ಬಸವರಾಜ ರಾಯರೆಡ್ಡಿ ಅವರು ಅಪಾರ ಜ್ಞಾನಭರಿತ ಹಾಗೂ ಪ್ರಾಮಾಣಿಕ ಶಾಸಕರಾಗಿದ್ದು, ಅವರ ವ್ಯಕ್ತಿತ್ವವನ್ನು ಗೌರವಿಸಬೇಕು ಎಂದು ವಿಧಾನಸಭಾಧ್ಯಕ್ಷ ಯು.ಟಿ.ಖಾದರ್ ಹೇಳಿದ್ದಾರೆ
ಬಸವರಾಜ ರಾಯರೆಡ್ಡಿ ಅವರು ತಮ್ಮ ತಂದೆಯ ಕಾಲದಲ್ಲೇ ಶಾಸಕರಾಗಿದ್ದವರು. ಅವರು ಯಾವುದೇ ಪಕ್ಷದಲ್ಲಿ ಇದ್ದರೂ ಅಂತಹ ವ್ಯಕ್ತಿತ್ವಕ್ಕೆ ಗೌರವ ನೀಡಬೇಕು. ಶಾಸಕರಾಗಿದ್ದ ಸಂದರ್ಭದಲ್ಲಿ ಅವರು ಜನರಿಗೆ ಯಾವುದೇ ರೀತಿಯ ತೊಂದರೆ ನೀಡಿಲ್ಲ. ಶಾಸಕರಾಗಿದ್ದ ಸಂದರ್ಭದಲ್ಲಿ ಕೇವಲ ಒಂದು ರೂಪಾಯಿ ಮಾತ್ರ ಪಡೆಯುತ್ತಿದ್ದ ಕಾರಣಕ್ಕೆ ಅವರನ್ನು ‘ರಾಯಲ್ ರೆಡ್ಡಿ’ ಎಂದು ಕರೆಯಲಾಗುತ್ತಿತ್ತು. ಕಾರ್ಯಕ್ರಮವೊಂದಕ್ಕೆ ತೆರಳಿದ್ದ ಸಂದರ್ಭದಲ್ಲಿ ಸಂದರ್ಭಕ್ಕೆ ತಕ್ಕಂತೆ ತಮ್ಮ ಮನಸ್ಸಿಗೆ ಬಂದ ವಿಚಾರಗಳನ್ನು ಅವರು ಮುಕ್ತವಾಗಿ ಹಂಚಿಕೊಂಡಿದ್ದಾರೆ. ಅದನ್ನು ರಾಜಕೀಯಗೊಳಿಸುವ ಅಗತ್ಯವೇನು ಎಂದು ಯು.ಟಿ.ಖಾದರ್ ಪ್ರಶ್ನಿಸಿದ್ದಾರೆ.
ಬಸವರಾಜ ರಾಯರೆಡ್ಡಿ ಅವರು ಹಿಂದೂ ಧರ್ಮವನ್ನು ಅತ್ಯುತ್ತಮವಾಗಿ ಪಾಲಿಸುವವರಾಗಿದ್ದು, ದೇವಭಕ್ತರೂ ಆಗಿದ್ದಾರೆ. ಅವರ ಹೇಳಿಕೆಯನ್ನು ಹಿಡಿದು ರಾಜಕೀಯ ಮಾಡುವ ನೀಚ ಮನಸ್ಥಿತಿ ಯಾಕೆ ಎಂದು ಪ್ರಶ್ನಿಸಿದ ಖಾದರ್, ಇಂತಹ ರೀತಿಯಲ್ಲಿ ರಾಜಕೀಯ ಮಾಡುವವರು ದೇಶಪ್ರೇಮಿಗಳಾಗಲು ಸಾಧ್ಯವಿಲ್ಲ ಎಂದು ಟೀಕಿಸಿದ್ದಾರೆ.






