ದಾವಣಗೆರೆ | ದಲಿತ ವಾಣಿಜ್ಯ, ಕೈಗಾರಿಕೋದ್ಯಮಿಗಳ ಸಂಘದಿಂದ ಉದ್ಯಮ ಅಭಿವೃದ್ಧಿ ಕಾರ್ಯಕ್ರಮ

Date:

Advertisements

ದಲಿತ ವಾಣಿಜ್ಯ ಮತ್ತು ಕೈಗಾರಿಕೋದ್ಯಮಿಗಳ ಸಂಘ ದಾವಣಗೆರೆ, ನ್ಯಾಷನಲ್ ಎಸ್ಸಿ ಎಸ್ಟಿ ಹಬ್ ಬೆಂಗಳೂರು, ಮತ್ತು ಪವರ್ ಗ್ರಿಡ್ ಕಾರ್ಪೊರೇಷನ್ ಆಫ್ ಇಂಡಿಯಾ ವತಿಯಿಂದ ದಾವಣಗೆರೆಯ ಖಾಸಗಿ ಹೋಟೆಲಿನಲ್ಲಿ ‘ವಿಶೇಷ ವ್ಯಾಪಾರ ಮತ್ತು ಉದ್ಯಮ ಅಭಿವೃದ್ಧಿ ಕಾರ್ಯಕ್ರಮ’ವನ್ನು ಏರ್ಪಡಿಸಲಾಗಿತ್ತು.

1002747663

ದಲಿತ ವಾಣಿಜ್ಯ ಮತ್ತು ಕೈಗಾರಿಕೋದ್ಯಮಿಗಳ ಸಂಘದ ರಾಜ್ಯಾಧ್ಯಕ್ಷ ರಾಜಾ ನಾಯ್ಕ್ ಕಾರ್ಯಕ್ರಮ ಕುರಿತು ಮಾತನಾಡಿ, “ದಲಿತರಲ್ಲಿ 2005ರಲ್ಲಿ ಉದ್ಯಮಶೀಲತೆಯೇ ಇರಲಿಲ್ಲ. ದಲಿತರೆಂದರೆ ಕೇವಲ ಉದ್ಯೋಗಗಳನ್ನು ಹುಡುಕುವವರು ಎಂದು ಕರೆಯುತ್ತಿದ್ದರು. ಆದರೆ ನಾವು ಉದ್ಯೋಗ ನೀಡುವವರಾಗಬೇಕು ಎನ್ನುವುದು ಸಂಸ್ಥೆಯ ಆಶಯ. ಎಲ್ಲರೂ ಪದವಿಗಳಿಸಿ ವಿದ್ಯಾಭ್ಯಾಸ ಮುಗಿಸಿ ಹೊರಗೆ ಬಂದು ಸರ್ಕಾರಿ ಕೆಲಸಗಳನ್ನು, ಉದ್ಯೋಗಗಳನ್ನು ಪಡೆಯಲು ಸಾಧ್ಯವಿಲ್ಲ. ಪಬ್ಲಿಕ್ ಸೆಕ್ಟರ್ಗಳು ಮುಚ್ಚಿ ಹೋಗುತ್ತಿವೆ. ಹಾಗಾಗಿ ಈಗ ಉದ್ಯಮಪತಿಗಳಾಗಿ ಉದ್ಯೋಗ ನೀಡುವತ್ತ ದಲಿತ ಸಮುದಾಯ ಗಮನಹರಿಸಬೇಕಿದೆ. ಉದ್ಯಮಗಳನ್ನು ಸೃಷ್ಟಿಸಬೇಕು ಎನ್ನುವುದು ದಲಿತ ವಾಣಿಜ್ಯ ಮತ್ತು ಕೈಗಾರಿಕೋದ್ಯಮಿಗಳ ಸಂಘದ ಆಶಯವಾಗಿದೆ. ಹಿಂದಿನಿಂದಲೂ ದಲಿತರನ್ನು ದೂರ ಇಟ್ಟಿದ್ದರು. ಈಗ ಎಲ್ಲಾ ಅವಕಾಶಗಳಿದೆ ಅವುಗಳನ್ನು ಬಳಸಿಕೊಂಡು ಉದ್ಯಮದಲ್ಲಿ ಬೆಳೆಯಬೇಕಿದೆ” ಎಂದು ಅಭಿಪ್ರಾಯಪಟ್ಟರು.

