ಧಾರವಾಡ | ಎಸ್‌ಐಆರ್ ಕೈಬಿಡಲು ಚುನಾವಣಾ ಆಯೋಗಕ್ಕೆ ಎಸ್‌ಯುಸಿಐ ಒತ್ತಾಯ

Date:

Advertisements

ದೇಶದಲ್ಲಿ ಅತ್ಯಂತ ವಿವಾದಕ್ಕೆ ಒಳಗಾದ ಮತ್ತು ದುಡಿಯುವ ಜನರ ಮೂಲಭೂತ ಹಕ್ಕುಗಳಿಗೆ ಸಂಚಕಾರ ತರುತ್ತಿರುವ ಆರೋಪದ ಮೇಲೆ SIR ಅನ್ನು ಕೈ ಬಿಡುವಂತೆ ಕೇಂದ್ರ ಚುನಾವಣಾ ಆಯೋಗವನ್ನು ಒತ್ತಾಯಿಸಿ, ಎಸ್‌ಯುಸಿಐ ಕಮ್ಯುನಿಸ್ಟ್ ಪಕ್ಷದ ಧಾರವಾಡ ಜಿಲ್ಲಾ ಸಮಿತಿ ವತಿಯಿಂದ ನಗರದ ವಿವೇಕಾನಂದ ವೃತ್ತದಲ್ಲಿ SIR ಮತಪಟ್ಟಿಯ ತೀವ್ರತಮ ಪರಿಷ್ಕರಣೆ ವಿರುದ್ಧ ಪ್ರತಿಭಟನೆ ನಡೆಸಲಾಯಿತು.

ಈ ಸಂಧರ್ಭದಲ್ಲಿ ಪಕ್ಷದ ರಾಜ್ಯ ಸೆಕ್ರೆಟರಿಯೆಟ್ ಸದಸ್ಯ ರಾಮಾಂಜನಪ್ಪ ಆಲ್ದಳ್ಳಿ ಮಾತನಾಡಿ, “ದೇಶದಲ್ಲಿ ಅತ್ಯಂತ ವಿವಾದಕ್ಕೆ ಒಳಗಾದಂತಹ ವಿಶೇಷ ತೀವ್ರತಮ ಪರಿಷ್ಕರಣೆ (SIR) ಕೋಟ್ಯಂತರ ಜನತೆಯಲ್ಲಿ ಆತಂಕ ಮೂಡಿಸಿದೆ. ಮತ ಪಟ್ಟಿಯ ಪರಿಷ್ಕರಣೆಯ ಉದ್ದೇಶ ಬಿಟ್ಟುಹೋದ ಮತದಾರರನ್ನು ಪಟ್ಟಿಯಲ್ಲಿ ಸೇರಿಸಿ ಮತದಾನದ ಹಕ್ಕನ್ನು ಜನತೆಗೆ ನೀಡುವುದು ಆಗಬೇಕೇ ವಿನಃ ಮತದಾನದ ಹಕ್ಕನ್ನು ಕಸಿಯುದಲ್ಲ. ಆದರೆ ಬಿಹಾರದಲ್ಲಿ ನಡೆದ ವಿದ್ಯಮಾನ ಇದಕ್ಕೆ ವಿರುದ್ಧವಾಗಿದೆ. ಈ ಪರಿಷ್ಕರಣೆಯಲ್ಲಿ ಸುಮಾರು 65 ಲಕ್ಷಕ್ಕೂ ಹೆಚ್ಚು ಜನಗಳ ಹೆಸರನ್ನು ಮತ ಪಟ್ಟಿಯಿಂದ ಕೈ ಬಿಟ್ಟಿರುವುದು ಮತ್ತು ಬದುಕಿರುವವರನ್ನು ಮೃತರು ಎಂದು ಘೋಷಣೆ ಮಾಡಿರುವುದು 65 ಲಕ್ಷ ಜನರ ಬದುಕನ್ನು ಅಯೋಮಯಗೊಳಿಸಿದೆ” ಎಂದರು.

