ಮಂಗಳೂರು | ಪಿಲಿಕುಳದ ಗುತ್ತು ಮನೆ, ಕುಶಲಕರ್ಮಿ ಗ್ರಾಮಕ್ಕೆ ವಿದೇಶಿ ಪ್ರವಾಸಿಗರ ಭೇಟಿ

Date:

ನವಮಂಗಳೂರು ಬಂದರಿಗೆ ಶನಿವಾರ ಆಗಮಿಸಿದ್ದ ಸೆವೆನ್ ಸೀಸ್ ಮರೈನರ್ ಐಶಾರಾಮಿ ಹಡಗಿನಲ್ಲಿ ಬಂದ ನೂರಾರು ವಿದೇಶಿ ಪ್ರವಾಸಿಗರು ಪಿಲಿಕುಳದ ಗುತ್ತುಮನೆ ಹಾಗೂ ಕುಶಲಕರ್ಮಿ ಗ್ರಾಮಕ್ಕೆ ಭೇಟಿ ನೀಡಿ ಸಾಂಸ್ಕೃತಿಕ ಪರಂಪರೆಯನ್ನು ಆಸ್ವಾದಿಸಿದರು.

- Advertisement -

ಪಿಲಿಕುಳ ಅಭಿವೃದ್ಧಿ ಪ್ರಾಧಿಕಾರದ ಕುಶಲಕರ್ಮಿ ಗ್ರಾಮದಲ್ಲಿ ಪೀಳಿಗೆಯಿಂದ ಪೀಳಿಗೆಗೆ ಬಂದಿರುವ ಪಾರಂಪರಿಕ ವೃತ್ತಿಗಳ ನೈಜ ಅನುಭವ ಪ್ರವಾಸಿಗರನ್ನು ವಿಶೇಷವಾಗಿ ಆಕರ್ಷಿಸಿತು. ಕುಂಬಾರಿಕೆ, ಕುಟ್ಟಣದ ಅವಲಕ್ಕಿ ತಯಾರಿಕೆ, ಎಣ್ಣೆ ಗಾಣದ ಕಾರ್ಯವಿಧಾನ, ಕಮ್ಮಾರಿಕೆ, ಬಡಗಿ ಕೆಲಸಗಳು ಹಾಗೂ ಬೆತ್ತ–ಬಿದಿರು ವಿಭಾಗಗಳಲ್ಲಿ ನಡೆಯುವ ನೇರ ಪ್ರಾತ್ಯಕ್ಷಿಕೆಗಳನ್ನು ಅವರು ಗಮನದಿಂದ ವೀಕ್ಷಿಸಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ರಾಮಲೀಲೆಗಳಲ್ಲಿ ರಾಮ, ಹನುಮ, ಲಕ್ಷ್ಮಣ ಪಾತ್ರಗಳಲ್ಲಿ ದಾನಿಶ್ –...

ರಾಮನಾಗಿ ದಾನಿಶ್. ಹನುಮಂತನಾಗಿ ಯೂನುಸ್. ಲಕ್ಷ್ಮಣನಾಗಿ ಶೇರ್ ಖಾನ್. ರಾವಣನಾಗಿ ಇಕ್ಬಾಲ್ ಅಹ್ಮದ್. ಇವರೆಲ್ಲರೂ ಮುಸ್ಲಿಂ ಕಲಾವಿದರು. ಆದರೆ, ಇವರು ಅಭಿನಯಿಸಿರುವುದು ಹಿಂದುಗಳ ಮಹಾಕಾವ್ಯ ರಾಮಾಯಣದ ಪಾತ್ರಗಳಲ್ಲಿ. ಉತ್ತರ ಭಾರತದ ಹಲವು ರಾಮಲೀಲೆಗಳಲ್ಲಿ...

ಅಮೆರಿಕದ ಮಧ್ಯಂತರ ಚುನಾವಣೆ: ಬೆಲೆ ಏರಿಕೆ, ಇರಾನ್ ಯುದ್ಧದ...

ಅಮೆರಿಕದಲ್ಲಿ ಏರುತ್ತಿರುವ ಪೆಟ್ರೋಲ್ ಬೆಲೆ, ದುಬಾರಿಯಾಗುತ್ತಿರುವ ದಿನಬಳಕೆಯ ವಸ್ತುಗಳು ಹಾಗೂ ಇರಾನ್ ವಿರುದ್ಧದ ಯುದ್ಧದ ಆರ್ಥಿಕ ಪರಿಣಾಮಗಳು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಡಳಿತಕ್ಕೆ ದೊಡ್ಡ ರಾಜಕೀಯ ಸವಾಲಾಗಿವೆ. ನವೆಂಬರ್ 3ರಂದು ನಡೆಯಲಿರುವ ಮಧ್ಯಂತರ...

