ಧಾರವಾಡ | ವಿವೇಕಾನಂದರ ವಿಚಾರಗಳು ಸಮಾಜಕ್ಕೆ ದಾರಿದೀಪ: ಮಲ್ಲಯ್ಯಸ್ವಾಮಿ ತೋಟಗಂಟಿ

Date:

ದೇಶದ ಘನತೆಯನ್ನು ಪ್ರಪಂಚಮುಖದಲ್ಲಿ ಎತ್ತಿಹಿಡಿದ ವೀರಸನ್ಯಾಸಿಯ ಬದುಕಿನ ಆದರ್ಶಗಳು ಪಠ್ಯಪುಸ್ತಕಗಳಿಂದ ತೊಡಗಿ ನಾನಾ ಬಗೆಯ ಗ್ರಂಥಗಳವರೆಗೆ ಅಡಿಗಡಿಗೆ ನೆನಪಿಸಲ್ಪಡುತ್ತಲೇ ಸ್ವಾಮಿ ವಿವೇಕಾನಂದರ ವಿಚಾರಗಳು ಸಮಾಜಕ್ಕೆ ದಾರಿದೀಪವಾಗಿವೆ. ಮತ್ತು ಅವರು ದೇಶದ ಯುವ ಸಮುದಾಯಕ್ಕೆ ‘ನಿತ್ಯಸ್ಫೂರ್ತಿ’ ಮಹಾಸಂತ ಎಂದು ಜಾನಪದ ವಿದ್ವಾಂಸ ಮಲ್ಲಯ್ಯ ಸ್ವಾಮಿ ತೋಟಗಂಟಿ ಹೇಳಿದರು.

- Advertisement -

ಜಿಲ್ಲೆಯ ಕಲಘಟಗಿ ಪಟ್ಟಣದ ವಿದ್ಯಾಸಾಗರ ಶಾಲೆಯಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ನಡೆದ ಸ್ವಾಮಿ ವಿವೇಕಾನಂದರ 163ನೇ ಜಯಂತಿ ಹಾಗೂ 2026 ವರ್ಷದ ಕ್ಯಾಲೆಂಡರ್ ಲೋಕಾರ್ಪಣೆ ಸಮಾರಂಭದ ಕಾರ್ಯಕ್ರಮವನ್ನು ಉದ್ಘಾಟಿಸಿ, ಮಾತನಾಡಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಜನತಂತ್ರದ ಬಿಕ್ಕಟ್ಟಿಗೆ ಮೌನ; ವ್ಯಾಪಾರಿಗಳ ನಷ್ಟಕ್ಕೆ ಪರಿಹಾರದ ಭರವಸೆ;...

ಚುನಾವಣಾ ಜನತಂತ್ರ ಬಿಕ್ಕಟ್ಟಿಗೆ ಸಿಲುಕಿದಾಗ, ನಾಗರಿಕರ ಪ್ರತಿಭಟನಾ ಹಕ್ಕು ಬೀದಿಗೆ ಬಿದ್ದಾಗ ಸುಪ್ರೀಂ ಕೋರ್ಟ್ ತಳೆದ ಮೌನ, ಸ್ಪಂದಿಸಿದ ರೀತಿ, ಕನಾಟ್ ಪ್ಲೇಸ್‌ನ ವ್ಯಾಪಾರಿಗಳು ಹಾಗೂ ಉದ್ಯೋಗಿಗಳ ಜೀವನೋಪಾಯಕ್ಕೆ ಧಕ್ಕೆಯಾದರೆ ಮಧ್ಯಪ್ರವೇಶಿಸಿ ಪರಿಹಾರ...

‘ಕೈಮುಗಿದು ಕಾಲಿಗೆ ಬೀಳುವೆ…’ ಪ್ರಜಾಪ್ರಭುತ್ವ ಕುಸಿತಕ್ಕೆ ಮುನ್ನುಡಿಯೇ?

ಜಾತಿ ಅಸಮಾನತೆ, ಸಾಮಾಜಿಕ ಶೋಷಣೆ ಮತ್ತು ರಾಜಕೀಯ ಪ್ರಭಾವದ ಮುಂದೆ ಜನಪ್ರತಿನಿಧಿಗಳೇ ಕೈಮುಗಿದು ನಿಲ್ಲುವ ದುಸ್ಥಿತಿ ಪ್ರಜಾಪ್ರಭುತ್ವದ ಅಡಿಪಾಯವನ್ನೇ ಅಲುಗಾಡಿಸುತ್ತಿದೆ. ಸಂವಿಧಾನ ಸಾರಿದ ಸಮಾನತೆ, ಸ್ವಾತಂತ್ರ್ಯ ಮತ್ತು ಭ್ರಾತೃತ್ವ ಕೇವಲ ಕಾಗದಕ್ಕೆ ಸೀಮಿತವಾಗುತ್ತಿದೆಯೇ...

