ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪನೆಗೆ ಆಗ್ರಹಿಸಿ ವಿಜಯಪುರ ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪನಾ ಹೋರಾಟ ಸಮಿತಿ ಕೈಗೊಂಡಿರುವ ಅನಿರ್ದಿಷ್ಟಾವಧಿ ಧರಣಿಯು ಐದನೇ ದಿನಕ್ಕೆ ಕಾಲಿಟ್ಟಿದ್ದು, ಈ ಧರಣಿಗೆ ವಿವಿಧ ಸಂಘಟನೆಗಳು ಬೆಂಬಲ ವ್ಯಕ್ತಪಡಿಸಿವೆ.
“ಖಾಸಗಿಯವರಿಗೆ ಜಿಲ್ಲಾ ಆಸ್ಪತ್ರೆ ಒಪ್ಪಿಸುವ ನಿರ್ಧಾರವನ್ನು ಈ ಕೂಡಲೇ ವಾಪಸ್ ಪಡೆದುಕೊಳ್ಳಬೇಕು. ಇಲ್ಲವಾದರೆ ಮುಂದಿನ ದಿನಗಳಲ್ಲಿ ತೀವ್ರವಾದ ಹೋರಾಟ ನಡೆಸಬೇಕಾಗುತ್ತದೆ. ಜನಪ್ರತಿನಿಧಿಗಳು ಜನಪರ ಎಂದುಕೊಳ್ಳುವವರ ಧರಣಿ ಸ್ಥಳಕ್ಕೆ ಬರಬೇಕು ಅಥವಾ ಸರ್ಕಾರದ ಮೇಲೆ ಒತ್ತಡ ತರಬೇಕು. ಜನಪ್ರತಿನಿಧಿಗಳು ಬಂದು ಮನವಿ ಪತ್ರ ಸ್ವೀಕಾರ ಮಾಡಬೇಕು” ಎಂದು ಧರಣಿ ನಿರತರು ಆಗ್ರಹಿಸಿದರು.
ಈ ಸುದ್ದಿ ಓದಿದ್ದೀರಾ? ಉತ್ತರ ಕನ್ನಡ | ಅಕ್ರಮ ಬಡ್ಡಿ ದಂಧೆ ನಿಯಂತ್ರಣ, ಬ್ಯಾಂಕ್‌ಗಳಲ್ಲಿ ಭದ್ರತೆ ಹೆಚ್ಚಿಸಲು ಎಸ್‌ಪಿ ಸೂಚನೆ
ಆಟೋ ಯೂನಿಯನ್ ಅಧ್ಯಕ್ಷ ಅಬ್ದುಲ್ ರಜಾಕ್ ಪಟೇಲ್, ಬುದ್ದಿಷ್ಟ್ ಸಮಾಜದ ರಾಜ ಕಾರ್ಯದರ್ಶಿ ಬಸವರಾಜ ಹೊಳ್ಕರ್, ಮುಸ್ಲಿಂ ಮೈನಾರಿಟಿ ಡೆವಲಪ್‌ಮೆಂಟ್ ಕಮಿಟಿ ಅಧ್ಯಕ್ಷ ಆಫೀಸ್ ಸಿದ್ದಿಕಿ, ಅಮ್ ಆದ್ಮಿ ಪಕ್ಷದ ಜಿಲ್ಲಾ ಅಧ್ಯಕ್ಷ ಭೋಗೇಶ ಸೋಲಾಪುರ, ದಲಿತ ಸಂಘರ್ಷ ಸಮಿತಿ ಮುಖಂಡ ಸಂಜು ಕಂಬಾಗಿ, ಅರವಿಂದ ಕುಲಕರ್ಣಿ, ಅಕ್ರಮ ಮಾಶಾಳಕಾರ, ಮಲ್ಲಿಕಾರ್ಜುನ ಬಟಗಿ, ಅನಿಲ ಹೊಸಮನಿ, ಭರತ್ ಕುಮಾರ್ ಎಚ್ ಟಿ, ಸಿದ್ದಲಿಂಗ ಬಾಗೇವಾಡಿ, ಜಗದೇವ ಸೂರ್ಯವಂಶಿ, ಪ್ರಭುಗೌಡ ಪಾಟೀಲ, ಇರ್ಫಾನ್ ಶೇಕ್, ಅಲ್ತಾಫ್ ಇಟಗಿ, ಬಿ ಎಂ ಪಠಣ, ಶಿವು ಮೇಲಿನಮನಿ, ಅರುಣ ಮಠ, ಸಿ ಆರ್ ಗಂಗಾಧರ, ಆಶ್ರಫಾ ಕುಡುಚಿ, ಮಹೇಶ ರಾಂಪುರ, ಪಾಂಡುರಂಗ ದೇಸಾಯಿ, ಶ್ರೀನಾಥ ಪೂಜಾರಿ, ಶಿವಬಾಳಮ್ಮ ಕೊಂಡುಗುಳಿ, ಶ್ರೀಕಾಂತ ಕೊಂಡಗುಳಿ ಹಾಗೂ ಗೀತಾ ಎಚ್ ಇದ್ದರು.