ಧಾರವಾಡ | ರುದ್ರಭೂಮಿಯಲ್ಲಿ ಶರಣರ ವಚನಗಳ ಅನಾವರಣ

Date:

ಧಾರವಾಡ ಮುರುಘಾ ಮಠದ ವ್ಯಾಪ್ತಿಯಲ್ಲಿರುವ ಲಿಂಗಾಯತ ರುದ್ರಭೂಮಿಯಲ್ಲಿ ಬಸವ ಕೇಂದ್ರದ ವತಿಯಿಂದ ಬುಧವಾರ (ಜುಲೈ 2) ಶರಣರ ವಚನ ಬೋರ್ಡ್‌ಗಳನ್ನು ಇಳಕಲ್ ಮಠದ ಗುರುಮಹಾಂತ ಸ್ವಾಮಿ ಅನಾವರಣ ಮಾಡಿದ್ದಾರೆ.

- Advertisement -

“ವಚನ ಫಲಕಗಳನ್ನು ಎಲ್ಲ ರುದ್ರಭೂಮಿಗಳಲ್ಲಿಲೂ ಹಾಕಿಸುವ ವ್ಯವಸ್ಥೆ ಆಗಬೇಕು. ವಚನಗಳಲ್ಲಿ ನಮ್ಮ ಜೀವನದುದ್ದಕ್ಕೂ ಬೇಕಾಗುವ ಅಂಶಗಳು ಸಿಗುತ್ತವೆ. ನಾವು ಹಾದಿತಪ್ಪಿದಾಗ ಎಚ್ಚರಿಸಲು, ತಿದ್ದಿಕೊಂಡು ನಡೆಯಲು, ನಡೆ ನುಡಿ ಒಂದಾಗಲು, ಹುಟ್ಟಿನಿಂದ ಸಾವಿನವರೆಗೂ ಅತ್ಯವಶ್ಯಕ ಬೇಕಾಗುವ ವಚನಗಳನ್ನು ದಿನಂಪ್ರತಿ ಓದುತ್ತ ಹೋದಾಗ ಜೀವನವನ್ನು ಸಾರ್ಥಕಪಡಿಸಿಕೊಳ್ಳಬಹುದು” ಎಂದು ಅವರು ಹೇಳಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಜನತಂತ್ರದ ಬಿಕ್ಕಟ್ಟಿಗೆ ಮೌನ; ವ್ಯಾಪಾರಿಗಳ ನಷ್ಟಕ್ಕೆ ಪರಿಹಾರದ ಭರವಸೆ;...

ಚುನಾವಣಾ ಜನತಂತ್ರ ಬಿಕ್ಕಟ್ಟಿಗೆ ಸಿಲುಕಿದಾಗ, ನಾಗರಿಕರ ಪ್ರತಿಭಟನಾ ಹಕ್ಕು ಬೀದಿಗೆ ಬಿದ್ದಾಗ ಸುಪ್ರೀಂ ಕೋರ್ಟ್ ತಳೆದ ಮೌನ, ಸ್ಪಂದಿಸಿದ ರೀತಿ, ಕನಾಟ್ ಪ್ಲೇಸ್‌ನ ವ್ಯಾಪಾರಿಗಳು ಹಾಗೂ ಉದ್ಯೋಗಿಗಳ ಜೀವನೋಪಾಯಕ್ಕೆ ಧಕ್ಕೆಯಾದರೆ ಮಧ್ಯಪ್ರವೇಶಿಸಿ ಪರಿಹಾರ...

‘ಕೈಮುಗಿದು ಕಾಲಿಗೆ ಬೀಳುವೆ…’ ಪ್ರಜಾಪ್ರಭುತ್ವ ಕುಸಿತಕ್ಕೆ ಮುನ್ನುಡಿಯೇ?

