ಧಾರವಾಡ | ವಾಣಿಜ್ಯದೊಂದಿಗೆ ಆಡಳಿತ ಸಮರ್ಥವಾಗಿದ್ದರೆ ಅಭಿವೃದ್ದಿಗೆ ಒಂದು ದೊಡ್ಡ ಶಕ್ತಿ: ಪ್ರೊ. ಸೊಲ್ಲಾಪೂರ

Date:

ವಾಣಿಜ್ಯದ ಜೋತೆಗೆ ಆಡಳಿತ ಸಮರ್ಥವಾಗಿದ್ದರೆ ಅಭಿವೃದ್ದಿಗೆ ಒಂದು ದೊಡ್ಡ ಶಕ್ತಿ ಬಂದಂತಾಗುತ್ತದೆ. ವ್ಯಾಪಾರ ರಾಷ್ಟ್ರದ ಪ್ರಗತಿಯ ಜೀವನಾಡಿ. ನಾಗರೀಕತೆಯ ಉದಯದೊಂದಿಗೆ ವ್ಯಾಪಾರವು ಬೆಳೆದು ಬಂದಿದೆ ಎಂದು ತುಮಕೂರಿನ ತಾಂತ್ರಿಕ ಮಹಾವಿದ್ಯಾಲಯದ ಸ್ನಾತಕೋತ್ತರ ಕೇಂದ್ರದ ನಿರ್ದೇಶಕ ಪ್ರೊ. ಎಂ. ಆರ್. ಸೊಲ್ಲಾಪೂರ ಅಭಿಪ್ರಾಯಪಟ್ಟರು.

- Advertisement -

ಕರ್ನಾಟಕ ವಿದ್ಯಾವರ್ಧಕ ಸಂಘದ “ವಾಣಿಜ್ಯ ಮತ್ತು ಆಡಳಿತ ಮಂಟಪ”ದ ಪ್ರಸಕ್ತ ತ್ರೈವಾರ್ಷಿಕ ಅವಧಿಯ ಕಾರ್ಯಚಟುವಟಿಕೆ ಕಾರ್ಯಕ್ರಮವನ್ನು ಉದ್ಘಾಟಿಸಿ, ಮಾತನಾಡಿದ ಅವರು, ಒಂದು ರೀತಿ ನಮ್ಮ ಇಡೀ ಬದಕೇ ವಾಣಿಜ್ಯ. ಉಪಯೋಗಿಸುವ ಎಲ್ಲಾ ವಸ್ತುಗಳು ವಾಣಿಜ್ಯದಿಂದಲೇ ಉತ್ಪಾದನೇಯಾದಂತವುಗಳಾಗಿವೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಮೋದಿ ಆಡಳಿತದಲ್ಲಿ ಮಾಹಿತಿ ಹಕ್ಕು ಕಾಯ್ದೆಯ ‘ಸ್ಥಿತಿ’ ಹೇಗಿದೆ?...

ಯಾವುದೇ ಸರ್ಕಾರ ಆಡಳಿತದಲ್ಲಿರಲಿ ಪ್ರಜಾಸತ್ತಾತ್ಮಕ ವ್ಯವಸ್ಥೆಯನ್ನು ಕಾಪಾಡಬೇಕಾದ ಸಂಸ್ಥೆಗಳ ಸ್ವಾಯತ್ತತೆ ಉಳಿಯಬೇಕು. ಅವು ಪಾರದರ್ಶಕವಾಗಿರಬೇಕು. ಪ್ರಜಾಸತ್ತೆಯ ಕಾರ್ಯವೈಖರಿಯನ್ನು ಕುರಿತಂತೆ ಮುಕ್ತ ಚರ್ಚೆ ನಡೆಯುತ್ತಿರಬೇಕು. ಇದು ಸಕ್ರಿಯ, ಅರ್ಥಪೂರ್ಣ ಪ್ರಜಾಸತ್ತೆಯ ಕನಿಷ್ಠ ಅವಶ್ಯಕತೆ. ಹಾಗಾಗಿ...

ಬಂಗಾಳ ವಿಭಜನೆ | ವಿಭಜನೆಯ ವಿಷಬೀಜದಿಂದ ಒಗ್ಗಟ್ಟಿನ ಜ್ಯೋತಿ...