ಖಾಲಿದ್‌ರಂತೆ ಸಿಜೆಪಿ ನಾಯಕರನ್ನೂ ದೀರ್ಘ ಜೈಲುವಾಸದ ಸುಳಿಯಲ್ಲಿ ಸಿಲುಕಿಸುವ...

ಚುನಾವಣಾ ಆಯೋಗದ ಅಕ್ರಮ ಪ್ರಶ್ನಿಸಿದ ಸಿಜೆಪಿ ನಾಯಕರ ವಿರುದ್ಧ ಸರಣಿ ದೂರು ದಾಖಲಿಸಲಾಗುತ್ತಿದೆ. ಮೋದಿ ಸರ್ಕಾರದ ಅವಧಿಯಲ್ಲಿ ‘ವಿಚಾರಣೆಯೇ ಒಂದು ಶಿಕ್ಷೆ’ ಎನ್ನುವ ತಂತ್ರ ಪುನರಾವರ್ತನೆಯಾಗುತ್ತಿದೆಯೇ? ಉಮರ್‌ ಖಾಲಿದ್‌ ರೀತಿಯಲ್ಲೇ ಸೌರವ್ ದಾಸ್,...
WhatsApp Image 2026 04 18 at 6.03.01 PM 1

ಪ್ರತಿ ವಿಭಾಗದಲ್ಲಿಯೂ ಕುಶಲಕರ್ಮಿಗಳು ತಮ್ಮ ಕೌಶಲ್ಯವನ್ನು ಜೀವಂತವಾಗಿ ಪ್ರದರ್ಶಿಸುತ್ತಿರುವುದನ್ನು ಕಂಡ ಪ್ರವಾಸಿಗರು, ಇಂತಹ ಪರಂಪರೆಯ ವೃತ್ತಿಗಳು ಇಂದಿಗೂ ಹೇಗೆ ಉಳಿದುಕೊಂಡಿವೆ ಎಂಬುದರ ಬಗ್ಗೆ ಕುತೂಹಲ ವ್ಯಕ್ತಪಡಿಸಿದರು. ಗ್ರಾಮ್ಯ ಜೀವನ ಶೈಲಿ, ಪಾರಂಪರಿಕ ತಂತ್ರಜ್ಞಾನ ಹಾಗೂ ಸ್ಥಳೀಯರ ಜೀವನೋಪಾಯ ಕುರಿತು ಮಾರ್ಗದರ್ಶಕರಿಂದ ಮಾಹಿತಿಯನ್ನು ಪಡೆದುಕೊಂಡರು.

ಒಟ್ಟು 200ಕ್ಕೂ ಅಧಿಕ ವಿದೇಶಿ ಪ್ರವಾಸಿಗರು ಪಿಲಿಕುಳಕ್ಕೆ ಭೇಟಿ ನೀಡಿರುವುದು ವಿಶೇಷವಾಗಿತ್ತು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬಂಡೀಪುರ ಅರಣ್ಯದಲ್ಲಿ ಹೆಣ್ಣಾನೆ ಕಳೇಬರ ಪತ್ತೆ

ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಮದ್ದೂರು ವಲಯದ ಮಾರಿಕಟ್ಟೆ ಕೆರೆ ಸಮೀಪದ...

ಬಂಡೀಪುರದಲ್ಲಿ ಉರುಳು ಹಾಕಿ ಹುಲಿ ಕೊಂದ ಆರೋಪ: ವ್ಯಕ್ತಿ ಬಂಧನ

ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಉರುಳು ಹಾಕಿ ಹುಲಿಯನ್ನು ಕೊಂದ ಪ್ರಕರಣಕ್ಕೆ...

ವಿಚಾರವಾದಿಗಳು ಕಂಡ ಗಾಂಧೀ-ಟಿಪ್ಪು ಮತ್ತು ಕೋಮುವಾದಿಗಳ ತಿರುಚುವಿಕೆ!

ಇತಿಹಾಸದ ಕುರಿತು ಪ್ರಶ್ನೆಗಳನ್ನು ಎತ್ತುವುದು ಪ್ರಜಾಪ್ರಭುತ್ವದ ಲಕ್ಷಣ. ಆದರೆ ಪ್ರಶ್ನೆಗಳನ್ನು ಎತ್ತುವ...

ವಿಜಯಪುರ | ಸಾಧಕ ಗಣ್ಯರಿಗೆ ರಾಜ್ಯೋತ್ಸವ ಸನ್ಮಾನದ ಗೌರವ; ಅರ್ಜಿ ಆಹ್ವಾನ

2026 ನೇ ಸಾಲಿನ ಕರ್ನಾಟಕ ರಾಜ್ಯೋತ್ಸವ ಅಂಗವಾಗಿ ನ. 1ರಂದು ವಿಜಯಪುರ...