ಧಾರವಾಡ | ಗಾದೆಗಳು ಜೀವನದ ಪಾಠ ಕಲಿಸುತ್ತವೆ: ಗಂಗಾ ಚವಣ್ಣವರ

Date:

ಗಾದೆಗಳು ನಮಗೆ ಜೀವನ ಪಾಠ ಕಲಿಸುವ ಪ್ರಬಲ ಮಾಧ್ಯಮ. ಅವು ನಮ್ಮ ಹಿರಿಯರ ಲೋಕಾನುಭವದ ಬದುಕಿನ ಮಾತುಗಳು. ವೇದ ಸುಳ್ಳಾದರೂ ಗಾದೆ ಎಂದಿಗೂ ಸುಳ್ಳಾಗುವುದಿಲ್ಲ ಎಂದು ಕರ್ನಾಟಕ ವಿದ್ಯಾವರ್ಧಕ ಸಂಘವು ಆಯೋಜಿಸಿದ್ದ ದಿ. ಆನಂದ ಚಿಗಟೇರಿ ಸಂಸ್ಮರಣಾ ದತ್ತಿ ಕಾರ್ಯಕ್ರಮದಲ್ಲಿ ‘ಕನ್ನಡ ಗಾದೆ ಮಾತುಗಳ ಆಧರಿಸಿ ಕಥೆ ಹೇಳುವ ಸ್ಪರ್ಧೆ’ಯ ಅತಿಥಿಯಾಗಿ ಜೆ.ಎಸ್.ಎಸ್. ಕಾಲೇಜಿನ ವಿಶ್ರಾಂತ ಪ್ರಾಧ್ಯಾಪಕಿ ಗಂಗಾ ಚವಣ್ಣವರ ಹೇಳಿದರು.

- Advertisement -

ಇಂದಿನ ತ್ವರಿತ ಕಾಲದಲ್ಲಿ ಜ್ಞಾನವೊಂದಿದ್ದರೆ ಸಾಲದು, ಜ್ಞಾನದ ಜೊತೆಗೆ ಕೌಶಲ್ಯವೂ ಬಹಳ ಮುಖ್ಯ. ವಿದ್ಯಾರ್ಥಿಗಳು ಇಂದು ಪಠ್ಯಪುಸ್ತಕಗಳಿಗೆ ಮಾತ್ರ ಸೀಮಿತ ಬೇಡ. ಪಠ್ಯ ಮೀರಿದ ಜ್ಞಾನ ಅಗತ್ಯವಾಗಿದೆ. ಗಾದೆಗಳು ನಮ್ಮ ದೈನಂದಿನ ಬದುಕಿನ ಮೂಲವಾಗಿವೆ. ನಮ್ಮ ಸಮಾಜದ ಸಂಸ್ಕೃತಿ, ಆಚಾರ, ವಿಚಾರಗಳನ್ನು ಪ್ರತಿಬಿಂಬಿಸುತ್ತವೆ. ಮಹಿಳೆಯರು ಇಂತಹ ಕಾರ್ಯಕ್ರಮದಲ್ಲಿ ಮುಕ್ತವಾಗಿ ಭಾಗವಹಿಸಿ, ತಮ್ಮ ಪ್ರತಿಭೆಯನ್ನು ಅನಾವರಣ ಗೊಳಿಸುತ್ತಿರುವುದು ಅಭಿನಂದನೀಯ ಎಂದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಮೋದಿ ಪ್ರಚಾರ, ರಾಹುಲ್ ವ್ಯಕ್ತಿತ್ವ ಮತ್ತು ರೆಜಿಮ್ ಚೇಂಜ್

ಮೋದಿ ಅನುಭವಿ ನಟನಂತೆ, ಪ್ರದರ್ಶಕನಂತೆ ಕಾಣುತ್ತಾರೆ. ರಾಹುಲ್ ಗಾಂಧಿ ಪಾತ್ರದ ಒಳಹೊಕ್ಕು ನಟಿಸುವ ಕಲಾವಿದನಂತೆ ಕಾಣುತ್ತಾರೆ. ಈ ನಿಟ್ಟಿನಲ್ಲಿ ರಾಹುಲ್ ರಾಜಕೀಯ ನಡೆಗಳು ಮೋದಿಯವರ ರಾಜಕೀಯ ನಡೆಗಳೊಂದಿಗೆ ವಿಶ್ಲೇಷಣೆಗೊಳಗಾಗುತ್ತಿವೆ. ಕಳೆದ 12 ವರ್ಷಗಳ...

137 ಜೀವ ರಕ್ಷಕ ಕ್ಯಾನ್ಸರ್ ಔಷಧಗಳ ದರ ಶೇ.70ರಷ್ಟು...

