ಧಾರವಾಡ | ನಾಡಿನ ಏಕೀಕರಣಕ್ಕಾಗಿ ಹೋರಾಡಿದ ಮಹಾನ್ ಸಂಶೋಧಕ ತಲ್ಲೂರ ರಾಯನಗೌಡ: ಯ.ರು. ಪಾಟೀಲ

Date:

Advertisements

ದೇಶದ ಸ್ವಾತಂತ್ರ್ಯಕ್ಕಾಗಿ ಹಾಗೂ ನಾಡಿನ ಏಕೀಕರಣಕ್ಕಾಗಿ ಹೋರಾಡಿದ ಮಹಾನ್ ಹೋರಾಟಗಾರ ದಿ. ತಲ್ಲೂರ ರಾಯನಗೌಡ ಪಾಟೀಲರ ಶ್ರಮವು ಇತಿಹಾಸ ಮತ್ತು ಸಂಶೋಧನಾ ಪರಂಪರೆಯಲ್ಲಿ ಸದಾ ಸ್ಮರಣೀಯ ಎಂದು ಕಿತ್ತೂರಿನ ಚಾರಿತ್ರಿಕ ಕಾದಂಬರಿಕಾರ ಯ.ರು. ಪಾಟೀಲ ಕರ್ನಾಟಕ ವಿದ್ಯಾವರ್ಧಕ ಸಂಘವು ತಲ್ಲೂರ ರಾಯನಗೌಡ ಪಾಟೀಲ ಸ್ಮಾರಕ ಸಂಸ್ಥೆಯ ದತ್ತಿ ಅಂಗವಾಗಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ‘ತಲ್ಲೂರ ರಾಯನಗೌಡರು-ಇತಿಹಾಸ ಪ್ರಜ್ಞೆ’ ಕುರಿತು ಉಪನ್ಯಾಸ ನೀಡುತ್ತಾ ಮಾತನಾಡಿದರು.

ದಿ. ತಲ್ಲೂರ ರಾಯನಗೌಡ ಪಾಟೀಲರು ದೇಶದ ಸ್ವಾತಂತ್ರ್ಯ ಪೂರ್ವದಲ್ಲೇ ರಾಣಿ ಚೆನ್ನಮ್ಮ ಇತಿಹಾಸ ಮಂಡಳಿಯನ್ನು ಸ್ಥಾಪಿಸಿದರು. ಬ್ರಿಟನ್‌ನಿಂದ ರಾಣಿ ಚೆನ್ನಮ್ಮನ ಇತಿಹಾಸದ ಬಗ್ಗೆ ಸಮಗ್ರ ಮಾಹಿತಿ ಸಂಗ್ರಹಿಸಿ, ಅದನ್ನು ದಾಖಲೆಯ ರೂಪದಲ್ಲಿ ಕೃತಿ ರಚಿಸಿ ಪ್ರಕಟಿಸಿದರು. ಒಳ್ಳೆಯ ಸಾಹಿತಿಗಳೂ ಆದ ಅವರು ‘ಮಲ್ಲಸರ್ಜ ಕಾವ್ಯ’ ಹಾಗೂ ‘ಕಿತ್ತೂರು ಬಂಡಾಯ ಕಾವ್ಯವನ್ನು ಸಂಪಾದಿಸಿ ಕಿತ್ತೂರು ಇತಿಹಾಸದ ಮೇಲೆ ಬೆಳಕು ಚೆಲ್ಲಿದರು. ರಾಯನಗೌಡ್ರು ‘ಜನಸೇವೆಯೇ ಜನಾರ್ಧನನ ಸೇವೆ’ ಎಂದು ನಂಬಿದ ಜನಸೇವಕರಾಗಿದ್ದರು” ಎಂದು ಹೇಳಿದರು.

ಬೆಳಗಾವಿಯ ಸಾಹಿತಿ ಬಸವರಾಜ ಗಾರ್ಗಿ ಮಾತನಾಡಿ, ರಾಯನಗೌಡ್ರು ಸ್ವಾತಂತ್ರ್ಯ ಹೋರಾಟಗಾರ ಮಾತ್ರವಲ್ಲದೆ, ಭವ್ಯ ಭಾರತದ ಉಜ್ವಲ ಕನಸುಗಾರರೂ ಆಗಿದ್ದರು. ತಮ್ಮ ಆದರ್ಶ ನಡೆ-ನುಡಿಗಳಿಂದ ಅವರು ಜನಮಾನಸದ ವ್ಯಕ್ತಿಯಾಗಿ ರೂಪುಗೊಂಡವರು ಎಂದು ಹೇಳಿದರು. ಕ.ವಿ.ವ. ಸಂಘದ ಪ್ರಧಾನ ಕಾರ್ಯದರ್ಶಿ ಶಂಕರ ಹಲಗತ್ತಿ ಮಾತನಾಡಿ, ರಾಯನಗೌಡ್ರು ದೇಶಭಕ್ತ ಸಂತರು ಮಾತ್ರವಲ್ಲ, ವಿಚಾರವಾದಿಗಳೂ ಆದ ಬಹುಮುಖ ವ್ಯಕ್ತಿತ್ವ ಉಳ್ಳವರು. ‘ಮನೆ ನಿಮ್ಮದು, ಸೇವೆ ನಮ್ಮದು’ ಎಂಬುದು ಅವರ ಧ್ಯೇಯ ವಾಕ್ಯವಾಗಿತ್ತು. ಸಮಾಜ ಸೇವೆಯಲ್ಲಿಯೇ ತೃಪ್ತರಾದ ಅವರು ಸರ್ವಧರ್ಮ ಸಮನ್ವಯತೆಯ ಪ್ರತಿಪಾದಕರು ಎಂದು ತಿಳಿಸಿದರು.

