ಕೃಷಿ ತರಬೇತಿಯ ಮೂಲಕ ರೈತರು ಕೃಷಿಯನ್ನು ಕೇವಲ ಜೀವನೋಪಾಯವಲ್ಲದೆ, ಸರಿಯಾದ ಜ್ಞಾನ, ಯೋಜನೆ ಮತ್ತು ತಂತ್ರಜ್ಞಾನ ಬಳಸಿ ಅತ್ಯಂತ ಲಾಭದಾಯಕ ಉದ್ಯಮವಾಗಿ ರೂಪಿಸಿಕೊಳ್ಳಬಹುದು ಎಂದು ಧಾರವಾಡ ಜಿಲ್ಲಾ ಕೃಷಿ ತರಬೇತಿ ಕೇಂದ್ರದ ಸಹಾಯಕ ಕೃಷಿ ನಿರ್ದೇಶಕಿ ಎಸ್ ಮಳಿಮಠ ಹೇಳಿದರು.
ಧಾರವಾಡ ಜಿಲ್ಲೆಯ ರೈತರಿಗೆ ಜಿಲ್ಲಾ ಕೃಷಿ ತರಬೇತಿ ಕೇಂದ್ರದಿಂದ ಆಯೋಜಿಸಿದ್ದ ಮೂರು ದಿನಗಳ ತರಬೇತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
“ವೈಜ್ಞಾನಿಕ ಕೃಷಿ ಪದ್ಧತಿ(ಮಣ್ಣಿನಪರೀಕ್ಷೆ, ಡ್ರಿಪ್, ಸ್ಪ್ರಿಂಕ್ಲತ್ ತಂತ್ರಜ್ಞಾನ), ವೈವಿಧ್ಯಮಯ ಬೆಳೆಗಾರಿಕೆ(ಹಣ್ಣು, ತರಕಾರಿ, ಮಸಾಲೆ, ಹೂಗಳು, ಔಷಧಿಗಿಡಗಳು, ಪಶುಪಾಲನೆ ಹಾಗೂ ಕೃಷಿಪೂರಕ ಉದ್ಯಮಗಳು(ಹಾಲು, ಜೇನು, ಕೋಳಿ, ಮತ್ಸ್ಯ ಸಾಕಾಣಿಕೆ), ಸೇರ್ಪಡೆ ಮೌಲ್ಯ ಮೂಲಕ ಹೆಚ್ಚುವರಿ ಆದಾಯ, ರೈತರಿಂದ ನೇರವಾಗಿ ಗ್ರಾಹಕರಿಗೆ ಮಾರಾಟ, ಸಾವಯವ ಕೃಷಿಯ ಮಹತ್ವ, ಸರ್ಕಾರಿ ಯೋಜನೆಗಳ ಸದುಪಯೋಗ, ಕೃಷಿ ಉಪಕರಣ ಸಹಾಯಧನ ಮುಂತಾದವು). ಹೀಗೆ ಕೃಷಿ ಲಾಭದಾಯಕ ಉದ್ಯಮವಾಗಿದೆ” ಎಂದರು.
ಈ ಸುದ್ದಿ ಓದಿದ್ದೀರಾ? ಶಿಡ್ಲಘಟ್ಟ | ಏನಿಗಿದಲೆ ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಕಟ್ಟಡ ಉದ್ಘಾಟನೆ
ಕಾರ್ಯಕ್ರಮದಲ್ಲಿ ಡಾ.ಸಂತೋಷ ಒಂಟಿ ಅವರು ವೈಜ್ಞಾನಿಕ ಕೃಷಿ ಪದ್ಧತಿ, ಇಂದುಧರ ಹಿರೇಮಠ- ಸಮಗ್ರ ಕೃಷಿ ಪದ್ಧತಿ ಮತ್ತು ಮಣ್ಣು ಆರೋಗ್ಯ, ಡಾ. ಎಸ್ ಎ ಬಿರಾದಾರ್ ಅವರು ಸಾವಯವ ಕೃಷಿ ಮತ್ತು ಮಾರುಕಟ್ಟೆ ತಂತ್ರಜ್ಞಾನ, ಎಮ್ ವಿ ಪಾಟೀಲ್ ಅವರು ಸಾವಯವ ಕೃಷಿ ಅಳವಡಿಸಿ ಯಶಸ್ಸು ಕಂಡ ರೈತರ ಅನುಭವ ಹಂಚಿಕೆ, ಡಾ. ಐರಾದೇವಿ ಅಂಗಡಿ ಅವರು ಅಣಬೆ ಕೃಷಿ ಮತ್ತು ಜಗದೀಶ ಬಾಳಿಕಾಯಿ ಅವರು ಜೇನು ಕೃಷಿ, ಡಾ. ಪ್ರಕಾಶ ಅವರು ಜೈವಿಕ ವಿಧಾನದಿಂದ ಕೀಟ ನಿರ್ವಹಣೆ, ಆರ್ ಬಿ ಹಿರೇಮಠ ಅವರು ವೈವಿಧ್ಯಮಯ ಬೆಳೆಗಾರಿಕೆ ಕುರಿತು ಮತ್ತು ಸರ್ಕಾರಿ ಯೋಜನೆಗಳ ಸದುಪಯೋಗ ಕುರಿತು ಉಪನ್ಯಾಸ ನೀಡಿದರು.