ದಾವಣಗೆರೆ | ವಿಚಾರಣೆ ಇಲ್ಲದೇ ಡಿ ಗ್ರೂಪ್ ನೌಕರರ ವಜಾ: ಕಾರ್ಮಿಕರ ಅನಿರ್ದಿಷ್ಟಾವಧಿ ಪ್ರತಿಭಟನೆ

Date:

ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯ ಹೊರಗುತ್ತಿಗೆ ಡಿ ಗ್ರೂಪ್ ನೌಕರರನ್ನು ವಿಚಾರಣೆ ಇಲ್ಲದೇ ಕೆಲಸದಿಂದ ವಜಾ ಮಾಡಿರುವುದನ್ನು ಖಂಡಿಸಿ ಎಐಯುಟಿಯುಸಿ ಕಾರ್ಮಿಕರ ಸಂಘಟನೆ, ಡಿ ಗ್ರೂಪ್ ಹೊರಗುತ್ತಿಗೆ ನೌಕರರ ಸಂಘ ದಾವಣಗೆರೆಯ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆ ಮುಂಭಾಗದಲ್ಲಿ ನಡೆಸುತ್ತಿರುವ ಅನಿರ್ದಿಷ್ಟಾವಧಿ ಪ್ರತಿಭಟನೆ ಐದನೇ ದಿನಕ್ಕೆ ಕಾಲಿಟ್ಟಿದೆ. ಈವರೆಗೆ ಆಸ್ಪತ್ರೆಯ ವೈದ್ಯಾಧಿಕಾರಿ, ಸೂಪರಿಂಟೆಂಡೆಂಟ್ ಸೇರಿದಂತೆ ಯಾರೊಬ್ಬರು ಭೇಟಿ ನೀಡಿ ಅಹವಾಲನ್ನು ಕೇಳದಿರುವುದು ಕಾರ್ಮಿಕ ವಲಯದಲ್ಲಿ ಅಸಮಾಧಾನ ಹುಟ್ಟು ಹಾಕಿದೆ.

- Advertisement -

ಈ ವೇಳೆ ಮಾತನಾಡಿದ ಎಐಯುಟಿಯುಸಿ ಜಿಲ್ಲಾ ಕಾರ್ಯದರ್ಶಿ ತಿಪ್ಪೇಸ್ವಾಮಿ ಅಣಬೇರು “ಕಳೆದ ಮಾರ್ಚ್ ನಲ್ಲಿ ಜಿಲ್ಲಾಧಿಕಾರಿಗಳ ಭೇಟಿಯ ವೇಳೆ ಆಸ್ಪತ್ರೆಯ ಓಟಿ ರೂಮಿನಲ್ಲಿ ಸ್ವಚ್ಛತಾ ಕಾರ್ಯ ನಿರ್ವಹಿಸುವ ಮಹಿಳೆಯೊಬ್ಬರು ಹಣ ಪಡೆದಿದ್ದಾರೆ ಎಂದು ಆರೋಪಿಸಿ ಶಿಸ್ತು ಕ್ರಮದಡಿಯಲ್ಲಿ ವಜಾಗೊಳಿಸಲಾಗಿದೆ. ಅಲ್ಲದೆ ಅವರ ಜೊತೆಗೆ ಇಲ್ಲದೆ ಇದ್ದರೂ ಇತರೆ ಮೂವರು ಕಾರ್ಮಿಕರನ್ನು ವಿನಾಕಾರಣ ವಜಾ ಗೊಳಿಸಲಾಗಿದೆ. ಯಾವುದೇ ಇಲಾಖೆ ವಿಚಾರಣೆಗಳನ್ನು ನಡೆಸಿಲ್ಲ. ಎಲ್ಲರೂ ಅಲ್ಪಸಂಖ್ಯಾತ ಹಾಗೂ ದಲಿತ ಮಹಿಳೆಯರಾಗಿದ್ದು, ಈ ಕೂಡಲೇ ಆಸ್ಪತ್ರೆಯ ಮೇಲಾಧಿಕಾರಿಗಳು ಹಾಗೂ ವಜಾಗೆ ಆದೇಶ ನೀಡಿದ ಜಿಲ್ಲಾಧಿಕಾರಿಗಳು ಸ್ಥಳಕ್ಕೆ ಬಂದು ಕಾರ್ಮಿಕರ ಸಂಕಷ್ಟಗಳನ್ನು ಆಲಿಸಿ ಮನವಿ ಸ್ವೀಕರಿಸಬೇಕು. ಹಣ ಸ್ವೀಕರಿಸಿದ ಮಹಿಳೆ ಅದು ಲಂಚದ ಹಣವಲ್ಲ. ಅದು ಊಟ ತರಲು ಕೊಟ್ಟಿದ್ದ ಹಣ ಎಂದು ತಿಳಿಸಿದ್ದು, ಈ ಕೂಡಲೇ ವಿಚಾರಣೆ ನಡೆಸಬೇಕು” ಎಂದು ಒತ್ತಾಯಿಸಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

