ಮನೆ ಬಾಗಿಲಿಗೆ ಆರೋಗ್ಯ ಸೇವೆಗಳನ್ನು ಸರ್ಕಾರದಿಂದ ಉಚಿತವಾಗಿ ತಲುಪಿಸಿಲಾಗುತ್ತಿದ್ದು, ಅದರ ಸದುಪಯೋಗವನ್ನು ಜನರು ಪಡೆಯಬೇಕು ಎಂದು ಧಾರವಾಡದ ವಾರ್ಡ್ ನಂ. 8ರ ಆರೋಗ್ಯ ಕೇಂದ್ರದಲ್ಲಿ ಸೆ.17ರಂದು ಸ್ವಸ್ಥ್ಯ ನಾರಿ ಸಶಕ್ತ ಪರಿವಾರ ಅಭಿಯಾನವನ್ನು ಉದ್ಘಾಟಿಸಿದ ಮಹಾನಗರ ಪಾಲಿಕೆ ಸದಸ್ಯ ಶಂಕರ ಶೇಳಕೆ ಹೇಳಿದರು.
ಕಾರ್ಯಕ್ರಮದಲ್ಲಿ ಒಂದೇ ಸೂರಿನಡಿಯಲ್ಲಿ ಗರ್ಭಿಣಿ ತಪಾಸಣೆ, ಬಾಣಂತಿ ತಪಾಸಣೆ, ಲಸಿಕಾ ಕಾರ್ಯಕ್ರಮ, ಎನ್‍ಸಿಡಿ ಕಾರ್ಯಕ್ರಮ, ಕಿಶೋರಿಯರಿಗೆ ಋತುಚಕ್ರದ ಶುಚಿತ್ವದ ಬಗ್ಗೆ, ಪೌಷ್ಟಿಕ ಆಹಾರದ ಬಗ್ಗೆ, ತಿಳಿಸಲಾಯಿತು. ಕಿವಿ, ಕಣ್ಣು, ಗಂಟಲು, ಮೂಗು ತಪಾಸಣೆ, ರಕ್ತಹೀನತೆ ಪರೀಕ್ಷೆ, ಕ್ಯಾನ್ಸರ್ ಪರೀಕ್ಷೆ, ಕ್ಷಯರೋಗ ಪರೀಕ್ಷೆ, ಟೆಲಿ ಮಾನಸ ಸೌಲಭ್ಯಗಳು, ಸಿಕಲ್ ಸೆಲ್ ರಕ್ತಹೀನತೆ, ತಾಯಿ ಕಾರ್ಡ್ ವಿತರಣೆ, ಪೌಷ್ಟಿಕ ಆಹಾರ ಶಿಬಿರ, ಅಂಗದಾನ ಮತ್ತು ರಕ್ತದಾನದ ಬಗ್ಗೆ ವಿಶೇಷ ಮಾಹಿತಿ ನೀಡಿದರು.
ಈ ಸುದ್ಧಿ ಓದಿದ್ದೀರಾ? ಧಾರವಾಡ | ಓಝೋನ್ ಪದರು; ಮನುಕುಲದ ಜೀವ ರಕ್ಷಕವಾಗಿದೆ: ಡಾ. ಎನ್ ಬಿ ನಾಲತವಾಡ
ವೈದ್ಯಾಧಿಕಾರಿ ಡಾ.ಅರಣಾ ಅನ್ವೇಕರ ಅಭಿಯಾನದ ಕುರಿತು ಮಾಹಿತಿ ನೀಡಿದರು. ಪ್ರಾಥಮಿಕ ಆರೋಗ್ಯ ಸುರಿಕ್ಷಾಧಿಕಾರಿ ಚಂದ್ರಿಕಾ ದಮ್ಮಳ್ಳಿ ನಿರೂಪಿಸಿದರು. ಈ ಸಂದರ್ಭದಲ್ಲಿ ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರು, ಸಾರ್ವಜನಿಕರು ಉಪಸ್ಥಿತರಿದ್ದರು.