1002747651

“2012ರಲ್ಲಿ ಪ್ರಾರಂಭವಾದ ಪಿಪಿಪಿ ಮಾಡೆಲ್ ನಲ್ಲಿ
ವಿಪುಲ ಅವಕಾಶಗಳಿವೆ. ದೇಶಾದ್ಯಂತ ಪಬ್ಲಿಕ್ ಸೆಕ್ಟರ್ ಗಳಲ್ಲಿ 25000 ಕೋಟಿಗಳ ಉದ್ಯಮದವಕಾಶಗಳಿದೆ. ಆದರೆ ನಮ್ಮ ಪದವೀಧರರು ಓದಿಗೆ ತಕ್ಕ ಕೆಲಸ ಮಾಡುತ್ತಿಲ್ಲ. ಓದುವುದು ಒಂದು ಕೆಲಸ ಮಾಡುವುದೇ ಬೇರೆಯಾಗಿದೆ. ಹೀಗಾಗಿ ರಾಷ್ಟ್ರೀಯ ಉದ್ಯೋಗ ಕಾರ್ಯಕ್ರಮಗಳನ್ನು ನಡೆಸಿದ್ದರೂ ಬಳಕೆಯಾಗುತ್ತಿಲ್ಲ.
ಹೀಗಾಗಿ ಭಾರತೀಯ ಪವರ್ ಗ್ರಿಡ್ ಕಾರ್ಪೊರೇಷನ್ ಅವರ ಈ ಉದ್ಯಮ ಆಧಾರಿತ ಅವಕಾಶಗಳನ್ನು ಎಸ್ಸಿ ಎಸ್ಟಿ ಸಮುದಾಯ ಬಳಸಿಕೊಳ್ಳಬೇಕಿದೆ” ಎಂದು ಕರೆ ನೀಡಿದರು.

1002747653

“ಉದ್ಯಮದಲ್ಲಿ ಏನು ಬೇಕಾದರೂ ಸಾಧಿಸಬಹುದು. 40 ವರ್ಷಗಳ ಹಿಂದೆ ನಮ್ಮ ದೇಶದ ಬಹುತೇಕ ದೊಡ್ಡ ಉದ್ಯಮಿಗಳ ಹೆಸರುಗಳು ಗೊತ್ತಿರಲಿಲ್ಲ. ಅವರೆಲ್ಲ ಉದ್ಯಮಗಳಲ್ಲಿ ಅವಕಾಶಗಳನ್ನು ಪಡೆದು ಮುಂದುವರಿದವರು. ಅವರ ರೀತಿ ದಲಿತರು ಯಾಕೆ ಆಗಬಾರದು ಎಂಬುದನ್ನು ಎಲ್ಲರೂ ಯೋಚಿಸಬೇಕಿದೆ. ಹಣ ಉದ್ಯಮದ ಬಹುದೊಡ್ಡ ಸವಾಲು ಅದನ್ನು ನೀಗಿಸಲು ಬ್ಯಾಂಕುಗಳೊಂದಿಗೆ ಸಂಸ್ಥೆ ಒಪ್ಪಂದ ಮಾಡಿಕೊಂಡು ಉದ್ಯಮಿಪತಿಗಳಿಗೆ ಅವಕಾಶ ದೊರಕಿಸಿಕೊಡಲು ನೆರವಾಗುತ್ತದೆ” ಎಂದು ತಿಳಿಸಿದರು.

