ಕೊಡಗು | ಧರ್ಮಸ್ಥಳ ಅಸಹಜ ಸಾವು ಪ್ರಕರಣ; ಎಸ್ಐಟಿಯಿಂದ ಪಾರದರ್ಶಕ ತನಿಖೆ ನಡೆಯುವಂತೆ ಸಿಪಿಐ ಮಾಸ್ ಲೈನ್ ಮನವಿ

Date:

Advertisements

ಧರ್ಮಸ್ಥಳದಲ್ಲಿ ನಡೆದಿದೆ ಎನ್ನಲಾದ ಮಹಿಳೆಯರ ಸರಣಿ ಅತ್ಯಾಚಾರ, ಕೊಲೆಯನ್ನು ಖಂಡಿಸುತ್ತಾ. ಎಸ್ಐಟಿ ತನಿಖೆಯನ್ನು ಪಾರದರ್ಶಕವಾಗಿ ನಡೆಸಿ ಅತ್ಯಾಚಾರಿ, ಕೊಲೆಗಡುಕರನ್ನು ಬಂಧಿಸಿ, ಕಾನೂನು ರೀತ್ಯಾ ಶಿಕ್ಷೆಗೆ ಒಳಪಡಿಸಬೇಕಾಗಿ ಭಾರತ ಕಾಮ್ಯುನಿಸ್ಟ್ ಪಕ್ಷ (ಮಾರ್ಕ್ಸ್ ವಾದಿ ಲೆನಿನ್ ವಾದ) ಮಾಸ್ ಲೈನ್ ಜಿಲ್ಲಾ ಸಮಿತಿಯು ಕೊಡಗು ಜಿಲ್ಲೆ, ಕುಶಾಲನಗರ ತಹಶೀಲ್ದಾರ್ ಅವರಿಗೆ ಮನವಿ ಸಲ್ಲಿಸಿದರು.

ದಕ್ಷಿಣ ಕನ್ನಡ ಜಿಲ್ಲೆ, ಬೆಳ್ತಂಗಡಿ ತಾಲ್ಲೂಕಿನ ಧರ್ಮಸ್ಥಳದಲ್ಲಿ ಹಲವು ವರ್ಷಗಳಿಂದ ಹೆಣ್ಣು ಮಕ್ಕಳ ಮೇಲೆ ಸರಣಿ ಅತ್ಯಾಚಾರ, ನಡೆದಿರುವ ಕೊಲೆಗಳು ಬೆಳಕಿಗೆ ಬಂದಿದ್ದು, ವೇದಾವತಿ, ಪದ್ಮಲತಾ, ಸೌಜನ್ಯ ಸೇರಿದಂತೆ 400 ಕ್ಕೂ ಹೆಚ್ಚು ಅಸಹಜ ರೀತಿಯಲ್ಲಿ ಸಾವಿಗೀಡಾಗಿರುವ ಹೆಣಗಳು ದೊರೆತಿರುವ ಬಗ್ಗೆ ಸಂಘಟನೆಗಳು, ಪ್ರಗತಿಪರರು ಹತ್ತಾರು ವರ್ಷಗಳಿಂದ ನ್ಯಾಯಕ್ಕಾಗಿ ಆಯಾ ಭಾಗದಲ್ಲಿ ಹೋರಾಟ ಮಾಡಿರುವುದು, ಜನಾಕ್ರೋಶ ವ್ಯಕ್ತವಾಗಿರುವುದನ್ನು ಕಾಣಬಹುದಾಗಿದೆ. ಇತ್ತೀಚಿಗೆ, ಒಬ್ಬ ವ್ಯಕ್ತಿ ಬಂದು ನಾನು ಧರ್ಮಸ್ಥಳ ಸಂಸ್ಥೆಯಲ್ಲಿ ಕೂಲಿ ಮಾಡುತ್ತಿದ್ದವನು. ಇಲ್ಲಿನ ಆಡಳಿತ ಮಂಡಳಿಯ ಕೆಲವರ ಆಜ್ಞೆಯಂತೆ, ಅತ್ಯಾಚಾರಕ್ಕೆ ಬಲಿಯಾಗಿದ್ದ ನೂರಾರು ಹೆಣ್ಣು ಮಕ್ಕಳ ದೇಹಗಳನ್ನು ಹೂತಿರುವುದಾಗಿ ದಕ್ಷಿಣ ಕನ್ನಡ ಜಿಲ್ಲಾ ಪೋಲಿಸ್ ಅಧೀಕ್ಷಕರಿಗೆ ದೂರು ನೀಡಿದ್ದಾರೆ.

