ಓಝೋನ್ ಪದರವು ಮನುಕುಲದ ಜೀವ ರಕ್ಷಕವಾಗಿದ್ದು, ಅದರ ಸಂರಕ್ಷಣೆಯು ಹೆಚ್ಚು ಅಗತ್ಯವಾಗಿದೆ. ಈ ಪದರವು ಭೂಮಿಯ ಮೇಲಿನ ಜೀವನವನ್ನು ಬೆಂಬಲಿಸುವಲ್ಲಿ ಮತ್ತು ಎಲ್ಲಾ ಜೀವಿಗಳಿಗೆ ಸುರಕ್ಷಿತ ಪರಿಸರವನ್ನು ಒದಗಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತದೆ ಡಾ. ಎನ್.ಬಿ.ನಾಲತವಾಡ ಧಾರವಾಡದ ಅಂಜುಮನ ಕಾಲೇಜಿನಲ್ಲಿ ಏರ್ಪಡಿಸಿದ್ದ ಅಂತರರಾಷ್ಟ್ರೀಯ ಓಝೋನ್ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಅಥಿತಿಯಾಗಿ ಮಾತನಾಡಿದರು.
ಕಾಲೇಜಿನ ಪ್ರಾಚಾರ್ಯ ಡಾ. ಐ.ಎ.ಮುಲ್ಲಾ ಅಧ್ಯಕ್ಷತೆ ವಹಿಸಿ ಮಾತನಾಡಿ, ಓಝೋನ್ ಪದರವು ಸೂರ್ಯನ ಹಾನಿಕಾರಕ ನೇರಳಾತೀತ ವಿಕಿರಣವನ್ನು ಹೀರಿಕೊಂಡು ಭೂಮಿಯ ಮೇಲೆ ಜೀವ ಸಂಕುಲಗಳನ್ನು ರಕ್ಷಿಸುತ್ತದೆ. ಮತ್ತು ಸೂರ್ಯನ ರಕ್ಷಾಕವಚವಾಗಿ ಕಾರ್ಯನಿರ್ವಹಿಸುತ್ತದೆ. ಅದನ್ನು ಉಳಿಸಿಕೊಳ್ಳುವುದು ನಮ್ಮೆಲ್ಲರ ಹೊಣೆಯಾಗಿದೆ. ಮಾನವನ ಚಟುವಟಿಕಗಳಿಂದ ಈ ಪದರವು ಹಾನಿಗೆ ಒಳಗಾಗುತ್ತಿದ್ದು, ಇಂತಹ ಸಂದರ್ಭದಲ್ಲಿ ಜಾಗೃತಿ ಮೂಡಿಸುವ ಅವಶ್ಯವಿದೆ ಎಂದರು.
ಈ ಸುದ್ಧಿ ಓದಿದ್ದೀರಾ? ಧಾರವಾಡ | ವಿಶ್ವಕರ್ಮ ಸಮುದಾಯವು ಕರಕುಶಲತೆಗೆ ಆಧಾರ ಸ್ತಂಭವಾಗಿದೆ: ಜ್ಯೋತಿ ಪಾಟೀಲ
ಕಾರ್ಯಕ್ರಮದಲ್ಲಿ ಪ್ರಾಧ್ಯಾಪಕ ಸಿಬ್ಬಂದಿ, ವಿದ್ಯಾರ್ಥಿಗಳು ಹಾಗೂ ಎನ್‌ಎಸ್‌ಎಸ್ ಸ್ವಯಂ ಸೇವಕರು ಹೆಚ್ಚಿನ ಸಂಖ್ಯೆಯಲ್ಲಿ ಹಾಜರಿದ್ದರು. ಡಾ. ತಾಜುನ್ನಿಸಾ ಸೈಯ್ಯದ್ ಸ್ವಾಗತಿಸಿದರು. ಪ್ರೊ. ಎನ್ ಎಂ ಕನಕನೆ ವಂದಿಸಿದರು. ಪ್ರೊ.ಶೃತಿ ಯಾವಗಲಮಠ ನಿರೂಪಿಸಿದರು.