ಮಂಗಳೂರು | ಜೀವಂತ ವ್ಯಕ್ತಿಯನ್ನೇ ಎಸ್‌ಐಆರ್‌ ಕರಡು ಪಟ್ಟಿಯಲ್ಲಿ ‘ಮರಣ’ ಎಂದು ನಮೂದು !

Date:

ಬದುಕಿರುವ ವ್ಯಕ್ತಿಯನ್ನು ಎಸ್‌ಐಆರ್‌ ಕರಡು ಪಟ್ಟಿಯಲ್ಲಿ ‘ಮರಣ’ ಎಂದು ನಮೂದಿಸಿರುವ ಘಟನೆ ಮಂಗಳೂರು ನಗರ ದಕ್ಷಿಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಬೆಳಕಿಗೆ ಬಂದಿದ್ದು, ಮತದಾರರ ಪಟ್ಟಿ ಪರಿಷ್ಕರಣಾ ಪ್ರಕ್ರಿಯೆಯ ನಿಖರತೆ ಬಗ್ಗೆ ಇದೀಗ ಸಾರ್ವಜನಿಕ ವಲಯದಲ್ಲಿ ಪ್ರಶ್ನೆಗಳು ಎದ್ದಿವೆ.

- Advertisement -

ನಗರದ ಬಿಜೈ ನಿವಾಸಿ, 61 ವರ್ಷದ ಡೊನಾಲ್ಡ್ ಜೋಸೆಫ್ ರೇಗೋ ಅವರ ಹೆಸರಿನ ಎದುರು ಎಸ್‌ಐಆರ್‌ ಕರಡು ಪಟ್ಟಿಯ ಗಣತಿ ನಮೂನೆಯನ್ನು ಹಿಂದಿರುಗಿಸದಿರುವುದಕ್ಕೆ ಕಾರಣ ಎಂಬ ಕಾಲಂನಲ್ಲಿ ‘ಮರಣ’ ಎಂದು ನಮೂದಿಸಲಾಗಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಜನತಂತ್ರದ ಬಿಕ್ಕಟ್ಟಿಗೆ ಮೌನ; ವ್ಯಾಪಾರಿಗಳ ನಷ್ಟಕ್ಕೆ ಪರಿಹಾರದ ಭರವಸೆ;...

ಚುನಾವಣಾ ಜನತಂತ್ರ ಬಿಕ್ಕಟ್ಟಿಗೆ ಸಿಲುಕಿದಾಗ, ನಾಗರಿಕರ ಪ್ರತಿಭಟನಾ ಹಕ್ಕು ಬೀದಿಗೆ ಬಿದ್ದಾಗ ಸುಪ್ರೀಂ ಕೋರ್ಟ್ ತಳೆದ ಮೌನ, ಸ್ಪಂದಿಸಿದ ರೀತಿ, ಕನಾಟ್ ಪ್ಲೇಸ್‌ನ ವ್ಯಾಪಾರಿಗಳು ಹಾಗೂ ಉದ್ಯೋಗಿಗಳ ಜೀವನೋಪಾಯಕ್ಕೆ ಧಕ್ಕೆಯಾದರೆ ಮಧ್ಯಪ್ರವೇಶಿಸಿ ಪರಿಹಾರ...

‘ಕೈಮುಗಿದು ಕಾಲಿಗೆ ಬೀಳುವೆ…’ ಪ್ರಜಾಪ್ರಭುತ್ವ ಕುಸಿತಕ್ಕೆ ಮುನ್ನುಡಿಯೇ?

ಜಾತಿ ಅಸಮಾನತೆ, ಸಾಮಾಜಿಕ ಶೋಷಣೆ ಮತ್ತು ರಾಜಕೀಯ ಪ್ರಭಾವದ ಮುಂದೆ ಜನಪ್ರತಿನಿಧಿಗಳೇ ಕೈಮುಗಿದು ನಿಲ್ಲುವ ದುಸ್ಥಿತಿ ಪ್ರಜಾಪ್ರಭುತ್ವದ ಅಡಿಪಾಯವನ್ನೇ ಅಲುಗಾಡಿಸುತ್ತಿದೆ. ಸಂವಿಧಾನ ಸಾರಿದ ಸಮಾನತೆ, ಸ್ವಾತಂತ್ರ್ಯ ಮತ್ತು ಭ್ರಾತೃತ್ವ ಕೇವಲ ಕಾಗದಕ್ಕೆ ಸೀಮಿತವಾಗುತ್ತಿದೆಯೇ...

JNU ವಿದ್ಯಾರ್ಥಿ ‘ನಜೀಬ್’ ನಾಪತ್ತೆಗೆ 10 ವರ್ಷಗಳು: ಉತ್ತರ...

