ದಾವಣಗೆರೆ | ವೃತ್ತಿ ರಂಗಭೂಮಿ- ರಂಗಾಯಣದಿಂದ ನಾಟಕಗಳ ತರಬೇತಿಗೆ ಕಲಾವಿದರ ಆಯ್ಕೆಗೆ ಆಹ್ವಾನ

Date:

Advertisements

ದಾವಣಗೆರೆಯ ವೃತ್ತಿ ರಂಗಭೂಮಿ- ರಂಗಾಯಣದಿಂದ ನಾಟಕಗಳ ಸಿದ್ಧತೆ, ರಂಗ ತರಬೇತಿ, ರಂಗ ಪ್ರದರ್ಶನ ಹಾಗೂ ರಂಗ ಶಿಬಿರಗಳಂತಹ ರಂಗ ಚಟುವಟಿಕೆಗಳಲ್ಲಿ, ರಂಗಾಯಣವು ಸಿದ್ಧಪಡಿಸುವ ನಾಟಕಗಳ ತರಬೇತಿಗೆ ತೊಡಗಿಸಿಕೊಳ್ಳಲು 12 ಜನ ಕಲಾವಿದರ ಆಯ್ಕೆಗೆ ಅರ್ಜಿ ಆಹ್ವಾನಿಸಲು ಮುಂದಾಗಿದೆ.

ಆಸಕ್ತ ರಂಗಭೂಮಿ ಕಲಾವಿದರು, ನಿರ್ದೇಶಕರು ಮನವಿ ಅರ್ಜಿಗಳನ್ನು ಮತ್ತು ಅಗತ್ಯ ದಾಖಲೆಗಳನ್ನು 19 ಸೆಪ್ಟೆಂಬರ್ 2025ರ ಸಂಜೆ 5.30 ಗಂಟೆ ಒಳಗೆ ದಾವಣಗೆರೆಯ ವೃತ್ತಿರಂಗಭೂಮಿ ರಂಗಾಯಣದ ವಿಶೇಷಾಧಿಕಾರಿಗಳಿಗೆ ಸಲ್ಲಿಸತಕ್ಕದ್ದು.

ಆಯ್ಕೆಯಲ್ಲಿ ಕೆಲವು ನಿಬಂಧನೆಗಳಿದ್ದು ಮಹಿಳೆಯರು ಸೇರಿದಂತೆ 12 ಜನ ಕಲಾವಿದರನ್ನು ಆಯ್ಕೆ ಮಾಡಿ ಗೌರವ ಸಂಭಾವನೆ ನೀಡಲಾಗುವುದು. ರಂಗ ಪರಿಣಿತಿ, ರಂಗ ಶಿಕ್ಷಣದ ಅರ್ಹತೆಗಳು ಅಪೇಕ್ಷಣೀಯ ಹೊರತು ಕಡ್ಡಾಯವಾಗಿರುವುದಿಲ್ಲ. ರಂಗ ಪ್ರಯೋಗಗಳಲ್ಲಿ ಭಾಗವಹಿಸಿದ್ದರಿಗೆ ಆದ್ಯತೆಯನ್ನು ನೀಡಲಾಗುವುದು. ಆಯ್ಕೆಯಾದ ಕಲಾವಿದರಿಗೆ ಹದಿನೈದು ಸಾವಿರ ರೂಪಾಯಿ ತಿಂಗಳಿಗೆ ಸಂಭಾವನೆ ಇರುತ್ತದೆ. ರಂಗಾಯಣದ ನಿರ್ದೇಶಕರ ಅಧ್ಯಕ್ಷತೆಯಲ್ಲಿ ಕಲಾವಿದರನ್ನು ಉಪಸಮಿತಿಯು ಆಯ್ಕೆ ಮಾಡುತ್ತದೆ. 20 ರಿಂದ 35 ವರ್ಷ ವಯೋಮಿತಿಯಲ್ಲಿ ಆಸಕ್ತ ಅರ್ಹ ಕಲಾವಿದರನ್ನು ಆಯ್ಕೆ ಮಾಡಲಾಗುತ್ತದೆ ಮತ್ತು ಆಯ್ಕೆ ಸಮಿತಿಯ ತೀರ್ಮಾನವೇ ಅಂತಿಮವಾಗಿದ್ದು, ಎಲ್ಲಾ ನಿಬಂಧನೆಗಳಿಗೆ ಒಳಪಟ್ಟು ಕಲಾವಿದರನ್ನು ಆಯ್ಕೆ ಮಾಡಲಾಗುತ್ತದೆ ಎಂದು ತಿಳಿಸಲಾಗಿದೆ.