ಜಾತಿ ಅಸಮಾನತೆ, ಸಾಮಾಜಿಕ ಶೋಷಣೆ ಮತ್ತು ರಾಜಕೀಯ ಪ್ರಭಾವದ ಮುಂದೆ ಜನಪ್ರತಿನಿಧಿಗಳೇ ಕೈಮುಗಿದು ನಿಲ್ಲುವ ದುಸ್ಥಿತಿ ಪ್ರಜಾಪ್ರಭುತ್ವದ ಅಡಿಪಾಯವನ್ನೇ ಅಲುಗಾಡಿಸುತ್ತಿದೆ. ಸಂವಿಧಾನ ಸಾರಿದ ಸಮಾನತೆ, ಸ್ವಾತಂತ್ರ್ಯ ಮತ್ತು ಭ್ರಾತೃತ್ವ ಕೇವಲ ಕಾಗದಕ್ಕೆ ಸೀಮಿತವಾಗುತ್ತಿದೆಯೇ...

JNU ವಿದ್ಯಾರ್ಥಿ ‘ನಜೀಬ್’ ನಾಪತ್ತೆಗೆ 10 ವರ್ಷಗಳು: ಉತ್ತರ...

ತನಿಖಾ ಸಂಸ್ಥೆಗಳು ಕಡತವನ್ನು ಮುಚ್ಚಿದ ಮಾತ್ರಕ್ಕೆ ಒಬ್ಬ ತಾಯಿಯ ಹುಡುಕಾಟವನ್ನಾಗಲಿ ಅಥವಾ ಅಮಾಯಕ ವಿದ್ಯಾರ್ಥಿಯೊಬ್ಬನ ನಾಪತ್ತೆ ಕುರಿತ ಪ್ರಶ್ನೆಗಳನ್ನಾಗಲಿ ಅಳಿಸಿಹಾಕಲು ಸಾಧ್ಯವಿಲ್ಲ. ನಜೀಬ್ ಅಹ್ಮದ್ ಅವರನ್ನು ಕೇವಲ ಒಂದು ಪ್ರತಿಭಟನೆಯ ಸಂಕೇತವಾಗಿ ನೆನೆಯುವ...

ರುದ್ರಭೂಮಿಗಳಲ್ಲಿ ವಚನಗಳ ಫಲಕಗಳನ್ನು ಹಾಕಿಸುವ ಪರಿಕಲ್ಪನೆಯನ್ನು ತಂದ ಸಿದ್ಧರಾಮಣ್ಣ ನಡಕಟ್ಟಿ ಮಾತನಾಡಿ, “ಈಗ ನಗರದ ಒಂದು ರುದ್ರಭೂಮಿಯಲ್ಲಿ ಈ ಕಾರ್ಯವನ್ನು ಯಶಸ್ವಿಗೊಳಿಸಿದ್ದೇವೆ. ಇನ್ನುಳಿದ ಎಲ್ಲ ರುದ್ರಭೂಮಿಗಳಲ್ಲೂ ಈ ಫಲಕಗಳನ್ನು ಹಾಕಿಸಲು ಮುಂದಾಗುತ್ತೇವೆ. ವಚನಗಳಿಗೆ ಯಾವುದೇ ಜಾತಿ, ಧರ್ಮ, ವರ್ಗ, ಲಿಂಗಭೇದ ಇರುವುದಿಲ್ಲ. ವಚನಗಳು ಸಕಲ ಜೀವಾತ್ಮರಿಗೂ ಲೇಸನ್ನು ಬಯಸಲು ಕಲಿಸುತ್ತವೆ” ಎಂದು ತಿಳಿಸಿದರು.