137 ಜೀವ ರಕ್ಷಕ ಕ್ಯಾನ್ಸರ್ ಔಷಧಗಳ ದರ ಶೇ.70ರಷ್ಟು...

ಕ್ಯಾನ್ಸರ್ ಚಿಕಿತ್ಸೆಯ ದುಬಾರಿ ವೆಚ್ಚದಿಂದ ಕಂಗೆಟ್ಟಿರುವ ರೋಗಿಗಳಿಗೆ ಕೇಂದ್ರ ಸರ್ಕಾರದಿಂದ ಕೊಂಚ ನಿರಾಳತೆಯ ಸುದ್ದಿಯೊಂದಿದೆ! 137 ಜೀವರಕ್ಷಕ ಕ್ಯಾನ್ಸರ್ ಔಷಧಗಳ ಬೆಲೆ ಇಳಿಕೆಯಾಗುವ ಸಾಧ್ಯತೆಯಿದ್ದು, ಕೆಲವು ಔಷಧಗಳ ಗರಿಷ್ಠ ಚಿಲ್ಲರೆ ಬೆಲೆ ಶೇ.70ರವರೆಗೆ...

‘ದೇಶ್ ಕೋ ಬಿಕನೇ ನಹೀ ದೂಂಗಾ’ ಎಂದು ನವಮಂಗಳೂರು...

​ರೈಲ್ವೆ, ವಿಮಾನ ನಿಲ್ದಾಣ, ಟೆಲಿಕಾಂ ಸೇರಿದಂತೆ ದೇಶದ ಪ್ರಮುಖ ಜಯಶೀಲ ಸಾರ್ವಜನಿಕ ವಲಯಗಳನ್ನು ಈಗಾಗಲೇ ಆಯ್ದ ಕಾರ್ಪೊರೇಟ್ ಕುಳಗಳಿಗೆ ಒಪ್ಪಿಸಿರುವ ಮೋದಿ ಸರ್ಕಾರ, ಈಗ ತನ್ನ ದೃಷ್ಟಿಯನ್ನು ಕಡಲತೀರಗಳತ್ತ ಹರಿಸಿದೆ. ದೇಶದ ಆಮದು-ರಫ್ತು...

SIRನ ಒಳನೋಟ: ಸೇರ್ಪಡೆಗಿಂತ ಹೊರಗಿಡುವುದಕ್ಕೆ ಆದ್ಯತೆ ನೀಡಿದಾಗ ಏನಾಗುತ್ತದೆ?

SIR ಕರಡು ಪಟ್ಟಿಯಲ್ಲಿರುವ ಮತದಾರರ ಸಂಖ್ಯೆಯು ನೈಜ ವಯಸ್ಕ ಜನಸಂಖ್ಯೆಯ ಅಂದಾಜಿಗಿಂತ ಅಷ್ಟೊಂದು ದೊಡ್ಡ ಪ್ರಮಾಣದಲ್ಲಿ ಕಡಿಮೆಯಾಗಿರುವುದಕ್ಕೆ ಕಾರಣವೇನು? ಈ ಕಾಣೆಯಾದ ಮತದಾರರೆಲ್ಲ ಯಾರು? ಅವರು ಮತದಾರರ ಪಟ್ಟಿಯಲ್ಲಿ ಬಿಟ್ಟು ಹೋಗಿದ್ದು ಹೇಗೆ?...

