ಮಹಿಳೆಯು ಆರೋಗ್ಯವಾಗಿರಬೇಕೆಂದರೆ ಸ್ವಚ್ಛತೆ ಅತಿ ಮುಖ್ಯವಾಗಿದೆ. ಮುಖ್ಯವಾಗಿ ಮಾಸಿಕ ಸ್ವಚ್ಛತೆ ಕುರಿತು ವಿಶೇಷ ಜಾಗೃತಿ ಅವಶ್ಯವಾಗಿದೆ ಎಂದು ಅಂಜುಮನ್ ಮಹಾವಿದ್ಯಾಲಯದಲ್ಲಿ ಮಹಿಳಾ ಸಬಲೀಕರಣ ಕೋಶ ಹಾಗೂ ಎನ್ಎಸ್ಎಸ್ ಘಟಕ, ಮತ್ತು ಟ್ರೂ ಲೈಫ್ ಫೌಂಡೇಶನ್ ಸಹಯೋಗದಲ್ಲಿ ಮಹಿಳಾ ಆರೋಗ್ಯ ಮತ್ತು ಸ್ವಚ್ಛತೆ ಕುರಿತು ಜಾಗೃತಿ ಕಾರ್ಯಕ್ರಮಮದಲ್ಲಿ ಸ್ತ್ರೀರೋಗ ತಜ್ಞೆ ಡಾ. ಜಮೀರಾ ಮಾತನಾಡಿ ತಿಳಿಸಿದರು.
ಅಶುದ್ಧತೆಯಿಂದ ಕ್ಯಾನ್ಸರ್‌ಗಳಂತಹ ಗಂಭೀರ ರೋಗಗಳಿಗೆ ಮಹಿಳೆ ಬಲಿಯಾಗುತ್ತಿದ್ದಾಳೆ. ಈ ಕುರಿತು ಜಾಗೃತ ವಹಿಸಿ ಆರೋಗ್ಯವೇ ಅಮೂಲ್ಯ ರತ್ನ ಮತ್ತು ಸ್ವಚ್ಛತೆಯೇ ಅದರ ಕವಚವೆಂಬ ಸತ್ಯ ಅರಿಯಬೇಕಿದೆ. ಕಾಯಿಲೆ ಬಂದಾಗ ಗುಣಪಡಿಸುವ ಪ್ರಯತ್ನ ಮಾಡುವುದಕ್ಕಿಂತ ಕಾಯಿಲೆ ಬರುವ ಮೊದಲೇ ಜಾಗೃತ ವಹಿಸುವುದು ಮುಖ್ಯವೆಂದು ತಿಳಿಸಿದರು.
ಟ್ರೂ ಲೈಫ್ ಫೌಂಡೇಶನ್ ಅಧ್ಯಕ್ಷ ಡಾ. ಅಲ್ಲಾಹುದ್ದೀನ್ ಶೇಕ್ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಮಾತನಾಡಿ, ಮಹಿಳೆ ಆರೋಗ್ಯದ ಬಗ್ಗೆ ಕಾಳಜಿ ವಹಿಸದೇ ಇರುವುದರಿಂದ ಕ್ಯಾನ್ಸರ್ ಗಳಂತಹ ವಿಭಿನ್ನ ಕಾಯಿಲೆಗಳಿಂದ ಬಳಲುತ್ತಿರುವು್ಉ ಎದ್ದುಕಾಣುತ್ತದೆ. ಅದಕ್ಕಾಗಿ ಆರೋಗ್ಯದ ಕಾಳಜಿ ಮತ್ತು ಶುಚಿತ್ವ ಅತ್ಯವಶ್ಯ ಎಂದರು. ಡಾ. ಮೆಹರ್ ಅಫರೋಜ್ ಕಾಟೇವಾಡಿ ಮಾತನಾಡಿ, ಮಹಿಳಾ ಆರೋಗ್ಯದ ಸುಚಿತ್ವ ಕುರಿತು ಮುಕ್ತ ಚರ್ಚೆಯ ಮೂಲಕ ಜ್ಞಾನ ಒದಗಿಸುವ ಅವಶ್ಯಕತೆ ಇದೆ . ಇಂಥ ಜಾಗೃತಿ ಕಾರ್ಯಕ್ರಮಗಳು ಹೆಚ್ಚು ಹೆಚ್ಚಾಗಿ ಏರ್ಪಡಿಸಬೇಕೆಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಹಿರಿಯ ಪ್ರಾಧ್ಯಾಪಕ ಡಾ. ಅಸ್ಮನಾಸ್ ಬಳ್ಳಾರಿ ಮಾತನಾಡಿ, ಸ್ವಚ್ಛತೆಯ ಕೊರತೆಯ ಅನೇಕ ರೋಗಗಳಿಗೆ ಕಾರಣ ಅದಕ್ಕಾಗಿ ಆರೋಗ್ಯಕರ ಹವ್ಯಾಸ ಅತ್ಯವಶ್ಯ. ಪ್ರತಿ ಮಹಿಳೆಯಲ್ಲಿ ಆತ್ಮವಿಶ್ವಾಸ ಮತ್ತು ಆತ್ಮ ಗೌರವ ಬೆಳೆಸಿಕೊಳ್ಳುವುದು ಅತ್ಯವಶ್ಯ ಎಂದು ತಿಳಿಸಿದರು.
ಈ ಸುದ್ಧಿ ಓದಿದ್ದೀರಾ? ಧಾರವಾಡ | ಸ್ಪರ್ಧಾತ್ಮಕ ಪರೀಕ್ಷಾರ್ಥಿಗಳಿಗೆ ವಿಶೇಷ ಕಾರ್ಯಾಗಾರ; 5 ಸಾವಿರ ವಿದ್ಯಾರ್ಥಿಗಳು ಭಾಗಿ
ಕಾರ್ಯಕ್ರಮದಲ್ಲಿ ಪ್ರಾಚಾರ್ಯ ಡಾ. ಐ ಎ ಮುಲ್ಲಾ, ಐ.ಕ್ಯೂ ಎ.ಸಿ ಸಂಯೋಜಕ ಡಾ. ಏನ್ ಬಿ ನಲತವಾಡ, ಸಿಬ್ಬಂದಿ ಕಾರ್ಯದರ್ಶಿ ಡಾ. ಬಿಬಿ ಆಯಿಷಾ ಚಕೋಲಿ ಉಪಸ್ಥಿತರಿದ್ದರು. ಮಹಿಳಾ ಸಬಲೀಕರಣ ಸಮಿತಿಯ ಅಧ್ಯಕ್ಷೆ ಶ್ರುತಿ ಯಾವಗಲಮಠ ವಂದಿಸಿದರು. ಎನ್ಎಸ್ಎಸ್ ಅಧಿಕಾರಿ ಡಾ. ಸೈಯದ್ ತಾಜುನ್ನಿಸಾ, ಸ್ವಾಗತಿಸಿದರು. ಕಾಲೇಜು ಸಾಂಸ್ಕೃತಿಕ ಚಟುವಟಿಕೆಗಳ ಅಧ್ಯಕ್ಷೆ ಡಾ. ಸೌಭಾಗ್ಯ ಕೆ ಜಾದವ್ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮ ಪ್ರಾರಂಭದಲ್ಲಿ ಕುಮಾರಿ ಸಬಿಹಾ ಕಾಜಿ ಕುರಹಾನ್ ಪಠಿಸಿದರು. ಕುಮಾರಿ ಮಾಬುನ್ನಿ ದಫೆದರ್ ಶ್ಲೋಕ ಪಠಿಸಿದರು.