ಧಾರವಾಡ | ರಾಷ್ಟ್ರೀಯ ಲೋಕ ಅದಾಲತ್; 203 ಪ್ರಕರಣಗಳ ಇತ್ಯರ್ಥ

Date:

Advertisements

ಕರ್ನಾಟಕ ಉಚ್ಚ ನ್ಯಾಯಾಲಯ ಧಾರವಾಡ ಪೀಠದಲ್ಲಿ ಸೆ.13ರಂದು ಹಿರಿಯ ನ್ಯಾಯಮೂರ್ತಿ ಎಸ್. ಸುನಿಲ್‌ದತ್ ಯಾದವ್ ನೇತೃತ್ವದಲ್ಲಿ ರಾಷ್ಟ್ರೀಯ ಲೋಕ ಅದಾಲತ್‍ನ್ನು ಏರ್ಪಡಿಸಲಾಗಿತ್ತು. ಈ ಅದಾಲತನಲ್ಲಿ ಒಟ್ಟು 1,189 ಪ್ರಕರಣಗಳನ್ನು ಕೈಗೆತ್ತಿಕೊಳ್ಳಲಾಗಿದ್ದು, ಆ ಪೈಕಿ ಒಟ್ಟು 203 ಪ್ರಕರಣಗಳನ್ನು ರೂ.3,43,18,820 ಮೊತ್ತಕ್ಕೆ ಇತ್ಯರ್ಥಪಡಿಸಲಾಯಿತು.

ಆದಾಲತನಲ್ಲಿ ನ್ಯಾಯಮೂರ್ತಿ ಎಸ್. ಸುನಿಲ್‌ದತ್ ಯಾದವ್, ಎಸ್. ಆರ್. ಕೃಷ್ಣಕುಮಾರ್, ಸಿ.ಎಮ್. ಪೂನಚ್ಚ ಮತ್ತು ವಿಜಯಕುಮಾರ್ ಎ. ಪಾಟೀಲ್ ಹಾಗೂ ಅವರೊಂದಿಗೆ ಲೋಕ ಅದಾಲತ್‍ನ ಸದಸ್ಯರುಗಳಾದ ಎಸ್. ಎಸ್. ಬಾದವಡಗಿ, ಹರ್ಷ ದೇಸಾಯಿ, ಪಿ.ಜಿ. ನಾಯ್ಕ್ ಮತ್ತು ಎಮ್. ಎಸ್. ಹಳ್ಳಿಕೇರಿ ವಕೀಲರು ಈ ರೀತಿಯಾಗಿ ಒಟ್ಟು 4 ಪೀಠಗಳನ್ನು ಆಯೋಜಿಸಲಾಗಿತ್ತು.

ಈ ಸುದ್ಧಿ ಓದಿದ್ದೀರಾ? ಧಾರವಾಡ | ತಂಬೂರ-ಮುಕ್ಕಲ ಗ್ರಾಮ ಪಂಚಾಯತ ಪಿಡಿಓ ನಾಗರಾಜಕುಮಾರ ಅಮಾನತ್ತು