ಎಐಯುಟಿಯುಸಿ ಜಿಲ್ಲಾಧ್ಯಕ್ಷ ಮಂಜುನಾಥ ಕೈದಾಳ್ ಮಾತನಾಡಿ “ಆಸ್ಪತ್ರೆಯಲ್ಲಿ ಹೊರಗುತ್ತಿಗೆ ನೌಕರರನ್ನು ತುಂಬಾ ಕೆಟ್ಟದಾಗಿ ನಡೆಸಿಕೊಳ್ಳುತ್ತಾರೆ. ಯಾರೂ ಮಾಡಲು ಅಸಹ್ಯ ಪಡುವಂತಹ ಕೆಲಸವನ್ನು ಇಲ್ಲಿನ ಡಿ ಗ್ರೂಪ್ ನೌಕರರು ಮಾಡುತ್ತಿದ್ದಾರೆ. ಹೆರಿಗೆ ನಂತರದ ಕೊಳೆ ಸ್ವಚ್ಛತೆ, ಕಸ ಉಳಿದವನ್ನು ಎತ್ತಿ ಹಾಕುವುದು ಇತರ ಕೆಲಸಗಳನ್ನು ನಿರ್ವಹಿಸುತ್ತಿದ್ದಾರೆ. ಅದು ಲಂಚದ ಹಣ ಅಲ್ಲ, ಬದಲಾಗಿ ನಾನು ಊಟಕ್ಕೆ ನೀಡಿದ ಹಣ ಎಂದು ಮಹಿಳೆ ತಿಳಿಸಿದ್ದಾರೆ. ಜಿಲ್ಲಾಧಿಕಾರಿಗಳು ವಜಾಕ್ಕೆ ಆದೇಶಿಸಿದ್ದು ಕಾರ್ಮಿಕ ಇಲಾಖೆ ಕಾನೂನಿನ್ವಯ ವಿಚಾರಣೆ ನಡೆಸದೆ ಯಾವುದೇ ನೌಕರನನ್ನು ಕೆಲಸದಿಂದ ವಜಾ ಮಾಡುವಂತಿಲ್ಲ. ಇಲ್ಲಿ ಯಾವುದೇ ವಿಚಾರಣೆ ನಡೆಸಿದೆ, ಜಿಲ್ಲಾಧಿಕಾರಿಗಳು ತಮ್ಮ ದರ್ಪವನ್ನು ಡಿ ಗ್ರೂಪ್ ನೌಕರರಾದ ಅಲ್ಪಸಂಖ್ಯಾತ ಹಾಗೂ ದಲಿತ ಮಹಿಳೆಯರ ಮೇಲೆ ತೋರಿಸುತ್ತಿದ್ದಾರೆ. ಕೂಡಲೇ ಈ ಬಗ್ಗೆ ವಿಚಾರಣೆ ನಡೆಸಿ ತೀರ ಸಂಕಷ್ಟ ಸ್ಥಿತಿಯಲ್ಲಿರುವ ಮಹಿಳೆಯರನ್ನು ಕೆಲಸಕ್ಕೆ ನಿಯೋಜಿಸಬೇಕು. ವಜಾಗೊಳಿಸಿರುವುದರ ಹಿಂದೆ ಹೊಸದಾಗಿ ಕೆಲಸಕ್ಕೆ ಸೇರುಸಿಕೊಂಡು ಅವರಿಂದ ಹಣ ಪಡೆಯುವವರ ಹುನ್ನಾರವಿದೆ ಎನ್ನುವ ಅನುಮಾನವಿದೆ” ಎಂದು ಒತ್ತಾಯಿಸಿದರು.