ಈ ಸುದ್ದಿ ಓದಿದ್ದೀರಾ? ಚಿತ್ರದುರ್ಗ | ಫೇಸ್ಬುಕ್ ನಲ್ಲಿ ಗಣೇಶ ವಿಸರ್ಜನೆಗೆ ಡಿಜೆ ಬಳಕೆ ಸುಳ್ಳು ಸುದ್ದಿ: ಪ್ರಕರಣ ದಾಖಲಿಸಿದ ಪೊಲೀಸರು

ಆಯ್ಕೆ ಪ್ರಕ್ರಿಯೆಗೆ ದಾವಣಗೆರೆ ರಂಗಾಯಣದ ಕಛೇರಿಯಲ್ಲಿ 2025, ಸೆ.20 ರಂದು ಬೆಳಗ್ಗೆ 10.30ಕ್ಕೆ ಸಂದರ್ಶನ ನಡೆಯಲಿದೆ. ಈ ವೇಳೆ ಕಲಾವಿದರು ಜನ್ಮ ದಿನಾಂಕ ದೃಢೀಕರಣ, ಎನ್ಎಸ್ ಡಿ ಅಥವಾ ಡಿಪ್ಲೋಮೋ ಪ್ರಮಾಣ ಪತ್ರ, ತರಬೇತಿ ಹೊಂದಿರುವವರು ರಂಗ ಶಿಕ್ಷಣ ಕೇಂದ್ರದ ಅನುಭವ ಪ್ರಮಾಣ ಪತ್ರ, ರಂಗಭೂಮಿ ಕುರಿತ ಅನುಭವ ಕುರಿತ ಸ್ವವಿವರ ಪತ್ರ, ಆಧಾರ್ ಕಾರ್ಡ್ ಗಳನ್ನು ಹಾಜರುಪಡಿಸತಕ್ಕದ್ದು ಎಂದು ವೃತ್ತಿರಂಗಭೂಮಿ ರಂಗಾಯಣದ ವಿಶೇಷಾಧಿಕಾರಿಗಳು ತಿಳಿಸಿದ್ದಾರೆ.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

‘ಬುಕ್‌ ಆಫ್‌ ರೆಕಾರ್ಡ್‌’ | ಶಕ್ತಿ ಪ್ರದರ್ಶಿಸಿದ ‘ಶಕ್ತಿ ಯೋಜನೆ’!

ಕಾಂಗ್ರೆಸ್ ಸರ್ಕಾರ ಜಾರಿಗೆ ತಂದಿರುವ ಐದು ಗ್ಯಾರಂಟಿಗಳು ರಾಜ್ಯದ ಜನರನ್ನು ಸೋಂಬೇರಿಗಳ್ಳಾನ್ನಾಗಿ...

ರಾಹುಲ್ ಗಾಂಧಿಗೆ ಜೀವ ಬೆದರಿಕೆ; ಮೋದಿ, ಶಾ ಮೌನ ಪ್ರಶ್ನಿಸಿದ ಸಿಎಂ ಸಿದ್ದರಾಮಯ್ಯ

ಬಿಜೆಪಿ ಮತ್ತು ಸಂಘಪರಿವಾರದ ವಿರುದ್ಧ ನಿರಂತರ ಧ್ವನಿ ಎತ್ತುತ್ತಿರುವ ಲೋಕಸಭೆಯ ವಿರೋಧ...

ಕಲಬುರಗಿ ರೈತರಿಗೆ ₹1417.02 ಕೋಟಿ ಪರಿಹಾರ, ಬಿಜೆಪಿಯಿಂದ ನಕಲಿ ಪ್ರತಿಭಟನೆ: ಪ್ರಿಯಾಂಕ್‌ ಖರ್ಗೆ

ಅಧಿಕಾರದಲ್ಲಿದ್ದಾಗ ಕಲಬುರಗಿ ಜಿಲ್ಲೆಯ ರೈತರಿಗೆ ದ್ರೋಹವೆಸಗಿದ್ದ ಬಿಜೆಪಿ ಈಗ ಪ್ರತಿಭಟನೆಯ ನಾಟಕ...

ಬಿಜೆಪಿಯ ಆತ್ಮವಂಚನೆ ಪ್ರತಿಭಟನೆಗಳು ಕಲಬುರಗಿಗೆ ಅಗತ್ಯವಿಲ್ಲ: ಸಚಿವ ಪ್ರಿಯಾಂಕ್ ಖರ್ಗೆ

ಅಧಿಕಾರದಲ್ಲಿದ್ದಾಗ ಕಲಬುರಗಿ ಜಿಲ್ಲೆಯ ರೈತರಿಗೆ ದ್ರೋಹವೆಸಗಿದ್ದ ಬಿಜೆಪಿ ಈಗ ಪ್ರತಿಭಟನೆಯ ನಾಟಕ...

Download Eedina App Android / iOS

X