ಗಣೇಶೋತ್ಸವದ ಗದ್ದಲವನ್ನೇ ಬಂಡವಾಳ ಮಾಡಿಕೊಂಡು ಮನೆಗಳ್ಳತನ ಮಾಡಲು ಮುಂದಾಗಿದ್ದ ಕಳ್ಳರನ್ನು ಸ್ಥಳೀಯರು ಬೆನ್ನಟ್ಟಿ ಪೊಲೀಸರಿಗೆ ಹಿಡಿದುಕೊಟ್ಟಿರುವ ಘಟನೆ ಧಾರವಾಡದ ಕೆಲಗೇರಿಯಲ್ಲಿ ನಡೆದಿದೆ. ಕಳ್ಳರನ್ನು ಬೆನ್ನಟ್ಟಿ ಹಿಡಿದಿರುವ ಸಿಸಿಟಿವಿ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಇಬ್ಬರು ಕಳ್ಳರನ್ನು ಹಿಡಿದು ಧಾರವಾಡದ ಉಪನಗರ ಪೊಲೀಸರಿಗೆ ಹಸ್ತಾಂತರ ಮಾಡಲಾಗಿದೆ. ಈ ಆರೋಪಿಗಳು ಸ್ಥಳೀಯವಾಗಿ ಹಲವು ಪ್ರಕರಣಗಳಲ್ಲಿ ಭಾಗಿಯಾಗಿರುವ ಶಂಕೆ ವ್ಯಕ್ತವಾಗಿದ್ದು, ಪೊಲೀಸರು ವಿಚಾರಣೆ ಮುಂದುವರೆಸಿದ್ದಾರೆ.
ಇದನ್ನೂ ಓದಿ: ಧಾರವಾಡ | ಗಣೇಶ ವಿಸರ್ಜನೆ ವೇಳೆ ಡಿಜೆ ವಿಚಾರಕ್ಕೆ ಗುಂಪು ಜಗಳ