ಬಸವಂತಪ್ಪ ತೋಟದ ಮಾತನಾಡಿ, “ಮಣ್ಣು ಕೊಡಲು ಬಂದ ಜನರು ಅಂತ್ಯಸಂಸ್ಕಾರದ ಎಲ್ಲ ಕಾರ್ಯಗಳು‌ ಮುಗಿಯುವತನಕ ಅಲ್ಲಲ್ಲಿ ಸಾವಿನ ಬಗ್ಗೆಯೆ ಮಾತನಾಡಿಕೊಳ್ಳುತ್ತ ಕುಳಿತುಕೊಳ್ಳುವ ಬದಲು ಒಂದೆರಡು ವಚನಗಳನ್ನು ಓದಿ ಮನಸ್ಸನ್ನು ಅರಳಿಸಿಕೊಳ್ಳಬಹುದು. ಜಿಗುಪ್ಸೆಗೆ ಒಳಗಾದ ಮನುಷ್ಯನು ಸಾವು ಎಲ್ಲರಿಗೂ ಬರುತ್ತದೆ ಎಂಬ ಸತ್ಯವನ್ನಿರಿತು, ಅಂತ್ಯಸಂಸ್ಕಾರದ ಕುರಿತು ಶರಣರು ಹಲವಾರು ವಚನಗಳನ್ನು ಬರೆದಿದ್ದಾರೆ ಅವುಗಳನ್ನು ಒಂದು ವಚನ ಓದಿದರೂ ಸಾಕು. ಅದರಲ್ಲೂ ವಿಶೇಷವಾಗಿ ಸ್ಮಶಾನವೆಂಬ ಪವಿತ್ರ ಸ್ಥಳದಲ್ಲಿ ಓದಿದಾಗ ಶಾಸ್ವತ ನೆನಪಿಟ್ಟುಕೊಳ್ಳಬಹುದು” ತಿಳಿಸಿದರು.

ಕಾರ್ಯಕ್ರಮದಲ್ಲಿ ಸಿದ್ಧರಾಮ ನಡಕಟ್ಟಿ, ರಾಜು ಮರಳಪ್ಪಣವರ, ಅನುಸೂಯಾ ಸೋಮಣ್ಣ ನಡಕಟ್ಟಿ, ಗಂಗಾಂಬಿಕಾ ಹಂಪ್ಪಣವರ, ಬಸವಂತಪ್ಪ ತೋಟದ, ವಿಶ್ವನಾಥ ನಡಕಟ್ಟಿ ಇನ್ನಿತರರು ಇದ್ದರು.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬಲೂನ್ ಮಾರುವ 9 ವರ್ಷದ ಬಾಲಕಿ ಅತ್ಯಾಚಾರ, ಕೊಲೆ ಪ್ರಕರಣ: ಅಪರಾಧಿ ಕಾರ್ತಿಕ್‌ಗೆ ಗಲ್ಲು ಶಿಕ್ಷೆ

ಕಳೆದ ವರ್ಷದ ದಸರಾ ಮಹೋತ್ಸವದ ಸಂದರ್ಭದಲ್ಲಿ ಕುಟುಂಬದೊಂದಿಗೆ ಟೆಂಟ್‌ನಲ್ಲಿ ಮಲಗಿದ್ದ 9...

ಬಾಗೇಪಲ್ಲಿ | ಬೆಂಗಳೂರು ಉತ್ತರ ವಿಶ್ವವಿದ್ಯಾಲಯ ಅಂತರ ಕಾಲೇಜು ವಿದ್ಯಾರ್ಥಿಗಳ ಗುಡ್ಡಗಾಡು ಓಟ ಸ್ಪರ್ಧೆ

ವಿದ್ಯಾರ್ಥಿಗಳು ಪಠ್ಯ ಚಟುವಟಿಕೆಗಳ ಜೊತೆಗೆ ಪಠ್ಯೇತರ ಚಟುವಟಿಕೆಗಳಾದ ಕ್ರೀಡೆಗಳಲ್ಲಿ ಭಾಗವಹಿಸುವುದರಿಂದ ಶಾರೀರಿಕ...

ರಾಯಚೂರು | ಮಾನ್ವಿ ಬಳಿ ಈರುಳ್ಳಿ ಸಾಗಿಸುತ್ತಿದ್ದ ಲಾರಿ ಪಲ್ಟಿ; ಚಾಲಕ, ಕ್ಲೀನರ್‌ಗೆ ಗಾಯ

ಮಾನ್ವಿ ತಾಲೂಕಿನ ಗ್ರಾಮದ ಸಮೀಪದ ಹೊರವಲಯದಲ್ಲಿ ಮಾನ್ವಿ ರಸ್ತೆಯಲ್ಲಿ ಈರುಳ್ಳಿ ಸಾಗಿಸುತ್ತಿದ್ದ...