ಮಾಜಿ ಸೈನಿಕರೊಬ್ಬರನ್ನು ಪೊಲೀಸರು ನಡೆಸಿದ್ದ ಹಲ್ಲೆ ಪ್ರಕರಣವು ಸೆ. 28ರಂದು ಧಾರವಾಡದ ಸಪ್ತಾಪುರದಲ್ಲಿ ನಡೆದಿತ್ತು. ಆ ಹಿನ್ನೆಲೆಯಲ್ಲಿ ಪೊಲೀಸ್ ಸಿಬ್ಬಂದಿ ಇಬ್ಬರನ್ನು ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.
ರಾತ್ರಿ ಪೆಟ್ರೊಲಿಂಗ್ ಕರ್ತವ್ಯಕ್ಕೆ ನೇಮಿಸಿದ್ದ ಅಧಿಕಾರಿ ಸಿಬ್ಬಂದಿಗಳು ಹೋಟೆಲ್ ಒಂದರ ಮಾಲೀಕರೊಂದಿಗೆ (ಮಾಜಿ ಸೈನಿಕ) ಗಲಾಟೆ ಮಾಡಿಕೊಂಡಿದ್ದರು. ಘಟನೆಗೆ ಸಂಬಂಧಪಟ್ಟಂತೆ ಧಾರವಾಡ ಉಪನಗರ ಪೊಲೀಸ್ ಠಾಣೆಯ ಎಎಸ್ಐ ವಿದ್ಯಾನಂದ ಸುಬೇದಾರ್ ಮತ್ತು ಸಿಬ್ಬಂದಿ ರಾಜಪ್ಪ ಕಣಬೂರ್ ಅಮಾನತಿಗೆ ಒಳಗಾದವರು ಎನ್ನಲಾಗಿದೆ.
ಈ ಸುದ್ಧಿ ಓದಿದ್ದೀರಾ? ಧಾರವಾಡ | ಮಾಜಿ ಸೈನಿಕನ ಮೇಲೆ ಪೊಲೀಸರಿಂದ ಹಲ್ಲೆ; ಹಫ್ತಾ ನೀಡದ್ದಕ್ಕೆ ಥಳಿಸಿದ್ದಾರೆ ಎಂದು ಆರೋಪ
ಪೊಲೀಸರಿಗೆ ಹಫ್ತಾ ನೀಡದೇ ಇದ್ದಿದ್ದಕ್ಕೆ ಹೋಟೆಲ್ ಮಾಲೀಕರಿಗೆ ಹಿಗ್ಗಾಮುಗ್ಗಾ ಥಳಿಸಿದ್ದರು ಎಂದು ತಿಳಿದುಬಂದಿದ್ದು, ಉಪನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿತ್ತು.