ಬ್ರಿಟಿಷರ 'ಒಡೆದು ಆಳುವ ನೀತಿ'ಯ ಭಾಗವಾಗಿ 1905ರ ಅಕ್ಟೋಬರ್‌ನಲ್ಲಿ ಜಾರಿಗೆ ಬಂದ ಬಂಗಾಳ ವಿಭಜನೆಯು ಭಾರತೀಯರ ರಾಷ್ಟ್ರೀಯತೆಯನ್ನು ಒಡೆಯುವ ಕುತಂತ್ರವಾಗಿತ್ತು. ಇದಕ್ಕೆ ಪ್ರತಿಯಾಗಿ ಭಾರತೀಯರು 'ರಾಷ್ಟ್ರೀಯ ಶೋಕ ದಿನ' ಆಚರಿಸಿ, ಪರಸ್ಪರ ರಾಖಿ...

ನಟ ಇಮ್ರಾನ್ ಖಾನ್ ಪ್ರತಿಭಟಿಸಿದರೆ ಗಡಿಪಾರು; ಟ್ರಂಪ್ ಪರ...

ಕಾನೂನು ಮತ್ತು ರಾಜತಾಂತ್ರಿಕ ನಿಯಮಗಳು ಎಲ್ಲರಿಗೂ ಒಂದೇ ಆಗಿರಬೇಕು ಹೊರತು ಪ್ರಧಾನಿ ಮೋದಿಯವರ ರಾಜಕೀಯ ಅನುಕೂಲಕ್ಕೆ ತಕ್ಕಂತೆ ಬದಲಾಗಬಾರದು. ವಿದೇಶಿ ಪ್ರಜೆಯೊಬ್ಬ ಭಾರತದ ನೆಲದಲ್ಲಿ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವುದು ತಪ್ಪು ಎನ್ನುವುದಾದರೆ, ಭಾರತದ ಪ್ರಧಾನಿಯೊಬ್ಬರು...

ಕರ್ನಾಟಕ ವಿದ್ಯಾವರ್ಧಕ ಸಂಘವು ಸಾಹಿತ್ಯಿಕ ಚಟುವಟಿಕೆಯ ಜೊತೆಗೆ ವಾಣಿಜ್ಯ ಹಾಗೂ ಆಡಳಿತ ಮಂಟಪ ಸ್ಥಾಪಿಸಿರುವುದು ಶ್ಲಾಘನೀಯ. ಇಂತಹ ಕಾರ್ಯಕ್ರಮಗಳು ಸ್ಥಳಿಯ ಮಟ್ಟದಲ್ಲಿ ಸಣ್ಣ ವ್ಯಾಪರಿಗಳಿಗೆ, ಉದ್ಯಮಿಗಳಿಗೆ ಆಯೋಜಿಸಿ, ಚಿಂತನ ಮಂಥನ ನಡೆಯುವಂತಾಗಬೇಕು. ಮಾನವೀಯ ಮುಖದ ಆಡಳಿತ ಸಿದ್ಧಾಂತ ಈ ಮಂಟಪದ ಮೂಲಕ ಜರುಗುವಂತಾಗಬೇಕು ಎಂದು ಹೇಳಿದರು.

ಕರ್ನಾಟಕ ವಿಶ್ವವಿದ್ಯಾಲಯದ ಕೌಸಾಳಿ ವ್ಯವಹಾರ ಅಧ್ಯಯನ ಸಂಸ್ಥೆಯ ಡೀನ್ ಪ್ರೊ. ಎನ್ ರಾಮಾಂಜನೇಯಲು ಮಾತನಾಡಿ, ವ್ಯಾಪಾರ ದೇಶದ ಅಭಿವೃದ್ದಿಯಲ್ಲಿ ಕೃಷಿಯಂತೇ ಪ್ರಮುಖ ಸ್ಥಾನ ಪಡೆದಿದೆ. ಒಂದು ಕಾಲಕ್ಕೆ ವ್ಯಾಪಾರ ಎಂದರೆ ನಕಾರಾತ್ಮಕ ಭಾವನೆ ಇತ್ತು ವ್ಯಾಪಾರದ ಬಗ್ಗೆ ಇರುವ ತಪ್ಪು ಕಲ್ಪನೆ ನಿವಾರಣೆಯಾಗಬೇಕು. ವ್ಯಾಪಾರವು ಇಂದು ಜನರ ಬೇಡಿಕೆಗಳಿಗೆ ತಕ್ಕಂತೆ ಸರಕು ಹಾಗೂ ಸೇವೆ ಪೊರೈಸುವುದಾಗಿದೆ. ಭಾರತದಲ್ಲಿ ಕೃಷಿ ಕ್ಷೇತ್ರದಿಂದ ಬರುವ ಆದಾಯ ಕಡಿಮೆ ಇದ್ದು, ವ್ಯಾಪಾರದಿಂದಲೇ ಅಧಿಕ ವರಮಾನ ಬರುತ್ತಿದೆ. ಜಾಗತೀಕರಣದ ಪ್ರಭಾವದಿಂದ ಇಂದು ಇಡೀ ವಿಶ್ವವೇ ಒಂದು ಮಾರಕಟ್ಟೆಯಾಗಿದ್ದು, ಬ್ಯಾಂಕಿಂಗ, ಆರೋಗ್ಯ, ಶಿಕ್ಷಣ ನಮ್ಮ ಆಚಾರ ವಿಚಾರ ಸಂಸ್ಕೃತಿಯಲ್ಲೂ ವಾಣಿಜ್ಯವಿದೆ ಎಂದು ವ್ಯಾಪಾರ, ವಾಣಿಜ್ಯ ಅಭಿವೃದ್ಧಿ ಕುರಿತು ಉಪನ್ಯಾಸ ನೀಡಿದರು.