ತನಿಖಾ ಸಂಸ್ಥೆಗಳು ಕಡತವನ್ನು ಮುಚ್ಚಿದ ಮಾತ್ರಕ್ಕೆ ಒಬ್ಬ ತಾಯಿಯ ಹುಡುಕಾಟವನ್ನಾಗಲಿ ಅಥವಾ ಅಮಾಯಕ ವಿದ್ಯಾರ್ಥಿಯೊಬ್ಬನ ನಾಪತ್ತೆ ಕುರಿತ ಪ್ರಶ್ನೆಗಳನ್ನಾಗಲಿ ಅಳಿಸಿಹಾಕಲು ಸಾಧ್ಯವಿಲ್ಲ. ನಜೀಬ್ ಅಹ್ಮದ್ ಅವರನ್ನು ಕೇವಲ ಒಂದು ಪ್ರತಿಭಟನೆಯ ಸಂಕೇತವಾಗಿ ನೆನೆಯುವ...

ತಾನು ಜೀವಂತವಾಗಿದ್ದು, ಕಳೆದ ಬಾರಿ ನಡೆದ ಎಸ್‌ಐಆರ್‌ ಪ್ರಕ್ರಿಯೆಯಲ್ಲಿ ಅಗತ್ಯ ದಾಖಲೆಗಳನ್ನು ಸಲ್ಲಿಸಿದ್ದರೂ ಇದೀಗ ತನ್ನ ಹೆಸರಿನ ಎದುರು ‘ಮರಣ’ ಎಂದು ನಮೂದಿಸಿರುವುದು ಕಂಡುಬಂದಿದೆ ಎಂದು ಡೊನಾಲ್ಡ್ ಜೋಸೆಫ್ ರೇಗೋ ಆಕ್ರೋಶ ವ್ಯಕ್ತಪಡಿಸಿದ್ದಾರೆ.

“ನಾನು ಹುಟ್ಟಿದ್ದು ಇಲ್ಲೇ. ನನಗೆ ವೋಟರ್‌ ಐಡಿ ಕೂಡ ಇದೆ. ಕೆಲಕಾಲ ಗಲ್ಫ್‌ನಲ್ಲಿ ಕೆಲಸ ಮಾಡಿಕೊಂಡಿದ್ದೆ. ಇದೀಗ ಊರಲ್ಲೇ ಇದ್ದೇನೆ. ಕಳೆದ ಬಾರಿ ನಡೆದ ಎಸ್‌ಐಆರ್‌ ಪ್ರಕ್ರಿಯೆಯಲ್ಲೂ ಎಲ್ಲಾ ದಾಖಲೆಗಳನ್ನು ಸಲ್ಲಿಸಿದ್ದೆ. ಆದರೆ ಮೊನ್ನೆ ಪರಿಶೀಲನೆ ನಡೆಸಿದಾಗ ‘ನೊ ರೆಕಾರ್ಡ್ಸ್ ಫೌಂಡ್’ ಎಂದು ತೋರಿಸುತ್ತಿದೆ. ಅದಲ್ಲದೆ, ಗಣತಿ ನಮೂನೆಯನ್ನು ಹಿಂದಿರುಗಿಸದಿರುವುದಕ್ಕೆ ಕಾರಣ ಎಂಬ ಕಾಲಂನಲ್ಲಿ ‘ಮರಣ’ ಎಂದು ನಮೂದಿಸಿರುವುದು ಕಂಡುಬಂದಿದೆ. ಇದು ಯಾವ ನ್ಯಾಯ?” ಎಂದು ಅವರು ಪ್ರಶ್ನಿಸಿದ್ದಾರೆ.

“ನಾನಿನ್ನೂ ಜೀವಂತವಾಗಿದ್ದೇನೆ. ಆದರೂ ಸಂಬಂಧಪಟ್ಟವರು ನನ್ನನ್ನು ಜೀವಂತವಾಗಿಯೇ ಕೊಂದು ಬಿಟ್ಟಿದ್ದಾರೆ. ಈ ಬಗ್ಗೆ ಬಿಎಲ್‌ಒ ಅವರನ್ನು ಪ್ರಶ್ನಿಸಿದಾಗ, ಇದು ತಮ್ಮ ತಪ್ಪಲ್ಲ, ಡಾಟಾ ಎಂಟ್ರಿ ಮಾಡಿದವರ ತಪ್ಪು ಎಂದು ಹೇಳಿದ್ದಾರೆ. ಈಗಾಗಲೇ ಎರಡು ಬಾರಿ ಸಂಬಂಧಪಟ್ಟವರ ಕಚೇರಿಗೆ ಅಲೆದಾಡಿದ್ದೇನೆ. ನಾಳೆಯೂ ಮತ್ತೆ ಹೋಗಬೇಕಾಗಿದೆ,” ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ತಮ್ಮ ಹೆಸರು ಪ್ರಸ್ತುತ ಮತದಾರರ ಪಟ್ಟಿಯಲ್ಲೂ ಇದೆ. ಕಳೆದ ಚುನಾವಣೆಯಲ್ಲಿ ತಾವು ಮತ ಚಲಾಯಿಸಿರುವುದಾಗಿ ಹೇಳಿರುವ ಡೊನಾಲ್ಡ್, ಇಷ್ಟೆಲ್ಲ ದಾಖಲೆಗಳಿದ್ದರೂ ಎಸ್‌ಐಆರ್‌ ಕರಡು ಪಟ್ಟಿಯಲ್ಲಿ ತಮ್ಮನ್ನು ‘ಮರಣ’ ಎಂದು ನಮೂದಿಸಿರುವುದು ಹೇಗೆ ಸಾಧ್ಯ ಎಂಬುದೇ ಅರ್ಥವಾಗುತ್ತಿಲ್ಲ ಎಂದಿದ್ದಾರೆ.