“ಇದಲ್ಲದೆ ಆಧಾರ್ ಕಾರ್ಡ್, ಪಡಿತರ ಚೀಟಿ ಮತ್ತು ಎಲ್ಲಕ್ಕಿಂತ ಮುಖ್ಯವಾಗಿ ಮತದಾರರ ಚೀಟಿ ಊರ್ಜಿತ ದಾಖಲೆಗಳಲ್ಲ ಎಂದು ಆಯೋಗವು ಆದೇಶ ನೀಡಿದೆ. ಚುನಾವಣಾ ಆಯೋಗವು ತಾನೇ ಫೋಟೋ ಲಗತಿಸಿ ನೀಡಿರುವ ಮತದಾರರ ಗುರುತಿನ ಚೀಟಿಯನ್ನು ಮೂಲಭೂತ ದಾಖಲೆ ಎಂದು ಒಪ್ಪುವುದಿಲ್ಲ ಎಂದಿರುವುದೇ ಬಹುದೊಡ್ಡ ವಿಪರ್ಯಾಸವಾಗಿದೆ. ಪ್ರಪಂಚದ ಬಹುದೊಡ್ಡ ಪ್ರಜಾಪ್ರಭುತ್ವ ದೇಶ ಎಂದು ಬಿಂಬಿಸುವ ಭಾರತ ದೇಶದಲ್ಲಿ ಚುನಾವಣಾ ಆಯೋಗವು ಅಪ್ರಜಾಂತಂತ್ರಿಕವಾಗಿ ಅಮಾನೀಯವಾಗಿ ಈ ದೇಶದ ಪ್ರಜೆಗಳಲ್ಲ ಎಂದು ಮುಗ್ಧ ಜನರನ್ನು ಬಿಂಬಿಸುತ್ತಿರುವುದು ಜನವಿರೋಧಿ ನಡೆಯಾಗಿದೆ” ಎಂದು ಬೇಸರ ವ್ಯಕ್ತಪಡಿಸಿದರು.

ಇದನ್ನೂ ಓದಿ: ಧಾರವಾಡ | ಗಾಂಧಿ ಜಯಂತಿ ಅಂಗವಾಗಿ ಜಿಲ್ಲಾ, ರಾಜ್ಯಮಟ್ಟದ ಬಾಪೂಜಿ ಪ್ರಬಂಧ ಸ್ಪರ್ಧೆ

ಜಿಲ್ಲಾ ಕಾರ್ಯದರ್ಶಿ ಲಕ್ಷ್ಮಣ್ ಜಡಗನ್ನವರ ಮಾತನಾಡಿ, “ಇತ್ತೀಚೆಗೆ ಮುಕ್ತಾಯವಾದ ಕೆಲವು ರಾಜ್ಯ ವಿಧಾನಸಭಾ ಚುನಾವಣೆಗಳಲ್ಲಿ ಮತಪಟ್ಟಿಯಲ್ಲಿ ಲಕ್ಷಾಂತರ ನಕಲಿ ಮತದಾರರ ಸೇರ್ಪಡೆ, ನಕಲಿ ಮತದಾನ, ನಕಲಿ ಮತ್ತು ಅಮಾನ್ಯ ವಿಳಾಸಗಳಿರುವುದು ದೃಢಪಟ್ಟಿದೆ. ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದ ವ್ಯಾಪ್ತಿಯ ಮಹದೇವಪುರ ವಿಧಾನಸಭಾ ಕ್ಷೇತ್ರದಲ್ಲಿ ಮೂರು ಮಂದಿ ವಾಸಿಸಲು ಸಾಧ್ಯವಾಗುವ ಮನೆಯ ವಿಳಾಸದಲ್ಲಿ 80 ಮತದಾರರು ದಾಖಲಾಗಿರುವ, ಒಬ್ಬನೇ ವ್ಯಕ್ತಿ ಹಲವಾರು ಮತಗಟ್ಟೆಗಳ ಪಟ್ಟಿಯಲ್ಲಿ ಇರುವುದು ಇಂತಹ ವಿದ್ಯಾಮಾನಗಳಿಂದ ಚುನಾವಣಾ ಆಯೋಗದ ಕಾರ್ಯ ವೈಖರಿಯನ್ನು ಜಗಜ್ಜಾಹೀರುಪಡಿಸಿದೆ. ಇದನ್ನು ಜನತೆ ಅರ್ಥ ಮಾಡಿಕೊಂಡು ದಿನ ನಿತ್ಯ ಅನುಭವಿಸುತ್ತಿರುವ ಸಮಸ್ಯೆಗಳ ವಿರುದ್ಧ ಒಟ್ಟುಗೂಡಿ ಪ್ರತಿಭಟಿಸಬೇಕು” ಎಂದು ಕರೆ ನೀಡಿದರು.

