ದೇಶಾದ್ಯಂತ ಎಲ್ಲೆಡೆ ಕೃಷಿ ಭೂಮಿಯನ್ನು ಭೂ ಸ್ವಾಧೀನ ಮಾಡುತ್ತಿದ್ದಾರೆ. ಭೂಮಿಗಾಗಿ ಕೃಷಿಕರನ್ನು ಶೋಷಣೆ ಮಾಡುತ್ತಿದ್ದಾರೆ. ಚನ್ನರಾಯಪಟ್ಟಣ ಭೂ ಸ್ವಾಧೀನ ವಿರೋಧಿ ಹೋರಾಟವೂ ಎಲ್ಲರಿಗೂ ಮಾದರಿಯಾಗಿದೆ ಎಂದು ದೆಹಲಿ ರೈತ ಹೋರಾಟದ ಮುಖ್ಯಸ್ಥ ಜಗಜೀತ್ ಸಿಂಗ್ ಧಲ್ಲೇವಾಲ್ ತಿಳಿಸಿದರು.
ದೇವನಹಳ್ಳಿ ತಾಲೂಕಿನ ಚನ್ನರಾಯಪಟ್ಟಣ ಹೋಬಳಿಯ ಭೂ ಸ್ವಾಧೀನ ವಿರೋಧಿ ಹೋರಾಟ ನಡೆಯುತ್ತಿರುವ ಸ್ಥಳಕ್ಕೆ ಭೇಟಿ ನೀಡಿ ಮಾತನಾಡಿದ ಅವರು, “ಇಷ್ಟು ದೀರ್ಘಾವಾಗಿ ಹೋರಾಟ ಮಾಡುತ್ತಿರುವ ಅನ್ನದಾತರ ಒಗ್ಗಟ್ಟೂ ಅನುಕರಣೀಯ” ಎಂದರು.
“ಪ್ರತಿ ವರ್ಷ ಭೂಮಿಯ ಬೆಲೆ ಹೆಚ್ಚುತ್ತಿದೆ. ಅದರ ಉಪಯೋಗವನ್ನು ಪಡೆಯಲು ಬಲಾಢ್ಯರು ಪ್ರಯತ್ನ ಮಾಡುತ್ತಿದ್ದಾರೆ. ಭೂಮಿ ಕೇಲವ ತಾಯಿ ಮಾತ್ರವಲ್ಲ, ನಮ್ಮ ಮನೆಯಲ್ಲಿರುವ ಹೆಣ್ಣು ಮಗಳಾಗಿದ್ದು, ಆಕೆಯನ್ನು ಕಳೆದುಕೊಂಡರೆ ನಮ್ಮ ಗೌರವನ್ನೇ ಕಳೆದುಕೊಂಡಂತೆ” ಎಂದು ತಿಳಿಸಿದರು.
“ನೈಸರ್ಗಿಕ ಸಂಪನ್ಮೂಲಗಳನ್ನು ಕಾರ್ಪೊರೇಟ್‌ಗಳು ವಶಪಡೆಸಿಕೊಳ್ಳಲು ಸರ್ಕಾರದ ಮೂಲಕ ಯತ್ನಿಸುತ್ತಿದ್ದಾರೆ. ಕೃಷಿ ಭೂಮಿಯ ಮಾಲೀಕರನ್ನು ಕಾರ್ಪೊರೇಟ್ ಜೀತದಾಳುಗಳ ಮಾಡುವ ಈ ಷ್ಯಡಂತ್ರವನ್ನು ಎಲ್ಲರೂ ಒಗ್ಗಟ್ಟಾಗಿ ಎದುರಿಸಬೇಕಿದೆ’ ಎಂದು ಆಗ್ರಹಿಸಿದರು.
“ಭೂಮಿಯನ್ನು ನಂಬಿ ಬದುಕಿರುವ ರೈತರನ್ನು ಸಾವಿರಾರು ವರ್ಷಗಳಿಂದ ಭೂತಾಯಿಯೂ ಸಲಹುತ್ತಿದ್ದಾಳೆ. ಕುಟುಂಬವೆಲ್ಲ ಸೇರಿ ಸಂತೃಪ್ತವಾಗಿ ಬದುಕುತ್ತಿದ್ದೇವೆ. ಅಂತಹ ಮಹತ್ವದ ಜೀವನವನ್ನು ಕಸಿಯಲು ಯತ್ನಿಸುತ್ತಿರುವವರ ವಿರುದ್ಧ ನಮ್ಮ ಹೋರಾಟ ನಿರಂತರವಾಗಿರಬೇಕು” ಎಂದು ಕರೆ ನೀಡಿದರು.
