ಚಿಕ್ಕಬಳ್ಳಾಪುರ | ಸಂಸದ ಸುಧಾಕರ್‌ಗೆ ಬಹಿರಂಗ ಚರ್ಚೆಗೆ ಆಹ್ವಾನವಿತ್ತ ಕಾಂಗ್ರೆಸ್‌ ಮುಖಂಡರು

Date:

ವೈಯಕ್ತಿಕ ನಿಂದನೆ ಬಿಟ್ಟು ಅಭಿವೃದ್ಧಿ ವಿಚಾರ ಮಾತನಾಡಿ : ಕಾಂಗ್ರೆಸ್‌ ಎಸ್ಸಿ ಘಟಕ ಎಚ್ಚರಿಕೆ

ಸಂಸದರೇ ತಮ್ಮ ಹಳೆಯ ಚಾಳಿಯನ್ನು ಬಿಟ್ಟು, ಜಿಲ್ಲೆಯ ಅಭಿವೃದ್ಧಿ ವಿಚಾರ ಮಾತನಾಡಿ. ವೈಯಕ್ತಿಯ ತೇಜೋವಧೆ, ನಿಂದನೆ ನಿಮಗೆ, ನಿಮ್ಮ ಚೇಲಾಗಳಿಗೆ ಶೋಭೆ ತರುವುದಿಲ್ಲ. ನಾವೇ ವೇದಿಕೆ ಸಿದ್ಧಗೊಳಿಸುತ್ತೇವೆ, ಧೈರ್ಯ ಇದ್ದರೆ ಬಹಿರಂಗ ಚರ್ಚೆಗೆ ಬನ್ನಿ ಎಂದು ಕಾಂಗ್ರೆಸ್‌ ಮುಖಂಡ ಸುಧಾ ವೆಂಕಟೇಶ್‌ ಸವಾಲೆಸೆದರು.

- Advertisement -

ನಗರದ ಪತ್ರಿಕಾ ಭವನದಲ್ಲಿ ಶನಿವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಶಾಸಕರು ತಮ್ಮ ಸ್ವಂತ ಖರ್ಚಿನಲ್ಲಿ ಆಂಬುಲೆನ್ಸ್‌, ಶೌಚಾಲಯ ಸೇರಿದಂತೆ ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ಹೆಚ್ಚಿನ ಅನುದಾನ ತಂದು ಜಿಲ್ಲೆಯ ಅಭಿವೃದ್ಧಿಗೆ ಶ್ರಮಿಸಲಿದ್ದಾರೆ ಎಂದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಮೋದಿ ಆಡಳಿತದಲ್ಲಿ ಮಾಹಿತಿ ಹಕ್ಕು ಕಾಯ್ದೆಯ ‘ಸ್ಥಿತಿ’ ಹೇಗಿದೆ?...

ಯಾವುದೇ ಸರ್ಕಾರ ಆಡಳಿತದಲ್ಲಿರಲಿ ಪ್ರಜಾಸತ್ತಾತ್ಮಕ ವ್ಯವಸ್ಥೆಯನ್ನು ಕಾಪಾಡಬೇಕಾದ ಸಂಸ್ಥೆಗಳ ಸ್ವಾಯತ್ತತೆ ಉಳಿಯಬೇಕು. ಅವು ಪಾರದರ್ಶಕವಾಗಿರಬೇಕು. ಪ್ರಜಾಸತ್ತೆಯ ಕಾರ್ಯವೈಖರಿಯನ್ನು ಕುರಿತಂತೆ ಮುಕ್ತ ಚರ್ಚೆ ನಡೆಯುತ್ತಿರಬೇಕು. ಇದು ಸಕ್ರಿಯ, ಅರ್ಥಪೂರ್ಣ ಪ್ರಜಾಸತ್ತೆಯ ಕನಿಷ್ಠ ಅವಶ್ಯಕತೆ. ಹಾಗಾಗಿ...

ಬಂಗಾಳ ವಿಭಜನೆ | ವಿಭಜನೆಯ ವಿಷಬೀಜದಿಂದ ಒಗ್ಗಟ್ಟಿನ ಜ್ಯೋತಿ...