ದೇಶದ ಸರ್ವಾಂಗೀಣ ಅಭಿವೃದ್ದಿಯಾಗಬೇಕಾದರೆ ಶೋಷಣೆ ಮುಕ್ತ ಸಮಾಜ ನರ‍್ಮಾಣವಾಗಬೇಕು. ಕೋಟಿ ಕೋಟಿ ದುಡಿಯುವ ವರ್ಗಕ್ಕೆ ಉದ್ಯೋಗ ಸಿಗಬೇಕು ಸಂಪತ್ತಿನ ಸಮಾನ ಹಂಚಿಕೆಯಾಗಬೇಕು. ರೈತರ ಉತ್ಪಾದನೆಗಳಿಗೆ ಮೌಲ್ಯ ವರ್ಧನೆಯಾಗಬೇಕು. ಮಕ್ಕಳಿಗೆ ಗುಣಾತ್ಮಕ ಶಿಕ್ಷಣ, ಆರೋಗ್ಯ ದೊರೆಯುವಂತಾಗಬೇಕು. ವ್ಯಾಪಾರದಿಂದ ಮಾತ್ರ ಉತ್ತಮ ದೇಶದ ಅಭಿವೃದ್ದಿ ಸಾಧ್ಯ. ಸುಸ್ಥಿರ ಅಭಿವೃದ್ದಿಯಿಂದ ಭವಿಷ್ಯದ ಪೀಳಿಗೆಗೆ ನಮ್ಮ ಸಂಪನ್ಮೂಲಗಳು ಲಭ್ಯವಾಗಬೇಕು ಎಂದು ಅಭಿಪ್ರಾಯಪಟ್ಟರು.

ಅಧ್ಯಕ್ಷತೆ ವಹಿಸಿದ್ದ ಬಸವಪ್ರಭು ಹೊಸಕೇರಿ ಮಾತನಾಡಿ, ವಾಣಿಜ್ಯ ಮತ್ತು ಆಡಳಿತ ಮಂಟಪವನ್ನು ನಮ್ಮ ಸಂಘವು ದೂರದೃಷ್ಠಿಯ ಸುಸ್ಥಿರ ಚಿಂತನೆಯಿಂದ ರಚಿಸಿದೆ. ದೇಶದ ಅಭಿವೃದ್ದಿ ಸೂಚಕದಲ್ಲಿ ಮನೆ ಕೆಲಸದ ಸ್ತ್ರೀಯರನ್ನು ಪರಿಗಣಿಸದೇ ಇರುವುದು ವಿಪರ್ಯಾಸ. ಇಂದು ಸ್ಮಾರ್ಟ ಬಜಾರಗಳು ಬಂದು ಸಣ್ಣ ವ್ಯಾಪಾರಿಗಳ ಬದುಕು ಚಿಂತಾಜನಕಸ್ಥಿತಿಗೆ ಬಂದಿದೆ. ವ್ಯಾಪಾರದಲ್ಲಿ ನೀತಿ ಮುಖ್ಯ ಎಂದು ಗಾಂಧಿಜಿ ತನ್ನ ಸಪ್ತಪಾತಕದಲ್ಲಿ ಹೇಳಿದ್ದು ಸತ್ಯವಿದೆ ಎಂದು ಹೇಳಿದರು.

