ಭಾರತವು ವಿಭಿನ್ನ ಭಾಷೆಗಳು, ಸಂಸ್ಕೃತಿಗಳು ಹಾಗೂ ಧರ್ಮಗಳಿಂದ ಕೂಡಿದ ಒಂದು ವಿಶಾಲ ದೇಶ. ಇಲ್ಲಿ ಪ್ರತಿಯೊಂದು ಪ್ರಾಂತ್ಯಕ್ಕೂ ತನ್ನದೇ ಆದ ಸಂಸ್ಕೃತಿ ಮತ್ತು ಭಾಷೆಯ ಸೌಂದರ್ಯವಿದೆ. ಇಂತಹ ವೈವಿಧ್ಯಮಯ ರಾಷ್ಟ್ರವನ್ನು ಒಂದು ಏಕತೆಯಲ್ಲಿ ಕಟ್ಟಿಹಾಕುವಲ್ಲಿ ಭಾಷೆಯ ಪಾತ್ರ ಅಪಾರ ಎಂದು ಸೀತಾರಾಮ ಪವಾರ್ ಅಂಜುಮನ್ ಕಾಲೇಜಿನಲ್ಲಿ ನಡೆದ ಹಿಂದಿ ದಿವಸ್ ಕಾರ್ಯಕ್ರಮದಲ್ಲಿ ಹೇಳಿದರು.
ಮುಂದುವರದು ಮಾತನಾಡಿ, ಈ ದಿನದ ಆಚರಣೆಯ ಪ್ರಮುಖ ಉದ್ದೇಶವೆಂದರೆ ಹಿಂದಿಯ ಬಗ್ಗೆ ಜನರಲ್ಲಿ ಗೌರವ, ಹೆಮ್ಮೆ ಮತ್ತು ಅರಿವು ಬೆಳೆಸುವುದಾಗಿದೆ. ಜೊತೆಗೆ ಇತರ ಪ್ರಾದೇಶಿಕ ಭಾಷೆಗಳ ಗೌರವವನ್ನು ಕಾಪಾಡುತ್ತಲೇ ಹಿಂದಿಯನ್ನು ರಾಷ್ಟ್ರದ ಸಾಮಾನ್ಯ ಭಾಷೆಯಾಗಿ ಬೆಳೆಸಬೇಕು ಎಂದರು.
ಡಾ. ಐ. ಎ. ಮುಲ್ಲಾ ಮಾತನಾಡಿ, ಭಾಷೆಯೆಂದರೆ ಕೇವಲ ಸಂವಹನದ ಸಾಧನವಲ್ಲ, ಅದು ಸಂಸ್ಕೃತಿ ಹಾಗೂ ಪರಂಪರೆಯ ಜೀವನಾಡಿ. ಆದ್ದರಿಂದ ಹಿಂದಿ ದಿವಸವು ನಮ್ಮ ದೇಶದ ಭಾಷಾ ಏಕತೆ ಮತ್ತು ರಾಷ್ಟ್ರೀಯ ಏಕೀಕರಣದ ಸಂಕೇತವಾಗಿದೆ. ಇದೇ ವೇಳೆ ವಿವಿಧ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗಿದ್ದು ವಿಜೇತರಿಗೆ ಬಹುಮಾನ ವಿತರಿಸಿದರು.
ಈ ಸುದ್ಧಿ ಓದಿದ್ದೀರಾ? ಧಾರವಾಡ | ಓಝೋನ್ ಪದರು; ಮನುಕುಲದ ಜೀವ ರಕ್ಷಕವಾಗಿದೆ: ಡಾ. ಎನ್ ಬಿ ನಾಲತವಾಡ
ಈ ಸಂದರ್ಭದಲ್ಲಿ ಡಾ. N B ನಾಲತವಾಡ, ಪತ್ರಿಕೋದ್ಯಮದ ಮುಖ್ಯಸ್ಥ ಡಾ. ಎಸ್. ಎಸ್. ಅದೋನಿ, ಪೈರೋಜಾ ಮೇಸ್ತ್ರಿ, ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಶಮೀಮ್ ಕಲ್ಬುರ್ಗಿ ನಿರೂಪಿಸಿದರು. ಹೀನಾ ಕೌಸರ್ ವಂದಿಸಿದರು.ಬ