ಕಲಬುರಗಿ | ಸಂಕಟಗಳಿಗೆ ಧ್ವನಿಯಾಗುವ ಕಲಾ ಮಾಧ್ಯಮ ಸಿನಿಮಾ : ಗಿರೀಶ್‌ ಕಾಸರವಳ್ಳಿ

Date:

ಸಾಹಿತ್ಯ ಶಬ್ದಗಳ ಲೋಕವಾದರೆ ಸಿನಿಮಾ ಬಿಂಬಗಳ ಲೋಕವಾಗಿದೆ. ಅಮೂರ್ತವಾದ ಶಬ್ದಗಳ ಮೂಲಕ ಸಾಹಿತ್ಯ ಮೂರ್ತಿ ರೂಪವನ್ನು ಚಿತ್ರಿಸುವ ಪ್ರಯತ್ನವಾದರೆ ಸಿನಿಮಾ ಮೂರ್ತ ಬಿಂಬಗಳ ಮೂಲಕ ಮೂರ್ತವಾದ ಬದುಕನ್ನು ಕಟ್ಟಿಕೊಡುತ್ತದೆ ಎಂದು ಖ್ಯಾತ ಸಿನಿಮಾ ನಿರ್ದೇಶಕ ಡಾ.ಗಿರೀಶ್‌ ಕಾಸರವಳ್ಳಿ ಅಭಿಪ್ರಾಯಪಟ್ಟರು.

- Advertisement -

ಆಳಂದ ತಾಲೂಕಿನ ಕಡಗಂಚಿಯ ಕರ್ನಾಟಕ ಕೇಂದ್ರಿಯ ವಿಶ್ವವಿದ್ಯಾಲಯದ ಕನ್ನಡ ವಿಭಾಗದಲ್ಲಿ ಕನ್ನಡ ವಿಭಾಗ ಮತ್ತು ಬಂಡಾರ ಪ್ರಕಾಶನ, ಮಸ್ಕಿ ಇವರ ಸಹಯೋಗದಲ್ಲಿ ನಡೆದ ವಿಶೇಷ ಉಪನ್ಯಾಸ ಮತ್ತು ಸಂವಾದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಅಲ್ಬೇನಿಯಾದಲ್ಲೇಕೆ ಜನಾಕ್ರೋಶ ಭುಗಿಲೆದ್ದಿದೆ? ಸುಪ್ರೀಂ ಕೋರ್ಟ್, ಪಾರ್ಲಿಮೆಂಟನ್ನು ಸುಟ್ಟದ್ದು...

ಅಲ್ಬೇನಿಯಾ ರಾಜಧಾನಿ ತಿರಾನಾದ ಬೀದಿಗಳಿಂದ ಜಾಗತಿಕ ರಾಜಧಾನಿಗಳವರೆಗೆ… ಬೆಲೆ ಏರಿಕೆ, ಭ್ರಷ್ಟಾಚಾರ ಮತ್ತು ಶಿಕ್ಷಣದ ಬಿಕ್ಕಟ್ಟಿನ ವಿರುದ್ಧ ಯುವ ಸಮೂಹ ಬೀದಿಗಿಳಿದಿದೆ. ಪ್ರಧಾನಿ ಎಡಿ ರಾಮಾ ಸರ್ಕಾರದ ವಿರುದ್ಧ ಅಲ್ಬೇನಿಯಾದಲ್ಲಿ ಭುಗಿಲೆದ್ದ ಜನಾಕ್ರೋಶ...

ಬಿಯಾಂಡ್ ಬೆಂಗಳೂರು: ಡಿಜಿಟಲ್ ಆರ್ಥಿಕತೆಯಲ್ಲಿ ರಾಯಚೂರಿಗೆ ಸಿಗುವುದೇ ಪ್ರತ್ಯೇಕ...

ಕರ್ನಾಟಕದ ಅಭಿವೃದ್ಧಿ ಬೆಂಗಳೂರಿಗೆ ಮಾತ್ರ ಸೀಮಿತವಾಗದೆ ರಾಜ್ಯದ ವಿವಿಧ ನಗರಗಳಿಗೂ ತಲುಪಬೇಕು ಎಂಬ ಉದ್ದೇಶದಿಂದ ರಾಜ್ಯ ಸರ್ಕಾರದ ಕರ್ನಾಟಕ ಡಿಜಿಟಲ್ ಎಕಾನಮಿ ಮಿಷನ್ (KDEM) ‘Beyond Bengaluru’ ಯೋಜನೆಯನ್ನು ಜಾರಿಗೊಳಿಸಿದೆ. ಐಟಿ, ಐಟಿಇಎಸ್,...

ರಾಯಚೂರು | ಸ್ಥಳೀಯ ಸಂಸ್ಥೆ ಚುನಾವಣೆ: ಆಕಾಂಕ್ಷಿಗಳ ಲೆಕ್ಕಾಚಾರ...

