ಚಿತ್ರದುರ್ಗ | ವಚನಗಳ ಸಂರಕ್ಷಣೆಯಲ್ಲಿ ಮಡಿವಾಳ ಮಾಚಿದೇವರ ಪಾತ್ರ, ನಿವೃತ್ತ ನೌಕರರ ಸನ್ಮಾನ ಕಾರ್ಯಕ್ರಮ

Date:

Advertisements

ಶ್ರೀವೀರ ಮಡಿವಾಳ ಮಾಚಿದೇವ ಯುವ ಸೇನಾ ಪಡೆಯ ವತಿಯಿಂದ ಶನಿವಾರ ಚಿತ್ರದುರ್ಗ ಜಿಲ್ಲೆ ಹೊಸದುರ್ಗ ನಗರದ ಕನ್ನಡ ಭವನದಲ್ಲಿ ಆಯೋಜಿಸಲಾಗಿದ್ದ ನಿವೃತ್ತ ನೌಕರರ ಸನ್ಮಾನ ಮತ್ತು “೧೨ ನೇ ಶತಮಾನದ ಶಿವಶರಣರ ವಚನಗಳ ಸಂರಕ್ಷಣೆಯಲ್ಲಿ ಮಡಿವಾಳ ಮಾಚಿದೇವರ ಪಾತ್ರ” ಎಂಬ ವಿಷಯವನ್ನ ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಹಿರಿಯ ಪಶು ವೈಧ್ಯಕೀಯ ಪರೀಕ್ಷಕರಾಗಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ಎಂ.ಹೆಚ್. ತಿಪ್ಪೇಸ್ವಾಮಿ ಸೇರಿದಂತೆ ಅನೇಕ ನೌಕರರನ್ನು ಸನ್ಮಾನಿಸಿ ಗೌರವಿಸಲಾಯಿತು.

ಮಡಿವಾಳ ಮಾಚಿದೇವ ಯುವ ಸೇನಾ ಪಡೆಯ ವತಿಯಿಂದ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ “ನಮ್ಮ ಬದುಕು ಸಾರ್ಥಕವಾಗಬೇಕಾದರೆ ನಿವೃತ್ತಿಯ ನಂತರ ಸಮಾಜ ಸೇವೆ ಮಾಡುವ ಮೂಲಕ ಸೇವಾ ವೃತ್ತಿಯಲ್ಲಿ ಪ್ರವೃತ್ತರಾಗಬೇಕು” ಎಂದು ಹೊಸದುರ್ಗ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಎಂ.ಆರ್.ಶಾಂತಪ್ಪ ಅಭಿಪ್ರಾಯಪಟ್ಟರು.

ಪಟ್ಟಣದ ಕನ್ನಡ ಭವನದಲ್ಲಿ ಶ್ರೀ ವೀರ ಮಡಿವಾಳ ಮಾಚಿದೇವ ಯುವ ಸೇನಾ ಪಡೆಯ ವತಿಯಿಂದ ಶನಿವಾರ ಆಯೋಜಿಸಲಾಗಿದ್ದ ನಿವೃತ್ತ ನೌಕರರಿಗೆ ಸನ್ಮಾನ ಮತ್ತು “೧೨ ನೇ ಶತಮಾನದ ಶಿವಶರಣರ ವಚನಗಳ ಸಂರಕ್ಷಣೆಯಲ್ಲಿ ಮಡಿವಾಳ ಮಾಚಿದೇವರ ಪಾತ್ರ” ಎಂಬ ವಿಷಯವನ್ನ ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು
“ಸರ್ಕಾರಿ ನೌಕರಿಯಲ್ಲಿ ಇದ್ದವರು ನಿವೃತ್ತಿಯಾದ ನಂತರ ಆರಾಮಾಗಿ ಮನೆಯಲ್ಲಿ ಮಕ್ಕಳು ಮೊಮ್ಮೋಕ್ಕಳೊಂದಿಗೆ ಕಾಲ ಕಳೆಯುತ್ತಾರೆ, ಇನ್ನು ಕೆಲವರು ನಿವೃತ್ತಿಯ ಎಲ್ಲರೊಂದಿಗೆ ಕಾಲ ಕಳೆಯುವುದರ ಜೊತೆಗೆ ಸಮಾಜ ಸೇವೆಯ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುತ್ತಾರೆ. ಇದು ಉತ್ತಮ ಕೆಲಸ” ಎಂದರು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಸೇನಾ ಪಡೆಯ ಸಂಸ್ಧಾಪಕ ಅಧ್ಯಕ್ಷ ಹಾಗೂ ಕಾರ್ಯಾಧ್ಯಕ್ಷ ನಾಗತಿಹಳ್ಳಿಮಂಜುನಾಥ್ “ನಿವೃತ್ತಿ ಹೊಂದಿರುವ ತಿಪೇಸ್ವಾಮಿಯವರು ತಮ್ಮ ಕೆಲಸದ ಅವಧಿಯಲ್ಲಿ ಉತ್ತಮವಾಗಿ ಕರ್ತವ್ಯವನ್ನು ನಿಭಾಯಿಸಿದ್ದಾರೆ. ನಿವೃತ್ತಿಯ ನಂತರ ಅವರು ಸಮಾಜಕ್ಕೆ ಒಳಿತಾಗುವ ಕೆಲಸವನ್ನ ಮಾಡಿ ಸಮಾಜ ಸೇವೆ ಮಾಡುವ ಮೂಲಕ ಅವರ ಬದುಕು ಸಾರ್ಥವಾಗಲಿ” ಎಂದು ಶುಭ ಹಾರೈಸಿ ಎಂಬ ಮೆಚ್ಚುಗೆ ವ್ಯಕ್ತಪಡಿಸಿದರು.

