ದಾವಣಗೆರೆ | ತಳ ಸಮುದಾಯಗಳ ನಾಯಕರು ಅಸೂಯೆ, ದ್ವೇಷ ಬಿಡಬೇಕು: ಜಿ ಬಿ ವಿನಯ್ ಕುಮಾರ್

Date:

ಹಿಂದುಳಿದ, ತಳ ಸಮುದಾಯಗಳ ಮುಖಂಡರು, ನಾಯಕರು ಅಸೂಯೆ, ದ್ವೇಷಗಳನ್ನು ಬಿಡಬೇಕು. ಕೆಲವೊಮ್ಮೆ ನಮ್ಮವರೇ ನಮ್ಮನ್ನು ತುಳಿಯಲು ಪ್ರಯತ್ನ ಪಡುತ್ತಾರೆ. ನಾವೇ ಬೆಳೆಯಬೇಕು ಎನ್ನುವ ಧೋರಣೆಯನ್ನು ಬಿಟ್ಟು, ಬೇರೆಯವರನ್ನೂ ಕೂಡ ಪ್ರೋತ್ಸಾಹಿಸುವುದು ಬೆಳೆಸುವುದನ್ನು ಮೈಗೂಡಿಸಿಕೊಳ್ಳಬೇಕು ಎಂದು ಸ್ವಾಭಿಮಾನ ಬಳಗದ ಮುಖಂಡ ಜಿ ಬಿ ವಿನಯ್ ಕುಮಾರ್ ಅಭಿಪ್ರಾಯಪಟ್ಟರು.

- Advertisement -

ದಾವಣಗೆರೆಯ ಸರ್ಕಾರಿ ನೌಕರರ ಭವನದಲ್ಲಿ ಅಹಿಂದ ಮತ್ತು ಶೋಷಿತ ಸಮುದಾಯಗಳ ಒಕ್ಕೂಟದಿಂದ ಆಯೋಜಿಸಿದ್ದ ಅಹಿಂದ ಮತ್ತು ಶೋಷಿತ ಸಮುದಾಯಗಳ ಮುಖಂಡರ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಕಾರ್ಪೊರೇಟ್‌ ಕಾಳಗ | ಮಸ್ಕ್‌ನ ಸ್ಟಾರ್‌ಲಿಂಕ್ ಮಣಿಸಿ ಅಂಬಾನಿಯ...

ಎಲಾನ್ ಮಸ್ಕ್ ಒಡೆತನದ ‘ಸ್ಟಾರ್‌ಲಿಂಕ್’ ಉಪಗ್ರಹ ಇಂಟರ್ನೆಟ್ ಭಾರತಕ್ಕೆ ಕಾಲಿಡುತ್ತಿದ್ದಂತೆ ರಿಲಯನ್ಸ್ ಜಿಯೋದ ಮಾರುಕಟ್ಟೆ ಏಕಸ್ವಾಮ್ಯಕ್ಕೆ ಭಾರಿ ಪೈಪೋಟಿ ಎದುರಾಗುವಂತೆ ಕಾಣುತ್ತಿದೆ. ಈ ಬೆನ್ನಲ್ಲೇ, ರಾಷ್ಟ್ರೀಯ ಭದ್ರತೆ ಮತ್ತು ದತ್ತಾಂಶ ಸುರಕ್ಷತೆಯ ನೆಪವೊಡ್ಡಿ...

ಮೈಸೂರಿನ ಬೀದಿಗಳಲ್ಲಿ ಕ್ರಿಕೆಟ್ ಆಡಿ ಬೆಳೆದ ಮನ್ವಂತ್‌ಕುಮಾರ್, ಈಗ...

ಮೈಸೂರಿನ ಗಲ್ಲಿಗಳಿಂದ ಕಾಲೇಜ್ ಕ್ರಿಕೆಟ್ ಮೈದಾನಕ್ಕೆ ಜಿಗಿದ ಯುವಕನೊಬ್ಬ ಕರ್ನಾಟಕದ ರಣಜಿ ತಂಡದಲ್ಲಿ ಸ್ಥಾನ ಪಡೆದು, ಐಪಿಎಲ್ ತಂಡದ ಗಮನ ಸೆಳೆದು, ದೇಶೀಯ ಕ್ರಿಕೆಟ್‌ನಲ್ಲಿ ಶತಕ ಸಿಡಿಸಿ, ಕರ್ನಾಟಕ ಕ್ರಿಕೆಟ್‌ನ ಭರವಸೆಯ ಆಟಗಾರನಾಗಿ...

ಬೆಳಗಾವಿ | ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಕಬ್ಬು ಬೆಂಕಿಗಾಹುತಿ:...

ಬರಗಾಲದಿಂದ ಬೆಳೆ ನಷ್ಟ ಅನುಭವಿಸಿ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ರೈತರಿಗೆ ಇದೀಗ ವಿದ್ಯುತ್‌ ಶಾರ್ಟ್ ಸರ್ಕ್ಯೂಟ್ ಮತ್ತೊಂದು ಹೊಡೆತ ನೀಡಿದೆ. ವರ್ಷವಿಡೀ ಕಷ್ಟಪಟ್ಟು ಬೆಳೆಸಿದ ಕಬ್ಬು ಕಟಾವಿಗೆ ಬರುವ ಹೊತ್ತಿನಲ್ಲಿ ಬೆಂಕಿಗೆ ಆಹುತಿಯಾಗಿದ್ದು,...

