ಧಾರವಾಡ | ಗ್ರಂಥಾಲಯಗಳಲ್ಲಿ ಓದುವವರಿಲ್ಲದೇ ಪುಸ್ತಕಗಳು ಕೊಳೆಯುವ ಸ್ಥಿತಿಗೆ ಬಂದಿದ್ದು ವಿಪರ್ಯಾಸ: ಶಂಕರ ಹಲಗತ್ತಿ

Date:

ಇಂದು ಕನ್ನಡ ಪುಸ್ತಕಗಳ ರಾಶಿ ರಾಶಿ ಇವೆ. ಸುಸಜ್ಜಿತ ಗ್ರಂಥಾಲಯಗಳಿವೆ; ಓದುವವರಿಲ್ಲದೇ ಪುಸ್ತಕಗಳು ಕೊಳೆಯುವ ಸ್ಥಿತಿ ಬಂದೊದಗಿದ್ದು ವಿಪರ್ಯಾಸವಾಗಿದೆ ಎಂದು ಕವಿವ ಸಂಘದ ಪ್ರಧಾನ ಕಾರ್ಯದರ್ಶಿ ಶಂಕರ ಹಲಗತ್ತಿ ಹೇಳಿದರು.

- Advertisement -

ಕರ್ನಾಟಕ ವಿದ್ಯಾವರ್ಧಕ ಸಂಘವು ಆಯೋಜಿಸಿದ್ದ 18ನೇ ದಿನದ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡುತ್ತಾ, ಕನ್ನಡದ ಮೊಟ್ಟ ಮೊದಲ ಸಾಹಿತ್ಯಕ ಪತ್ರಿಕೆಯಾಗಿ 1896ರಲ್ಲಿ ಪ್ರಾರಂಭಗೊಂಡ ವಾಗ್ಭೂಷಣ ಪತ್ರಿಕೆ ಸಂಘ ನಡೆದು ಬಂದ ದಾರಿಯನ್ನು ಮತ್ತು ಅಂದಿನ ಕನ್ನಡ ಮತ್ತು ಕನ್ನಡಿಗರ ಸ್ಥಿತಿಯನ್ನು ದಾಖಲಿಸಿದೆ. ಇಂಥ ಪತ್ರಿಕೆ ಕಾಲಾಂತರದಲ್ಲಿ ನಿಂತು ಹೋಗಿದ್ದನ್ನು ಮತ್ತೆ ಪ್ರಾರಂಭಿಸಿದ್ದು ಸಂಘದ ಒಂದು ವಿನೂತನ ಸಾಧನೆಯಾಗಿದೆ.  ಹಿಂದಿನ ವಾಗ್ಭೂಷಣ ಪತ್ರಿಕೆಗಳನ್ನು ಅವಲೋಕಿಸಿದರೆ ಬಹುದೊಡ್ಡ ಈ ನೆಲದ ಸಾಹಿತ್ಯಿಕ ನಿಧಿಯೇ ಅಡಗಿದೆ. ಕವಿವ ಸಂಘವು ಪ್ರಾರಂಭದಲ್ಲಿಯೇ ತನ್ನ ಲೆಕ್ಕ ಪತ್ರಗಳನ್ನು ಮತ್ತು ಖರ್ಚು ವೆಚ್ಚವನ್ನು ಅತ್ಯಂತ ಪಾರದರ್ಶಕವಾಗಿ ಇಟ್ಟುಕೊಂಡು ಬಂದಿರುವುದನ್ನು 1918 ರ ವಾಗ್ಭೂಷಣ ಪತ್ರಿಕೆಯಲ್ಲಿ ದಾಖಲಿಸಿದಂತೆ ಅಂದಿನಿಂದ ಇಂದಿಗೂ ಸಂಘವು ಹಣಕಾಸಿನ ವ್ಯವಹಾರದಲ್ಲಿ ಪಾರದರ್ಶಕವಾಗಿ ಇಟ್ಟುಕೊಂಡು ಹಿಂದಿನ ಹಿರಿಯರು ಹಾಕಿಕೊಟ್ಟ ಮಾರ್ಗದಲ್ಲಿಯೇ ನಡೆಯುತ್ತಿರುವುದು ಸಂಘದ ನಿಜವಾದ ಶಕ್ತಿ ಮತ್ತು ಘನತೆಯಾಗಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಮೋದಿ ಪ್ರಚಾರ, ರಾಹುಲ್ ವ್ಯಕ್ತಿತ್ವ ಮತ್ತು ರೆಜಿಮ್ ಚೇಂಜ್

