ಮುಕಳೆಪ್ಪ ಲವ್ ಜಿಹಾದ್ ಎಂದು ನನ್ನ ಪತಿ ವಿರುದ್ಧ ಇಲ್ಲಸಲ್ಲದ ಆರೋಪಗಳು ಕೇಳಿಬರುತ್ತಿದ್ದು, ಅದೆಲ್ಲ ಸುಳ್ಳು ನಾವಿಬ್ಬರು ಪರಸ್ಪರ ಪ್ರೀತಿಸಿ ಮದುವೆ ಆಗಿದ್ದೇವೆ ಎಂದು ಖ್ವಾಜಾ ಅಲಿಯಾಸ್ ಮುಕಳೆಪ್ಪ ಪತ್ನಿ ಗಾಯತ್ರಿ ಜಾಲಿಹಾಳ ಸ್ಪಷ್ಟನೆ ನೀಡಿದ್ದಾರೆ.
ಈ ಕುರಿತು ತಮ್ಮ ಇನಸ್ಟಾಗ್ರಾಮ್ ಖಾತೆಯಲ್ಲಿ ವಿಡಿಯೋ ಹಂಚಿಕೊಂಡ ಅವರು, ನಮ್ಮಿಬ್ಬರ ಮದುವೆ ಆದಮೇಲೂ ನನ್ನ ತಾಯಿ ಬಗಳಷ್ಟು ಸಪೋರ್ಟ್ ಮಾಡಿದ್ದರು. ಆ ಬಗ್ಗೆ ಎಲ್ಲ ದಾಖಲೆಗಳೂ ನನ್ನ ಹತ್ತಿರ ಇದ್ದಾವೆ. ಇದೀಗ ನನ್ನ ತಾಯಿ ಮಾಧ್ಯಮಗಳ ಎದುರಿಗೆ ಹೇಳುತ್ತಿರುವ ಹೇಳಿಕೆಗಳೆಲ್ಲ ಸುಳ್ಳಾಗಿದ್ದು, ಇದೆಲ್ಲ ಯಾರು ನನ್ನ ತಾಯಿಯ ತಲೆಕೆಡಿಸುತ್ತಿದ್ದಾರೊ ಗೊತ್ತಾಗುತ್ತಿಲ್ಲ.
ಗಾಯತ್ರಿ ಹಂಚಿಕೊಂಡ ವಿಡಿಯೋ ಲಿಂಕ್ ಹೀಗಿದೆ.. https://www.instagram.com/reel/DO2vwUaExOa/?igsh=aWgyaHFtaGFvOWw3
ಇನ್ನು ಮುಕಳೆಪ್ಪ ಹಿಂದೂ ಹುಡುಗಿ ಮೈಂಡ್ ವಾಸ್ ಮಾಡಿ ಮದುವೆ ಆಗಿದ್ದಾನೆ ಎಂಬ ಆರೋಪಗಳು ಕೇಳಿಬರುತ್ತಿದ್ದು, ಅವೆಲ್ಲ ಸುಳ್ಳಾಗಿವೆ. ನನ್ನ ಮೈಂಡ್ ಯಾರೂ ವಾಸ್ ಮಾಡಿಲ್ಲ. ನಾನೇ ಸ್ವ ಇಚ್ಛೆಯಿಂದ ಅವರ ಬಳಿ ಬಂದಿದ್ದೇನೆ. ಮತ್ತು ನಾವಿಬ್ಬರು ಪ್ರೀತಿಸಿ ಒಪ್ಪಿಗೆಯಿಂದ ರಜಿಸ್ಟರ್ ಮ್ಯಾರೇಜ್ ಆಗಿದ್ದೇವೆ. ಒಂದು ವೇಳೆ ನನ್ನ ಪತಿಗಾಗಲಿ, ನನ್ನ ಪತಿಯ ಕುಟುಂಬದವರಿಗಾಗಲಿ ಯಾವುದೇ ಅಪಾವಾದಲ್ಲಿ ಕಾನೂನಿನಿಂದ ನನಗೆ ನ್ಯಾಯ ಸಿಗಬೇಕು. ಮತ್ತು ಸುಳ್ಳು ಸುದ್ಧಿಗಳನ್ನು ದಯವಿಟ್ಟು ಯಾರೂ ನಂಬಬೇಡಿ ಎಂದು ವಿನಂತಿಸಿಕೊಂಡಿದ್ದಾರೆ.