ಮಹಿಳಾ ಆಯೋಗ, ಕಾಂಗ್ರೆಸ್ ಪಕ್ಷದ ಮಹಿಳಾ ಘಟಕ ಹಾಗೂ ಪ್ರಗತಿಪರ ವಕೀಲರು ಸದರಿ ಘಟನೆಗಳನ್ನು ಎಸ್.ಐ.ಟಿ ಗೆ ಒಪ್ಪಿಸಿ ಸೂಕ್ತ ತನಿಖೆ ನಡೆಸಿ ಕೊಲೆಗಡುಕರನ್ನು ಪತ್ತೆ ಹಚ್ಚಿ ಶಿಕ್ಷಿಸಬೇಕೆಂದು ಒತ್ತಾಯಿಸಿದ ಮೇರೆಗೆ ಸರ್ಕಾರ ಸದರಿ ಪ್ರಕರಣವನ್ನು ಎಸ್ಐಟಿ ತನಿಖೆಗೆ ವಹಿಸಿದೆ. ಆದ್ದರಿಂದ, ಈ ಘಟನೆಯು ಪ್ರಭಾವಿಗಳ ಮತ್ತು ಬಲಾಡ್ಯರ ಒತ್ತಡಕ್ಕೆ ಮುಚ್ಚಿ ಹೋಗುವ, ತನಿಖೆಯನ್ನು ದಿಕ್ಕು ತಪ್ಪಿಸುವ ಅನುಮಾನಗಳು ಇದ್ದು, ಯಾವುದೇ, ಮುಲಾಜಿಗೆ ಬಗ್ಗದೇ ಸರ್ಕಾರ ಪಾರದರ್ಶಕವಾಗಿ ತನಿಖೆ ನಡೆಸಬೇಕೆಂದು ಪ್ರತಿಭಟನಾಕರಾರು ಒತ್ತಾಯಿಸಿದರು.

ರಾಜ್ಯ ಸಮಿತಿ ಸದಸ್ಯರಾದ ಡಿ. ಎಸ್. ನಿರ್ವಾಣಪ್ಪ ಮಾತನಾಡಿ ” ಹಿಂದೆಯೂ, ಕೂಡ ಸೌಜನ್ಯಳ ಕೊಲೆಯನ್ನು ಖಂಡಿಸಿ ಕೊಲೆಗಡುಕರನ್ನು ಪತ್ತೆ ಹಚ್ಚುವಂತೆ ನಮ್ಮ ಸಂಘಟನೆ ಪ್ರತಿಭಟಿಸಿ ಸರ್ಕಾರಕ್ಕೆ ಒತ್ತಾಯಿಸಿತ್ತು. ಹಾಗೆಯೇ, ಈ ದಿನ ಕೂಡ ಧಮಸ್ಥಳದಲ್ಲಿ ನಡೆದಿದೆ ಎನ್ನಲಾದ ಘೋರ ಕೃತ್ಯಗಳನ್ನು ಎಸ್.ಐ.ಟಿ. ತನಿಖೆಯ ಮೂಲಕ ಪಾರದರ್ಶಕವಾಗಿ ನಡೆಸಿ ಆರೋಪಿಗಳಿಗೆ ಕಾನೂನು ರೀತ್ಯಾ ಶಿಕ್ಷೆಯನ್ನು ವಿಧಿಸಿ, ನೊಂದ ಕುಟುಂಬಗಳನ್ನು ಪತ್ತೆ ಮಾಡಿ ಸೂಕ್ತ ಪರಿಹಾರ ನೀಡಿ. ಸದರಿ ಧರ್ಮಸ್ಥಳದ ಮಂಜುನಾಥ ದೇವಸ್ಥಾನ, ಅಣ್ಣಪ್ಪ ದೇವಸ್ಥಾನಗಳನ್ನು ಸರ್ಕಾರ ಮುಜರಾಯಿ ಇಲಾಖೆ ಸುಪರ್ದಿಗೆ ವಹಿಸಿಕೊಳ್ಳಬೇಕು ” ಎಂದು ತಹಶೀಲ್ದಾರ್ ಕಿರಣ್ ಗೌರವ್ ಅವರಿಗೆ ಮನವಿ ಸಲ್ಲಿಸಿ ಸರ್ಕಾರಕ್ಕೆ ಕಳಿಸಿಕೋಡುವಂತೆ ಮನವಿ ಮಾಡುತಿದ್ದೇವೆ ಎಂದರು.

ಈ ಸುದ್ದಿ ಓದಿದ್ದೀರಾ? ಮೈಸೂರು | ಕರ್ತವ್ಯಲೋಪ; ಇನ್ಸ್ಪೆಕ್ಟರ್ ಲಕ್ಷ್ಮಿಕಾಂತ್ ತಳವಾರ್ ಅಮಾನತ್ತು

ಪ್ರತಿಭಟನೆಯಲ್ಲಿ ದಸಂಸ (ಭೀಮವಾದ ) ರಾಜ್ಯ ಸಂಘಟನಾ ಕಾರ್ಯದರ್ಶಿ ಕೆ. ಬಿ. ರಾಜು, ಜಿಲ್ಲಾ ಕಾರ್ಯದರ್ಶಿ ವೈ. ಎಂ. ಸುರೇಶ, ಹೆಚ್. ಜೆ. ಪ್ರಕಾಶ, ಮುತ್ತಣ್ಣ, ಜವರಯ್ಯ, ಜೆ ಎಂ ಸುರೇಶ, ಸಾವಿತ್ರಮ್ಮ, ಡಿ. ಎನ್. ನವೀನಾಕ್ಷಿ, ಮಾದೇವ್, ಹಾರಂಗಿ ಮಹೇಶ್ ಸೇರಿದಂತೆ ಇನ್ನಿತರರು ಇದ್ದರು.