ಈ ಲೋಕ ಅದಾಲತಿನಲ್ಲಿ ಅಪಘಾತ ಪರಿಹಾರ ಪ್ರಕರಣಗಳ ಜೊತೆಗೆ ಸಿವಿಲ್ ಪ್ರಕರಣಗಳು, ರಿಟ್ ಅರ್ಜಿಗಳು ಮತ್ತು ಕೌಟುಂಬಿಕ ವಿವಾದಗಳ ಪ್ರಕಾರಣಗಳನ್ನು ಇತ್ಯರ್ಥಗೊಳಿಸುವ ಮೂಲಕ ಉಭಯ ಪಕ್ಷಗಾರರ ಪರಸ್ಪರ ಸಂಬಂಧಗಳನ್ನು ಉತ್ತಮವಾಗಿ. ಸೌಹಾರ್ದಯುತವಾಗಿ ಎಲ್ಲರಿಗೂ ನ್ಯಾಯ ಎಂಬ ಧೈಯ ವಾಕ್ಯದಂತೆ ಅತ್ಯಂತ ಸರಳ ರೀತಿಯಲ್ಲಿ ನ್ಯಾಯಾಲಯದ ಅಂಗಳಕ್ಕೆ ಬಂದ ಕಕ್ಷಿದಾರರಿಗೆ ನ್ಯಾಯವು ದೊರಕುವಂತೆ ಈ ರಾಷ್ಟ್ರೀಯ ಲೋಕ ಅದಾಲತ್‍ನಲ್ಲಿ ಕಾಣಬಹುದಾಗಿತ್ತು ಎಂದು ಧಾರವಾಡ ಪೀಠ ಉಚ್ಛ ನ್ಯಾಯಾಲಯ ಕಾನೂನು ಸೇವಾ ಸಮಿತಿ ಕಾರ್ಯದರ್ಶಿಗಳು ಮತ್ತು (ನ್ಯಾಯಾಂಗ) ಅಧೀಕ ವಿಲೇಖನಾಧಿಕಾರಿ ಜೆರಾಲ್ಡ್ ರುಡಾಲ್ಫ್ ಮೆಂಡೋನ್ಸಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕೆಸಿ ವ್ಯಾಲಿ ಅಧಿಕಾರಿಗಳ ನಿರ್ಲಕ್ಷ್ಯ ರೈತರ ತೋಟಗಳಿಗೆ ನುಗ್ಗಿದ ನೀರು, ಲಕ್ಷಾಂತರ ರೂ ಬೆಳೆ ನಷ್ಟ

ಕೋಲಾರ: ಕೆ.ಸಿ ವ್ಯಾಲಿ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ನಿರ್ಲಕ್ಷ್ಯಕ್ಕೆ ರೈತರು ಬೀದಿಗೆ...

ಜನಸ್ಪಂದನ, ಸೌಲಭ್ಯಗಳ ವಿತರಣೆಯ ತಾಣವಾಗಲಿ-ಎಸ್.ಎನ್.ಸುಬ್ಬಾರೆಡ್ಡಿ

ಬಾಗೇಪಲ್ಲಿ:ಕಳೆದ ಹಲವಾರು ವರ್ಷಗಳಿಂದ ಅತ್ಯಂತ ಯಶಸ್ವಿಯಾಗಿ ಮತ್ತು ಜನಸ್ನೇಹಿಯಾಗಿ ನಡೆಯುತ್ತಿರುವ ಜನಸ್ಪಂಧನ...

ಉಡುಪಿ | ಮೈಸೂರು ದಸರಾ ಮೆರವಣಿಗೆಯಲ್ಲಿ ಬಿರ್ತಿಯ ಅಂಕದಮನೆ ತಂಡದ “ಕಂಗೀಲು ನೃತ್ಯ” ಆಯ್ಕೆ

ಅಕ್ಟೋಬರ್ 2 ರಂದು ನಡೆಯುವ ಕರ್ನಾಟಕದ ನಾಡ ಹಬ್ಬ ವಿಶ್ವವಿಖ್ಯಾತ ಮೈಸೂರು...

ಹುಬ್ಬಳ್ಳಿ | ಮಹಾನಗರ ಪಾಲಿಕೆ ಕಲಾಪಕ್ಕೆ 18 ಮಾರ್ಷಲ್‌ಗಳ ನೇಮಕ

ಸಾಮಾನ್ಯವಾಗಿ ವಿಧಾನಸಭೆ ಕಲಾಪದಲ್ಲಿ ಮಾರ್ಷಲ್‌ಗಳು ಕಾರ್ಯನಿರ್ವಹಿಸುತ್ತಾರೆ. ಆ ಮಾದರಿಯಲ್ಲಿ ಇದೀಗ ಪ್ರಥಮ‌...

Download Eedina App Android / iOS

X