸಿದರು.

ಅಂಬೇಡ್ಕರ್ ರವರು ಅನೇಕ ಹೆಣ್ಣು ಮಕ್ಕಳಿಗೆ ಪ್ರೇರಣೆಯಾಗುತ್ತಿದ್ದರು. ಅವರ ಬರಹಗಳು ಮಹಿಳೆಯರ ಆತ್ಮ ವಿಶ್ವಾಸಕ್ಕೆ ಹೆಚ್ಚು ಹೊತ್ತು ಕೊಟ್ಟಿದ್ದವು.

ಈ ಸುದ್ದಿ ಓದಿದ್ದೀರಾ? ಚಿತ್ರದುರ್ಗ | ಅಭಿವೃದ್ಧಿ ಪತ್ರಿಕೋದ್ಯಮದ ಜನಕ, ಶ್ರೇಷ್ಠ ಪತ್ರಕರ್ತ ಅಂಬೇಡ್ಕರ್: ಟೆಲೆಕ್ಸ್ ರವಿಕುಮಾರ್

ಅಲ್ಲದೆ ಮಹಿಳೆಯರಿಗೆ ಮಾತೃ ರಜೆ , ವಿಚ್ಛೇದನ, ವಿಧವಾ ವಿವಾಹ, ಆಸ್ತಿ ಹಕ್ಕು ಇತರ ಮಹಿಳಾ ಸೌಲಭ್ಯವಾಗಿ ಕಾನೂನನ್ನು ರಚಿಸಿಕೊಟ್ಟಿದ್ದರು. ಮುಖ್ಯವಾಗಿ ಹಿಂದು ಉತ್ತರಾಧಿಕಾರಿ ಕಾಯ್ದೆಯ ಮೂಲಕ ಮಹಿಳೆಯರಿಗೆ ಆಸ್ತಿ ಪಿತ್ರಾರ್ಜಿತ ಸೇರಿದಂತೆ ಏಕ ಪತ್ನಿ, ವಿಚ್ಛೇದನ ಸೇರಿದಂತೆ ಇತರ ಸ್ವಾತಂತ್ರ್ಯ ಹಕ್ಕು ನೀಡಿದ ಮಹಿಳಾ ವಾದಿ ಅಂಬೇಡ್ಕರ್ ಅವರು ಇದನ್ನು ಬ್ರಾಹ್ಮಣ್ಯದ ಮನಸ್ಥಿತಿಯ ಕಾಂಗ್ರೆಸ್, ಹಿಂದು ಮಹಾಸಭಾ ಸೇರಿದಂತೆ ಹಲವರು ವಿರೋಧಿಸಿದ್ದರು” ಎಂದು ಅವಲೋಕಿಸಿದರು.

“ಸಾಮಾಜಿಕ ಅಸಮಾನತೆ, ಲಿಂಗ ಅಸಮಾನತೆ ಕಾಪಾಡಿಕೊಳ್ಳುವಲ್ಲಿ ಧರ್ಮ ಬಹುಮುಖ್ಯ ಪಾತ್ರ ವಹಿಸಿದೆ ಎಂದು ಅಂಬೇಡ್ಕರ್ ತಮ್ಮ ಕೃತಿ ರಿಡಲ್ಸ್ ಆಫ್ ಹಿಂದೂಯಿಸಂ ನಲ್ಲಿ ಎಂದು ವಿಶ್ಲೇಷಿಸಿದ್ದಾರೆ. ಆದರೆ ಇಂದು ಮಹಿಳಾ ಪ್ರತಿನಿತ್ಯ ಮಾಧ್ಯಮಗಳಲ್ಲಿ ಎಷ್ಟಿದೆ ಎಂದು ಅವಲೋಕಸಬೇಕಿದೆ ಎಂದು ಅಭಿಪ್ರಾಯಪಟ್ಟರು.