ಮೋದಿ ಅನುಭವಿ ನಟನಂತೆ, ಪ್ರದರ್ಶಕನಂತೆ ಕಾಣುತ್ತಾರೆ. ರಾಹುಲ್ ಗಾಂಧಿ ಪಾತ್ರದ ಒಳಹೊಕ್ಕು ನಟಿಸುವ ಕಲಾವಿದನಂತೆ ಕಾಣುತ್ತಾರೆ. ಈ ನಿಟ್ಟಿನಲ್ಲಿ ರಾಹುಲ್ ರಾಜಕೀಯ ನಡೆಗಳು ಮೋದಿಯವರ ರಾಜಕೀಯ ನಡೆಗಳೊಂದಿಗೆ ವಿಶ್ಲೇಷಣೆಗೊಳಗಾಗುತ್ತಿವೆ. ಕಳೆದ 12 ವರ್ಷಗಳ...

137 ಜೀವ ರಕ್ಷಕ ಕ್ಯಾನ್ಸರ್ ಔಷಧಗಳ ದರ ಶೇ.70ರಷ್ಟು...

ಕ್ಯಾನ್ಸರ್ ಚಿಕಿತ್ಸೆಯ ದುಬಾರಿ ವೆಚ್ಚದಿಂದ ಕಂಗೆಟ್ಟಿರುವ ರೋಗಿಗಳಿಗೆ ಕೇಂದ್ರ ಸರ್ಕಾರದಿಂದ ಕೊಂಚ ನಿರಾಳತೆಯ ಸುದ್ದಿಯೊಂದಿದೆ! 137 ಜೀವರಕ್ಷಕ ಕ್ಯಾನ್ಸರ್ ಔಷಧಗಳ ಬೆಲೆ ಇಳಿಕೆಯಾಗುವ ಸಾಧ್ಯತೆಯಿದ್ದು, ಕೆಲವು ಔಷಧಗಳ ಗರಿಷ್ಠ ಚಿಲ್ಲರೆ ಬೆಲೆ ಶೇ.70ರವರೆಗೆ...

‘ದೇಶ್ ಕೋ ಬಿಕನೇ ನಹೀ ದೂಂಗಾ’ ಎಂದು ನವಮಂಗಳೂರು...

​ರೈಲ್ವೆ, ವಿಮಾನ ನಿಲ್ದಾಣ, ಟೆಲಿಕಾಂ ಸೇರಿದಂತೆ ದೇಶದ ಪ್ರಮುಖ ಜಯಶೀಲ ಸಾರ್ವಜನಿಕ ವಲಯಗಳನ್ನು ಈಗಾಗಲೇ ಆಯ್ದ ಕಾರ್ಪೊರೇಟ್ ಕುಳಗಳಿಗೆ ಒಪ್ಪಿಸಿರುವ ಮೋದಿ ಸರ್ಕಾರ, ಈಗ ತನ್ನ ದೃಷ್ಟಿಯನ್ನು ಕಡಲತೀರಗಳತ್ತ ಹರಿಸಿದೆ. ದೇಶದ ಆಮದು-ರಫ್ತು...