ಹಕ್ಕೋತ್ತಾಯ:

  1. ಸರ್ಕಾರ ಮತ್ತು ಎಸ್.ಐ.ಟಿ. ಧರ್ಮಸ್ಥಳದಲ್ಲಿ ನಡೆದಿರುವ ಎಲ್ಲಾ ಪ್ರಕರಣಗಳನ್ನು ಪಾರದರ್ಶಕವಾಗಿ ತನಿಖೆ ನಡೆಸಿ ಕೊಲೆಗಡುಕರನ್ನು ಪತ್ತೆ ಹಚ್ಚಬೇಕು.
  2. ಧರ್ಮಸ್ಥಳದ ಸಂಸ್ಥೆಯ ಹೆಸರಿನಲ್ಲಿ ಅಕ್ರಮಿಸಿ ಕೊಂಡಿರುವ ಬಡವರ ಹಾಗೂ ಸರ್ಕಾರದ ಸಾವಿರಾರು ಎಕರೆ ಭೂಮಿಯನ್ನು ಸರ್ಕಾರ ಹಿಂಪಡೆದುಕೊಳ್ಳಬೇಕು.
  3. ಧರ್ಮಸ್ಥಳದಲ್ಲಿ ಅತ್ಯಾಚಾರಕ್ಕೆ ಒಳಗಾಗಿ ಕೊಲೆಯಾದ ಹೆಣ್ಣು ಮಕ್ಕಳ ಕುಟುಂಬಗಳನ್ನು ಪತ್ತೆಹಚ್ಚಿ ಸೂಕ್ತ ಪರಿಹಾರ ನೀಡಬೇಕು.
  4. ಧರ್ಮಸ್ಥಳದಲ್ಲಿನ ಅತ್ಯಾಚಾರ, ಕೊಲೆ, ಸುಲಿಗೆ, ಭೂಕಬಳಿಕೆ ನಡೆಸಿದವರನ್ನು ಬಂಧಿಸಿ ಕಾನೂನು ರೀತ್ಯಾ
    ಶಿಕ್ಷೆಗೆ ಗುರಿಪಡಿಸಬೇಕು.
eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚಿಕ್ಕಮಗಳೂರು l ಕಾಡುಕೋಣ ದಾಳಿ ವ್ಯಕ್ತಿ ಗಂಭೀರ

ಕಾಡುಕೋಣ ದಾಳಿಯಿಂದ ವ್ಯಕ್ತಿ ಗಂಭೀರ ಗಾಯವಾಗಿರುವ ಘಟನೆ ಚಿಕ್ಕಮಗಳೂರು ತಾಲೂಕಿನ ಬಾಳೂರು...

ರಾಯಚೂರು | ರಕ್ತಹೀನತೆ, ತಾಯಿ ಶಿಶು ಮರಣ ನಿಯಂತ್ರಣಕ್ಕೆ ಒತ್ತಾಯಿಸಿ ಮಹಿಳಾ ಒಕ್ಕೂಟ ಪ್ರತಿಭಟನೆ

ಕಲ್ಯಾಣ ಕರ್ನಾಟಕ ಭಾಗದಲ್ಲಿ ಅತಿ ಹೆಚ್ಚು ಮಹಿಳೆಯರಲ್ಲಿ ರಕ್ತ ಹೀನತೆ ಹಾಗೂ...

ಚಿಕ್ಕಮಗಳೂರು l ಗುಡ್ಡಹಳ್ಳದಲ್ಲಿ ಪುಂಡಾನೆ ಸೆರೆ; ಕಾರ್ಯಾಚರಣೆ ಯಶಸ್ವಿಗೊಳಿಸಿದ ಅರಣ್ಯ ಇಲಾಖೆ

ಸುಮಾರು ಒಂದುವರೆ ವರ್ಷಗಳಿಂದ ಬೀಡು ಬಿಟ್ಟಿದ್ದ, ಪುಂಡಾನೆ ಕೊನೆಗೂ ಸೆರೆಯಾಗಿರುವ ಘಟನೆ,...

ಚಿಕ್ಕಮಗಳೂರು l 1% ಮೀಸಲಾತಿಯನ್ನು ಕೂಡಲೇ ಜಾರಿ ಮಾಡಬೇಕು; ಎದ್ದೇಳು ಕರ್ನಾಟಕ

ಬದುಕಿನ್ನುದ್ದಕ್ಕೂ ಅಲೆಯುತ್ತಲೇ ಬದುಕಿದ ಅಲೆಮಾರಿ ಬಂಧುಗಳು ಇಂದು ನ್ಯಾಯ ಅರೆಸುತ್ತಾ ದೆಹಲಿಗೆ...

Download Eedina App Android / iOS

X