ದ.ಕ.ಜಿಲ್ಲೆಯಲ್ಲಿ ಶನಿವಾರ ಮೋಡಕವಿದ ವಾತಾವರಣವಿತ್ತು. ಮಳೆಯೂ ಬಿರುಸುಗೊಂಡಿತ್ತು. ಅಲ್ಲಲ್ಲಿ ರಸ್ತೆ ಅಗೆದ ಕಾರಣ ನಗರದಲ್ಲಿ ಮಳೆಯ ಮಧ್ಯೆ ಸಂಚಾರ ದಟ್ಟಣೆ ಅಧಿಕವಾಗಿ ಜನಜೀವನ ಅಸ್ತವ್ಯಸ್ತಗೊಂಡಿತ್ತು.
ನಗರದ ಕದ್ರಿ ಪಾರ್ಕ್ ಬಳಿ ತಡೆಗೋಡೆ ಬಿರುಸಿನ ಮಳೆಗೆ ಕುಸಿದು ಬಿದ್ದಿದೆ. ನಗರದ ಬಹುತೇಕ ಹೊಂಡಗುಂಡಿ ಯಿಂದ ತುಂಬಿದ ರಸ್ತೆಗಳಲ್ಲಿ ಮಳೆನೀರು ಸರಾಗವಾಗಿ ಹರಿದುಹೋಗದ ಕಾರಣ ವಾಹನಿಗರು ಸಮಸ್ಯೆ ಎದುರಿಸಿದರು.
ನಗರದ ಕೋಡಿಯಾಲ್ ಬೈಲ್‌ನ ಹಲವು ಮನೆಗಳ ಅಂಗಳಕ್ಕೆ ನೀರು ನುಗ್ಗಿದ್ದು, ರಸ್ತೆಗಳು ಸಂಪೂರ್ಣ ಜಲಾವೃತ ಗೊಂಡಿದ್ದವು. ಅದಲ್ಲದೆ ಪಂಪ್‌ವೆಲ್ ಹಾಗೂ ಕಂಕನಾಡಿ ರಸ್ತೆಯ ಮಧ್ಯೆ ಇರುವ ಮನೆಯೊಂದರ ಅಂಗಳಕ್ಕೆ ನೀರು ನುಗಿದೆ.
ಮಳೆಯಿಂದಾಗಿ ಸುಗಮ ವಾಹನ ಸಂಚಾರಕ್ಕೆ ತೊಂದರೆಯಾದ ಪರಿಣಾಮ ಕಂಕನಾಡಿ, ಪಂಪ್‌ವೆಲ್, ನಂತೂರು, ಕೆಪಿಟಿ, ಲಾಲ್‌ಬಾಗ್, ಜ್ಯೋತಿ, ಹಂಪನಕಟ್ಟೆ ಜಂಕ್ಷನ್‌ಗಳಲ್ಲಿ ಟ್ರಾಫಿಕ್ ಜಾಮ್ ಕಂಡು ಬಂದಿತ್ತು.