ಕನ್ನಡ ಪುಸ್ತಕವು ಓದಲು ದೊರೆಯದೇ ಇರುವ ಕಾಲದಲ್ಲಿ ಸಂಘವು ಕನ್ನಡ ಪುಸ್ತಕಗಳನ್ನು ಬರೆಯಿಸಲು ಪ್ರೋತ್ಸಾಹದ ಬಹುಮಾನವನ್ನು ನೀಡುತ್ತಾ ಕನ್ನಡ ಸಾಹಿತ್ಯ ಓದುಗರ ಸಂಖ್ಯೆ ಹೆಚ್ಚಿಸಿದ ಕೀರ್ತಿ ಸಂಘಕ್ಕಿದೆ. ಮಹಿಳೆಯರು ಸಾಹಿತ್ಯ ರಚನೆಯಲ್ಲಿ ಮುಂದುಬರದೇ ಇದ್ದ ಕಾಲದಲ್ಲಿ ಸಂಘವು ಮಾತೋಶ್ರೀ ರತ್ನಮ್ಮ ಹೆಗ್ಗಡೆ ದತ್ತಿ ಮೂಲಕ ಬಹುಮಾನ ನೀಡುವ ಪರಂಪರೆ ಮುಂದುವರೆಸಿ, ಇಂದು ನೂರಾರು ಮಹಿಳಾ ಶ್ರೇಷ್ಠ ಲೇಖಕಿಯರು ಸೃಷ್ಟಿಸುವಲ್ಲಿ ಯಶಕಂಡಿದೆ. ಕವಿವ ಸಂಘದ ಘಟನಾವಳಿಯಲ್ಲಿ ಕವಿವ ಸಂಘವು, ಯಾವುದೇರಾಜಕೀಯ ಪಕ್ಷಕ್ಕೂ ಸೇರದ ಸಂಘ ಸದಾ ಸಾಹಿತ್ಯ, ಸಂಸ್ಕೃತಿ ವರ್ಧನೆಗಾಗಿ ತೊಡಗಿಸಿಕೊಳ್ಳುವುದು ಎಂದು ಸಂಘವು ತನ್ನ ಮೊದಲ ವರ್ಷದ ಉಪನಿಬಂಧನೆಗಳಲ್ಲಿ ದಾಖಲಿಸಿದ್ದು ಇದೆ. ಅದರಂತೆಯೇ ಇಂದಿಗೂ ಸಂಘವು ಯಾವುದೇ ರಾಜಕೀಯಕ್ಕೆ ವಾಲದೇ ಸದಾ ಕನ್ನಡ-ಕನ್ನಡಿಗ-ಕರ್ನಾಟಕ ಮಂತ್ರವಾಗಿಸಿಕೊಂಡು ತೊಡಗಿಸಿಕೊಂಡಿದೆ ಎಂದರು.

ವೇದಿಕೆಯಲ್ಲಿ ಉಪಸ್ಥಿತರಿದ್ದ ಎಂ.ಎಂ. ಚಿಕ್ಕಮಠ ಮಾತನಾಡಿ, ಕವಿವ ಸಂಘ ರಾಜ್ಯೋತ್ಸವದ ನಿಮಿತ್ತ ಆಯೋಜಿಸಿದ ಧರೆಗೆದೊಡ್ಡವರು ಹಾಗೂ ಸಾಧಕರ ಸನ್ಮಾನಗಳು ಯೋಗ್ಯ ವ್ಯಕ್ತಿಗಳಿಗೆ ಸಂದ ಗೌರವಗಳಾಗಿವೆ. ಅವರೆಲ್ಲಾ ವಿವಿಧ ಕ್ಷೇತ್ರದ ಮಹಾನ್ ಸಾಧಕರೇ, ಈ ಎರಡೂ ಕಾರ್ಯಕ್ರಮಗಳು ಅತೀ ಹೆಚ್ಚು ಜನಮನ್ನಣೆ ಪಡೆದ ಕಾರ್ಯಕ್ರಮಗಳು. ಕವಿವ ಸಂಘವು ವಿದ್ಯೆಯ ಬೆಳವಣಿಗೆಗೆ ಏನೆಲ್ಲ ಶ್ರಮಿಸುತ್ತಿರುವುದು ಸಾಧನೆಯಾಗಿದೆ. ಆಡಳಿತ ಮಂಡಳಿಯ ಎಲ್ಲರೂ ಕ್ರಿಯಾಶೀಲರಾಗಿದ್ದಾರೆ ಎಂದು ಹೇಳಿದರು.