ಕ್ಯಾನ್ಸರ್ ಚಿಕಿತ್ಸೆಯ ದುಬಾರಿ ವೆಚ್ಚದಿಂದ ಕಂಗೆಟ್ಟಿರುವ ರೋಗಿಗಳಿಗೆ ಕೇಂದ್ರ ಸರ್ಕಾರದಿಂದ ಕೊಂಚ ನಿರಾಳತೆಯ ಸುದ್ದಿಯೊಂದಿದೆ! 137 ಜೀವರಕ್ಷಕ ಕ್ಯಾನ್ಸರ್ ಔಷಧಗಳ ಬೆಲೆ ಇಳಿಕೆಯಾಗುವ ಸಾಧ್ಯತೆಯಿದ್ದು, ಕೆಲವು ಔಷಧಗಳ ಗರಿಷ್ಠ ಚಿಲ್ಲರೆ ಬೆಲೆ ಶೇ.70ರವರೆಗೆ...

‘ದೇಶ್ ಕೋ ಬಿಕನೇ ನಹೀ ದೂಂಗಾ’ ಎಂದು ನವಮಂಗಳೂರು...

​ರೈಲ್ವೆ, ವಿಮಾನ ನಿಲ್ದಾಣ, ಟೆಲಿಕಾಂ ಸೇರಿದಂತೆ ದೇಶದ ಪ್ರಮುಖ ಜಯಶೀಲ ಸಾರ್ವಜನಿಕ ವಲಯಗಳನ್ನು ಈಗಾಗಲೇ ಆಯ್ದ ಕಾರ್ಪೊರೇಟ್ ಕುಳಗಳಿಗೆ ಒಪ್ಪಿಸಿರುವ ಮೋದಿ ಸರ್ಕಾರ, ಈಗ ತನ್ನ ದೃಷ್ಟಿಯನ್ನು ಕಡಲತೀರಗಳತ್ತ ಹರಿಸಿದೆ. ದೇಶದ ಆಮದು-ರಫ್ತು...

ಜೆ.ಎಸ್.ಎಸ್ ಕಾಲೇಜಿನ ಸಹಾಯಕ ಪ್ರಾಧ್ಯಾಪಕಿ ದೀಪಾ ಸಂಕಪಾಳೆ ಮಾತನಾಡುತ್ತಾ, ಗಾದೆಗಳು ಭಾಷೆಯ ಅವಿಭಾಜ್ಯ ಅಂಗ. ಜೀವನದ ಅನುಭವ, ಜ್ಞಾನ, ನಂಬಿಕೆಗಳನ್ನು ಸಂಕ್ಷಿಪ್ತವಾಗಿ ರೂಪಕಗಳ ಮೂಲಕ ವ್ಯಕ್ತಪಡಿಸುವ ಸಾಂಪ್ರದಾಯಿಕ ಹೇಳಿಕೆಗಳು ಅದರಲ್ಲೂ, ಜಾನಪದದ ಅನೇಕ ಗಾದೆಗಳು ಮೌಖಿಕ ಪರಂಪರೆ ಮೂಲಕ ಸಮಾಜ ತಿದ್ದುವ ಕಾರ್ಯ ಮಾಡುತ್ತವೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ಕಾಲೇಜಿನ ವಿಶ್ರಾಂತ ಪ್ರಾಚಾರ್ಯ ಶಿವಾನಂದ ಚೌಗಲಾ ಮಾತನಾಡಿ, ಇಂದು ಮಹಿಳೆಯರು ಹೇಳಿದ ಗಾದೆಗಳು ಸತ್ಯ ಹಾಗೂ ಸತ್ವವುಳ್ಳವುಗಳಾಗಿವೆ. ಮಹಿಳಾ ಮಂಡಳದ ಸದಸ್ಯರು ಸಕ್ರಿಯವಾಗಿ ಪಾಲ್ಗೊಂಡಿದ್ದು ಖುಷಿ ಎನಿಸಿದೆ. ಎಲ್ಲರೂ ತಮ್ಮ ಪ್ರಭುದ್ಧತೆಯನ್ನು ವ್ಯಕ್ತಪಡಿಸಿದ್ದಾರೆ. ರಿಯಾಲಿಟಿ ಶೋ ದಂತಹ ಕಾರ್ಯಕ್ರಮದಲ್ಲಿ ನಮ್ಮ ಕನ್ನಡದ ಮಹಿಳೆಯರು ಹೆಚ್ಚು ಭಾಗವಹಿಸುವಂತಾಗಬೇಕೆಂದರು.