1002747662

ರಾಷ್ಟ್ರೀಯ ಎಸ್ಸಿ ಎಸ್ಟಿ ಹಬ್ ಮುಖ್ಯಸ್ಥ ಕೆ ಸುರೇಶ್ ಮಾತನಾಡಿ “ಸರ್ಕಾರದ ವ್ಯವಹಾರ ಮತ್ತು ಟೆಂಡರ್ ಗಳಲ್ಲಿ ಶೇ.4 ದಲಿತರಿಗೆ ಮೀಸಲಿರಿಸಲಾಗಿದೆ. ನಾವು ಉದ್ಯಮಕ್ಕೆ ಏನು ಕೊಡಬಹುದು ಎಂದು ಯೋಚಿಸಿದರೆ ನಾವು ಎತ್ತರಕ್ಕೆ ಬೆಳೆದು ಉದ್ಯಮಿಗಳಾಗಲು ಸಾಧ್ಯವಾಗುತ್ತದೆ. ನಾವು ಉದ್ಯಮದಿಂದ ಕೇವಲ ಕೆಲಸವನ್ನು ನಿರೀಕ್ಷಿಸಬಾರದು, ನಾವೇ ಉದ್ಯಮಪತಿಗಳಾಗುವುದನ್ನು ಬೆಳೆಸಿಕೊಳ್ಳಬೇಕು” ಎಂದು ಅಭಿಪ್ರಾಯಪಟ್ಟರು.

ಭಾರತೀಯ ಪವರ್ ಗ್ರಿಡ್ ಕಾರ್ಪೊರೇಷನ್ ಮುಖ್ಯಸ್ಥ ಶ್ರೀನಿವಾಸ್ ಮಾತನಾಡಿ “ದೇಶಾದ್ಯಂತ ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ, ಕಚ್ ನಿಂದ ಕಲ್ಕತ್ತಾದವರೆಗೂ ರಾಷ್ಟ್ರೀಯ ಹೆದ್ದಾರಿಗಳು ಇರುವಂತೆ ಭಾರತದಲ್ಲಿ ಹೈಟೆನ್ಷನ್ ವಿದ್ಯುತ್ ಮಾರ್ಗಗಳಿವೆ. ಇದರಲ್ಲಿ ಟೆಂಡರ್, ಸಿವಿಲ್ ಸರ್ವಿಸಸ್ ಸೇರಿದಂತೆ ಬಹುತೇಕ ಉದ್ಯಮದ ಅವಕಾಶಗಳಿವೆ.‌ ಎಲ್ಲರೂ ಈ ಅವಕಾಶಗಳನ್ನು ಬಳಸಿಕೊಳ್ಳಬಹುದು. ಅಲ್ಲದೇ ದಲಿತ ಉದ್ಯಮಿಗಳಿಗೆ ಸಬ್ಸಿಡಿಗಳನ್ನು, ರಿಯಾಯಿತಿ ಕೂಡ ನೀಡುತ್ತಿದ್ದು ಇದನ್ನು ದಲಿತ ಉದ್ಯಮಿಗಳು ಬಳಸಿಕೊಳ್ಳಬೇಕು” ಎಂದು ಕರೆ ನೀಡಿದರು.

