ನಗರದ ಅಂಜುಮನ್ ಇಸ್ಲಾಂ ಸಂಸ್ಥೆ ವತಿಯಿಂದ ಏರ್ಪಡಿಸಿದ್ದ, ಗಾಂಧಿ ಜಯಂತಿ ಪ್ರಯುಕ್ತ ನಡೆದ ಕಾರ್ಯಕ್ರಮದಲ್ಲಿ ಅಂಜುಮನ್ ಅಧ್ಯಕ್ಷ ಇಸ್ಮಾಯಿಲ್ ತಮಟಗಾರ್ ಮಾತನಾಡಿ, ಗಾಂಧೀಜಿಯವರ ಜೀವನದ ತತ್ವಾದರ್ಶಗಳು, ಸತ್ಯ, ಅಹಿಂಸೆ, ಸರಳತೆ ಮತ್ತು ಶ್ರಮದ ಮಹತ್ವವನ್ನು ಇಂದಿನ ತಲೆಮಾರಿನ ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.
ಉಪಾಧ್ಯಕ್ಷ ಬಶೀರ್‌ಅಹ್ಮದ್ ಜಾಗೀರ್ದಾರ್ ಮಾತನಾಡಿ, ಭಾರತದ ಎರಡನೇ ಪ್ರಧಾನ ಮಂತ್ರಿಯಾಗಿ ಸೇವೆ ಸಲ್ಲಿಸಿದ ಲಾಲ್‌ಬಹುದ್ದೂರ್ ಶಾಸ್ತ್ರಿ ತಮ್ಮ ಸರಳತೆ, ಶೌರ್ಯ ಮತ್ತು ಶ್ರದ್ಧೆಯ ಮೂಲಕ ದೇಶದ ಹೃದಯದಲ್ಲಿ ಅಜರಾಮರ ಆಗಿದ್ದಾರೆ ಎಂದರು. ಇದೇ ವೇಳೆ ಸಂಸ್ಥೆಯ ಸದಸ್ಯರು, ಬೋಧಕ ಬೋಧಕೇತರ ವರ್ಗದವರು ಹಾಗೂ ಎನ್ಎಸ್ಎಸ್ ವಿದ್ಯಾರ್ಥಿಗಳು “ಸ್ವಚ್ಛತಾಹಿ ಸೇವಾ” ಸ್ವಚ್ಛತೆ ಕಾರ್ಯಕ್ರಮ ನಡೆಸಿದರು.
ಈ ಸುದ್ಧಿ ಓದಿದ್ದೀರಾ? ಧಾರವಾಡ | ನವಜಾತ ಗಂಡು ಮಗುವಿನಲ್ಲಿ ಭ್ರೂಣ ಪತ್ತೆ
ಖೈರುದ್ದೀನ್ ಶೇಕ್ ನಿರೂಪಿಸಿದರು, ಅಬ್ದುಲ್ ಮತಿನ ವಂದಿಸಿದರು. ಡಾ. ತಾಜೂನಿಸ್ಸಾ, ಪರಿಚಯಿಸಿದರು. ಆಡಳಿತ ಮಂಡಳಿಯ ಸದಸ್ಯರಾದ ಗುಲಾಮ ಯಾಸೀನ್ ಹಾವೇರಿಪೆಟ್, ಮೊಮ್ಮದ್‌ರಫಿಕ ಶಿರಹಟ್ಟಿ, ಡಾ. ಅಬ್ದುಲ್‌ಖಾದಿರ್ ಸರಗಿರೋ, ಡಾ. ಐ.ಎ.ಮುಲ್ಲಾ, ಪ್ರೊ.ನಾಗರಾಜ್ ಕಂಕಣಿ ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಸಿಬ್ಬಂದಿಗಳು ಇದ್ದರು.