ಮೈಸೂರು ಜಿಲ್ಲೆ, ಹುಣಸೂರು ತಾಲ್ಲೂಕು, ಬಿಳಿಕೆರೆ ಹೋಬಳಿಯ ಗಾಗೇನಹಳ್ಳಿಯಲ್ಲಿ ರೈತ ಸಂಘದ ಶಾಖೆಯನ್ನು ಜಿಲ್ಲಾಧ್ಯಕ್ಷ ಹೊಸೂರು ಕುಮಾರ್ ಉದ್ಘಾಟಿಸಿ ರೈತ ಸಂಘದ ಪಿತಾಮಹ ಎಚ್. ಎಸ್. ರುದ್ರಪ್ಪ ಎಂದರು.
ಹೊಸೂರು ಕುಮಾರ್ ಮಾತನಾಡಿ, “ರೈತ ಸಂಘವು 45 ವರ್ಷಗಳಿಂದ ಗ್ರಾಮೀಣ ಪ್ರದೇಶದಲ್ಲಿ ಬಲಿಷ್ಠವಾಗಿ ಹೋರಾಟ ಮಾಡಿತು. ಆದರೂ, ಹಿರಿಯರ ಚಿಂತನೆಗಳಿಂದ ರೈತರಿಗೆ ಆಗುತ್ತಿರುವ ಶೋಷಣೆಯ ವಿರುದ್ಧವಾಗಿ ಕಡಿದಾಳ್ ಮಂಜಪ್ಪ ಅವರ ಮಂತ್ರಿ ಮಂಡಲದಲ್ಲಿ ಸಚಿವರಾಗಿ ಬಹುಸಂಖ್ಯಾತರಾದ ಕೃಷಿ ಕ್ಷೇತ್ರದ ಬಗ್ಗೆ ಆದ್ಯತೆಯನ್ನು ಕೊಡುವ ಕಾರ್ಯಕ್ರಮಗಳನ್ನು ನೀಡಿದ್ದು ಎಚ್. ಎಸ್. ರುದ್ರಪ್ಪ ನವರು” ಎಂದರು.
ಮೈಸೂರು ಜಿಲ್ಲೆ, ಹುಣಸೂರು ತಾಲ್ಲೂಕು, ಬಿಳಿಕೆರೆ ಹೋಬಳಿಯ ಗಾಗೇನಹಳ್ಳಿಯಲ್ಲಿ ರೈತ ಸಂಘದ ಶಾಖೆಯನ್ನು ಜಿಲ್ಲಾಧ್ಯಕ್ಷ ಹೊಸೂರು ಕುಮಾರ್ ಉದ್ಘಾಟಿಸಿ ರೈತ ಸಂಘದ ಪಿತಾಮಹ ಎಚ್. ಎಸ್. ರುದ್ರಪ್ಪ ಎಂದರು.
ಆ ಕಾಲದಲ್ಲೇ ಮನನೊಂದು ರಾಜಿನಾಮೆ ನೀಡಿ. ಬಲಿಷ್ಠವಾದ ರೈತ ಸಂಘಟನೆಯನ್ನು ಕಟ್ಟುವ ಮೂಲಕ, ಶಿವಮೊಗ್ಗದಲ್ಲಿ ಪ್ರಥಮವಾಗಿ ರೈತ ಸಂಘವನ್ನು ಪ್ರಾರಂಭ ಮಾಡಿದ ಮೊದಲನೇ ಪಿತಾಮಹ ರುದ್ರಪ್ಪ ನವರು, ಅದಾದ, ನಂತರ ಬುದ್ಧಿಜೀವಿಗಳು, ಪ್ರಗತಿಪರ ಸಂಘಟನೆಗಳು, ಸಮಾಜವಾದಿಗಳು ಆದಂತಹ ಪ್ರೊ. ನಂಜುಂಡಸ್ವಾಮಿ, ಸುಂದರೇಶ್, ಪೂರ್ಣಚಂದ್ರ ತೇಜಸ್ವಿ, ರಾಮದಾಸ್, ಮಲ್ಲೇಸ್, ಕೆ. ಎಸ್ ಪುಟ್ಟಣ್ಣಯ್ಯ ರವರಂತಹ ಯುವ ನಾಯಕರುಗಳು ಕಟ್ಟಿ ಬೆಳೆಸಿ, ಹಲವಾರು ಸಮಸ್ಯೆಗಳು, ಶೋಷಣೆಗಳು, ರೈತ ವಿರೋಧಿ ನೀತಿಗಳನ್ನು ಖಂಡಿಸಿ ಲಕ್ಷಾಂತರ ರೈತರನ್ನು ಚಳುವಳಿಯ ಹಾದಿಯನ್ನು ತುಳಿಯಲು ಹಾಗೂ ಸಂಘಟನೆ ಕಟ್ಟಲು ವಹಿಸಿದ ಶ್ರಮದ ಫಲ ಇಂದು ಹಲವಾರು ಸಮಸ್ಯೆಗಳ ನಿವಾರಣೆ ಮೂಲಕ ಕಂಡಿದ್ದೇವೆ.