1002747650

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ದಾವಣಗೆರೆ ಜಿಲ್ಲಾಧಿಕಾರಿಗಳಾದ ಜಿ ಎಂ ಗಂಗಾಧರಸ್ವಾಮಿ “ಎಸ್ ಸಿ ಎಸ್ ಟಿ ಉದ್ಯಮಿಗಳಿಗೆ ಕೈಗಾರಿಕೆ ಪ್ರಾರಂಭಿಸಲು ಎಲ್ಲ ರೀತಿಯ ಸಹಕಾರ ನೀಡಲು ಜಿಲ್ಲಾಡಳಿತ ಸಿದ್ದವಿದೆ. ಕೈಗಾರಿಕಾ ಪ್ರದೇಶಗಳಲ್ಲಿ ಸೈಟುಗಳು ಸೇರಿದಂತೆ ಉದ್ಯಮಿಗಳಾಗಲು ಕೌಶಲ್ಯ ತರಬೇತಿ ಮತ್ತು ಉದ್ಯಮಕ್ಕೆ ಮೂಲ ಸೌಕರ್ಯ ಕೊಡಲು ಸಿದ್ಧವಿದೆ. ಬಂಡವಾಳ ಇಲ್ಲದೆ ಉದ್ಯಮವೇ ಇಲ್ಲ. ಉದ್ಯಮಗಳಿಗೆ ಬಹುತೇಕ ತೊಂದರೆಯೆಂದರೆ ಹಣಕಾಸು ವ್ಯವಸ್ಥೆ ಮತ್ತು ಬಂಡವಾಳ. ಇದಕ್ಕೆ ಬ್ಯಾಂಕರ್ ಗಳಿಗೂ ಕೂಡ ಹಣಕಾಸು ನೀಡಲು ಸೂಚಿಸಲಾಗಿದೆ. ಬ್ಯಾಂಕಿನವರಿಂದ ಯಾವುದಾದರೂ ಸಮಸ್ಯೆ ಉಂಟಾದಲ್ಲಿ ಜಿಲ್ಲಾಡಳಿತ ಮತ್ತು ನಮ್ಮನ್ನು ಸಂಪರ್ಕಿಸಬಹುದು” ಎಂದು ತಿಳಿಸಿದರು.

1002747652

“ಇತ್ತೀಚೆಗೆ ಅಂತರಾಷ್ಟ್ರೀಯ ಮಟ್ಟದಲ್ಲಿ ಆಗುತ್ತಿರುವ ಕೆಲವು ಏರುಪೇರುಗಳಿಂದ ರಾಜ್ಯ ಸರ್ಕಾರ “ಬೆಂಗಳೂರಿನಿಂದ ಹೊರಗೆ” ಎನ್ನುವ ಯೋಜನೆಯನ್ನು ಕೂಡ ಜಾರಿಗೊಳಿಸಲು ಯೋಜನೆ ರೂಪಿಸುತ್ತಿದೆ. ಇದರ ಅನ್ವಯ ಬೆಂಗಳೂರಿಂದ ಹೊರ ಜಿಲ್ಲೆಗಳಲ್ಲಿ ಬಿಪಿಓ ಸಾಫ್ಟ್ವೇರ್ ಮತ್ತು ಕೈಗಾರಿಕೆಗಳಂತ ದೊಡ್ಡ ದೊಡ್ಡ ಉದ್ಯಮಗಳನ್ನು ಪ್ರಾರಂಭಿಸಲು ಪ್ರೋತ್ಸಾಹ ನೀಡುತ್ತಿದೆ. ರಾಜ್ಯ ಸರ್ಕಾರದ ಮತ್ತು ಕೇಂದ್ರ ಸರ್ಕಾರದ ಅನೇಕ ಉದ್ಯಮಶೀಲತಾ ಯೋಜನೆಗಳಿದ್ದು ಅವುಗಳನ್ನು ಸಮರ್ಥವಾಗಿ ಬಳಸಿಕೊಂಡು ಎಸ್ಸಿ ಎಸ್ಟಿ ಸಮುದಾಯ ಉದ್ಯಮಪತಿಗಳಾಗಿ ಮುಂದುವರೆದು ಯಶಸ್ಸು ಸಾಧಿಸಬೇಕು ಎನ್ನುವುದು ಸರ್ಕಾರದ ಆಶಯ” ಎಂದು ತಿಳಿಸಿದರು.