ಗೌರವ ಸ್ವೀಕರಿಸಿ ಮಾತನಾಡಿದ ಎಂ.ಹೆಚ್. ತಿಪ್ಪೇಸ್ವಾಮಿ “ಹೊಸದುರ್ಗ ಪಟ್ಟಣ ಸೇರಿದಂತೆ ತಾಲೂಕಿನ ಆನಿವಾಳ ಮುಂತಾದ ಕಡೆಗಳಲ್ಲಿ ಸೇವೆ ಸಲ್ಲಿಸಿ ನಿವೃತ್ತಿ ಹೋಂದಿದ್ದೇನೆ, ಸೇವೆ ಮಾಡಿರುವುದು ನನಗೆ ತುಂಬಾ ಸಂತೋಷವನ್ನು ತಂದು ಕೊಟ್ಟಿದೆ” ಎಂದು ತಿಳಿಸಿದರು.

ಈ ಸುದ್ದಿ ಓದಿದ್ದೀರಾ? ದಾವಣಗೆರೆ | ಆವರಗೆರೆ ವಸತಿರಹಿತರ ಪುನರ್ವಸತಿಗಾಗಿ ಸತ್ಯಾಗ್ರಹ: ದಸಂಸ ಸಂಚಾಲಕ ಮಲ್ಲೇಶ್

ಕಾರ್ಯಕ್ರಮದಲ್ಲಿ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಕನ್ನಡ ಉಪನ್ಯಾಸಕ ಚಂದ್ರಯ್ಯ “೧೨ ನೇ ಶತಮಾನದ ಶಿವಶರಣರ ವಚನಗಳ ಸಂರಕ್ಷಣೆಯಲ್ಲಿ ಮಡಿವಾಳ ಮಾಚಿ ದೇವರ ಪಾತ್ರ” ಎಂಬ ವಿಷಯವನ್ನ ಕುರಿತು ವಿಶೇಷ ಉಪನ್ಯಾಸ ನೀಡಿ “12ನೇ ಶತಮಾನದ ಶಿವಶರಣರಲ್ಲಿ ಮಡಿವಾಳ ಮಾಚಿದೇವರು ಒಬ್ಬ ಶ್ರೇಷ್ಠ ಶರಣ. ಈತನ ಕಾಯಕವೇ ಬಟ್ಟೆ ಒಗೆಯುವುದು, ಮಡಿ ಮಾಡುವುದಾಗಿತ್ತು. ಅಂದು ಅಲ್ಲಮ, ಬಸವಾದಿ ಶರಣರು ತಮ್ಮ ಅನುಭವಕ್ಕೆ ತಕ್ಕಂತೆ ಸಮಾಜಕ್ಕಾಗಿ ಬರೆದ ಸಾವಿರಾರು ವಚನಗಳು ಇದ್ದವು. ಕಲ್ಯಾಣ ಕ್ರಾಂತಿಯ ಸಂದರ್ಭದಲ್ಲಿ ಶರಣರ ವಿರೋಧಿಗಳು ವಚನಗಳನ್ನು ಸುಟ್ಟು, ಹರಿದು ಹಾಕಿ ನಾಶಮಾಡುವ ದುರುದ್ದೇಶದಲ್ಲಿ ತೊಡಗಿದ್ದರು. ಇಂತಹ ಕ್ಲಿಷ್ಟಕರ ಸನ್ನಿವೇಶದಲ್ಲಿ ವಚನಗಳನ್ನು ತನ್ನ ಬಟ್ಟೆ ಗಂಟಿನ ರೀತಿ ಕಟ್ಟಿಕೊಂಡು ಅವನ್ನು ಹೊತ್ತುಕೊಂಡು ಬಹುದೂರ ಸಾಗಿಸಿ ಸಂರಕ್ಷಿಸುವ ಕಾರ್ಯ ಮಾಡಿ ಮುಂದಿನ ತಲೆಮಾರಿಗೆ ವಚನಗಳನ್ನು ತಲುಪಿಸಿದ ಕೀರ್ತಿ ಮಡಿವಾಳ ಮಾಚಿದೇವರದ್ದು” ಎಂದು ಮಾಹಿತಿ ನೀಡಿದರು.