ಈ ವೇಳೆ ವಜಾಗೊಂಡ ಮಹಿಳೆ ಮಾತನಾಡಿ “ನಾನು ಅಂದು ಕರ್ತವ್ಯ ನಿರ್ವಹಿಸುವಾಗ ಊಟಕ್ಕೆ ಹೋಗಲು ಕೂಡ ಸಮಯವಿರಲಿಲ್ಲ. ನಮ್ಮ ಹುಡುಗ ಒಬ್ಬನಿಗೆ ಊಟ ತರಲು ಹಣ ನೀಡಿದ್ದೆ. ರಂಜಾನ್ ಹಾಗೂ ಯುಗಾದಿ ಹಬ್ಬದ ಸಮಯವಾದ್ದರಿಂದ ಅಂದು ಊಟ ಸಿಗದಿದ್ದರಿಂದ ಹುಡುಗ ಹೊರಗಿದ್ದ ಅಜ್ಜಿಯ ಕೈಗೆ ವಾಪಸ್ ಕೊಟ್ಟು ಹೋಗಿದ್ದ. ಆ ಹಣ ಪಡೆಯುವಾಗ ಜಿಲ್ಲಾಧಿಕಾರಿಗಳು ಗಮನಿಸಿದ್ದು ನಾನು ನನ್ನ ಹಣ ಪಡೆದಿದ್ದನ್ನೇ ಲಂಚವೆಂದು ಭಾವಿಸಿ, ನಮ್ಮ ವಿವರಣೆಯನ್ನು ಕೇಳದೆ ವಜಾ ಗಳಿಸಿದ್ದಾರೆ. ನಾನು ಮಕ್ಕಳಿಲ್ಲದೆ ಮೊಮ್ಮಕ್ಕಳೊಂದಿಗೆ ಬದುಕುತ್ತಿದ್ದು ನಾನೊಬ್ಬಳೇ ದುಡಿದು ಹೈಸ್ಕೂಲು ಶಿಕ್ಷಣ ಪಡೆಯುತ್ತಿರುವ ಮೊಮ್ಮಕ್ಕಳನ್ನು ಸಾಕಬೇಕಾಗಿದ್ದು, ನನಗೆ ಆಗಿರುವ ಅನ್ಯಾಯವನ್ನು ಸರಿಪಡಿಸಿ, ಕೆಲಸ ನೀಡಬೇಕು. ಜೀವನ ಮಾಡಲು ದಾರಿ ಮಾಡಿಕೊಡಬೇಕು ಎಂದು ಜಿಲ್ಲಾಡಳಿತ ಹಾಗೂ ಆಸ್ಪತ್ರೆ ಆಡಳಿತ ಮಂಡಳಿಯಲ್ಲಿ ಮನವಿ ಮಾಡಿಕೊಳ್ಳುತ್ತೇನೆ” ಎಂದು ಅಳಲು ತೋಡಿಕೊಂಡರು.

ಪ್ರತಿಭಟನಾಕಾರರು ಕಾರ್ಮಿಕರ ಬೇಡಿಕೆಗಳಾದ ”ಕಾರ್ಮಿಕರ ಮೇಲೆ ಹೊರಡಿಸಿರುವ ವಜಾ ಆದೇಶ ಸ್ಥಗಿತಗೊಳಿಸಿ ನಿಷ್ಭಕ್ತಪಾತ ತನಿಖೆ ನಡೆಸಿ ವಿಚಾರಣೆ ಮುಗಿಯುವವರೆಗೂ ಶಿಕ್ಷಾತ್ಮಕ ಕ್ರಮ ಕೈಗೊಳ್ಳಬಾರದು. ನಿಗದಿತ ಎಂಟು ಗಂಟೆಯ ಕೆಲಸದ ಅವಧಿ ಖಾತರಿ ಮಾಡಬೇಕು. ಶಾಸನಬದ್ಧ ಸೌಲಭ್ಯಗಳಾದ ವೇತನ ಚೀಟಿ, ಗುರುತಿನ ಚೀಟಿ, ಯೂನಿಫಾರಂ ಇತರ ಸೌಲಭ್ಯ ಒದಗಿಸಿ, ಪ್ರತಿ ತಿಂಗಳು ಸಂಘಟನೆ ಪ್ರತಿನಿಧಿಗಳೊಂದಿಗೆ ಸಭೆ ನಡೆಸಬೇಕು. ಕಾರ್ಮಿಕರ ಕುಂದು ಕೊರತೆಗಳನ್ನು ಬಗೆಹರಿಸಬೇಕು’ ಎಂದು ಒತ್ತಾಯಿಸಿದರು.