ಅದರಲ್ಲಿ ಪ್ರಮುಖವಾಗಿ ರೈತರ ಮನೆ ಜಪ್ತಿ, ಸಾಲದ ನೀತಿ, ವಿದ್ಯುಚ್ಛಕ್ತಿ ತಾರತಮ್ಯ, ಗ್ರಾಮೀಣ ಪ್ರದೇಶದ ತೊಡಕುಗಳು, ಮಾರುಕಟ್ಟೆ ವ್ಯವಸ್ಥೆ, ಬೆಂಬಲ ಬೆಲೆ, ಖರೀದಿ ಕೇಂದ್ರಗಳು ಸಮಸ್ಯೆಗಳ ಬಗ್ಗೆ ರೈತ ಸಂಘ ನಡೆಸಿದ ಹೋರಾಟ. ಇಂದಿನ ದಿನಗಳಲ್ಲಿ ವೈಜ್ಞಾನಿಕ ಬೆಲೆ, ಮಾರುಕಟ್ಟೆ ವ್ಯವಸ್ಥೆಯಿಲ್ಲದೆ ರೈತರು ತಾವು ಬೆಳೆಯುವ ಯಾವುದೇ ಬೆಳೆಗಳಿಗೆ ಬೆಲೆ ಸಿಗದೆ ರೈತರು ನಷ್ಟಕ್ಕೆ ಒಳಗಾಗುತ್ತಿದ್ದಾರೆ.
ಈ ಬಗ್ಗೆ ನಿರಂತರವಾಗಿ ಹೋರಾಟ ಮಾಡುತ್ತಾ ಬಂದರೂ ಕೂಡ ಅಧಿಕಾರದ ದುರಾಸೆಗೆ ಒಳಗಾಗಿ ಬೇಡವಾದ ಕಾರ್ಯಕ್ರಮಗಳನ್ನು ಜಾರಿಗೆ ತಂದು ಸಾರ್ವಜನಿಕರ ಹಣ ದುರುಪಯೋಗವಾಗುತ್ತಿದೆ. ಬಹುಸಂಖ್ಯಾತರಿಗೆ ಉದ್ಯೋಗ ಸೃಷ್ಠಿ ಮಾಡುವ ಕೃಷಿ ಕ್ಷೇತ್ರದ ಬಗ್ಗೆ ಆದ್ಯತೆಯನ್ನು ನೀಡದೇ, ರೈತರನ್ನು ರಕ್ಷಣೆ ಮಾಡುವ ಕಾರ್ಯಕ್ರಮಗಳನ್ನು ಕೊಡುವಲ್ಲಿ ಸರ್ಕಾರವು ವಿಫಲವಾಗಿರುತ್ತದೆ. ಈ ಕಾರಣಕ್ಕಾಗಿ ಗ್ರಾಮೀಣ ಪ್ರದೇಶದಲ್ಲಿರುವ ಯುವಕರು ವ್ಯವಸಾಯ ಕ್ಷೇತ್ರವನ್ನು ಬಿಟ್ಟು ನಗರಗಳ ಕಡೆಗೆ ವಲಸೆ ಹೋಗುತ್ತಿದ್ದಾರೆ.
ಈ ರೀತಿ ಮುಂದುವರಿದರೆ ಕೃಷಿ ಕ್ಷೇತ್ರವು ಸಂಪೂರ್ಣ ನೆಲಕಚ್ಚಿ ಆಹಾರ ಪದ್ಧತಿಗೂ ಕೊರತೆಯಾಗುವ ಸಂಭವ ಹೆಚ್ಚಾಗಿರುತ್ತದೆ. ಇದರ ಪರಿಣಾಮವಾಗಿ ಆಹಾರಕ್ಕಾಗಿ ಹಾಹಾಕಾರ ಉಂಟಾಗುವ ಸಂಭವ ಹೆಚ್ಚಾಗುವ ಪರಿಸ್ಥಿತಿ ಹೆಚ್ಚು ದಿನಗಳು ಇರಲಾರವು. ಇದಕ್ಕೆ ಪರಿಹಾರವಾಗಿ ಗ್ರಾಮೀಣ ಪ್ರದೇಶದ ಯುವಕರು, ರೈತಾಪಿ ಸಮುದಾಯವನ್ನು ಉಳಿಸಿಕೊಳ್ಳಲು ನಮ್ಮ ಭೂಮಿಯನ್ನು ಬಂಡವಾಳ ಶಾಹಿಗಳ ಪಾಲಾಗುವುದನ್ನು ತಪ್ಪಿಸಲು ಸಂಘಟಿತರಾಗಿ ಕೃಷಿ ಕ್ಷೇತ್ರದ ಅಭಿವೃದ್ದಿಗೆ ಮತ್ತು ಆರ್ಥಿಕ ಸುಧಾರಣೆಗೆ ಹೋರಾಟದ ಮೂಲಕ ಸರ್ಕಾರದ ಗಮನಕ್ಕೆ ತರುವ ಹೋರಾಟಗಳನ್ನು ರೂಪಿಸಬೇಕಾಗುತ್ತದೆ.