ವಿಶ್ರಾಂತ ಪ್ರಾಚಾರ್ಯ ಡಾ. ಎ.ಎಲ್. ಪಾಟೀಲ ಯ.ರು. ಪಾಟೀಲರು ಬರೆದ ‘ಬೆಳಕು ಬಿತ್ತಿದವರು’ ಕೃತಿಯನ್ನು ಬಿಡುಗಡೆಗೊಳಿಸಿ ಮಾತನಾಡಿ, ಈ ಕೃತಿಯಲ್ಲಿ 10 ಜನ ಸಾಧಕರು ಬೆಳಕು ಬಿತ್ತಿದ ಬಗೆಯ ಬಗ್ಗೆ ವಿವರಿಸಲಾಗಿದೆ. ಈ ಗ್ರಂಥವು ಓದುಗರಿಗೆ ಮತ್ತು ಸಂಶೋಧನೆಯ ವಿದ್ಯಾರ್ಥಿಗಳಿಗೆ ಆಕರ ಗ್ರಂಥವಾಗಲಿದೆ ಎಂದು ಅಭಿಪ್ರಾಯಪಟ್ಟರು.

ಈ ಸುದ್ದಿ ಓದಿದ್ದೀರಾ? ಧಾರವಾಡ | ಸಾಲಭಾದೆಗೆ ಮನನೊಂದು ರೈತ ಆತ್ಮಹತ್ಯೆ

ವಿಶ್ರಾಂತ ಪ್ರಾಚಾರ್ಯ ಎಂ.ಎಸ್. ಇಂಚಲ ಅಧ್ಯಕ್ಷತೆ ವಹಿಸಿ ಮಾತನಾಡಿದರು. ವೇದಿಕೆಯಲ್ಲಿ ದತ್ತಿದಾನಿಗಳ ಪರವಾಗಿ ಶಂಕರಗೌಡ ಪಾಟೀಲ ಉಪಸ್ಥಿತರಿದ್ದರು. ವೀರಣ್ಣ ಒಡ್ಡೀನ ಸ್ವಾಗತಿಸಿದರು ಮತ್ತು ವಿಶ್ವೇಶ್ವರಿ ಬ. ಹಿರೇಮಠ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಡಾ. ಬಸವರಾಜ ಜಗಜಂಪಿ, ಡಾ. ಸರಜೂ ಕಾಟ್ಕರ, ಕೆ.ಜಿ. ದೇವರಮನಿ, ಶಾಂತಕ್ಕಾ ಪಾಟೀಲ, ತಲ್ಲೂರ ರಾಯನಗೌಡ ಪಾಟೀಲ ಪರಿವಾರದವರು ಸೇರಿದಂತೆ ಅನೇಕರು ಭಾಗವಹಿಸಿದ್ದರು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚಿಕ್ಕಮಗಳೂರು l ಕಾಡುಕೋಣ ದಾಳಿ ವ್ಯಕ್ತಿ ಗಂಭೀರ

ಕಾಡುಕೋಣ ದಾಳಿಯಿಂದ ವ್ಯಕ್ತಿ ಗಂಭೀರ ಗಾಯವಾಗಿರುವ ಘಟನೆ ಚಿಕ್ಕಮಗಳೂರು ತಾಲೂಕಿನ ಬಾಳೂರು...

ರಾಯಚೂರು | ರಕ್ತಹೀನತೆ, ತಾಯಿ ಶಿಶು ಮರಣ ನಿಯಂತ್ರಣಕ್ಕೆ ಒತ್ತಾಯಿಸಿ ಮಹಿಳಾ ಒಕ್ಕೂಟ ಪ್ರತಿಭಟನೆ

ಕಲ್ಯಾಣ ಕರ್ನಾಟಕ ಭಾಗದಲ್ಲಿ ಅತಿ ಹೆಚ್ಚು ಮಹಿಳೆಯರಲ್ಲಿ ರಕ್ತ ಹೀನತೆ ಹಾಗೂ...

ಚಿಕ್ಕಮಗಳೂರು l ಗುಡ್ಡಹಳ್ಳದಲ್ಲಿ ಪುಂಡಾನೆ ಸೆರೆ; ಕಾರ್ಯಾಚರಣೆ ಯಶಸ್ವಿಗೊಳಿಸಿದ ಅರಣ್ಯ ಇಲಾಖೆ

ಸುಮಾರು ಒಂದುವರೆ ವರ್ಷಗಳಿಂದ ಬೀಡು ಬಿಟ್ಟಿದ್ದ, ಪುಂಡಾನೆ ಕೊನೆಗೂ ಸೆರೆಯಾಗಿರುವ ಘಟನೆ,...

ಚಿಕ್ಕಮಗಳೂರು l 1% ಮೀಸಲಾತಿಯನ್ನು ಕೂಡಲೇ ಜಾರಿ ಮಾಡಬೇಕು; ಎದ್ದೇಳು ಕರ್ನಾಟಕ

ಬದುಕಿನ್ನುದ್ದಕ್ಕೂ ಅಲೆಯುತ್ತಲೇ ಬದುಕಿದ ಅಲೆಮಾರಿ ಬಂಧುಗಳು ಇಂದು ನ್ಯಾಯ ಅರೆಸುತ್ತಾ ದೆಹಲಿಗೆ...

Download Eedina App Android / iOS

X