ಧಾರವಾಡದ ಸಪ್ತಾಪುರದಲ್ಲಿ ಪಿಜಿ ಮತ್ತು ಮೆಸ್ ನಡೆಸುತ್ತಿದ್ದ ಸೇನೆಯಿಂದ ನಿವೃತ್ತಿ ಹೊಂದಿದ್ದ ಸೈನಿಕರೊಬ್ಬರ ಮೇಲೆ ಪೊಲೀಸರು ಹಿಗ್ಗಾಮುಗ್ಗಾ ಥಳಿಸಿದ ಘಟನೆ ಬೆಳಕಿಗೆ ಬಂದಿದೆ.
ರಾಮಪ್ಪ ನಿಪ್ಪಾಣಿ ಎಂಬುವವರೇ ಹಲ್ಲೆಗೊಳಗಾದ ಮಾಜಿ ಸೈನಿಕರಾಗಿದ್ದು, ಕಡಿಮೆ ದರದಲ್ಲಿ ಊಟ, ವಸತಿ ಕೊಡುತ್ತಿದ್ದರು ಎನ್ನಲಾಗಿದೆ. ಅವರ ಮೇಲೆ ಸೆ. 28ರ ರಾತ್ರಿ ದಾಳಿ ಮಾಡಿದ್ದು, ರಾತ್ರಿ 11 ಗಂಟೆಗೆ ಸಪ್ತಾಪುರ ಬಾವಿ ಬಳಿ ಇರುವ ಸೈನಿಕ್ ಮೆಸ್ಗೆ ಆಗಮಿಸಿದ್ದ ಧಾರವಾಡ ಉಪನಗರ ಠಾಣೆಯ ಪೊಲೀಸರು ಮೆಸ್ ಗೇಟ್ ಹಾಕುವಂತೆ ರಾಮಪ್ಪಗೆ ಹೇಳಿದ್ದಾರೆ. ಇನ್ನೂ ನಾಲ್ಕೈದು ವಿದ್ಯಾರ್ಥಿಗಳು ಊಟಕ್ಕೆ ಬರುವವರಿದ್ದಾರೆ ಸರ್ ಎಂದು ರಾಮಪ್ಪ ಕೇಳಿಕೊಂಡಿದ್ದಾರೆ.
ಈ ಸುದ್ಧಿ ಓದಿದ್ದೀರಾ? ಧಾರವಾಡ | ಆರೋಗ್ಯವೇ ಅಮೂಲ್ಯ ರತ್ನ; ಸ್ವಚ್ಛತೆಯೇ ಅದರ ಕವಚ: ಡಾ.ಜಮೀರಾ.
ಈ ಸಮಯದಲ್ಲಿ ರಾಮಪ್ಪ ನಿಪ್ಪಾಣಿ ಮೇಲೆ ಎಂಟರಿಂದ ಹತ್ತು ಜನ ಪೊಲೀಸರು ಹಪ್ತಾ ಕೊಡದೇ ಇದ್ದಿದ್ದಕ್ಕೆ ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಹೆಲ್ಮೆಟ್ ಸೇರಿದಂತೆ ಅನೇಕ ವಸ್ತುಗಳಿಂದ ಹಿಗ್ಗಾಮುಗ್ಗಾ ಥಳಿಸಿದ್ದಲ್ಲದೇ, ಮೆಸ್ನಲ್ಲಿ ಕೆಲಸ ಮಾಡುತ್ತಿದ್ದ ಹುಡುಗರಿಗೆ ಕೂಡಾ ಥಳಿಸಿದ್ದಾರೆ. ಮೆಸ್ನಲ್ಲಿರುವ ಟೇಬಲ್, ಕುರ್ಚಿಗಳನ್ನು ಮುರಿದು, ಸಿಸಿಟಿವಿ ಫುಟೇಜ್, ಮೊಬೈಲ್ಗಳನ್ನು ತಗೆದುಕೊಂಡು ಹೋಗಿದ್ದಾರೆ ಎಂದು ಆರೋಪಿಸಿದ್ದಾರೆ.