ಬ್ರಿಟಿಷರ 'ಒಡೆದು ಆಳುವ ನೀತಿ'ಯ ಭಾಗವಾಗಿ 1905ರ ಅಕ್ಟೋಬರ್‌ನಲ್ಲಿ ಜಾರಿಗೆ ಬಂದ ಬಂಗಾಳ ವಿಭಜನೆಯು ಭಾರತೀಯರ ರಾಷ್ಟ್ರೀಯತೆಯನ್ನು ಒಡೆಯುವ ಕುತಂತ್ರವಾಗಿತ್ತು. ಇದಕ್ಕೆ ಪ್ರತಿಯಾಗಿ ಭಾರತೀಯರು 'ರಾಷ್ಟ್ರೀಯ ಶೋಕ ದಿನ' ಆಚರಿಸಿ, ಪರಸ್ಪರ ರಾಖಿ...

ನಟ ಇಮ್ರಾನ್ ಖಾನ್ ಪ್ರತಿಭಟಿಸಿದರೆ ಗಡಿಪಾರು; ಟ್ರಂಪ್ ಪರ...

ಕಾನೂನು ಮತ್ತು ರಾಜತಾಂತ್ರಿಕ ನಿಯಮಗಳು ಎಲ್ಲರಿಗೂ ಒಂದೇ ಆಗಿರಬೇಕು ಹೊರತು ಪ್ರಧಾನಿ ಮೋದಿಯವರ ರಾಜಕೀಯ ಅನುಕೂಲಕ್ಕೆ ತಕ್ಕಂತೆ ಬದಲಾಗಬಾರದು. ವಿದೇಶಿ ಪ್ರಜೆಯೊಬ್ಬ ಭಾರತದ ನೆಲದಲ್ಲಿ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವುದು ತಪ್ಪು ಎನ್ನುವುದಾದರೆ, ಭಾರತದ ಪ್ರಧಾನಿಯೊಬ್ಬರು...

ಅಭಿವೃದ್ಧಿ ವಿಚಾರವಾಗಿ ಪ್ರಶ್ನೆ ಮಾಡಿ. ಇದೆಲ್ಲವನ್ನು ಬಿಟ್ಟು ಶಾಸಕರ ವೈಯಕ್ತಿಕ ನಿಂದನೆ, ಟೀಕೆಯನ್ನು ಜನ ಒಪ್ಪುವುದಿಲ್ಲ. ನಿಮ್ಮ ಚಾಳಿ ಮುಂದುವರಿಸಿದರೆ ಮುಂದಿನ ದಿನಗಳಲ್ಲಿ ಇದರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಖಡಕ್‌ ಎಚ್ಚರಿಕೆ ನೀಡಿದರು.

ಕಾಂಗ್ರೆಸ್‌1

ಕಾಂಗ್ರೆಸ್‌ ಮುಖಂಡ ಶ್ರೀನಿವಾಸ್ ಮಾತನಾಡಿ, ಒಂದು ಪೆನ್ಸಿಲ್‌ ಕೊಟ್ಟರೂ ಪ್ಲೆಕ್ಸ್‌, ಬ್ಯಾನರ್‌ ಹಾಕಿಸಿಕೊಳ್ಳುವ ನಿಮಗೆ ಸೀರೆ ವಿತರಣೆ, ಆಂಬುಲೆನ್ಸ್‌ ಸೇವೆ ವಿಚಾರವಾಗಿ ಟೀಕೆ ಮಾಡುವ ನೈತಿಕತೆ ಇಲ್ಲ. ಶಾಸಕರ ಆಂಬುಲೆನ್ಸ್‌ ಸೇವೆ ಸಾವಿರಾರು ಬಡವರ, ಧೀನ ದಲಿತರ ಜೀವ ಉಳಿಸಿದೆ. ಇಂತಹ ಟೀಕೆಗಳು ನಿಲ್ಲಬೇಕು ಎಂದು ಎಚ್ಚರಿಕೆ ನೀಡಿದರು.

ಸಂಸದರಾದ ಮೇಲೆ ನಿಮ್ಮ ದರ್ಪ ಶುರುವಾಗಿದೆ. ಯಾವ ಸಮುದಾಯವನ್ನು ಯಾವ ರೀತಿ ನಡೆಸಿಕೊಂಡಿದ್ದೀರಿ ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರ. ನಿಮ್ಮ ಆಟ ನಡೆಯುವುದಿಲ್ಲ ಎಂದು ಗುಡುಗಿದರು.