“ಈ ತಪ್ಪಿಗೆ ಯಾರು ಹೊಣೆ? ಜೀವಂತವಾಗಿರುವ ವ್ಯಕ್ತಿಯನ್ನೇ ಮತದಾರರ ಪಟ್ಟಿಯಲ್ಲಿ ಮರಣ ಹೊಂದಿದವರೆಂದು ನಮೂದಿಸುವಷ್ಟು ಲೋಪವಾಗಿರುವುದಕ್ಕೆ ಜವಾಬ್ದಾರಿ ಯಾರದ್ದು?” ಎಂದು ಅವರು ಪ್ರಶ್ನಿಸಿದ್ದಾರೆ.

ಜೀವಂತ ವ್ಯಕ್ತಿಯೊಬ್ಬರನ್ನು ಎಸ್‌ಐಆರ್‌ ಕರಡು ಪಟ್ಟಿಯಲ್ಲಿ ‘ಮರಣ’ ಎಂದು ನಮೂದಿಸಿರುವ ಈ ಪ್ರಕರಣ ಇದೀಗ ಮತದಾರರ ಪಟ್ಟಿ ಪರಿಷ್ಕರಣಾ ಪ್ರಕ್ರಿಯೆಯಲ್ಲಿನ ದತ್ತಾಂಶ ಪರಿಶೀಲನೆ ಹಾಗೂ ನಿಖರತೆಯ ಕುರಿತು ಚರ್ಚೆಗೆ ಕಾರಣವಾಗಿದೆ. ಸಂಬಂಧಪಟ್ಟ ಅಧಿಕಾರಿಗಳು ಈ ಕುರಿತು ಪರಿಶೀಲನೆ ನಡೆಸಿ ತಪ್ಪನ್ನು ಸರಿಪಡಿಸುವುದರ ಜೊತೆಗೆ, ಇಂತಹ ದೋಷಕ್ಕೆ ಕಾರಣವೇನು ಎಂಬುದನ್ನೂ ಸ್ಪಷ್ಟಪಡಿಸಬೇಕೆಂಬ ಆಗ್ರಹ ಕೇಳಿಬಂದಿದೆ.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬಲೂನ್ ಮಾರುವ 9 ವರ್ಷದ ಬಾಲಕಿ ಅತ್ಯಾಚಾರ, ಕೊಲೆ ಪ್ರಕರಣ: ಅಪರಾಧಿ ಕಾರ್ತಿಕ್‌ಗೆ ಗಲ್ಲು ಶಿಕ್ಷೆ

ಕಳೆದ ವರ್ಷದ ದಸರಾ ಮಹೋತ್ಸವದ ಸಂದರ್ಭದಲ್ಲಿ ಕುಟುಂಬದೊಂದಿಗೆ ಟೆಂಟ್‌ನಲ್ಲಿ ಮಲಗಿದ್ದ 9...

ಬಾಗೇಪಲ್ಲಿ | ಬೆಂಗಳೂರು ಉತ್ತರ ವಿಶ್ವವಿದ್ಯಾಲಯ ಅಂತರ ಕಾಲೇಜು ವಿದ್ಯಾರ್ಥಿಗಳ ಗುಡ್ಡಗಾಡು ಓಟ ಸ್ಪರ್ಧೆ

ವಿದ್ಯಾರ್ಥಿಗಳು ಪಠ್ಯ ಚಟುವಟಿಕೆಗಳ ಜೊತೆಗೆ ಪಠ್ಯೇತರ ಚಟುವಟಿಕೆಗಳಾದ ಕ್ರೀಡೆಗಳಲ್ಲಿ ಭಾಗವಹಿಸುವುದರಿಂದ ಶಾರೀರಿಕ...

ರಾಯಚೂರು | ಮಾನ್ವಿ ಬಳಿ ಈರುಳ್ಳಿ ಸಾಗಿಸುತ್ತಿದ್ದ ಲಾರಿ ಪಲ್ಟಿ; ಚಾಲಕ, ಕ್ಲೀನರ್‌ಗೆ ಗಾಯ

ಮಾನ್ವಿ ತಾಲೂಕಿನ ಗ್ರಾಮದ ಸಮೀಪದ ಹೊರವಲಯದಲ್ಲಿ ಮಾನ್ವಿ ರಸ್ತೆಯಲ್ಲಿ ಈರುಳ್ಳಿ ಸಾಗಿಸುತ್ತಿದ್ದ...