ಧಾರವಾಡ | ದೇಶದಲ್ಲಿನ ನಿರುದ್ಯೋಗ ಸಮಸ್ಯೆ ಬಗೆಹರಿಯಬೇಕು: ಸುನೈನಾ

Date:

ಯುವಜನತೆ ದುಶ್ಚಟಗಳ ಮೂಲಕ ಹಾದಿತಪ್ಪಿರುವುದು ದುರಂತ. ಯುವಕರು ದೇಶಕ್ಕೆ ಸಹಾಯಕಾರಿಯಾಗುವ ವಿಚಾರದ ಕಡೆಗೆ ಗಮನ ಹರಿಸಬೇಕಿದೆ.‌ ನಮ್ಮ ದೇಶದಲ್ಲಿರುವ ನಿರುದ್ಯೋಗ ಸಮಸ್ಯೆ ಬಗೆಹರಿಯಬೇಕಿದೆ ಎಂದು ಹುಬ್ಬಳ್ಳಿ ಪಿ.ಸಿ.ಜಾಬಿನ್ ಕಾಲೇಜಿನ ಉಪನ್ಯಾಸಕಿ ಸುನೈನಾ, ಸ್ವಾಮಿ ವಿವೇಕಾನಂದರ ಬದುಕಿನಲ್ಲಾದ ಪ್ರಸಂಗಗಳನ್ನು ನೆನಪಿಸಿಕೊಂಡರು.

- Advertisement -

ಸ್ವಾಮಿ ವಿವೇಕಾನಂದ ಜಯಂತಿ ಅಂಗವಾಗಿ ಜಿಲ್ಲೆಯ ಕುಂದಗೋಳ ತಾಲೂಕಿನ ಸಂಶಿ ಗ್ರಾಮದ ಪ್ರಯುಕ್ತ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿಯ ವಿಶ್ವವಿದ್ಯಾಲಯದಲ್ಲಿ ಜ. 11ರಂದು ತಾಲೂಕಿನ ಪತ್ರಕರ್ತರು ಹಾಗೂ ಶಿಕ್ಷಕರಿಗೆ ಸನ್ಮಾನ ಹಮ್ಮಿಕೊಂಡಿದ್ದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಮೋದಿ ಆಡಳಿತದಲ್ಲಿ ಮಾಹಿತಿ ಹಕ್ಕು ಕಾಯ್ದೆಯ ‘ಸ್ಥಿತಿ’ ಹೇಗಿದೆ?...

ಯಾವುದೇ ಸರ್ಕಾರ ಆಡಳಿತದಲ್ಲಿರಲಿ ಪ್ರಜಾಸತ್ತಾತ್ಮಕ ವ್ಯವಸ್ಥೆಯನ್ನು ಕಾಪಾಡಬೇಕಾದ ಸಂಸ್ಥೆಗಳ ಸ್ವಾಯತ್ತತೆ ಉಳಿಯಬೇಕು. ಅವು ಪಾರದರ್ಶಕವಾಗಿರಬೇಕು. ಪ್ರಜಾಸತ್ತೆಯ ಕಾರ್ಯವೈಖರಿಯನ್ನು ಕುರಿತಂತೆ ಮುಕ್ತ ಚರ್ಚೆ ನಡೆಯುತ್ತಿರಬೇಕು. ಇದು ಸಕ್ರಿಯ, ಅರ್ಥಪೂರ್ಣ ಪ್ರಜಾಸತ್ತೆಯ ಕನಿಷ್ಠ ಅವಶ್ಯಕತೆ. ಹಾಗಾಗಿ...

ಬಂಗಾಳ ವಿಭಜನೆ | ವಿಭಜನೆಯ ವಿಷಬೀಜದಿಂದ ಒಗ್ಗಟ್ಟಿನ ಜ್ಯೋತಿ...

ಬ್ರಿಟಿಷರ 'ಒಡೆದು ಆಳುವ ನೀತಿ'ಯ ಭಾಗವಾಗಿ 1905ರ ಅಕ್ಟೋಬರ್‌ನಲ್ಲಿ ಜಾರಿಗೆ ಬಂದ ಬಂಗಾಳ ವಿಭಜನೆಯು ಭಾರತೀಯರ ರಾಷ್ಟ್ರೀಯತೆಯನ್ನು ಒಡೆಯುವ ಕುತಂತ್ರವಾಗಿತ್ತು. ಇದಕ್ಕೆ ಪ್ರತಿಯಾಗಿ ಭಾರತೀಯರು 'ರಾಷ್ಟ್ರೀಯ ಶೋಕ ದಿನ' ಆಚರಿಸಿ, ಪರಸ್ಪರ ರಾಖಿ...

ನಟ ಇಮ್ರಾನ್ ಖಾನ್ ಪ್ರತಿಭಟಿಸಿದರೆ ಗಡಿಪಾರು; ಟ್ರಂಪ್ ಪರ...