JNU ವಿದ್ಯಾರ್ಥಿ ‘ನಜೀಬ್’ ನಾಪತ್ತೆಗೆ 10 ವರ್ಷಗಳು: ಉತ್ತರ...

ತನಿಖಾ ಸಂಸ್ಥೆಗಳು ಕಡತವನ್ನು ಮುಚ್ಚಿದ ಮಾತ್ರಕ್ಕೆ ಒಬ್ಬ ತಾಯಿಯ ಹುಡುಕಾಟವನ್ನಾಗಲಿ ಅಥವಾ ಅಮಾಯಕ ವಿದ್ಯಾರ್ಥಿಯೊಬ್ಬನ ನಾಪತ್ತೆ ಕುರಿತ ಪ್ರಶ್ನೆಗಳನ್ನಾಗಲಿ ಅಳಿಸಿಹಾಕಲು ಸಾಧ್ಯವಿಲ್ಲ. ನಜೀಬ್ ಅಹ್ಮದ್ ಅವರನ್ನು ಕೇವಲ ಒಂದು ಪ್ರತಿಭಟನೆಯ ಸಂಕೇತವಾಗಿ ನೆನೆಯುವ...

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ.ಲಿಂಗರಾಜ ಅಂಗಡಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ 2026 ವರ್ಷದ ಕ್ಯಾಲೆಂಡರ್ ಬಿಡುಗಡೆ ಮಾಡಿ ಮಾತನಾಡಿ, ಭಾರತದ ಆಧ್ಯಾತ್ಮಿಕ ಸಂಸ್ಕೃತಿ-ಸಂಸ್ಕಾರ- ಉತ್ಕೃಷ್ಟ ವಿಚಾರಗಳನ್ನು ವಿವೇಕಾನಂದರು ಜಗತ್ತಿಗೆ ಪರಿಚಯಿಸಿದ ಸಂದರ್ಭವಾಗಿ ಚಿಕಾಗೋ ವಿಶ್ವಧರ್ಮ ಸಮ್ಮೇಳನದ ಭಾಷಣ ಕಂಡುಬರುತ್ತದೆ. ‘ಅಮೇರಿಕದ ಸಹೋದರ ಸಹೋದರಿಯರೇ’ ಎಂಬ ಅವರ ಭಾಷಣದ ಆರಂಭ ಇಂದಿಗೂ ರೋಮಾಂಚನಕಾರಿ ಅನುಭವವಾಗಿ ಅಂತರಂಗದಲ್ಲಿ ಸಂಚಲನ ಮೂಡಿಸುತ್ತದೆ. ಭಾರತೀಯರಿಗೆ ಇದು ಹೆಮ್ಮೆ ತರುವ ವಿಚಾರ ಎಂದರು.

ಹಿರಿಯ ಸಾಹಿತಿ ಕೆ. ಬಿ. ಪಾಟೀಲ್ ಕುಲಕರ್ಣಿ ಮಾತನಾಡಿ, ವಿವೇಕಾನಂದರು ನೂರಾರು ವರ್ಷಗಳ ಹಿಂದೆಯೇ ಆದರ್ಶಗಳನ್ನು ಬಿತ್ತಿ, ನಮ್ಮೊಳಗಿನ ಉತ್ಸಾಹವನ್ನು ಹೊರಹೊಮ್ಮಿಸುವ ಕಾಯಕ ಮಾಡಿದ್ದಾರೆ. ಅವರ ಪ್ರೇರಣೆ ನಮ್ಮೆಲ್ಲರಲ್ಲೂ ಸದಾ ಜಾಗೃತಿ ಹಾಗೂ ‘ದೇಶ ಮೊದಲು’ ಎಂಬ ಭಾವನೆಯನ್ನು ಮೂಡಿಸಬೇಕಿದೆ ಎಂದರು. ಈ ವೇಳೆ ವಿದ್ಯಾಸಾಗರ ಸ್ಕೂಲಿನ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ವಿವೇಕಾನಂದರ ವೇಷ ಭೂಷಣ ಉಡುಗೆ ತೊಟ್ಟು ವಿದ್ಯಾರ್ಥಿಗಳು ಗಮನ ಸೆಳೆದರು. ವಿದ್ಯಾಸಾಗರ್ ಸ್ಕೂಲ್ ಪ್ರಾಂಶುಪಾಲರಾದ ಸುನೀತಾ ಪಾಟೀಲ್ ಕಾರ್ಯಕ್ರಮದ ಅಧ್ಯಕ್ಷತೆ  ವಹಿಸಿದ್ದರು.