ಈ ಸುದ್ದಿ ಓದಿದ್ದೀರಾ? ದಾವಣಗೆರೆ | ಆಂಗ್ಲ ನಾಮ ಫಲಕಗಳ ತೆರವುಗೊಳಿಸಿ ಶೇ ೬೦ ಕನ್ನಡ ಬಳಸಿ: ಕರವೇ ರಾಮೇಗೌಡ ಎಚ್ಚರಿಕೆ

ಪವರ್ ಗ್ರಿಡ್ ಕಾರ್ಪೊರೇಷನ್ ಮುಖ್ಯಸ್ಥ ಧನ್ ಪಾಲ್, ದಲಿತ ವಾಣಿಜ್ಯ ಮತ್ತು ಕೈಗಾರಿಕೋದ್ಯಮಿಗಳ ಸಂಘದ ಜಿಲ್ಲಾಧ್ಯಕ್ಷ ಮಂಜು ಕಬ್ಬೂರು, ಸದಸ್ಯರಾದ ಬಸವರಾಜ್ ಗೋಶಾಲೆ, ಶ್ರದ್ಧಾ, ನೇತ್ರಾವತಿ, ಸಂಜೀವಿನಿ, ದಸಂಸ ಮುಖಂಡ ಮಂಜುನಾಥ್ ಕುಂದುವಾಡ ಹಲವು ಮುಖಂಡರು ಭಾಗವಹಿಸಿದ್ದರು.‌

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

‘ಬುಕ್‌ ಆಫ್‌ ರೆಕಾರ್ಡ್‌’ | ಶಕ್ತಿ ಪ್ರದರ್ಶಿಸಿದ ‘ಶಕ್ತಿ ಯೋಜನೆ’!

ಕಾಂಗ್ರೆಸ್ ಸರ್ಕಾರ ಜಾರಿಗೆ ತಂದಿರುವ ಐದು ಗ್ಯಾರಂಟಿಗಳು ರಾಜ್ಯದ ಜನರನ್ನು ಸೋಂಬೇರಿಗಳ್ಳಾನ್ನಾಗಿ...

ರಾಹುಲ್ ಗಾಂಧಿಗೆ ಜೀವ ಬೆದರಿಕೆ; ಮೋದಿ, ಶಾ ಮೌನ ಪ್ರಶ್ನಿಸಿದ ಸಿಎಂ ಸಿದ್ದರಾಮಯ್ಯ

ಬಿಜೆಪಿ ಮತ್ತು ಸಂಘಪರಿವಾರದ ವಿರುದ್ಧ ನಿರಂತರ ಧ್ವನಿ ಎತ್ತುತ್ತಿರುವ ಲೋಕಸಭೆಯ ವಿರೋಧ...

ಕಲಬುರಗಿ ರೈತರಿಗೆ ₹1417.02 ಕೋಟಿ ಪರಿಹಾರ, ಬಿಜೆಪಿಯಿಂದ ನಕಲಿ ಪ್ರತಿಭಟನೆ: ಪ್ರಿಯಾಂಕ್‌ ಖರ್ಗೆ

ಅಧಿಕಾರದಲ್ಲಿದ್ದಾಗ ಕಲಬುರಗಿ ಜಿಲ್ಲೆಯ ರೈತರಿಗೆ ದ್ರೋಹವೆಸಗಿದ್ದ ಬಿಜೆಪಿ ಈಗ ಪ್ರತಿಭಟನೆಯ ನಾಟಕ...

ಬಿಜೆಪಿಯ ಆತ್ಮವಂಚನೆ ಪ್ರತಿಭಟನೆಗಳು ಕಲಬುರಗಿಗೆ ಅಗತ್ಯವಿಲ್ಲ: ಸಚಿವ ಪ್ರಿಯಾಂಕ್ ಖರ್ಗೆ

ಅಧಿಕಾರದಲ್ಲಿದ್ದಾಗ ಕಲಬುರಗಿ ಜಿಲ್ಲೆಯ ರೈತರಿಗೆ ದ್ರೋಹವೆಸಗಿದ್ದ ಬಿಜೆಪಿ ಈಗ ಪ್ರತಿಭಟನೆಯ ನಾಟಕ...

Download Eedina App Android / iOS

X