ಕಾನೂನು ಮತ್ತು ರಾಜತಾಂತ್ರಿಕ ನಿಯಮಗಳು ಎಲ್ಲರಿಗೂ ಒಂದೇ ಆಗಿರಬೇಕು ಹೊರತು ಪ್ರಧಾನಿ ಮೋದಿಯವರ ರಾಜಕೀಯ ಅನುಕೂಲಕ್ಕೆ ತಕ್ಕಂತೆ ಬದಲಾಗಬಾರದು. ವಿದೇಶಿ ಪ್ರಜೆಯೊಬ್ಬ ಭಾರತದ ನೆಲದಲ್ಲಿ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವುದು ತಪ್ಪು ಎನ್ನುವುದಾದರೆ, ಭಾರತದ ಪ್ರಧಾನಿಯೊಬ್ಬರು...

ಇದೇ ಸಂದರ್ಭದಲ್ಲಿ ಈಶ್ವರಿಯ ವಿಶ್ವವಿದ್ಯಾಲಯದ ಕೇಂದ್ರದ ಮೇಲ್ವಿಚಾರಕಿ ಮಲ್ಲಮ್ಮ ಕುರಹಟ್ಟಿ ಮಾತನಾಡಿ, ಯುವಕರೇ ಈ ದೇಶದ ಆಸ್ತಿ. ಅಂತಹ ಯುವಜನರನ್ನು ದುಶ್ಚಟಗಳಿಂದ ಹೋರತರಬೇಕಿದೆ. ನಿಜ ಧರ್ಮದ ನೆಲೆಯ ಬಗ್ಗೆ ಗೊತ್ತಿಲ್ಲದೆ ಸಮಾಜ ಒದ್ದಾಡುತ್ತಿದೆ. ಸಮಾಜದ ಪರಿಸ್ಥಿತಿ ಮತ್ತಷ್ಟು ಕೆಡುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಶ್ರೀ ಗುರುದೇವ ಬ್ರಹ್ಮಾನಂದ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಸತೀಶ ಗೌಡಗೇರಿ ಮಾತನಾಡಿ, ನಾವು ವಿವೇಕಾನಂದರ ವಿಚಾರಗಳನ್ನು ಹೇಳುತ್ತೆವೇಯೆ ಹೊರತು ಆಚರಣೆಗೆ ತರುವಲ್ಲಿ ವಿಫಲವಾಗಿದ್ದೇವೆ. ಯುವಕರು ದುಶ್ಚಟಗಳಿಗೆ ಬಲಿಯಾಗಿ ಹೆತ್ತವರನ್ನೇ ಕೊಲ್ಲುವ ಕೆಟ್ಟ ವಾತಾವರಣ ಸೃಷ್ಟಿಯಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು. ಕೆಎಲ್ಇ ಕಾಲೇಜಿನ ರಮೇಶ ಅತ್ತಿಗೇರಿ ಮಾತನಾಡಿ, ಈ ಕಾರ್ಯಕ್ರಮದ ಮೂಲಕ ಈಶ್ವರಿಯ ವಿಶ್ವವಿದ್ಯಾಲಯವು ಮಕ್ಕಳ ಪ್ರತಿಭೆ ಅನಾವರಣಕ್ಕೆ ಅವಕಾಶ ಮಾಡಿಕೊಟ್ಟಿದೆ ಎಂದರು. ಪತ್ರಕರ್ತರ ವತಿಯಿಂದ ಬಸವರಾಜ ಗುಡ್ಡದಕೇರಿ ಮಾತನಾಡಿದರು.

ಶಿಕ್ಷಕ ರವಿ ಬಾವುಟೆ ಮಾತನಾಡಿ, ಮಕ್ಕಳಿಗೆ ಸರಿಯಾದ ಸಮಯದಲ್ಲಿ ಸರಿಯಾದ ಸಂಸ್ಕಾರ ನೀಡಿದರೆ ಯುವಕರು ದೇಶವನ್ನು ಕಟ್ಟುವಲ್ಲಿ ಮುನ್ನಡೆಯುತ್ತಾರೆ ಎಂದರು. ಕುಮಾರಿ ಭಾರತಿ ಮಾತನಾಡಿ, ಗುರುಗಳು ಕಲಿಸಿದ ಜ್ಙಾನದಿಂದ ಎತ್ತರಕ್ಕೆ ಬೆಳೆಯಲು ಸಾಧ್ಯವಾಯಿತು. ಮತ್ತು ಎಲ್ಲರೂ ಆದ್ಯಾತ್ಮಿಕ ಜ್ನಾನದೆಡೆಗೆ ಮುಖಮಾಡಬೇಕಿದೆ ಎಂದು ತಿಳಿಸಿದರು. ವಿನಯ್ ಪಾಟೀಲ ತಮ್ಮ ಅನುಭವ ಹಂಚಿಕೊಂಡರು.