ಇದನ್ನೂ ಓದಿ ಹುಬ್ಬಳ್ಳಿ | ಇಮ್ಮಡಿ ಪುಲಕೇಶಿ ಪ್ರತಿಮೆಯ ಸ್ಥಾಪನೆಗೆ ಕನ್ನಡ ಬಳಗ ಒತ್ತಾಯ

ಸಿದ್ಧರಾಮ ಹಿಪ್ಪರಗಿ ಸ್ವಾಗತಿಸಿದರು. ವಾಣಿಜ್ಯ ಮತ್ತು ಆಡಳಿತ ಮಂಟಪದ ಸಂಚಾಲಕ ಡಾ. ಧನವಂತ ಹಾಜವಗೋಳ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ. ಪತ್ರೆಮ್ಮ ಧಾರವಾಡ ನಿರೂಪಿಸಿದರು. ಶಂಕ್ರಮ್ಮ ಹೂಲಿಕಟ್ಟಿ ವಂದಿಸಿದರು. ಕಾರ್ಯಕ್ರಮದಲ್ಲಿ ಶಂಕರ ಹಲಗತ್ತಿ, ಸತೀಶ ತುರಮರಿ, ಶಂಕರ ಕುಂಬಿ, ಶಿವಾನಂದ ಭಾವಿಕಟ್ಟಿ, ವೀರಣ್ಣ ಒಡ್ಡೀನ, ಡಾ. ಜೀನದತ್ತ ಅ. ಹಡಗಲಿ, ಡಾ. ಶೈಲಜಾ ತ. ಅಮರಶೆಟ್ಟಿ, ಪ್ರೊ. ಶಶಿಧರ ತೋಡಕರ, ಶ್ರೀನಿವಾಸ ವಾಡಪ್ಪಿ, ಸುರೇಶ ನಾಯಕ, ಡಾ. ಬಾಳಪ್ಪ ಚಿನಗುಡಿ, ಡಾ. ಅರುಣ ಕಲ್ಲೋಳಿಕರ, ಸರಸ್ವತಿ ಪೂಜಾರ, ಡಾ. ಅರುಣಾ ಹಳ್ಳಿಕೇರಿ ಮತ್ತು ಮಂಟಪದ ಸಲಹಾ ಸಮಿತಿ ಸದಸ್ಯರು ಸೇರಿದಂತೆ ಮುಂತಾದವರಿದ್ದರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಉಡುಪಿ | ಕಾರ್ಮಿಕರು ಹಕ್ಕು ಮತ್ತು ಸೌಲಭ್ಯಗಳಿಂದ ವಂಚಿತರಾಗದಂತೆ ನೋಡಿಕೊಳ್ಳಿ: ಟಿ.ಎಂ. ಶಾಹಿದ್ ತೆಕ್ಕಿಲ್

ಕಾರ್ಮಿಕರ ಹಿತಾಸಕ್ತಿಯನ್ನು ಕಾಪಾಡುವುದರೊಂದಿಗೆ ಸರ್ಕಾರದ ಕಲ್ಯಾಣ ಕಾರ್ಯಕ್ರಮಗಳು ಅರ್ಹ ಫಲಾನುಭವಿಗಳಿಗೆ ತಲುಪುವಂತೆ...

ಬಾಗೇಪಲ್ಲಿಯಲ್ಲಿ ರಸ್ತೆ ಅಪಘಾತ:ರೈತ ನಂಜಪ್ಪ ಸಾವು

ಕೆಎಸ್‌ಆರ್‌ಟಿಸಿ ಬಸ್ ಡಿಕ್ಕಿ ಹೊಡೆದು ದ್ವಿಚಕ್ರ ವಾಹನದಲ್ಲಿ ಹೊಲಕ್ಕೆ ತೆರಳುತ್ತಿದ್ದ ನಡಂಪಲ್ಲಿ...

ಮಂಗಳೂರು | ಕೊಳ್ತಮಜಲು ರಹ್ಮಾನ್ ಹತ್ಯೆ ಪ್ರಕರಣ: ಆರೋಪಿಗಳ ಜಾಮೀನು ರದ್ದುಪಡಿಸಿದ ಸುಪ್ರೀಂ ಕೋರ್ಟ್

ಕೊಳ್ತಮಜಲು ರಹ್ಮಾನ್ ಹತ್ಯೆ ಪ್ರಕರಣದಲ್ಲಿ ಆರೋಪಿಗಳಿಗೆ ಇತ್ತೀಚೆಗೆ ನ್ಯಾಯಾಲಯ ಜಾಮೀನು ನೀಡಿತ್ತು....

ಕೋಲಾರ | ಚೈನಾ ಶಾಂಘೈನಲ್ಲಿ ಕನ್ನಡದ ಮೊದಲ ಜಾನಪದ ಕಾರ್ಯಕ್ರಮ: ಗೋ.ನಾ. ಸ್ವಾಮಿ ಭಾಗಿ

ಚೈನಾ ದೇಶದ ಶಾಂಘೈನಲ್ಲಿ ಕನ್ನಡಿಗರ ಸಂಘದ ವತಿಯಿಂದ ಆಯೋಜಿಸಿದ್ದ ಕನ್ನಡದ ಮೊದಲ...