ಇದನ್ನೂ ಓದಿ ಧಾರವಾಡ | ಬಾಲ್ಯ ವಿವಾಹ ನಿರ್ಮೂಲನೆ ಮಾಡುವಲ್ಲಿ ಶ್ರಮವಹಿಸಬೇಕು: ನ್ಯಾ. ಪರುಶುರಾಮ ದೊಡ್ಡಮನಿ

ಕ. ಸಾ. ಪ ತಾಲೂಕು ಅಧ್ಯಕ್ಷ ರಮೇಶ ಸೋಲಾರಗೋಪ್ಪ, ಕಸಾಪ ಗೌರವ ಕಾರ್ಯದರ್ಶಿ ಹಾಗೂ ರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತ ಪ್ರಭುಲಿಂಗ ರಂಗಾಪುರ. ಕೇಂದ್ರ ಪ್ರಶಸ್ತಿ ಪುರಸ್ಕೃತ ಅಶೋಕ ಅರ್ಕಸಾಲಿ, ರಾಜ್ಯ ಪ್ರಶಸ್ತಿ ಪುರಸ್ಕೃತ ಎಚ್ ಎನ ಸುನಗದ, ಕಜಾಪ ಅಧ್ಯಕ್ಷ ವೀರಣ್ಣ ಕುಬಸದ, ಮಕ್ಕಳ ಸಾಹಿತ್ಯ ಪರಿಷತ್ ಅಧ್ಯಕ್ಷ ಸೋಮಲಿಂಗ ಒಡೆಯರ, ಕರ್ನಾಟಕ ಸಂಗ್ರಾಮ ಸೇನೆಯ ತಾಲೂಕಾಧ್ಯಕ್ಷ ಸಾತಪ್ಪ ಕುಂಕೂರ, ಅರುಣ್ ಪಾಟೀಲ ವಿನಾಯಕ ಭಟ್, ಸೌಮ್ಯ ಪಾಟೀಲ, ಸುಭಾಸ ಕಂಪ್ಲಿಕೋಪ್ಪ, ಸೇರಿದಂತೆ ಕ ಸಾ ಪ ಪದಾಧಿಕಾರಿಗಳು, ಶಾಲಾ ಶಿಕ್ಷಕಿಯರು, ವಿದ್ಯಾರ್ಥಿಗಳು ಸಿಬ್ಬಂದಿ ಉಪಸ್ಥಿತರಿದ್ದರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬಬಲೇಶ್ವರ ನಾಕಾ ರಸ್ತೆ ಕಾಮಗಾರಿ ವಿಳಂಬಕ್ಕೆ ಆಪ್ ಆಕ್ರೋಶ; ಪಾಲಿಕೆಗೆ ಒಂದು ವಾರ ಗಡುವು

ಅಭಿವೃದ್ಧಿ ಕಾಮಗಾರಿ ಹೆಸರಿನಲ್ಲಿ ಬಬಲೇಶ್ವರ ನಾಕಾದಿಂದ ನಾಯರಾ ಪೆಟ್ರೋಲ್ ಪಂಪ್‌ವರೆಗಿನ ರಸ್ತೆಯ...

ಕೋಲಾರ | ಕಾಂಗ್ರೆಸ್ ಅಭ್ಯರ್ಥಿ ಶಶಿ ಹುಲಿಕುಂಟೆಮಠ್ ಪರ ಮತ ಯಾಚನೆ

ಮುಂಬರುವ ಜಿ.ಪಂ,‌ ತಾ.ಪಂ. ಗ್ರಾ.ಪಂ.ಗೆ ಈ ಚುನಾವಣೆಯೇ ಪ್ರಮುಖ ದಾರಿ. ನಂತರ...

ಯುವಜನತೆ ದುಶ್ಚಟಗಳಿಂದ ದೂರವಿದ್ದು ಉತ್ತಮ ನಾಗರಿಕರಾಗಬೇಕು: ಹಜ್ರತ್ ಎಂ.ಪಿ. ಮುಜಮ್ಮಿಲ್ ಸಾಹೇಬ್ ಕರೆ

ಮೈಸೂರಿನ ಗೌಸಿಯಾ ನಗರದ ಉಸ್ಮಾನಿಯಾ ಬ್ಲಾಕ್‌ನ ನೌಜವಾನ್ ಕಮಿಟಿ ವತಿಯಿಂದ ಪ್ರತಿವರ್ಷದಂತೆ...

ಸೇನಾ ನೇಮಕಾತಿ ಆಯ್ಕೆ ಪ್ರಕ್ರಿಯೆ ಕುರಿತು ಅರಿವು; ಪೂರ್ವಭಾವಿ ಪರೀಕ್ಷೆ

ಭಾರತೀಯ ಸೇನೆಯ ಲಿಖಿತ ಪರೀಕ್ಷೆಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಮುಂದಿನ ಹಂತದ ನೇಮಕಾತಿ...