ಪ್ರೇಮಾ ಮಾತನಾಡಿ, ಇತ್ತಿಚೆಗೆ ಜನರಲ್ಲಿ ರೋಗಾಣುಗಳ ಸೃಷ್ಟಿ ಹೆಚ್ಚಾಗಿದೆ. ಒತ್ತಡಗಳು ಹೆಚ್ಚಾಗುತ್ತಿವೆ. ವಿವೇಕಾನಂದರಿಗೆ ಸಾಧಿಸುವ ಸಂಕಲ್ಪ‌ ಇರುವ ಕಾರಣ ಅವರು ಎತ್ತರಕ್ಕೆ ಬೆಳೆಯಲು ಸಾಧ್ಯವಾಯಿತು ಯಾವುದೇ ಒತ್ತಡಗಳು ಅವರನ್ನು ಕಾಡಲಿಲ್ಲ. ಎಲ್ಲ ರೀತಿಯ ಒತ್ತಡಗಳಿಗೆ ಧ್ಯಾನವೇ ಮೂಲ ಔಷಧಿಯಾಗಿದೆ ಎಂದರು.

ಇದನ್ನೂ ಓದಿ ಧಾರವಾಡ | ಮಾನ್ಯಾ ಹತ್ಯೆ ಪ್ರಕರಣ; ಪಾರದರ್ಶಕ ತನಿಖೆಯಾಗಲಿ: ಎ.ಆರ್.ಕೃಷ್ಣಮೂರ್ತಿ

ಈ ಸಂದರ್ಭದಲ್ಲಿ ತಾಲೂಕಿನ ಯುವ ಪತ್ರಕರ್ತರಾದ ಸುನೀಲ ಕರೋಗಲ್, ಬಸವರಾಜ ಗುಡ್ಡದಕೇರಿ, ಖಾದರಸಾಬ ಡಗಲಿ, ರವಿ ಕಮಡೊಳ್ಳಿ, ನಾಗರಾಜ ಮುದುಬಾವಿ, ದುರ್ಗಪ್ಪ ಗೊಲ್ಲರ, ಕಿರಣಕುಮಾರ ಅರ್ಕಸಾಲಿ, ಶರಣಪ್ಪ ಗೊಲ್ಲರ ಸೇರಿದಂತೆ ಅತಿಥಿಗಳನ್ನು ಸನ್ಮಾನಿಸಿದರು. ಫಕೀರೇಶ ನೀಲನಾಯಕರ, ವಿನಯ ಪಾಟೀಲ, ಭಾರತೀ ಕುರಟ್ಟಿ, ಪ್ರೇಮಾ ಚಾಕಲಬ್ಬಿ, ಪ್ರಿಯಾ ಸಂಶಿ ಹಾಗೂ ಗ್ರಾಮದ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳಿದ್ದರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಗದಗ | ಕನಿಷ್ಠ ವೇತನಕ್ಕೆ ಆಗ್ರಹಿಸಿ ಪ್ರತಿಭಟನೆ

ಪರಿಷ್ಕರಣೆ ಮಾಡಿರುವ ಕನಿಷ್ಟ ವೇತನ ಜಾರಿಗಾಗಿ ಹಾಗೂ ಖಾಯಂಗಾಗಿ ಮತ್ತು ಕೆಲಸದ...

ಗದಗ | ಕೇಂದ್ರ ಸಚಿವ ಪ್ರಲ್ಹಾದ ಜೋಶಿಗೆ ಮನವಿ ಸಲ್ಲಿಸುವ ಮುನ್ನವೇ ಕಬ್ಬು ಬೆಳೆಗಾರರು ಪೋಲಿಸರ ವಶ

ಕಬ್ಬು ಬೆಳೆಗಾರರ ವಿವಿಧ ಬೇಡಿಕೆಗಳ ಈಡೇರಿಕೆ ಕುರಿತಂತೆ ಕೇಂದ್ರ ಸಚಿವ ಪ್ರಹ್ಲಾದ...

ಉಡುಪಿ | ಹಿರಿಯ ಸಾಹಿತಿ ಎ.ಎಸ್.ಎನ್. ಹೆಬ್ಬಾರ್ ಅವರಿಗೆ ಸೂಕ್ತ ರಕ್ಷಣೆ ನೀಡಲು ಜಿಲ್ಲಾಧಿಕಾರಿಗೆ ಮನವಿ

ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸ್ಥಾಪಕ ಅಧ್ಯಕ್ಷರು, ಹಿರಿಯ ವಕೀಲರು...

ಉಡುಪಿ | ಕಾರ್ಮಿಕರು ಹಕ್ಕು ಮತ್ತು ಸೌಲಭ್ಯಗಳಿಂದ ವಂಚಿತರಾಗದಂತೆ ನೋಡಿಕೊಳ್ಳಿ: ಟಿ.ಎಂ. ಶಾಹಿದ್ ತೆಕ್ಕಿಲ್

ಕಾರ್ಮಿಕರ ಹಿತಾಸಕ್ತಿಯನ್ನು ಕಾಪಾಡುವುದರೊಂದಿಗೆ ಸರ್ಕಾರದ ಕಲ್ಯಾಣ ಕಾರ್ಯಕ್ರಮಗಳು ಅರ್ಹ ಫಲಾನುಭವಿಗಳಿಗೆ ತಲುಪುವಂತೆ...