ಮತ್ತೊಬ್ಬ ಮುಖಂಡ ಸುಬ್ಬರಾಯಪ್ಪ ಮಾತನಾಡಿ, 2016 ರಿಂದ 2022ರವರೆಗೆ ಕೊಳವೆ ಬಾವಿಗಳ ಪಟ್ಟಿ ಸಹ ಕೊಡಲಿಲ್ಲ. ದೊಡ್ಡಬಳ್ಳಾಪುರದಲ್ಲಿ 650 ಕೋಟಿ ಕೊಳವೆ ಬಾವಿ ಹಗರಣದ ಕುರಿತು ಪ್ರಕರಣ ದಾಖಲಾಗಿದೆ. ಶಾಸಕರ ವೈಯಕ್ತಿಕ ನಿಂದನೆ ಕಿಡಿಗೇಡಿಗಳ ವರ್ತನೆ. ಅದು ಪತ್ರಿಕಾಗೋಷ್ಠಿಯ ವಿಚಾರವಲ್ಲ. ಇದಕ್ಕೆ ಪ್ರತಿಯಾಗಿ ನೀವು ದಾಖಲೆ ತನ್ನಿ, ನಾವು ತರುತ್ತೇವೆ ಎಂದು ಕಿಡಿಕಾರಿದರು.

ಮುಖಂಡ ಗ.ನ.ಅಶ್ವತ್ಥ್‌ ಮಾತನಾಡಿ, ಸಂಸದರೇ ಚಿಕ್ಕಬಳ್ಳಾಪುರ ಉತ್ಸವ ನಡೆದಾಗ ನಿಮ್ಮ ನಡತೆ ಹೇಗಿತ್ತು ಎಂಬುದು ತಿಳಿದಿದೆ. ಸ್ಥಳೀಯ ಕಲಾವಿದರನ್ನು ಪ್ರೋತ್ಸಾಹಿಸುವ ಸಲುವಾಗಿ ಮಂಜೂರಾಗಿದ್ದ 200 ಕೋಟಿ ಹಣವನ್ನು ಬೇರೆ ಬೇರೆ ನಿಮ್ಮ ಏಜೆಂಟರನ್ನು ಕರೆಸಿ ಕೊಟ್ಟಿದ್ದೀರಿ. ಸ್ಥಳೀಯ ಕಲಾವಿದರಿಗೆ ಮೋಸ ಮಾಡಿದ್ದೀರಿ. ಅಹಿಂದ ನಾಯಕರ ಬಗೆಗಿನ ನಿಮ್ಮ ಮಾತು ಸರಿಯಲ್ಲ ಎಂದರು.

ಮತ್ತೋರ್ವ ಕಾಂಗ್ರೆಸ್‌ ಮುಖಂಡ ಮಾತನಾಡಿ, ನಾಗರಾಜು ಅವರೇ ಅಜ್ಜವಾರದಲ್ಲಿ ದಲಿತರ ಭೂಮಿಯನ್ನು ಕಿತ್ತು ಸವರ್ಣಿಯರಿಗೆ ಕೊಡಿಸಿದ್ದೀರಿ. ಅಕ್ರಮವಾಗಿ ಬಿಲ್‌ಗಳನ್ನು ಮಾಡಿಸಿದ್ದೀರಿ. ವೀಣಾ ರಾಮು ಅವರನ್ನು ಶಾಸಕರಿಗೆ ಪರಿಚಯ ಮಾಡಿಸಿದ್ದು ಯಾರು?. ಗಜೇಂದ್ರ ಅವರು ವಿನಾಯಕ ಕಲ್ಯಾಣ ಮಂಟಪದ ಬಳಿ ಟೌನ್‌ ಪ್ಲಾನ್‌ ಇಲ್ಲದೆ ಅಕ್ರಮವಾಗಿ ಕಟ್ಟಡ ನಿರ್ಮಾಣ ಮಾಡಿದ್ದೀರಿ. ಗಜೇಂದ್ರ ಮತ್ತು ನಾಗರಾಜು ಅವರ ಸಾಕಷ್ಟು ಹಗರಣಗಳಿವೆ ಎಂದು ಕಿಡಿಕಾರಿದರು.