ಮಡಿವಾಳ ಮಾಚಿದೇವ ಸೇನಾ ಪಡೆಯ ಅಧ್ಯಕ್ಷ ಮೀರಸಾಬಿಹಳ್ಳಿ ಶಿವಣ್ಣ ಅಧ್ಯಕ್ಷತೆ ವಹಿಸಿದ್ದರು. ಸೇನಾ ಪಡೆಯ ಗೌರವಾಧ್ಯಕ್ಷ ಎನ್.ಕೆ.ತಿಪ್ಪೇಸ್ವಾಮಿ, ನಿಕಟ ಪೂರ್ವ ಅಧ್ಯಕ್ಷ ಬೆನಕನಹಳ್ಳಿ ಶಿವರುದ್ರಪ್ಪ, ಉಪಾಧ್ಯಕ್ಷರುಗಳಾದ ಬಾಗೂರು ಹನುಮಂತಪ್ಪ, ಕೊಂಡಜ್ಜಿ ಬಸವರಾಜಪ್ಪ, ಪ್ರಧಾನ ಕಾರ್ಯದರ್ಶಿ ಸ್ಟುಡಿಯೋಬಸವರಾಜ್, ಸಹ ಕಾರ್ಯದರ್ಶಿ ಪುರುಷೋತ್ತಮ್, ಸಂಘಟನಾ ಕಾರ್ಯದರ್ಶಿ ಕೆ.ಕೆ.ಹಳ್ಳಿ ಸಾಗರ್ (ಲವಕುಮಾರ್) ಖಜಾಂಚಿ ಪ್ರತಾಪ್‌ದುರ್ಗ, ಸಂಚಾಲಕ ಪುನಿತ್‌ಕುಮಾರ್,ಸಲಹಾ ಸಮಿತಿಯ ಸದಸ್ಯ ಕೆಂಕೆರೆ ಅಂಜನ್‌ಕುಮಾರ್, ಕ.ಸಾ.ಪ ಕಾರ್ಯದರ್ಶಿ ಚಂದ್ರುಕಲಾವಿದ, ಎಂ.ಎಸ್.ರಮೇಶ್‌ಮತ್ತೋಡು, ಮಾದಿಗ ನೌಕರರ ಸಂಘದ ಅಧ್ಯಕ್ಷ ಮೂರ್ತಪ್ಪ ಸೇರಿದಂತೆ ಸಮಾಜದ ಮುಖಂಡರು, ಸಮಾಜ ಬಾಂಧವರು ಭಾಗವಹಿಸಿದ್ದರು.

IMG 20250205 WA0034
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ʼಬಸವ ಸಂಸ್ಕೃತಿ ಅಭಿಯಾನʼ ಸಮಾರೋಪ ನಾಡಿನ ಉತ್ಸವವಾಗಲಿ

ಕರ್ನಾಟಕದ ಸಾಂಸ್ಕೃತಿಕ ನಾಯಕ ಬಸವಣ್ಣನವರ ಆಶಯಗಳನ್ನು ಹೊತ್ತುಕೊಂಡು ರಾಜ್ಯದ ಮಠಾಧೀಶರು, ಒಕ್ಕೂಟದ...

ದಾವಣಗೆರೆ | ಮಹರ್ಷಿ ವಾಲ್ಮೀಕಿ ಜಯಂತೋತ್ಸವ: ಐತಿಹಾಸಿಕ ಬೈಕ್‌ ರ‍್ಯಾಲಿ 

ʼʼಜಿಲ್ಲಾ ವಾಲ್ಮೀಕಿ ಯುವ ಘಟಕದ ವತಿಯಿಂದ ಮಹರ್ಷಿ ವಾಲ್ಮೀಕಿ ಜಯಂತೋತ್ಸವ  ಅಕ್ಟೋಬರ್...

ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ; ಇಂದಿಗೆ ಗುರಿ ಮುಟ್ಟಿದ್ದೆಷ್ಟು?

ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗ ಕೈಗೊಂಡಿರುವ ಸಮಗ್ರ ಸಾಮಾಜಿಕ, ಆರ್ಥಿಕ...

ಸಿನಿಮಾ ಟಿಕೆಟ್‍ ದರ ಮಿತಿ | ತಡೆಯಾಜ್ಞೆ ಮುಂದುವರಿಕೆ, ಮೇಲ್ಮನವಿ ಅರ್ಜಿ ಅಂತಿಮ ತೀರ್ಪಿನಲ್ಲಿ ಸಿಲುಕಿದರೆ ಹಣ ವಾಪಸ್!

ರಾಜ್ಯದ ಎಲ್ಲ ಮಲ್ಟಿಫ್ಲೆಕ್ಸ್‌ಗಳಲ್ಲಿ ಸಿನಿಮಾ ಟಿಕೆಟ್‍ಗಳ ಮೇಲೆ ವಿಧಿಸಿದ್ದ 200 ರೂ.ಗಳ...

Download Eedina App Android / iOS

X