ಈ ಸುದ್ದಿ ಓದಿದ್ದೀರಾ? http://ದಾವಣಗೆರೆ ಮಾದರಿ ರಾಜಕಾರಣ; ಎಚ್ಚರಿಕೆ ಕಾಂಗ್ರೆಸಿಗೋ, ಮುಸ್ಲಿಂರಿಗೋ? ಮುಸ್ಲಿಂರ ಮುಂದಿನ ನಡೆಯೇನು?

ಪ್ರತಿಭಟನೆಯಲ್ಲಿ ಕಾರ್ಮಿಕರಾದ ರವಿ, ಗದಿಗೆಪ್ಪ, ನಿರ್ಮಲ, ಗಂಗಮ್ಮ, ಕೆಂಚಮ್ಮ, ಜಯಮ್ಮ, ರತ್ನಮ್ಮ, ನೇತ್ರಮ್ಮ, ಮೀನಾಕ್ಷಿ, ರೇಷ್ಮಾ ಬಾನು, ಪಾರ್ವತಮ್ಮ, ದ್ಯಾಮಮ್ಮ, ಉಚ್ಚಂಗಮ್ಮ, ಸುವರ್ಣ, ರಾಧಮ್ಮ, ಪರಶುರಾಮ ಸೇರಿದಂತೆ ಎಐಯುಟಿಯುಸಿ ಹಾಗೂ ಡಿ ಗ್ರೂಪ್ ಹೊರಗುತ್ತಿಗೆ ನೌಕರರ ಸಂಘದ ಪದಾಧಿಕಾರಿಗಳು ಹಾಗೂ ಇತರ ಕಾರ್ಮಿಕರು, ಸದಸ್ಯರು ಹಾಜರಿದ್ದರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಶಿವಮೊಗ್ಗ ಜಂಬೂ ಸವಾರಿ ವೇಳೆ ಭಾರೀ ಅನಾಹುತ: ಅಂಬಾರಿ ಹೊತ್ತು ಅಡ್ಡಾದಿಡ್ಡಿ ಓಡಿದ ಆನೆ

ವಿಶ್ವವಿಖ್ಯಾತ ಮೈಸೂರು ದಸರಾ ಜಂಬೂ ಸವಾರಿಗೆ ಅದ್ಧೂರಿ ಚಾಲನೆ ಸಿಕ್ಕು ಅಲ್ಲಿನ...

​’ಪೊಲೀಸರು ಆರ್‌ಎಸ್‌ಎಸ್ ಗುಲಾಮರ ಮಕ್ಕಳಲ್ಲ’: ಪ್ರಿಯಾಂಕ್ ಖರ್ಗೆ ವಾಗ್ದಾಳಿ

ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್‌) ವಿರುದ್ಧ ತಮ್ಮ ವಾಗ್ದಾಳಿ ಮುಂದುವರಿಸಿರುವ...

ಈಶಾನ್ಯ ಶಿಕ್ಷಕರ ಕ್ಷೇತ್ರ ಚುನಾವಣೆ : ಬಿಜೆಪಿ-ಕಾಂಗ್ರೆಸ್‌ ತೀವ್ರ ಪೈಪೋಟಿ, ಗೆಲುವು ಯಾರಿಗೆ?

ವಿಧಾನ ಪರಿಷತ್ತಿನ ಈಶಾನ್ಯ ಶಿಕ್ಷಕರ ಕ್ಷೇತ್ರದಲ್ಲಿ ಬಿಜೆಪಿ ಗೆಲುವಿನ ಓಟಕ್ಕೆ ತಡೆ...