ವಿಚಾರ ಸಂಕಿರಣದಲ್ಲಿ ಮಾಧ್ಯಮ ಅಕಾಡೆಮಿ ಅಧ್ಯಕ್ಷೆ ಆಯೇಷಾ ಖಾನಂ, ಸದಸ್ಯರಾದ ಅಹೋಬಲಪತಿ, ಮಂಜುನಾಥ್, ನಿಂಗಜ್ಜ, ಶಿವಕುಮಾರ್ ಕಣಸೋಗಿ, ಕಾರ್ಯದರ್ಶಿ ಸಹನಾ, ಹಿಂದೂ ಪತ್ರಿಕೆಯ ವಿಭಾಗೀಯ ಸಂಪಾದಕ ರಿಷಿಕೇಶ್ ಬಹದ್ದೂರ್, ಸಾಮಾಜಿಕ ಚಿಂತಕ ವಿ ಎಲ್ ನರಸಿಂಹಮೂರ್ತಿ, ಟೆಲೆಕ್ಸ್ ರವಿಕುಮಾರ್, ಚಿತ್ರದುರ್ಗ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ದಿನೇಶ್ ಗೌಡಗೆರೆ, ಪತ್ರಕರ್ತರಾದ ಮಂಜು ಜಡೇಕುಂಟೆ, ಷಣ್ಮುಖಪ್ಪ, ಗೌನಳ್ಳಿ ಗೋವಿಂದಪ್ಪ, ಶ್ರೀನಿವಾಸ್ ದೊಡ್ಡೇರಿ, ಸೇರಿದಂತೆ ಹಲವು ಸಂಘಟನೆಗಳ ಮುಖಂಡರು ಪಾಲ್ಗೊಂಡಿದ್ದರು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದಾವಣಗೆರೆ | ಪರೀಕ್ಷೆ ಸಮಯ,ನಡೆಯದ ಪಾಠ; ಪರೀಕ್ಷೆ ಮುಂದೂಡಿಕೆಗೆ ಕುಲಸಚಿವರಿಗೆ ವಿದ್ಯಾರ್ಥಿಗಳ ಆಗ್ರಹ

ರಾಜ್ಯದ ಎಲ್ಲಾ ಸರ್ಕಾರಿ ಪದವಿ ಕಾಲೇಜುಗಳು ಅತಿಥಿ ಉಪನ್ಯಾಸಕರ ಮೇಲೆ ಅವಲಂಬಿತವಾಗಿದ್ದು...

‘ಮಹಾತ್ಮ ಗಾಂಧಿ ಸೇವಾ ಪ್ರಶಸ್ತಿ’ಗೆ ಇತಿಹಾಸಕಾರ ರಾಮಚಂದ್ರ ಗುಹಾ ಆಯ್ಕೆ

ಪ್ರಸಿದ್ಧ ಭಾರತೀಯ ಇತಿಹಾಸಕಾರ, ಅಂಕಣಕಾರ ಹಾಗೂ ಚಿಂತಕ ಡಾ.ರಾಮಚಂದ್ರ ಗುಹಾ ಅವರನ್ನು...

ಮುಂದಿನ ವರ್ಷಗಳಲ್ಲಿಯೂ ನಾನೇ ದಸರಾ ಪುಷ್ಪಾರ್ಚನೆ ಮಾಡುವೆ: ಸಿಎಂ ಸಿದ್ದರಾಮಯ್ಯ

ವಿರೋಧಪಕ್ಷಗಳು ಭವಿಷ್ಯಕಾರರಲ್ಲ. ವಸ್ತುಸ್ಥಿತಿಯ ಬಗ್ಗೆ ಅರಿವಿಲ್ಲದೇ ಮಾತನಾಡುವ ವಿಪಕ್ಷಗಳ ಭವಿಷ್ಯ ನಿಜವಾಗುವುದಿಲ್ಲ....

ಗುಮಾನಿ ಹುಟ್ಟುಹಾಕಿದ ‘ವಿಲ್’; ‘ಕೊನೆಗಾಲದಲ್ಲಿ ಭೈರಪ್ಪ ಖಾತೆಯಿಂದ ದುಡ್ಡು ದೋಚಿದ್ದು ಯಾರು?’

"ಭೈರಪ್ಪನವರ ಉಯಿಲು (ವಿಲ್) ನೋಡುತ್ತಿದ್ದರೆ ಎಲ್ಲ ಪ್ಲ್ಯಾನ್ ಮಾಡಿ ಬರೆಸಿರುವಂತಿದೆ ಎಂದು...

Download Eedina App Android / iOS

X