ಪ್ರತಿಭಟನೆಯಲ್ಲಿ ಜಿಲ್ಲಾ ಸಮಿತಿ ಸದಸ್ಯ ಭುವನಾ ಬಳ್ಳಾರಿ, ಭವಾನಿ ಶಂಕರ, ಮಧುಲತಾ ಗೌಡರ್, ದೀಪಾ ಧಾರವಾಡ, ಶರಣು ಗೋನವಾರ, ಪಕ್ಷದ ಸದಸ್ಯರುಗಳು, ಬೆಂಬಲಿಗರು, ಹಿತೈಷಿಗಳು ಭಾಗವಹಿಸಿದ್ದರು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಶಿವಮೊಗ್ಗ | ಅಂಬೇಡ್ಕರ್ ಓದು ; ಭಾರತವನ್ನು ಅರಿಯುವ ದಾರಿ : ಕೋಟಿಗಾನಹಳ್ಳಿ ರಾಮಯ್ಯ ಅಭಿಪ್ರಾಯ

ಶಿವಮೊಗ್ಗ ಮಾನವತಾವಾದಿ ಅಂಬೇಡ್ಕರ್ ಅವರನ್ನು ಓದುವುದು ಎಂದರೆ ಭಾರತವನ್ನು ನೈಜವಾಗಿ ಅರಿಯುವುದು,...

ಬಿಜೆಪಿಯ ಆತ್ಮವಂಚನೆ ಪ್ರತಿಭಟನೆಗಳು ಕಲಬುರಗಿಗೆ ಅಗತ್ಯವಿಲ್ಲ: ಸಚಿವ ಪ್ರಿಯಾಂಕ್ ಖರ್ಗೆ

ಅಧಿಕಾರದಲ್ಲಿದ್ದಾಗ ಕಲಬುರಗಿ ಜಿಲ್ಲೆಯ ರೈತರಿಗೆ ದ್ರೋಹವೆಸಗಿದ್ದ ಬಿಜೆಪಿ ಈಗ ಪ್ರತಿಭಟನೆಯ ನಾಟಕ...

ಧಾರವಾಡ | ಹಿಂದುಳಿದ ವರ್ಗಗಳ ಸಮೀಕ್ಷೆ; ಸಬ್‌ಜೈಲ್ ಸುತ್ತ ಪ್ರದೇಶಗಳಲ್ಲಿ ನೆಟವರ್ಕ್ ಸಮಸ್ಯೆ

ಧಾರವಾಡ ಜಿಲ್ಲೆಯಲ್ಲಿ ಹಿಂದುಳಿದ ವರ್ಗಗಳ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಪ್ರಗತಿಯಲ್ಲಿದ್ದು,...

ವಿಜಯಪುರ | ಪರಿಸರ ಸಂರಕ್ಷಣೆ ಪ್ರತಿಯೊಬ್ಬರ ಕರ್ತವ್ಯ: ಶಂಕರಗೌಡ ಸೋಮನಾಳ

ಪರಿಸರಕ್ಕೆ ಹಾನಿ ಮಾಡದಂತಹ ತಂತ್ರಜ್ಞಾನಗಳನ್ನು ನಾವು ಪ್ರೋತ್ಸಾಹಿಸಬೇಕು. ಪರಿಸರ ಸಂರಕ್ಷಣೆಯಲ್ಲಿ ವಿದ್ಯಾರ್ಥಿಗಳ...

Download Eedina App Android / iOS

X