ವಿಶ್ವೇಶ್ವರಿ ಹಿರೇಮಠ ಸ್ವಾಗತಿಸಿದರು. ಡಾ. ಮಹೇಶ ಧ. ಹೊರಕೇರಿ ನಿರ್ವಹಿಸಿದರು. ಡಾ. ನಿರ್ಮಲಾ ಚಿಗಟೇರಿ, ಡಾ. ಶಾರದಾ ಚಿಗಟೇರಿ ಪರಿಚಯಿಸಿದರು. ಶಂಕರ ಕುಂಬಿ ಪ್ರಾಸ್ತಾವಿಕವಾಗಿ ಮಾತನಾಡಿದರು. ವೇದಿಕೆಯಲ್ಲಿ ದತ್ತಿದಾನಿಗಳ ಪರವಾಗಿ ಡಾ. ಮಂಗಳಾ ಚಿಗಟೇರಿ ಹಾಗೂ ಕವಿವ ಸಂಘದ ಅಧ್ಯಕ್ಷ ಚಂದ್ರಕಾಂತ ಬೆಲ್ಲದ ಉಪಸ್ಥಿತರಿದ್ದು ಮಾತನಾಡಿದರು. ವೀರಣ್ಣ ಒಡ್ಡೀನ ಕೊನೆಯಲ್ಲಿ ವಂದಿಸಿದರು.

ಇದನ್ನೂ ಓದಿ ಧಾರವಾಡ | ಕನ್ನಡ ಕಸ್ತೂರಿಯಷ್ಟೇ ಪರಿಮಳವಾದದು: ರೇಣುಕ ಅಮಲಝರಿ

ಕಥಾ ಸ್ಪರ್ಧೆಯಲ್ಲಿ ವಿಜೇತರಾದ ಜಯಶ್ರೀ ಗುತ್ತಲ ಪ್ರಥಮ, ಜಯಶೀಲಾ ಹಿರೇಮಠ ದ್ವಿತೀಯ, ಮಂಜುಳಾ ಹೊಸೂರ ತೃತೀಯ ಸ್ಥಾನ ಪಡೆದರೆ, ವಿಜಯಾ ಕುಲಕರ್ಣಿ ಹಾಗೂ ಪ್ರೇಮಾ ನಡೆಕಟ್ಟ್ಟಿ ಸಮಾಧಾನಕರ ಬಹುಮಾನ ಪಡೆದರು. ವಿಜೇತರಾದವರಿಗೆ ಪ್ರಮಾಣ ಪತ್ರ ವಿತರಿಸಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಶಿವಾನಂದ ಭಾವಿಕಟ್ಟಿ, ಡಾ ಶೈಲಜಾ ಅಮರಶೆಟ್ಟಿ, ಪ್ರೊ. ಈಶಣ್ಣ ಸೇರಿದಂತೆ ಮುಂತಾದವರಿದ್ದರು.

eedina
ಈ ದಿನ ಡೆಸ್ಕ್‌
Website | + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕರ್ನಾಟಕ ಪಶ್ಚಿಮ ಪದವೀಧರ ಚುನಾವಣೆ: ಜಿಲ್ಲೆಗಳಲ್ಲಿ  ಶೇ.75.62 ರಷ್ಟು ಮತದಾನ

"ಕರ್ನಾಟಕ ಪಶ್ಚಿಮ ಪದವೀಧರ ಮತಕ್ಷೇತ್ರ ವ್ಯಾಪ್ತಿಯ ಧಾರವಾಡ, ಹಾವೇರಿ, ಗದಗ ಮತ್ತು...

ಗದಗ | ಇಂದು ಅಮರ ಮಹಾವೀರ ಕವನ ಸಂಕಲನ ಲೋಕಾರ್ಪಣೆ

ಅಮರ ಮಾಹಾವೀರ ಕವನ ಸಂಕಲನ ಲೋಕಾರ್ಪಣೆ ಸಮಾರಂಭದಲ್ಲಿ ಕವನ ಸ್ಪರ್ಧೆಗಳಲ್ಲಿನ ವಿಜೇತರಿಗೆ...

ರಾಯಚೂರು | ಈಶಾನ್ಯ ಶಿಕ್ಷಕರ ಮತಕ್ಷೇತ್ರದಲ್ಲಿ ಶೇ. 86.02ರಷ್ಟು ಮತದಾನ

ಅಕ್ಟೋಬ‌ರ್ 23ರಂದು ಜಿಲ್ಲೆಯ ಎಲ್ಲ ಮತಗಟ್ಟೆಗಳಲ್ಲಿ ಮತದಾನ ಸುಗಮವಾಗಿ ನಡೆದಿದ್ದು, ಒಟ್ಟು...

ವಿಜಯಪುರ |ಯುವಜನತೆ ಚೆನ್ನಮ್ಮಳ ಧೈರ್ಯ, ದೇಶಪ್ರೇಮವನ್ನು ಬದುಕಿನಲ್ಲಿ ಅಳವಡಿಸಿಕೊಳ್ಳಲಿ: ಡಾ. ಆನಂದ ಕೆ.

ಬ್ರಿಟಿಷರ ದಬ್ಬಾಳಿಕೆ ಮತ್ತು ಅನ್ಯಾಯದ ವಿರುದ್ಧ ಕೆಚ್ಚೆದೆಯಿಂದ ಹೋರಾಡಿದ ವೀರರಾಣಿ ಕಿತ್ತೂರು...