ಮುಖಂಡ ವೆಂಕಟ್‌ ಮಾತನಾಡಿ, ಪ.ಪಂಗಡದವರ ಭವನಕ್ಕೆ ಕೊಟ್ಟಿದ್ದ 3 ಎಕರೆ ಜಾಗಕ್ಕೆ ಬದಲಾಗಿ 30 ಗುಂಟೆ ಜಾಗ ಮಂಜೂರು ಮಾಡಿಸಿದ್ದೀರಿ. 5-10ಕೋಟಿಗಳ ಕಾಮಗಾರಿಗಳನ್ನ್ ಆಂಧ್ರ ಮೂಲದ ಗುತ್ತಿಗೆದಾರರಿಗೆ ಗುತ್ತಿಗೆ ನೀಡಿ ಕಮಿಷನ್‌ ಪಡೆದಿದ್ದೀರಿ. ಗಾಜಿನ ಮನೆ ಕೆರೆಯಲ್ಲಿ ಕಟ್ಟಿದ್ದೀರಿ. ಇದು ನಿಮ್ಮ ಅಭಿವೃದ್ಧಿಯೇ ಎಂದು ಪ್ರಶ್ನಿಸಿದರು.

ಈ ಸುದ್ದಿ ಓದಿದ್ದೀರಾ? ಶಿಡ್ಲಘಟ್ಟ | ಪ್ರೀತಿ ನಿರಾಕರಣೆ: ಜೋಡಿ ಆತ್ಮಹತ್ಯೆ

ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್‌ ಎಸ್ಸಿ ಘಟಕದ ಮುಖಂಡರಾದ ಆನಂದ್‌, ಗೌತಮ್ ಗಂಗಾಧರ್‌, ವೆಂಕಟೇಶ್‌, ತಿರುಮಲಪ್ಪ, ನಾರಾಯಣ್ ಸೇರಿದಂತೆ ಇತರೆ ಮುಖಂಡರು ಹಾಗೂ ಕಾರ್ಯಕರ್ತರು ಹಾಜರಿದ್ದರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಉಡುಪಿ | ಕಾರ್ಮಿಕರು ಹಕ್ಕು ಮತ್ತು ಸೌಲಭ್ಯಗಳಿಂದ ವಂಚಿತರಾಗದಂತೆ ನೋಡಿಕೊಳ್ಳಿ: ಟಿ.ಎಂ. ಶಾಹಿದ್ ತೆಕ್ಕಿಲ್

ಕಾರ್ಮಿಕರ ಹಿತಾಸಕ್ತಿಯನ್ನು ಕಾಪಾಡುವುದರೊಂದಿಗೆ ಸರ್ಕಾರದ ಕಲ್ಯಾಣ ಕಾರ್ಯಕ್ರಮಗಳು ಅರ್ಹ ಫಲಾನುಭವಿಗಳಿಗೆ ತಲುಪುವಂತೆ...

ಬಾಗೇಪಲ್ಲಿಯಲ್ಲಿ ರಸ್ತೆ ಅಪಘಾತ:ರೈತ ನಂಜಪ್ಪ ಸಾವು

ಕೆಎಸ್‌ಆರ್‌ಟಿಸಿ ಬಸ್ ಡಿಕ್ಕಿ ಹೊಡೆದು ದ್ವಿಚಕ್ರ ವಾಹನದಲ್ಲಿ ಹೊಲಕ್ಕೆ ತೆರಳುತ್ತಿದ್ದ ನಡಂಪಲ್ಲಿ...

ಮಂಗಳೂರು | ಕೊಳ್ತಮಜಲು ರಹ್ಮಾನ್ ಹತ್ಯೆ ಪ್ರಕರಣ: ಆರೋಪಿಗಳ ಜಾಮೀನು ರದ್ದುಪಡಿಸಿದ ಸುಪ್ರೀಂ ಕೋರ್ಟ್

ಕೊಳ್ತಮಜಲು ರಹ್ಮಾನ್ ಹತ್ಯೆ ಪ್ರಕರಣದಲ್ಲಿ ಆರೋಪಿಗಳಿಗೆ ಇತ್ತೀಚೆಗೆ ನ್ಯಾಯಾಲಯ ಜಾಮೀನು ನೀಡಿತ್ತು....

ಕೋಲಾರ | ಚೈನಾ ಶಾಂಘೈನಲ್ಲಿ ಕನ್ನಡದ ಮೊದಲ ಜಾನಪದ ಕಾರ್ಯಕ್ರಮ: ಗೋ.ನಾ. ಸ್ವಾಮಿ ಭಾಗಿ

ಚೈನಾ ದೇಶದ ಶಾಂಘೈನಲ್ಲಿ ಕನ್ನಡಿಗರ ಸಂಘದ ವತಿಯಿಂದ ಆಯೋಜಿಸಿದ್ದ ಕನ್ನಡದ ಮೊದಲ...