ಸುಳ್ಯ ತಾಲೂಕಿನ ಆಲೆಟ್ಟಿ–ಬಡ್ಡಡ್ಕ–ಕೂರ್ನಡ್ಕ ಜಿಲ್ಲಾ ಮುಖ್ಯ ರಸ್ತೆಯ ಕಿ.ಮೀ. 0.80 ರಲ್ಲಿರುವ ಸೇತುವೆಗೆ ದುರಸ್ತಿ ಕಾರ್ಯ ಕೈಗೊಳ್ಳಲಾಗುತ್ತಿರುವ ಹಿನ್ನೆಲೆಯಲ್ಲಿ ಏಪ್ರಿಲ್ 15ರಿಂದ ಮೇ 31ರವರೆಗೆ ಸಂಚಾರ ಮಾರ್ಗದಲ್ಲಿ ತಾತ್ಕಾಲಿಕ ಬದಲಾವಣೆ ಮಾಡಲಾಗಿದೆ.
ಈ ಅವಧಿಯಲ್ಲಿ ಸುಳ್ಯದಿಂದ ಆಲೆಟ್ಟಿ–ಬಡ್ಡಡ್ಕ–ಕೂರ್ನಡ್ಕ ಹಾಗೂ ಸುಳ್ಯದಿಂದ ನಾರ್ಕೋಡು–ಕೋಲ್ಚಾರು–ಕಣಕ್ಕೂರು–ಬಂದ್ಯಡ್ಕ ಮೂಲಕ ಕೇರಳ ಭಾಗಕ್ಕೆ ಸಂಚರಿಸುವ ವಾಹನಗಳ ಸಂಚಾರವನ್ನು ನಿರ್ಬಂಧಿಸಲಾಗಿದೆ.
ಬದಲಾಗಿ, ವಾಹನಗಳು ಸುಳ್ಯ–ಕಾಂತಮಂಗಲ–ಅಜ್ಜಾವರ (ಶಾಂತಿಮಜಲು)–ಮೇದಿನಡ್ಕ–ನಾರ್ಕೋಡು ಮಾರ್ಗ ಹಾಗೂ ಸುಳ್ಯ–ಕಾಂತಮಂಗಲ–ಅಜ್ಜಾವರ–ಮಂಡೆಕೋಲು–ಕನ್ಯಾನ ಮಾರ್ಗವಾಗಿ ಕೇರಳ ಗ್ರಾಮೀಣ ರಸ್ತೆಯ ಮೂಲಕ ಸಂಚರಿಸುವಂತೆ ಜಿಲ್ಲಾಧಿಕಾರಿ ಆದೇಶಿಸಿದ್ದಾರೆ.