“ನಮ್ಮಲ್ಲಿ ನಾಯಕರು ಬೆಳೆದು ದೊಡ್ಡವರಾಗುತ್ತಾರೆ. ಆದರೆ ಕೆಳಹಂತದ ಕಿರಿಯ ನಾಯಕರನ್ನೂ ಬೆಳೆಸುವ ಮನೋಭಾವ ಹೊಂದಬೇಕು. ನಮ್ಮ ಅಹಿಂದ ವರ್ಗಗಳಲ್ಲಿ ಎಷ್ಟೋ ನಾಯಕರು ನಮಗೆ ಕುರ್ಚಿ ಸಿಕ್ಕರೆ ಸಾಕು ಎನ್ನುವ ಮನೋಭಾವ ಹೊಂದಿದ್ದಾರೆ. ಮೊದಲು ಈ ಮನೋಭಾವವನ್ನು ಬಿಡಬೇಕು” ಎಂದು ಸೂಚ್ಯವಾಗಿ ತಿಳಿಸಿದರು.

“ಸ್ವಾಭಿಮಾನ ಮತ್ತು ಉತ್ತಮ ವ್ಯಕ್ತಿತ್ವವನ್ನು ಎಲ್ಲ ಸಮುದಾಯದವರೂ ಬೆಳೆಸಿಕೊಳ್ಳಬೇಕು. ಹಣವಂತರ, ಅಧಿಕಾರವುಳ್ಳ ಜನರ ಮುಂದೆ ತಲೆಬಾಗುವ ಸಂಸ್ಕೃತಿ ಹೆಚ್ಚಾಗಿದೆ. ಸಣ್ಣಸಣ್ಣ ನಿರ್ಲಕ್ಷಿತ ಜಾತಿಗಳ ಮುಖಂಡರನ್ನು ಚುನಾವಣೆಗಾಗಿ ಆಹ್ವಾನಿಸಿ ಚೆನ್ನಾಗಿ ಮಾತನಾಡಿಸಿ, ಬಹಳ ನಯದಿಂದ ವರ್ತಿಸಿ ‘ಗೆಲ್ಲಿಸಿ’ ಎಂದು ಮನವಿ ಮಾಡುತ್ತಾರೆ. ಆದರೆ ಚುನಾವಣೆಯಲ್ಲಿ ಗೆದ್ದ ಬಳಿಕ ಅವರ ವರ್ತನೆಯೇ ಬದಲಾಗಿಹೋಗುತ್ತದೆ. ಇದು ಎಲ್ಲ ಸಮುದಾಯಗಳಿಗೂ ವಿಶೇಷವಾಗಿ ಹಿಂದುಳಿದ ಸಮುದಾಯಗಳ ಬೆಳವಣಿಗೆಗೆ ಮಾರಕವಾಗುತ್ತಿದೆ. ಅಹಿಂದ ವರ್ಗದವರು ಎಚ್ಚೆತ್ತುಕೊಂಡು ಸಶಕ್ತರಾಗಬೇಕಿದೆ” ಎಂದು ಕರೆ ನೀಡಿದರು.

WhatsApp Image 2025 01 13 at 11.49.55 PM

ಉಪನ್ಯಾಸಕ ಮಲ್ಲಿಕಾರ್ಜುನ ಹಲಸಂಗಿ ಮಾತನಾಡಿ, “ಕಾಂತರಾಜ್ ಆಯೋಗದ ವರದಿ ಬಂದು ಬಹಳಷ್ಟು ವರ್ಷಗಳೇ ಕಳೆದರೂ ಪ್ರಬಲ ಜಾತಿಗಳ ವಿರೋಧದಿಂದ ಬಿಡುಗಡೆ ಸಾದ್ಯವಾಗಿಲ್ಲ. ನಮ್ಮ ನಮ್ಮಲ್ಲೇ ಹಿಂದುಳಿದ ವರ್ಗಗಳ ನಡುವೆ ಇರುವ ಒಡಕಿನಿಂದಾಗಿ ಇದರ ಸಂಪೂರ್ಣ ಅಂಗೀಕಾರಕ್ಕೆ ಒತ್ತಡ ಹೇರಲು ಸಾಧ್ಯವಾಗಿಲ್ಲ. ಶೇ.99ರಷ್ಟು ಗ್ರಾಮೀಣ, ಶೇ.80ರಷ್ಟು ನಗರ ಪ್ರದೇಶಗಳಲ್ಲಿ ಮನೆ ಮನೆಗೆ ತೆರಳಿ ಅಂಕಿ ಅಂಶಗಳನ್ನು ಸಂಗ್ರಹಿಸಿ ವಸ್ತು ನಿಷ್ಠವಾಗಿ ತಯಾರಾಗಿರುವ ಕಾಂತರಾಜ್‌ ವರದಿ‌ ಪರಿಶಿಷ್ಟ ಜಾತಿ ಮತ್ತು ಪಂಗಡದ, ಹಿಂದುಳಿದ ವರ್ಗಗಳ ಕಲ್ಯಾಣಕ್ಕೆ ದೊಡ್ಡ ಕೊಡುಗೆ. ಈ ವರದಿಯನ್ನು ಅಧ್ಯಯನ ಮಾಡಿ ಸಮಾಜಕ್ಕೆ ಅಂಟಿದ ಜಾತಿಯ ಕಳಂಕವನ್ನು ಹೋಗಲಾಡಿಸಲು ಶ್ರಮಿಸಬೇಕಿದೆ” ಎಂದು ತಿಳಿಸಿದರು.