ಆದ್ದರಿಂದ, ನಾವುಗಳು 45 ವರ್ಷಗಳ ನಂತರ ಜಾತ್ಯಾತೀತವಾಗಿ ಸಂಘಟನೆ ಕಟ್ಟುವ ಕೆಲಸವನ್ನು ತಮ್ಮ ಗ್ರಾಮದಲ್ಲಿ ಮಾಡಿರುವುದು ನಿಜವಾದ ಸಾರ್ಥಕತೆಯ ವಿಚಾರವಾಗಿರುತ್ತದೆ. ಮುಂದಿನ ದಿನಗಳಲ್ಲಿ ನಮ್ಮ ಬದುಕಿಗೆ ಧಕ್ಕೆಯಾಗುವ ಯಾವುದೇ ನಿರ್ಧಾರಗಳನ್ನು ಸರ್ಕಾರ ತೆಗೆದುಕೊಂಡಲ್ಲಿ ಅದನ್ನು ಹಿಮ್ಮೆಟ್ಟಿಸುವ ಗಟ್ಟಿ ಹೋರಾಟಗಳನ್ನು ಕಟ್ಟಲು ಗ್ರಾಮೀಣ ಪ್ರದೇಶದ ಯುವಶಕ್ತಿ ಜಾಗೃತವಾಗಬೇಕೆಂದು ಕರೆ ನೀಡಿದರು.
ತಾಲ್ಲೂಕು ರೈತ ಸಂಘದ ಅಧ್ಯಕ್ಷ ಬೆಂಕಿಪುರ ಚಿಕ್ಕಣ್ಣ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ರೈತ ಸಂಘಟನೆಯ ಹೋರಾಟದ ಹಿನ್ನೆಲೆಯನ್ನು ಅರ್ಥ ಮಾಡಿಕೊಳ್ಳದೆ, ಹೋರಾಟಕ್ಕಾಗಿ ತ್ಯಾಗ ಮಾಡಿದಂತಹ ಹಿರಿಯರ, ಕಾರ್ಯಕರ್ತರ ಶ್ರಮವನ್ನು ದುರುಪಯೋಗಪಡಿಸಿಕೊಂಡು, ಹಸಿರು ಶಾಲನ್ನು ಧರಿಸಿ ದಂಧೆ ಮಾಡುತ್ತಿರುವವರ ಬಗ್ಗೆ ಎಚ್ಚರಿಕೆ ವಹಿಸಬೇಕೆಂದು ಕಾರ್ಯಕರ್ತರಿಗೆ ಕಿವಿ ಮಾತು ಹೇಳಿದರು.
ಈ ಸುದ್ದಿ ಓದಿದ್ದೀರಾ? ಮೈಸೂರು | ಜಿಲ್ಲೆಗಳಲ್ಲಿ ಸ್ಯಾಟಲೈಟ್ ಹೃದ್ರೋಗ ಕೇಂದ್ರ : ಡಾ. ಡಿ. ಬಿ. ದಿನೇಶ್
ಕಾರ್ಯಕ್ರಮದಲ್ಲಿ ತಾಲ್ಲೂಕು ಪ್ರಧಾನ ಕಾರ್ಯದರ್ಶಿ ಅಗ್ರಹಾರ ರಾಮೇಗೌಡ, ಬಸವರಾಜೇಗೌಡ, ತಿಪ್ಪೂರು ಸೋಮಶೇಖರ್, ರಾಮೇನಹಳ್ಳಿ ಪೈಲ್ವಾನ್ ಸೋಮಣ್ಣ, ಹಳೇಪುರ ರಾಮಕೃಷ್ಣೇಗೌಡ, ನಟೇಶ್, ತಿಪ್ಪೂರು ಕೆಂಚೇಗೌಡ, ಅಗ್ರಹಾರ ಸತೀಶ್, ಬಲರಾಮ್, ಮಹೇಶ್, ಶಾಖೆ ಅಧ್ಯಕ್ಷ ಮಹದೇವು, ಗೌರವಾಧ್ಯಕ್ಷ ಸಿದ್ದೇಗೌಡ, ಉಪಾಧ್ಯಕ್ಷ ಶೇಖರ್, ಮಹದೇವು, ಪ್ರಧಾನ ಕಾರ್ಯದರ್ಶಿ ಸುರೇಶ್, ಖಜಾಂಚಿ ಮಂಜು ಸೇರಿದಂತೆ ಇನ್ನಿತರೇ ಕಾರ್ಯಕರ್ತರು ಇದ್ದರು.