ಇದನ್ನೂ ಓದಿ ಧಾರವಾಡ | ಜಿಐಎಸ್ ತಂತ್ರಜ್ಞಾನವು ಕೃಷಿ, ನಗರಾಭಿವೃದ್ಧಿ ಕ್ಷೇತ್ರಗಳಲ್ಲಿ ಪ್ರಮುಖ ಪಾತ್ರವಹಿಸುತ್ತಿದೆ: ಡಾ. ಮೋಹನ್

ಪ್ರಾರಂಭದಲ್ಲಿ ಗಾಯತ್ರಿ ಸರದೇಶಪಾಂಡೆ ಹಾಗೂ ಗುರುನಾಥ ಅವರಿಂದ ಕುಮಾರವ್ಯಾಸ ಭಾರತದ ಕಥಾ ಗಮಕ ಪ್ರಸಂಗಗಳ ಬಗ್ಗೆ ವ್ಯಾಖ್ಯಾನ ಮಾಡಲಾಯಿತು. ಆರೋಹಿ ಸದಾಶಿವ ಐಹೊಳೆ ತಂಡದಿಂದ ಭರತನಾಟ್ಯ ಪ್ರದರ್ಶನಗೊಂಡಿತು. ವೀರಣ್ಣ ಒಡ್ಡೀನ ಸ್ವಾಗತಿಸಿದರು.ಡಾ. ಜಿನದತ್ತ ಹಡಗಲಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಶೈಲಜಾ ಅಮರಶೆಟ್ಟಿ ನಿರೂಪಿಸಿ, ವಂದಿಸಿದರು. ಲಾಲಸಾಬ ಬೂದಿಹಾಳ, ಶಂಕರ ಘಟ್ನಟ್ಟಿ, ಸಿ.ಎಸ್. ಪಾಟೀಲಕುಲಕರ್ಣಿ ಸೇರಿದಂತೆ ಕಲಾವಿದರು ಇದ್ದರು.

eedina
ಈ ದಿನ ಡೆಸ್ಕ್‌
Website | + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಶಿವಮೊಗ್ಗದಲ್ಲಿ ಪರೀಕ್ಷಾ ಅಕ್ರಮ: KSOU ಕೇಂದ್ರದಲ್ಲಿ ಪುಸ್ತಕ, ಮೊಬೈಲ್ ಬಳಸಿ ‘ಕಾಪಿ’ ಮಾಡಲು ಅವಕಾಶ; ವಿಡಿಯೋ ವೈರಲ್

ಶಿವಮೊಗ್ಗದಲ್ಲಿರುವ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ (KSOU) ಪ್ರಾದೇಶಿಕ ಪರೀಕ್ಷಾ ಕೇಂದ್ರದಲ್ಲಿ...

ಕಬ್ಬಿಗೆ ವೈಜ್ಞಾನಿಕ ಬೆಲೆ ನಿಗದಿಪಡಿಸುವಂತೆ ಆಗ್ರಹಿಸಿ ಗಣಂಗೂರು ಟೋಲ್‌ನಲ್ಲಿ ರೈತರಿಂದ ಹೆದ್ದಾರಿ ತಡೆ

ಕಬ್ಬಿಗೆ ವೈಜ್ಞಾನಿಕ ಬೆಲೆ ನಿಗದಿಪಡಿಸುವುದು, ಸಕ್ಕರೆ ಬೆಲೆ ಪರಿಷ್ಕರಣೆ, ಕಳೆದ ಸಾಲಿನ...

ಕರ್ನಾಟಕ ಪಶ್ಚಿಮ ಪದವೀಧರ ಚುನಾವಣೆ: ಜಿಲ್ಲೆಗಳಲ್ಲಿ  ಶೇ.75.62 ರಷ್ಟು ಮತದಾನ

"ಕರ್ನಾಟಕ ಪಶ್ಚಿಮ ಪದವೀಧರ ಮತಕ್ಷೇತ್ರ ವ್ಯಾಪ್ತಿಯ ಧಾರವಾಡ, ಹಾವೇರಿ, ಗದಗ ಮತ್ತು...

ಗದಗ | ಇಂದು ಅಮರ ಮಹಾವೀರ ಕವನ ಸಂಕಲನ ಲೋಕಾರ್ಪಣೆ

ಅಮರ ಮಾಹಾವೀರ ಕವನ ಸಂಕಲನ ಲೋಕಾರ್ಪಣೆ ಸಮಾರಂಭದಲ್ಲಿ ಕವನ ಸ್ಪರ್ಧೆಗಳಲ್ಲಿನ ವಿಜೇತರಿಗೆ...