ಈ ಸುದ್ದಿ ಓದಿದ್ದೀರಾ?: ದಾವಣಗೆರೆ | ಅಕ್ರಮವಾಗಿ ಸ್ಮಶಾನದ ಮಣ್ಣು ಸಾಗಾಟ; ದಸಂಸ ಖಂಡನೆ

ಸಭೆಯಲ್ಲಿ ಎಂಎಲ್‌ಸಿ ಅಬ್ದುಲ್ ಜಬ್ಬಾರ್, ಹನುಮಂತಪ್ಪ, ನಿರಂಜನ್, ನಿವೃತ್ತ ಪೊಲೀಸ್ ಅಧಿಕಾರಿಗಳಾದ ರುದ್ರಮುನಿ, ರವಿ ನಾರಾಯಣ್, ನಿವೃತ ನ್ಯಾಯಾಧೀಶರಾದ ಬಾಬಾ ಸಾಹೇಬ್, ನಾಯಕ ಸಮಾಜದ ಜಿಲ್ಲಾಧ್ಯಕ್ಷ ಬಿ. ವೀರಣ್ಣ, ವಕೀಲರಾದ ಅನಿಪ್ ಪಾಷ, ಹೊದಿಗೆರೆ ರಮೇಶ್, ಸಿದ್ದಲಿಂಗಪ್ಪ ಪರಮೇಶ್, ನಲ್ಕುಂದ ಹಾಲೇಶ್ ಸೇರಿದಂತೆ ಸಂವಿಧಾನದ ರಕ್ಷಣಾ ವೇದಿಕೆ, ದಲಿತ ಸಂಘರ್ಷ ಸಮಿತಿಯ ಮುಖಂಡರು, ಅಹಿಂದ ಸಮುದಾಯದ ಹಲವಾರು ಮುಖಂಡರು, ಕಾರ್ಯಕರ್ತರು ಇದ್ದರು.

WhatsApp Image 2025 11 17 at 3.21.17 PM
ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಉಡುಪಿ | ಸರಕಾರದ ತಪ್ಪು ನಿರ್ಧಾರಗಳನ್ನು ವಿರೋಧಿಸುವುದೇ ಪ್ರಜಾಪ್ರಭುತ್ವದ ಲಕ್ಷಣ : ಅಣ್ಣಾಮಲೈ

ಸರಕಾರದ ಯೋಜನೆಗಳು ಅಥವಾ ನಿರ್ಧಾರಗಳಿಂದ ಜನಸಾಮಾನ್ಯರಿಗೆ ತೊಂದರೆಯಾದರೆ, ಪಕ್ಷಭೇದ ಮರೆತು ಅದನ್ನು...

ಉಡುಪಿ | ಮೂರು ವರ್ಷದ ಮಗುವಿನೊಂದಿಗೆ ತಾಯಿ ನಾಪತ್ತೆ, ಸೂಚನೆ

ಉಡುಪಿ ನಗರದ ಹಳೆ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಬಳಿ 29 ವರ್ಷದ...

ಕೋಲಾರ | ಶೀಲ ಶಂಕೆ ಹಿನ್ನೆಲೆಯಲ್ಲಿ ಪತ್ನಿಯನ್ನೇ ಹತ್ಯೆಗೈದ ಪತಿ!

ಶೀಲ ಶಂಕೆ ಹಿನ್ನೆಲೆಯಲ್ಲಿ ಪತಿಯೇ ತನ್ನ ಪತ್ನಿಯನ್ನು ಬರ್ಬರವಾಗಿ ಹತ್ಯೆಗೈದಿರುವ ಆಘಾತಕಾರಿ...

ಉಡುಪಿ | ವೃದ್ಧೆಯನ್ನು ಭಾವನಾತ್ಮಕವಾಗಿ ನಂಬಿಸಿ ಚಿನ್ನದ ಸರ ಕಳವು; ಆರೋಪಿ ಬಂಧನ

ವೃದ್ಧೆಯೊಬ್ಬರನ್ನು ಭಾವನಾತ್ಮಕವಾಗಿ ನಂಬಿಸಿ ಮನೆಯಲ್ಲಿದ್ದ ಚಿನ್ನದ ಸರ ಕಳವು ಮಾಡಿದ ಪ್ರಕರಣವನ್ನು...