ಜಿಲ್ಲಾ ಪಂಚಾಯತ್‌ ಮತ್ತು ತಾಲೂಕು ಪಂಚಾಯಿತಿ ಕ್ಷೇತ್ರಗಳ ಕರಡು ಮೀಸಲಾತಿ ಪ್ರಕಟವಾಗುತ್ತಿದ್ದಂತೆ ರಾಯಚೂರು ಜಿಲ್ಲೆಯಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣಾ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ಮೀಸಲಾತಿ ಬದಲಾವಣೆಯಿಂದ ಕೆಲವರ ಸ್ಪರ್ಧೆಯ ಲೆಕ್ಕಾಚಾರ ತಲೆಕೆಳಗಾಗಿದ್ದರೆ, ಮತ್ತೊಂದೆಡೆ...

“ಸಿನಿಮಾಗಳು ಸಾರ್ವಕಾಲಿಕ ಸತ್ವವನ್ನು ಕಟ್ಟಿಕೊಡುವ ಅದರೊಟ್ಟಿಗೆ ಇಂದಿನ ಸಂಕಟಗಳಿಗೆ ಧ್ವನಿಯಾಗುವ ಒಂದು ಕಲಾ ಮಾಧ್ಯಮ. ಸಿನಿಮಾ ಒಂದರ ಗುಣವನ್ನು ಅವುಗಳ ಜೀವಂತಿಕೆಯನ್ನು ಅದರ ಸಿನಿಮಾತ್ಮಕ ಗುಣ ನಿರ್ಧರಿಸುತ್ತದೆ. ಸಾಹಿತ್ಯ ಕೃತಿಯೊಂದನ್ನು ಸಿನಿಮಾ ಆಗಿಸುವುದು ಒಂದು ಕಲೆ. ಯಾವುದೇ ಸಾಹಿತ್ಯ ಕೃತಿಯನ್ನು ಇದ್ದ ಹಾಗೆಯೆ ಕಟ್ಟಿಕೊಡುವುದು ನನ್ನ ಮಾದರಿ ಅಲ್ಲ. ಹಲವು ಸಿನಿಮಾಗಳಲ್ಲಿ ಸಾಹಿತ್ಯದಲ್ಲಿ ಇಲ್ಲ ಗುಣಗಳು ಸೇರಿಕೊಂಡಿದೆ. ಅದು ಸಾಹಿತ್ಯ ಕೃತಿಯೊಂದರ ಮರು ಓದು, ಮರು ವ್ಯಾಖ್ಯಾನ ಆಗಿರುತ್ತದೆ. ಇದು ಕೃತಿಯೊಂದಕ್ಕೆ ಮುಂಚಲನೆಯನ್ನೂ ಕೊಡಬಲ್ಲದು” ಎಂದು ಹೇಳಿದರು.

ಮೂಲ ಕಥೆಯನ್ನು ಪರದೆಯ ಮೇಲೆ ಯಥಾವತ್ತಾಗಿ ರೂಪಾಂತರ ಮಾಡುವ ಬದಲಾಗಿ ಅದರ ಪುನರ್‌ ನಿರ್ಮಾಣ ಹೆಚ್ಚು ಸೂಕ್ತ‌ ಎಂದರು. ತಮ್ಮ ನಿರ್ದೇಶನದ ಕನಸೆಂಬೋ ಕುದುರೆಯನೇರಿ, ತಾಯಿ ಸಾಹೇಬ್ ಮೊದಲಾದ ಚಿತ್ರಗಳ ಕೆಲವು ದೃಶ್ಯಗಳನ್ನು ತೋರಿಸುತ್ತಾ ಅವುಗಳ ಹಿನ್ನಲೆ, ಪಾತ್ರಗಳು, ಸಾಹಿತ್ಯ, ಕಲಾತ್ಮಕತೆ ಮೊದಲಾದ ಅಂಶಗಳನ್ನು ವಿವರಿಸಿ ತಿಳಿ ಹೇಳಿದರು.

ಉಪನ್ಯಾಸದ ನಂತರ ಶಬ್ದಗಳ ಲೋಕದಿಂದ ಬಿಂಬಗಳ ಲೋಕದದೆಡೆಗೆ ಸಾಗುವ ಸ್ವಾರಸ್ಯಕರವಾದ ಪಯಣದ ಕುರಿತು ಸಂವಾದ ನಡೆಯಿತು. ಸಂವಾದದಲ್ಲಿ ಕಲಬುರಗಿ ಜಿಲ್ಲೆಯ, ವಿಶ್ವವಿದ್ಯಾಲಯದ ಹಾಗೂ ಕನ್ನಡ ವಿಭಾಗದ ಪ್ರಾಧ್ಯಾಪಕರು, ಸಂಶೋಧನಾರ್ಥಿಗಳು ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳು ಭಾಗವಹಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಪ್ರೊ. ಬಸವರಾಜ ಕೋಡಗುಂಟಿ ಪ್ರಾಸ್ತಾವಿಕವಾಗಿ ಮಾತನಾಡಿ, ವಿಭಾಗದ ಚಟುವಟಿಕೆಗಳ ಮತ್ತು ಸಿನಿಮಾ ಜಗತ್ತಿನಲ್ಲಿ ಉದ್ಯೋಗಾವಕಾಶಗಳ ಕುರಿತು ತಿಳಿಸಿದರು.