“ವಿವಿಧ ರಾಜ್ಯಗಳಲ್ಲಿ ಬೇರೆ ಬೇರೆ ಪಕ್ಷಗಳು ಅಧಿಕಾರದಲ್ಲಿದ್ದರೂ ಭೂ ಸ್ವಾಧೀನ ಪ್ರಕ್ರಿಯೆ ಜಾರಿಯಲ್ಲಿದೆ. ಭೂಮಿಯನ್ನು ಕಾರ್ಪೊರೇಟ್‌ಗಳಿಗೆ ನೀಡಲು ಭೇದ ಭಾವವಿಲ್ಲದೆ ಎಲ್ಲ ರಾಜಕೀಯ ಪಕ್ಷಗಳೂ ಕೂಡ ಮುಂದಾಗಿವೆ. ಯಾವ ಪಕ್ಷವನ್ನೂ ರೈತರು ನಂಬಕೂಡದು” ಎಂದು ಕಿವಿಮಾತು ಹೇಳಿದರು.
‘ಅಭಿವೃದ್ಧಿ ಹೆಸರಿನಲ್ಲಿ ವಿನಾಶ ಮಾಡುತ್ತಿದ್ದಾರೆ’
ರೈತರ ಭೂಮಿಯನ್ನು ಅಭಿವೃದ್ಧಿಗಾಗಿ ಭೂ ಸ್ವಾಧೀನ ಮಾಡುತ್ತಿದ್ದೇವೆ ಎನ್ನುತ್ತಿದ್ದಾರೆ, ಇದು ನಿಜವಾದ ವಿನಾಶವಾಗಿದೆ. ಅದು ಅಭಿವೃದ್ಧಿಯಲ್ಲ, ಸಾವಿರಾರು ರೈತ ಕುಟುಂಬವನ್ನು ಹಾಳುಮಾಡುತ್ತಿದ್ದಾರೆ. ಸರ್ಕಾರ ಏಕೆ ಮಾಡಬೇಕು ನಮ್ಮ ಭೂಮಿಗಳನ್ನು ನಾವೇ ಅಭಿವೃದ್ಧಿ ಮಾಡೋಣ, ಕೃಷಿ ಕ್ಷೇತ್ರದಲ್ಲಿಯೇ ಅಭಿವೃದ್ಧಿಪಡಿಸೋಣ. ಸರ್ಕಾರದವರು ಬಂದಿರುವುದು ರೈತರಿಗೆ ಮೋಸ ಮಾಡಿ ಇಲ್ಲಿನ ನೈಸರ್ಗಿಕ ಸಂಪನ್ಮೂಲವನ್ನು ವಶಪಡಿಸಲು ಬಂದಿದ್ದಾರೆ. ಕಾರ್ಪೊರೇ ರೆಟ್‌ಗಳಿಗೆ ಅವರು ಸಹಕಾರ ನೀಡಿದದೆ ನಮ್ಮ ಹೋರಾಟ ನಿರಂತರವಾಗಿರಬೇಕು. ಸರ್ಕಾರದ ಅಸ್ತಿತ್ವವನ್ನು ಬುಡಮೇಲು ಮಾಡಲು ಮುಂದಾಗಬೇಕು” ಎಂದು ದೆಹಲಿ ರೈತ ಹೋರಾಟದ ಮುಖ್ಯಸ್ಥ ಜಗಜೀತ್ ಸಿಂಗ್ ಧಲ್ಲೇವಾಲ್ ತಿಳಿಸಿದರು.
ಇದನ್ನೂ ಓದಿದ್ದೀರಾ? ಹಾವೇರಿ | ಹದಗೆಟ್ಟ ರಸ್ತೆ; ಕರ್ಜಗಿ ಗ್ರಾಮಸ್ಥರ ಗೋಳು ಕೇಳುವವರಿಲ್ಲ
ದೇವನಹಳ್ಳಿ ತಾಲೂಕಿನ ಚನ್ನರಾಯಪಟ್ಟಣ ಭೂ ಸ್ವಾಧೀನ ವಿರೋಧಿ ಹೋರಾಟ ಧರಣಿ ಸ್ಥಳಕ್ಕೆ ದೆಹಲಿ ರೈತ ಹೋರಾಟದ ಮುಖಂಡರು ಭೇಟಿ ನೀಡಿ ಚರ್ಚಿಸಿ, ಬೆಂಬಲ ವ್ಯಕ್ತಪಡಿಸಿದರು.
ಇದೇ ವೇಳೆ ಬಲದೇವ್ ಸಿಂಗ್ ಸಿರ್ಸಾ, ರಾಮ್ ಗೌಂಡರ್, ಸತ್ನಾಮ್ ಸಿಂಗ್ ಬೆಹ್ರು, ಅಭಿಮನ್ಯು ಕೊಹರ್, ಮನ್ಪ್ರೀತ್ ಬಾತ್, ವೆಂಕಟೇಶ್ವರ ರಾವ್, ಸಂದೀಪ್ ಸಿಂಗ್, ಹರ್ಪಾಲ್ ಚೌಧರಿ, ಭೂ ಸ್ವಾಧೀನ ವಿರೋಧಿ ಹೋರಾಟ ಸಮಿತಿಯ ಸದಸ್ಯರು, ರೈತರು ಇದ್ದರು.