ಈ ಸುದ್ದಿ ಓದಿದ್ದೀರಾ? ಮಣ್ಣಿನ ಹಣತೆಗೆ ಬೇಡಿಕೆ ಕುಸಿತ : ದೀಪದ ಕೆಳಗಿನ ಕತ್ತಲು ʼಕುಂಬಾರರ ಬದುಕುʼ

ಕಾರ್ಯಕ್ರಮದಲ್ಲಿ ಕೇಂದ್ರೀಯ ವಿಶ್ವವಿದ್ಯಾಲಯದ ಮಾನವಿಕ ಮತ್ತು ಭಾಷಾ ನಿಕಾಯದ ಡೀನ್ ಮತ್ತು ಕನ್ನಡ ವಿಭಾಗದ ಪ್ರಾಧ್ಯಾಪಕ ಪ್ರೊ. ವಿಕ್ರಮ ವಿಸಾಜಿ, ಬಂಡಾರ ಪ್ರಕಾಶನದ ಪರುಶರಾಮ ಕೋಡಗುಂಟಿ, ಸಂಧ್ಯಾ ಹೊನಗುಂಟಿಕರ್‌, ಶಾಂತಾ, ಚಿದಾನಂದ ಸಾಲಿ, ಪ್ರೊ. ಶಿವಗಂಗಾ ರುಮ್ಮ, ಡಾ. ಟಿ.ಡಿ. ರಾಜಣ್ಣ, ಡಾ. ವಿಜಯಕುಮಾರ ಎಚ್.‌ ವಿಶ್ವಮಾನವ, ಸೇರಿದಂತೆ ಇತರೆ ವಿಭಾಗಗಳ ಪ್ರಾಧ್ಯಾಪಕರು, ಸಂಶೋಧನಾರ್ಥಿಗಳು, ಸ್ನಾತಕೋತ್ತರ ವಿದ್ಯಾರ್ಥಿಗಳು ಇದ್ದರು.

ಕರಿಲಿಂಗ ನಾಟೇಕರ್‌ ನಿರೂಪಿಸಿದರು. ವಿಜಯಲಕ್ಷ್ಮೀ ದೊಡ್ಡಮನಿ ಸ್ವಾಗತಿಸಿದರು. ಪೂರ್ಣಿಮಾ ಪರಿಚಯಿಸಿದರು, ಲಕ್ಷ್ಮೀ ಕಟ್ಟಮನಿ ವಂದಿಸಿದರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ವಿಜಯಪುರ | 22ನೇ ಶರಣ ತತ್ವ ಕಮ್ಮಟಕ್ಕೆ ಸಚಿವ ಎಂ.ಬಿ ಪಾಟೀಲರಿಗೆ ಆಹ್ವಾನ

ವಿಜಯಪುರದ ವೀರಶೈವ ಲಿಂಗಾಯತ ಸಾಂಸ್ಕೃತಿಕ ಭವನದಲ್ಲಿ ಅಕ್ಟೋಬರ್ 29ರಿಂದ ನವೆಂಬರ್ 1ರವರೆಗೆ...

ಬೀಳಗಿ | ಛಾಯಾಗ್ರಾಹಕರಿಗಾಗಿ ಆಕಾಡೆಮಿ ಸ್ಥಾಪಿಸಲು ವಿಠ್ಠಲ ಹಿರೇಮಠ ಆಗ್ರಹ

ಛಾಯಾಗ್ರಾಹಕರ ವೃತ್ತಿ ಭದ್ರತೆ, ಕುಟುಂಬದ ಕಲ್ಯಾಣ ಹಾಗೂ ಸರಕಾರದ ಸೌಲಭ್ಯಗಳನ್ನು ಒದಗಿಸಲು...

ಮೈಸೂರು | ಕಲಾ ಜಾತ್ರೆ ಯಶಸ್ವಿ: ಕಲಾವಿದರಿಗೆ ಶಾಶ್ವತ ಕಲಾ ಕೇಂದ್ರ ಸ್ಥಾಪಿಸಲು ಅರುಣ್ ಯೋಗಿರಾಜ್ ಸಲಹೆ

ಮೈಸೂರು ದಸರಾ ಮಹೋತ್ಸವದ ಅಂಗವಾಗಿ ದಸರಾ ಲಲಿತಕಲೆ ಮತ್ತು ಕರಕುಶಲಕಲೆ ಹಾಗೂ...

ಬಿಯಾಂಡ್ ಬೆಂಗಳೂರು: ಡಿಜಿಟಲ್ ಆರ್ಥಿಕತೆಯಲ್ಲಿ ರಾಯಚೂರಿಗೆ ಸಿಗುವುದೇ ಪ್ರತ್ಯೇಕ ಸ್ಥಾನ?

ಕರ್ನಾಟಕದ ಅಭಿವೃದ್ಧಿ ಬೆಂಗಳೂರಿಗೆ ಮಾತ್ರ ಸೀಮಿತವಾಗದೆ ರಾಜ್ಯದ ವಿವಿಧ ನಗರಗಳಿಗೂ ತಲುಪಬೇಕು...